ಕಾರ್ ಮ್ಯೂಸಿಯಂ

ಶತಮಾನಗಳಿಂದ ವಾಹನಗಳ ವಿಕಾಸವನ್ನು ಅಕ್ಷರಶಃ ಧರ್ಮಸ್ಥಳದ ಮ್ಯೂಸಿಯಂನಲ್ಲಿ ನೋಡಬಹುದು. ಐತಿಹಾಸಿಕ ಪ್ರಾಮುಖ್ಯತೆಯ ಕಾರುಗಳಿವೆ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿ ಪ್ರಯಾಣಿಸಿದ ಕಾರು. ಹಿಂದಿನ ರಾಜ ಸಂಸ್ಥಾನಗಳಿಂದ ಬಂದ ಸೊಗಸಾದ ಸಂಗ್ರಹವು ರಾಯಲ್ ವೈಭವಕ್ಕೆ ಉತ್ತಮ ಉದಾಹರಣೆಯಾಗಿದೆ. ಸಂಗ್ರಹವನ್ನು ಹೊರತುಪಡಿಸಿ, ನಮಗೆ ಹೆಚ್ಚು ಆಶ್ಚರ್ಯವನ್ನುಂಟು ಮಾಡುವುದೇನೆಂದರೆ, ಸಂಗ್ರಹದಲ್ಲಿ ಇರಿಸಲಾಗಿರುವ ಪ್ರತಿಯೊಂದು ಕಾರು ಪರಿಪೂರ್ಣ ಚಾಲನೆಯಲ್ಲಿರುವ ಸ್ಥಿತಿಯಲ್ಲಿದೆ.

ಚಂದ್ರನಾಥ ಸ್ವಾಮಿ ಬಸದಿ

ಧರ್ಮಸ್ಥಳದಲ್ಲಿ ಶತಮಾನಗಳಷ್ಟು ಹಳೆಯದಾದ ಶ್ರೀ ಚಂದ್ರನಾಥ ಸ್ವಾಮಿ ಬಸದಿ, ದಕ್ಷಿಣ ಭಾರತದ ಅತ್ಯಂತ ಪೂಜ್ಯ ಮತ್ತು ಪ್ರಸಿದ್ಧವಾದ ದಿಗಂಬರ ದೇವಾಲಯಗಳಲ್ಲಿ ಒಂದಾಗಿದೆ. ಜೈನ ಪರಂಪರೆಯನ್ನು ರಕ್ಷಿಸುವ ಸಲುವಾಗಿ , ಶ್ರೀ ಡಾ|| ಡಿ. ವೀರೇಂದ್ರ ಹೆಗ್ಗಡೆ ಅವರು 2001 ರ ಮೇ ತಿಂಗಳಲ್ಲಿ ದೇವಾಲಯದ ಧಾರ್ಮಿಕ ಮತ್ತು ಕ್ರಮಬದ್ಧವಾದ ನವೀಕರಣವನ್ನು ಮಾಡಿದ್ದಾರೆ. ಶ್ರೀ ಚಂದ್ರನಾಥ ಸ್ವಾಮಿ ಬಸದಿಯನ್ನು ಧರ್ಮಸ್ಥಳ ಮತ್ತು ಭಾರತದ ದಕ್ಷಿಣ ಭಾಗದ ಅತ್ಯಂತ ಸುಂದರವಾದ ಕಟ್ಟಡಗಳಲ್ಲಿ ಒಂದಾಗಿದೆ. ಸುತ್ತಲಿನ ಸುಂದರ ಪರಿಸರದಲ್ಲಿ ದೇವಾಲಯವು ಬಿಳಿ […]

ಅಣ್ಣಪ್ಪ ಬೆಟ್ಟ

ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯದೈವ ಅಣ್ಣಪ್ಪ ಸ್ವಾಮಿ. ಅಣಪ್ಪ್ಪ ಸ್ವಾಮಿಯ ಗುಡಿಯು ಅಣ್ಣಪ್ಪ ಬೆಟ್ಟದಲ್ಲಿದ್ದು, ಈ ಪ್ರದೇಶವು ಗುಡ್ಡವಾಗಿದ್ದು, ಧರ್ಮದೇವತೆಗಳ ನಾಲ್ಕು ದೇವಾಲಯಗಳಿಂದ ಮತ್ತು ಇಳಿಜಾರಿನ ಪ್ರದೇಶಗಳಿಂದ ಸುತ್ತುವರೆದಿದೆ. ಈ ಬೆಟ್ಟಕ್ಕೆ ಮಕ್ಕಳು ಮತ್ತು ಮಹಿಳೆಯರು ಪ್ರವೇಶಿಸಲು ಅನುಮತಿ ಇರುವುದಿಲ್ಲ. ಧಾರ್ಮಿಕ ಕ್ಷೇತ್ರವಾದ ಈ ಪ್ರದೇಶವು, ಜೈನ ಕುಟುಂಬದ ಆದರಾತಿಥ್ಯವನ್ನು ಕಂಡು ಸಂತೋಷವಾಗಿ ನಾಲ್ಕು ಧರ್ಮದೇವತೆಗಳು ಈ ಕ್ಷೇತ್ರದಲ್ಲಿ ನೆಲೆಯಾದರು ಎಂಬ ನಂಬಿಕೆಯಿದೆ.

ಮಂಜುಷಾ ವಸ್ತು ಸಂಗ್ರಹಾಲಯ

ಮಂಜುನಾಥ ದೇವಾಲಯದ ದಕ್ಷಿಣದಲ್ಲಿರುವ ಮಂಜುಷಾ ವಸ್ತುಸಂಗ್ರಹಾಲಯದಲ್ಲಿ ಇತಿಹಾಸವನ್ನು ತಿಳಿಸುವ ವಸ್ತುಗಳನ್ನು ನೋಡಬಹುದಾಗಿದೆ. ಈ ವಸ್ತು ಸಂಗ್ರಹಾಲಯವು ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾಲೀಕತ್ವದಲ್ಲಿದೆ. ಧರ್ಮಾಧಿಕಾರಿಗಳೇ ಅಸಕ್ತಿಯಿಂದ ಸಂಗ್ರಹಿಸಿದ ವಸ್ತುಗಳು ಸಂಗ್ರಹಾಲಯದಲ್ಲಿದೆ. ಪ್ರವಾಸಿಗರು ವಸ್ತು ಸಂಗ್ರಹಾಲಯದಲ್ಲಿ ಪ್ರಾಚೀನ ಕಾಲದ ಕತ್ತಿಗಳು, ಲೋಹದ ಗ್ರಂಥಗಳ, ವಿಂಟೇಜ್ ಕ್ಯಾಮಾರಗಳು, ಆಭರಣದ ವಸ್ತುಗಳು ಮತ್ತು ಮೈಸೂರು ವರ್ಣಚಿತ್ರಗಳು, ಹಳೆಯ ನಾಣ್ಯಗಳು, ಪ್ರಾಚೀನರು ಬಳಸುತ್ತಿದ್ದ ವಸ್ತುಗಳು ಹಾಗೂ ಇನ್ನಿತರ ಹಳೆಯ ಕಾಲದಲ್ಲಿ ಬಳಸುತ್ತಿದ್ದ ವಾದ್ಯಗಳು ಎಲ್ಲವನ್ನೂ ನೋಡಬಹುದು. ಪ್ರಾಚೀನ ರಥಗಳು ಕೂಡ […]

ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯ

ಶ್ರೀ ಕ್ಷೇತ್ರ ಧರ್ಮಸ್ಥಳವು ಪೌರಾಣಿಕ ಮತ್ತು ಧಾರ್ಮಿಕ ಮಹತ್ವವನ್ನು ಒಳಗೊಂಡಿದ್ದು, ಶಿವನಿಗೆ ಅರ್ಪಣೆಯಾಗಿರುವ ದೇವಾಲಯ ಬಂಗಾರ ಲಿಂಗದಿಂದ ಕ್ಷೇತ್ರ ಮಹಿಮೆ ಹೆಸರುವಾಸಿಯಾಗಿದೆ.ಈ ದೇವಾಲಯವನ್ನು 500 ವರ್ಷಗಳ ಹಿಂದೆ ಜೈನ ಮುಖ್ಯಸ್ಥ ಬಿರ್ಮಣ್ಣ ಪೆರ್ಗಡೆ ಮೂಲಕ ನಿರ್ಮಿಸಲಾಯಿತು. ಕ್ಷೇತ್ರದಲ್ಲಿರುವ ಲಿಂಗವನ್ನು ಮಂಗಳೂರು ಹತ್ತಿರದ ಕದ್ರಿ ಎಂಬ ಸ್ಥಳದಿಂದ ತರಲಾಗಿದೆ. ಈ ಸ್ಥಳವನ್ನು ತಲುಪಿದ ಮೇಲೆ, ಪ್ರವಾಸಿಗರಿಗೆ ಲಿಂಗದ ಸಮೀಪದಲ್ಲಿಯೇ ನರಸಿಂಹ ಸಾಲಿಗ್ರಾಮ ( ಭಗವಾನ್ ಶ್ರೀ ವಿಷ್ಣುವಿನ ಅವತಾರ)ವನ್ನು ನೋಡಬಹುದಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ಮಹಾಗಣಪತಿ ಮತ್ತು ದೇವಿ […]

ರತ್ನಗಿರಿ ಬೆಟ್ಟದ ಬಾಹುಬಲಿ

ಧರ್ಮಸ್ಥಳ ಆಕರ್ಷಣೀಯ ಸ್ಥಳಗಳಲ್ಲಿ ರತ್ನಗಿರಿ ಬೆಟ್ಟವೂ ಒಂದು. ರತ್ನಗಿರಿ ಬೆಟ್ಟದಲ್ಲಿರುವ ಪ್ರತಿಮೆಯು 39 ಅಡಿ ಎತ್ತರವಿದ್ದು, 1973ರಲ್ಲಿ ರೆಂಜನ ಗೋಪಾಲಕೃಷ್ಣ ಶೆಣೈ ಎಂಬುವವರಿಂದ ಕೆತ್ತೆಲ್ಪಟ್ಟಿದೆ. ಫೆಬ್ರವರಿ 1982ರಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮೂಲಕ ಕ್ಷೇತ್ರಕ್ಕೆ ತರಲಾಯಿತು.ಬಾಹುಬಲಿ ಪ್ರತಿಮೆಯು ತ್ಯಾಗ ಮತ್ತು ನಿಸ್ವಾರ್ಥತೆಯ ಸಂಕೇತವಾಗಿದೆ. ಜನಪ್ರಿಯ ಜಾನಪದದ ಪ್ರಕಾರ, ಬಾಹುಬಲಿ ಮತ್ತು ಭರತ ಪರಸ್ಪರ ಹೋರಾಡಿ, ಯುದ್ಧ ಗೆದ್ದ ನಂತರ ತನ್ನ ಸಹೋದರನಿಗೆ ಜೀವದಾನ ನೀಡಿದನು. ಈ ಸಂದರ್ಭದಲ್ಲಿ ಯುದ್ಧ ಮತ್ತು ಹತ್ಯೆಗಳ ಬಗ್ಗೆ ನಿಷ್ಪ್ರಯೋಜಕ ಎಂದು […]