ಕಲೆಯನ್ನೂ, ಕಲಾವಿದರನ್ನೂ ಪ್ರೋತ್ಸಾಹಿಸಬೇಕಿದೆ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ‘ಬಡವನಿಗೆ ಬಡತನವಲ್ಲದೆ ನೂರಾರು ಕಷ್ಟಗಳು ಮೈಮೇಲೆ ಬಂದಿರುತ್ತವೆ. ತನ್ನನ್ನು ನಂಬಿದವರು ಹಸಿದಿರುತ್ತಾರೆ. ಪ್ರಾಮಾಣಿಕನಾಗಿದ್ದರೂ ಎದ್ದು ನಿಲ್ಲಲು ಸಹಾಯ ಸಿಗುವುದಿಲ್ಲ. ಮಾಡಬೇಕೆಂದಿರುವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಮತ್ತು ಅವನು ಕಳೆದುಕೊಳ್ಳುವ ಎಲ್ಲ ಸಾಮಾಜಿಕ, ಆರ್ಥಿಕ ನಷ್ಟವನ್ನು ತಮ್ಮ ಲಾಭವನ್ನಾಗಿ ಪರಿವರ್ತಿಸಿಕೊಳ್ಳಲು ಒಂದಷ್ಟು ಜನ ಕಾದು ಕುಳಿತಿರುತ್ತಾರೆ’. ಈ ಮಾತನ್ನು ‘ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು’ ಎನ್ನುವ ಪುಸ್ತಕದಲ್ಲಿ ಓದುತ್ತಿದ್ದೆ. ಆಗ ತಕ್ಷಣ ಮನಸ್ಸಿಗೆ ಹೊಳೆದದ್ದು ಕೆಲವು ದಿನಗಳ ಹಿಂದೆ ಓದಿದ್ದ CRAFTS OF […]

ತಾಯಿ ಹಾಲೆಂಬ ಅಮೃತ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ತಾಯ್ತನ’ ಎನ್ನುವುದು ಬರಿಯ ಶಬ್ದವಲ್ಲ, ಅದೊಂದು ಅನುಭವ. ಹೆಣ್ಣಿಗೆ ಮಾತ್ರ ದೇವರು ಕೊಟ್ಟ ವಿಶೇಷ ವರ. ಈ ಅನುಭವವನ್ನು ಕಳೆದುಕೊಂಡರೆ ದೇವರು ಕೊಟ್ಟ ವರವನ್ನು ಕಳಕೊಂಡಂತೆ. ‘ತಾಯ್ತನ’ ಎಂಬ ಮಾತಿದೆ ‘ತಂದೆತನ’ ಎಂಬ ಮಾತು ಎಲ್ಲೂ ಇಲ್ಲ.ತಾಯಿ ತಮ್ಮ ಮಕ್ಕಳಿಗೆ ಎದೆಹಾಲು ಉಣಿಸುತ್ತಾಳೆ. ಹಾಲುಣಿಸುವುದೆಂದರೆ ಬರಿಯ ಹಾಲಷ್ಟೇ ಅಲ್ಲ, ಹಾಲಿನ ಜತೆಗೆ ತಾಯಿ ತನ್ನ ಪ್ರೀತಿ, ಅಭಿಮಾನ, ವಾತ್ಸಲ್ಯದ ಧಾರೆಯನ್ನು ಮಗುವಿನೆಡೆಗೆ ಹರಿಸುತ್ತಾಳೆ. ಇದು ತಾಯಿ ಮಗುವಿನ ಮಧ್ಯೆ ಪರಸ್ಪರ ಬಾಂಧವ್ಯ […]

ಬಹು ಬೆಳೆಗಳಿಂದ ಬಾಳು ಬೆಳಗಿತು

-ವೃಷಾಂಕ್ ಖಾಡಿಲ್ಕರ್ ನಿಪ್ಪಾಣಿ ತಾಲೂಕು ತಂಬಾಕು ಮತ್ತು ಕಬ್ಬು ಬೆಳೆಗೆ ಪ್ರಸಿದ್ಧಿ ಪಡೆದಿದೆ. ಹೆಚ್ಚಿನ ಬೆಳೆಗಾರರು ಸಾಂಪ್ರದಾಯಿಕವಾಗಿ ಕಬ್ಬು ಬೆಳೆಯುತ್ತಿದ್ದರೆ ಇಲ್ಲಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಯರನಾಳ ಗ್ರಾಮದ ಶತ್ರುಘ್ನ ಶಿವರಾಂ ದಿವೋಟೆಯವರ ಹೊಲ ವರ್ಷವಿಡೀ ಅಲ್ಪಾವಧಿ ಬಹು ಬೆಳೆಗಳಾದ ವಿವಿಧ ಬಗೆಯ ಸೊಪ್ಪು – ತರಕಾರಿಗಳಿಂದ ಕಂಗೊಳಿಸುತ್ತಿದೆ. ಬಹು ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಕೊರೊನಾ ಲಾಕ್‌ಡೌನ್‌ನಲ್ಲಿಯೂ ಹತ್ತಾರು ಬೆಳೆಗಳು ಇಳುವರಿಯನ್ನು ನೀಡಿವೆ.ಇದನ್ನು ಮಾರಾಟ ಮಾಡಿ ನೆಮ್ಮದಿಯ ಜೀವನವನ್ನು ನಡೆಸಿದ್ದಾರೆ. ‘ತನ್ನ ಬದುಕಿನ ದಾರಿಯನ್ನು ಬದಲಿಸಿದ್ದು ಗ್ರಾಮಾಭಿವೃದ್ಧಿ […]

ಬಾಲ್ಯವನ್ನು ಕಸಿದುಕೊಳ್ಳುವ ‘ಬಾಲ್ಯ ವಿವಾಹ’

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾನೂನು ಜಾರಿಗೆ ಬಂದಿದೆ. ಎಲ್ಲಾದರೂ ಬಾಲ್ಯ ವಿವಾಹಗಳು ನಡೆಯುವ ಸುದ್ದಿ ಗೊತ್ತಾದರೆ ಇಲಾಖೆಗಳ ಅಧಿಕಾರಿಗಳು ಅಲ್ಲಿಗೆ ದೌಡಾಯಿಸುತ್ತಾರೆ. ಅಂತಹ ವಿವಾಹಗಳನ್ನು ತಡೆಹಿಡಿಯುತ್ತಾರೆ. ಸರಕಾರ ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಆದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಅಲ್ಲಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಲಾಕ್‌ಡೌನ್‌ನ ಸಂದರ್ಭದಲ್ಲಂತೂ ಹೆಚ್ಚಿನ […]

‘ಕೆರೆಯಂಗಳದಲ್ಲಿ ಗಿಡ ನಾಟಿ’ ವಿನೂತನ ಕಾರ್ಯಕ್ರಮ

ರಾಜ್ಯದ 140 ಕೆರೆಗಳ ಸುತ್ತ ಅರಣ್ಯೀಕರಣ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯಾದ್ಯಂತ ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗುತ್ತಿದೆ. ಶ್ರೀ ಹೆಗ್ಗಡೆ ದಂಪತಿಗಳ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಮೂಲಕ ಸುಮಾರು 293 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದರೊಂದಿಗೆ ಸರಕಾರದ ‘ಕೆರೆ ಸಂಜೀವಿನಿ’ ಕಾರ್ಯಕ್ರಮದ ಮೂಲಕ 63 ಕೆರೆಗಳನ್ನು ಹೂಳೆತ್ತಲಾಗಿದೆ. ಹೀಗೆ ಒಟ್ಟು ರಾಜ್ಯದ ಸುಮಾರು 356 ಕೆರೆಗಳಿಗೆ ಕಾಯಕಲ್ಪ ಕೊಡಲಾಗಿದೆ. ಹೊಸದಾಗಿ ಹೂಳೆತ್ತಲಾದ 140 ಕೆರೆಗಳ ಸುತ್ತ್ತ ಅರಣ್ಯೀಕರಣ, ಹೊಸದಾಗಿ ರಚನೆಗೊಂಡ ಏರಿಗಳು ಜರಿಯದಂತೆ ಹಸಿರು […]

ಮಕ್ಕಳ ಮಧುಮೇಹ – ಆತ್ಮಸ್ಥೈರ್ಯದೆದುರೇನು ಮಹಾ!

ಡಾ| ಸಂದೀಪ ಹೆಚ್.ಎಸ್.ಮಕ್ಕಳ ತಜ್ಞರು ಅದೊಂದು ದಿನ ಎಸ್.ಡಿ.ಎಂ. ಆಸ್ಪತ್ರೆಯ ವಿಭಾಗದಲ್ಲಿ ಮಧ್ಯಾಹ್ನದ ಹೊತ್ತು. ಇನ್ನು ಊಟಕ್ಕೆ ತೆರಳುವ ಎಂದು ಕೈ ತೊಳೆದುಕೊಳ್ಳುತ್ತಿದೆ. ತುರ್ತು ಚಿಕಿತ್ಸಾ ವಿಭಾಗದಿಂದ ಒಂದು ಕರೆ ಬಂತು. 13 ವರ್ಷದ ಮಗುವೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದೆ ಎಂದು! ಕೂಡಲೇ ತುರ್ತುಚಿಕಿತ್ಸಾ ವಿಭಾಗದೆಡೆ ಧಾವಿಸಿದೆ. ಮಗುವಿನ ತುಟಿಗಳು ಒಣಗಿದ್ದವು. ಕರೆದರೂ ಮಾತನಾಡಲಿಲ್ಲ. ಆದರೆ ಹೃದಯ ಬಡಿತ, ಉಸಿರಾಟ ಇನ್ನೂ ಇತ್ತು. ಆ ಮಗುವಿನ ರಕ್ತದಲ್ಲಿ ಸಕ್ಕರೆಯ ಅಂಶ ಎಷ್ಟಿದೆ ಎಂದು ಪರೀಕ್ಷಿಸಿದೆ. ಮಗುವಿಗೆ […]

ಕೃಷಿಕರ ಮನೆಬಾಗಿಲಿಗೆ ಬರಲಿದೆ ‘ಕೃಷಿ ಸಂಜೀವಿನಿ’ ವಾಹನ

ಧಕ್ಷಿಣಿ ಮಾಸ್ತಿಕಟ್ಟೆ ‘ಎರಡು ಎಕರೆ ತುಂಬಾ ಸೊಯಾಬೀನ್ ಬಿತ್ತಿದೆ. ಆದರೆ ಇಳುವರಿ ಚೆನ್ನಾಗಿ ಬರಲಿಲ್ಲ. ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ನಿಮ್ಮಲ್ಲಿನ ವಾತಾವರಣ, ಮಣ್ಣು ಸೊಯಾಬೀನ್ ಬೆಳೆಗೆ ಸೂಕ್ತವಾಗಿಲ್ಲ, ಅಂಜನಪ್ಪನವರೇ ನೀವೊಮ್ಮೆ ಮಣ್ಣು ಪರೀಕ್ಷೆ ಮಾಡಿ ನೋಡಿ, ಬೆಳಗಾಂನ ಈ ಮಣ್ಣಿನಲ್ಲಿ ಫಸಲು ಚೆನ್ನಾಗಿ ಬರಲ್ಲ ಅಂದ್ರು. ಕೃಷಿ ಇಲಾಖೆ ತುಂಬಾ ದೂರದಲ್ಲಿದೆ. ಆದ್ದರಿಂದ ಮಣ್ಣು ಪರೀಕ್ಷೆ ಮಾಡಿಸಿಲ್ಲ’.‘ಕೃಷಿಯ ಬಗ್ಗೆ ಸರಿಯಾದ ಮಾಹಿತಿಯೇ ಸಿಗುತ್ತಿಲ್ಲ. ತೋಟದಲ್ಲಿ ಬೆಳೆದ ಬೆಳೆಯ ರೋಗಲಕ್ಷಣ, ಇಳುವರಿಯ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಬೇಕಾಗಿದೆ. ಏಳೆಂಟು ಕಿ.ಮೀ. […]

ಜಾನುವಾರುಗಳಿಗೂ ಲಸಿಕೆ ಹಾಕಿಸಿ

ಡಾ| ಸಿದ್ಧಲಿಂಗಸ್ವಾಮಿ ಹಿರೇಮಠಪಶು ವೈದ್ಯಕೀಯ ಮಹಾವಿದ್ಯಾಲಯ ಗದಗ ಈಗ ಎಲ್ಲೆಲ್ಲೂ ಲಸಿಕೆಯದ್ದೇ ಸುದ್ದಿ. ಲಸಿಕೆಯೆಂದರೆ ರೋಗವೊಂದರ ವಿರುದ್ಧ ಪ್ರಾಣಿಯ (ಮಾನವನ) ದೇಹದಲ್ಲಿ ನಿರೋಧಕ ಶಕ್ತಿ ಬೆಳೆಸುವ ಜೈವಿಕ ಪದಾರ್ಥ. ಸಾಮಾನ್ಯವಾಗಿ ಲಸಿಕೆಗಳನ್ನು ಪ್ರಾಣಿಗಳಿಗೆ ಇಂಜೆಕ್ಷನ್ ರೂಪದಲ್ಲಿ ನೀಡಲಾಗುತ್ತದೆ. ಹೇಗೆ ಚಿಕ್ಕಮಕ್ಕಳಿಗೆ ಕಡ್ಡಾಯವಾಗಿ ಲಸಿಕೆಗಳನ್ನು ಹಾಕಿಸಲಾಗುತ್ತದೆಯೋ, ಅದೇ ರೀತಿ ಜಾನುವಾರುಗಳಿಗೆ ಪ್ರತಿ ವರ್ಷ ಕೆಲವು ಲಸಿಕೆಗಳನ್ನು ಒಂದು ಅಥವಾ ಎರಡು ಬಾರಿ ಹಾಕಿಸಲೇಬೇಕು.ಜಾನುವಾರುಗಳಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳಿಂದ ಉಂಟಾಗುವ ಹಲವಾರು ರೋಗಗಳಿವೆ. ಕೆಲವು ರೋಗಗಳು ಸಾಂಕ್ರಾಮಿಕವಾಗಿವೆ. ಮಾಸ್ಕ್, ಸಾಮಾಜಿಕ ಅಂತರ, […]

ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಹಿಂದೆ ಕೆಲವೇ ವಲಯಗಳಿಗೆ ಸೀಮಿತವಾಗಿದ್ದ ಆನ್‌ಲೈನ್ ವ್ಯವಸ್ಥೆಯು ಕೋವಿಡ್‌ನ ಪ್ರಭಾವದಿಂದಾಗಿ ತನ್ನ ಆಧಿಪತ್ಯವನ್ನು ಎಲ್ಲೆಡೆ ಸ್ಥಾಪಿಸಿತು. ಆನ್‌ಲೈನ್ ಕ್ಲಾಸ್, ಆನ್‌ಲೈನ್ ಮೀಟಿಂಗ್, ಆನ್‌ಲೈನ್ ಪ್ರೋಗ್ರಾಮ್ ಹೀಗೆ ಎಲ್ಲವೂ ಆನ್‌ಲೈನ್ ಆಗತೊಡಗಿದೆ. ಈ ಆನ್‌ಲೈನ್‌ನ ಪ್ರಕ್ರಿಯೆಗಳಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿರುವ ಸಾಧನ ‘ಸ್ಮಾರ್ಟ್ ಫೋನ್’ ಆಗಿದೆ. ಈ ಸ್ಮಾರ್ಟ್ ಫೋನ್ ತುಂಬಾ ಸ್ಮಾರ್ಟ್ ಆಗಿದ್ದು, ಒಂದು ಹರಿತವಾದ ಸಾಧನಕ್ಕೆ ಹೋಲಿಸಬಹುದು.ವೈದ್ಯರ ಕೈಗಳಲ್ಲಿ ಹರಿತವಾದ […]

ಬದುಕಿರಿ, ಬದುಕಲು ಬಿಡಿ – ಪೂಜ್ಯರಿಂದ ಪರಿಸರ ಸಂರಕ್ಷಣೆಯ ನೂತನ ಸೂತ್ರ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ನಮ್ಮ ಸಂಸ್ಥೆಯ ನೆಚ್ಚಿನ ಅಧ್ಯಕ್ಷರು, ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು, ಪರಿಸರ ಪ್ರೇಮಿಗಳೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಪಶ್ಚಿಮಘಟ್ಟದ ತಪ್ಪಲಿನ ಧರ್ಮಸ್ಥಳದಲ್ಲಿ ಹುಟ್ಟಿ ಬೆಳೆದರೂ, ವರ್ಷಕ್ಕೆ ಒಂದೆರಡು ಬಾರಿಯಾದರೂ ಜನರಿಂದ ದೂರವಾಗಿ, ಪ್ರಕೃತಿಯ ಮಡಿಲಲ್ಲಿ ಕಳಸದ ಹತ್ತಿರದ ತಮ್ಮ ತೋಟದಲ್ಲಿ ಹಲವು ಸಮಯ ಕಳೆಯುವುದು ಪೂಜ್ಯರ ವಾಡಿಕೆ. ಅಲ್ಲದೆ ಜಾಗತಿಕ ಪ್ರವಾಸದ ಸಮಯದಲ್ಲಿ ಪ್ರಪಂಚದ ವಿವಿಧ ಪ್ರಾಕೃತಿಕ ಸ್ಥಳಗಳಲ್ಲಿ ಅವರು ಹೆಚ್ಚ್ಚಿನ ಸಮಯವನ್ನು ಕಳೆಯಲು ಇಚ್ಛಿಸುತ್ತಾರೆ. ಉತ್ತಮ ಛಾಯಾಗ್ರಾಹಕರಾಗಿರುವ […]