ಮಂಜುಷಾ ವಸ್ತು ಸಂಗ್ರಹಾಲಯ


ಮಂಜುನಾಥ ದೇವಾಲಯದ ದಕ್ಷಿಣದಲ್ಲಿರುವ ಮಂಜುಷಾ ವಸ್ತುಸಂಗ್ರಹಾಲಯದಲ್ಲಿ ಇತಿಹಾಸವನ್ನು ತಿಳಿಸುವ ವಸ್ತುಗಳನ್ನು ನೋಡಬಹುದಾಗಿದೆ. ಈ ವಸ್ತು ಸಂಗ್ರಹಾಲಯವು ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾಲೀಕತ್ವದಲ್ಲಿದೆ. ಧರ್ಮಾಧಿಕಾರಿಗಳೇ ಅಸಕ್ತಿಯಿಂದ ಸಂಗ್ರಹಿಸಿದ ವಸ್ತುಗಳು ಸಂಗ್ರಹಾಲಯದಲ್ಲಿದೆ. ಪ್ರವಾಸಿಗರು ವಸ್ತು ಸಂಗ್ರಹಾಲಯದಲ್ಲಿ ಪ್ರಾಚೀನ ಕಾಲದ ಕತ್ತಿಗಳು, ಲೋಹದ ಗ್ರಂಥಗಳ, ವಿಂಟೇಜ್ ಕ್ಯಾಮಾರಗಳು, ಆಭರಣದ ವಸ್ತುಗಳು ಮತ್ತು ಮೈಸೂರು ವರ್ಣಚಿತ್ರಗಳು, ಹಳೆಯ ನಾಣ್ಯಗಳು, ಪ್ರಾಚೀನರು ಬಳಸುತ್ತಿದ್ದ ವಸ್ತುಗಳು ಹಾಗೂ ಇನ್ನಿತರ ಹಳೆಯ ಕಾಲದಲ್ಲಿ ಬಳಸುತ್ತಿದ್ದ ವಾದ್ಯಗಳು ಎಲ್ಲವನ್ನೂ ನೋಡಬಹುದು. ಪ್ರಾಚೀನ ರಥಗಳು ಕೂಡ ಕಾಣಸಿಗುತ್ತದೆ. ರಥದ ಸಂಗ್ರಹವನ್ನು ಕನರ್ಾಟಕದ ಸುತ್ತ ಇರುವ ವಿವಿಧ ದೇವಾಲಯಗಳಿಂದ ಮಾಡಲಾಗಿದೆ. ಮೌರ್ಯರ ಕಾಲದ ಟೆರಾಕೋಟಾ ನಾಣ್ಯಗಳನ್ನು ಸಹ ನೋಡಬಹುದು. ಮತ್ತೊಂದು ಪ್ರಾಚೀನ ವಸ್ತುವೆಂದರೆ ವಿದ್ವಾನ್ ವೀಣೆ ಶೇಷಣ್ಣರಿಗೆ ಸೇರಿದ್ದ 300 ವರ್ಷಗಳಷ್ಟು ಹಳೆಯದಾದ ಸಂಗೀತವಾದ್ಯ (ವೀಣೆ).

ಮಂಜುಷ ಮ್ಯೂಸಿಯಂ ಅನ್ನು ನೋಡಲು ಬೆಳಗ್ಗೆ 10ರಿಂದ 1ಗಂಟೆ ಮತ್ತು ಸಂಜೆ 4.30ರಿಂದ 9 ಗಂಟೆ ಸೂಕ್ತವಾಗಿರುತ್ತದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *