ನಿರಂತರ 20 – ಯೋಜನೆ 40

ಬರಹ : ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ಇದೊಂದು ವಿಶೇಷ ಸಂದರ್ಭ. 1982ರಲ್ಲಿ ಆರಂಭಗೊoಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೀಗ ನಲ್ವತ್ತರ ಹರೆಯ. ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಿಂದ ಆರಂಭಗೊoಡ ಈ ಯೋಜನೆ ಇಂದು ರಾಜ್ಯದಲ್ಲೆಲ್ಲ ಮನೆಮಾತಾಗಿದೆ. ಬಡವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಅಗತ್ಯವಿರುವ ಅನೇಕ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಯೋಜನೆಯು ರೂಪಿಸುತ್ತಾ ಬೆಳೆದಿದೆ. ಪ್ರಮುಖವಾಗಿ ಸ್ವಸಹಾಯ ಸಂಘ ಮಾದರಿಯಲ್ಲಿ ಮಹಿಳೆಯರ ಮತ್ತು ಕೃಷಿಕರ ಸಂಘಟನೆ. ಪ್ರಸ್ತುತ 49 ಲಕ್ಷ ಸದಸ್ಯರು ಯೋಜನೆಯ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಸಂಘಟನೆಯನ್ನು ಶಕ್ತಿಯನ್ನಾಗಿ ಬಳಸಿಕೊಂಡ ಯೋಜನೆಯು ಇವುಗಳಿಂದ ಬ್ಯಾಂಕುಗಳ ನೆರವನ್ನು ದುರ್ಬಲರಿಗೆ ಸುಲಭವಾಗಿ ದೊರಕಿಸಿತು. ಜೊತೆಗೆ ವಿಮಾ ಕಂಪೆನಿಗಳು ಮತ್ತು ಸರಕಾರದ ವಿವಿಧ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಯೋಜನೆಯು ಸಾಕಷ್ಟು ಯಶಸ್ಸನ್ನು ಕಂಡಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಲಕ್ಷಾಂತರ ಕುಟುಂಬಗಳು ಪ್ರಗತಿಯ ಮೆಟ್ಟಿಲುಗಳನ್ನೇರಲು ಸಾಧ್ಯವಾಗಿದೆ. ಯೋಜನೆಯು ಚಲನಶೀಲವಾಗಿದ್ದುಕೊಂಡು ಹೊಸ ಹೊಸ ಕಾರ್ಯಕ್ರಮಗಳಿಗೆ ತನ್ನನ್ನು ಒಡ್ಡಿಕೊಂಡಿರುವುದರಿoದ ಕ್ರಿಯಾಶೀಲವಾಗಿ ಬೆಳೆಯಲು ಮತ್ತು ಜನರಿಗೆ ಅನುಕೂಲಗಳನ್ನು ಮುಟ್ಟಿಸಲು ಸಾಧ್ಯವಾಗಿದೆ. ನಲ್ವತ್ತು ವರ್ಷಗಳ ಈ ಪ್ರಯಾಣದ ಬಳಿಕವೂ ಹೊಸ ಹೊಸ ಕಾರ್ಯಕ್ರಮಗಳಲ್ಲಿ ಯೋಜನೆಯು ತೊಡಗಿಸಿಕೊಳ್ಳುತ್ತಿರುವುದು ಇದರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.

ಈ ಯೋಜನೆಯ ಕನಸುಗಾರ ಪೂಜ್ಯ ಡಿ.ವೀರೇಂದ್ರ ಹೆಗ್ಗಡೆಯವರು, ಅವರೊಡನೆ ನಿಂತ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು, ಶ್ರೀ ಡಿ.ಸುರೇಂದ್ರ ಕುಮಾರ್‌ರವರು ಮತ್ತು ಯೋಜನೆಯ ಅಂದಿನ ಟ್ರಸ್ಟಿಗಳಾದ ಶ್ರೀ ಡಿ.ಎಂ.ನoಜುoಡಪ್ಪ, ಶ್ರೀ ಹೆಗ್ಡೆ, ಶ್ರೀ ಕೆ.ಎಂ.ಉಡುಪ, ಶ್ರೀ ಬಿ.ಬಿ.ಶ್ಯಾನುಭಾಗ್, ಶ್ರೀ ಆರ್.ವಿ.ಶಾಸ್ತಿç ಮತ್ತು ಪ್ರಸ್ತುತ ಶ್ರೀ ಎಸ್.ಡಿ. ಸಂಪತ್ ಸಾಮ್ರಾಜ್ಯ, ಶ್ರೀ ಉದಯ ಕುಮಾರ್ ಶೆಟ್ಟಿ, ಶ್ರೀ ಶಾಮ್ ಭಟ್,
ಶ್ರೀ ವೈ. ನಾಗೇಶ್ವರ ರಾವ್ ಇವರೆಲ್ಲರನ್ನು ಗೌರವಪೂರ್ವಕವಾಗಿ ಅಭಿನಂದಿಸುತ್ತೇನೆ. ಯೋಜನೆಯ ಕಾರ್ಯಕ್ರಮಗಳನ್ನು ಸ್ವೀಕರಿಸಿದ ರಾಜ್ಯದ ಜನತೆಯೂ ಕೂಡಾ ಅಭಿನಂದನಾರ್ಹರೇ ಸರಿ. ಯೋಜನೆಯ ವಿವಿಧ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವನ್ನು ನೀಡಿದ ಎಲ್ಲ ಸಂಘ ಸಂಸ್ಥೆಗಳಿಗೂ, ಸರಕಾರದ ಇಲಾಖೆಗಳಿಗೂ, ಜನಪ್ರತಿನಿಧಿಗಳಿಗೂ, ಅಧಿಕಾರಿಗಳಿಗೂ ಅಭಿನಂದನೆಗಳು.


ನಾಲ್ಕು ದಶಕಗಳಲ್ಲಿ ಕೈಗೊಂಡ ಕಾರ್ಯಕ್ರಮಗಳು ಯೋಜನೆಯನ್ನು ಮತ್ತು ಇದರ ಫಲಾನುಭವಿಗಳನ್ನು ಸುಸ್ಥಿರತೆಯತ್ತ ಕೊಂಡೊಯ್ದಿದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡಲು ಈ ಅನುಭವ ಪ್ರೇರಣೆ ನೀಡಿದೆ. ಯೋಜನೆಯ ಯಶಸ್ಸಿಗೆ ಅನುಗ್ರಹಿಸಿದ ಮಂಜುನಾಥ ಸ್ವಾಮಿಗೆ ಶಿರ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಾ ಮುಂದಕ್ಕೂ ಜನರಿಗೆ ಸೇವೆ ಸಲ್ಲಿಸುವಂತಾಗಲೆoದು ಪ್ರಾರ್ಥಿಸುತ್ತೇನೆ.


ಇದರ ಜೊತೆಗೆ ಎರಡು ದಶಕಗಳನ್ನು ಪೂರೈಸಿರುವ ‘ನಿರಂತರ ಪ್ರಗತಿ’ ಪತ್ರಿಕೆಯ ಯಶಸ್ಸು ವಿಶೇಷವೇ. ಗ್ರಾಮೀಣ ಜನರಿಗೆ ಸರಳವಾಗಿ ಮಾಹಿತಿಗಳನ್ನು ಒದಗಿಸಲೆಂದು ಹುಟ್ಟಿಕೊಂಡ ‘ನಿರಂತರ’ ಪತ್ರಿಕೆ ಕ್ರಮೇಣ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳುತ್ತಾ, ಇಂದು ಗಂಭೀರ ವಿಚಾರಗಳ ಬಗ್ಗೆ ಮಾಹಿತಿಗಳನ್ನು ಚಿಂತನೆಗೆ ಹಚ್ಚುವ ಪತ್ರಿಕೆಯಾಗಿ ಬೆಳೆದು ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುತ್ತದೆ.

ಈ ಪತ್ರಿಕೆ ಸರ್ವಾಂಗ ಸುಂದರವಾಗಿ ಮೂಡಿ ಬರುತ್ತಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬoತೆ ಕೇವಲ ಆರು ಜನರ ಸಣ್ಣ ತಂಡವೊoದು, ಪೂಜ್ಯರ ಮತ್ತು ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಪ್ರತೀ ತಿಂಗಳು 8 ಲಕ್ಷ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುತ್ತಿರುವುದು ಸಾಮಾನ್ಯ ವಿಚಾರವಲ್ಲ. ‘ನಿರಂತರ ಪ್ರಗತಿ’ ಪತ್ರಿಕೆಯ ಯಶಸ್ಸಿಗೆ ಸಹಕರಿಸಿದ ಯೋಜನೆಯ ಎಲ್ಲ ಕಾರ್ಯಕರ್ತರಿಗೂ, ಲೇಖಕರಿಗೂ, ಓದುಗರಿಗೂ ತಲೆಬಾಗಿ ನಮಿಸುತ್ತಾ, ಮುಂದಕ್ಕೂ ಅವರ ಸಹಕಾರವನ್ನು ಕೋರುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates