ಮಕ್ಕಳ ಜ್ವರ – ಮೈಮರೆಯದಿರಿ

ಮಕ್ಕಳಿಗೆ ಜ್ವರ ಇದೆ ಎಂದು ತಿಳಿಯುವುದು ಹೇಗೆ? ಮುಟ್ಟಿ ನೋಡಿದರೆ ಜ್ವರದ ಬಗ್ಗೆ ಒಂದು ಅಂದಾಜು ಮಾಡಬಹುದಷ್ಟೇ. ಆದರೆ ಅದು ಸಾಕಷ್ಟು ಬಾರಿ ತಪ್ಪಾಗಬಹುದು. ಅದಕ್ಕೇ ಜ್ವರದ ಮಾಪಕವಾದ ಡಿಜಿಟಲ್ ಥರ್ಮೋಮೀಟರ್ ಉಪಯೋಗಿಸುವುದು ಉತ್ತಮ. ಅದರಿಂದ ಜ್ವರದ ತೀವ್ರತೆ ಎಷ್ಟಿದೆ ಎಂದು ತಿಳಿಯುತ್ತದೆ. ಕಂಕುಳಲ್ಲಿ ಇಟ್ಟು ಪರೀಕ್ಷಿಸಿದಾಗ 99.4 ಡಿಗ್ರಿ ಪ್ಯಾರಾಮಿಟ್‍ಗಿಂತ ಹೆಚ್ಚು ದೇಹದ ಉಷ್ಣತೆ ಇದ್ದರೆ ಜ್ವರ ಎಂದು ಭಾವಿಸಬೇಕಾಗುತ್ತದೆ. ಸೆಲ್ಸಿಯಸ್‍ನಲ್ಲಾದರೆ 36.5 ಡಿಗ್ರಿ ಸೆಲ್ಸಿಯಸ್‍ನಿಂದ 37.5 ಡಿಗ್ರಿ ಸೆಲ್ಸಿಯಸ್‍ವರೆಗೆ ದೇಹದ ಉಷ್ಣತೆ ಇರುತ್ತದೆ. ಹೆಚ್ಚಿದ್ದರೆ […]

ಬದುಕು ಸಿಹಿಯಾಗಿಸಿದ ಸಿಹಿತಿಂಡಿ ತಯಾರಿ

ರಾಣೇಬೆನ್ನೂರು ತಾಲೂಕಿನ ಸಾಯಿ ನಗರದ ರೂಪಾ ಹೆಚ್. ಶ್ರೀಹರಿಯವರದ್ದು ಇಬ್ಬರು ಮಕ್ಕಳೊಂದಿಗಿನ ಪುಟ್ಟ ಕುಟುಂಬ. ಪತಿ ಸರಕಾರಿ ಉದ್ಯೋಗಿ. ತನ್ನ ಗಂಡನಿಗೆ ತಾನು ಕೈಲಾದ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ರೂಪಾರವರು ಹನ್ನೊಂದು ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಪ್ರಾರ್ಥನಾ’ ಸ್ವಸಹಾಯ ಸಂಘದ ಸದಸ್ಯರಾದರು.ಯೋಜನೆಗೆ ಸೇರಿದ ನಂತರ ಯೋಜನೆಯಿಂದ ಮಾಹಿತಿ ಪಡೆದು ಐದು ವರ್ಷಗಳ ಕಾಲ ಟೈಲರಿಂಗ್ ವೃತ್ತಿಯನ್ನು ನಡೆಸಿದರು. ನಂತರ ಎದುರಾದ ಅನಾರೋಗ್ಯ ಸಮಸ್ಯೆಯಿಂದ ತನ್ನ ಟೈಲರಿಂಗ್ ವೃತ್ತಿಯನ್ನು ಬಿಟ್ಟು ಬಿಡುತ್ತಾರೆ. ಮತ್ತೆ ಯೋಜನೆಯ […]

ವಿಶೇಷಚೇತನರ ಪಾಲಿನ ಭಾಗ್ಯದ ಬಾಗಿಲು ಸೇವಾ ಅಂಧರ ಸಂಸ್ಥೆ

ಪ್ರತಿ ವರ್ಷ ರಾಜ್ಯಾದಾದ್ಯಂತ ಸುತ್ತಾಡಿ ಬೇರೆ ಬೇರೆ ಕಡೆಗಳಲ್ಲಿರುವ ಕಿವುಡ, ಮೂಕ, ಅಂಧ ಮಕ್ಕಳನ್ನು ಗುರುತಿಸಿ ಅವರನ್ನು ಕರೆತಂದು ಅವರಿಗೆ ವಸತಿ ವ್ಯವಸ್ಥೆಯೊಂದಿಗೆ ವಿದ್ಯಾಭ್ಯಾಸವನ್ನು ಕಲ್ಪಿಸಿ, ಉದ್ಯೋಗವಕಾಶವನ್ನು ಒದಗಿಸಿಕೊಡುವ ಸಂಸ್ಥೆಯೊಂದು ರಾಣೇಬೆನ್ನೂರು ತಾಲೂಕಿನ ಮಾರುತಿ ನಗರದಲ್ಲಿದೆ.ಸೇವೆಯ ಆರಂಭದ ಕಥೆ‘ಸೇವಾ ಅಂಧರ ಸಂಸ್ಥೆ’ಯ ಸ್ಥಾಪಕರಾದ ಎಚ್.ಆರ್. ಶಿವಕುಮಾರ್ ಹುಟ್ಟಿದ್ದು ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ. ಸಿದ್ಧಗಂಗಾ ಮಠದಲ್ಲಿ ಆಶ್ರಯ ಪಡೆದ ಅವರು ಬಾಲ್ಯದಲ್ಲೇ ಮುಂದೆ ತಾನು ಕೂಡಾ ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಏನಾದರೊಂದು ಕೆಲಸ ಮಾಡಬೇಕೆಂದು ನಿರ್ಧರಿಸಿದರು. ಶಾಲಾ ದಿನಗಳಲ್ಲೆ […]

ವೈನ್‍ಶಾಪ್ ಗಿರಾಕಿ ಶೇಂಗಾ ಮಾರಾಟಗಾರನಾದ ಕತೆ!

‘ನನ್ನ ಮನೆಯಿಂದ ಸ್ವಲ್ಪ ದೂರದಲ್ಲೆ ವೈನ್‍ಶಾಪ್ ಇದೆ. ನನಗಾಗಿಯೇ ಇಲ್ಲಿ ವೈನ್‍ಶಾಪ್ ತೆರೆದಿದ್ದಾರೇನೋ ಎನ್ನುವಷ್ಟು ಖುಷಿಯಿಂದ ಪ್ರತಿ ದಿನ ವೈನ್‍ಶಾಪ್‍ನ ಬಾಗಿಲು ತೆರೆಯುವ ಹೊತ್ತಿಗೆ ಅಲ್ಲಿಗೆ ಹಾಜರಾಗುತ್ತಿದ್ದೆ. ಮದ್ಯ ಸೇವಿಸಲು ಕುಳಿತಾಗ ದಿನನಿತ್ಯ ಇನ್ನೂರರಿಂದ ಐನೂರು ರೂಪಾಯಿಷ್ಟು ಕುಡಿದೇ ಅಭ್ಯಾಸ! ಮದ್ಯ ಸೇವಿಸುವಾಗ ತಿನ್ನಲು ಹುರಿದ ಶೇಂಗಾ ಬೀಜವೂ ಜೊತೆಗೆ ಬೇಕೇ ಬೇಕು. ಬೀಜಗಳನ್ನು ತಿನ್ನುತ್ತಾ ನನ್ನನ್ನು ನಾನು ಮರೆತು ಬಿಡುತ್ತಿದ್ದೆ. ಅಮಲೇರಿದ ನಂತರ ಯಾವ ಹೊತ್ತಿಗಾದರೂ ಸರಿ ಮನೆ ಸೇರುತ್ತಿದ್ದೆ. ಕೆಲವೊಮ್ಮೆ ಹಾಡಹಗಲೇ ರಸ್ತೆಯ ಬದಿಯಲ್ಲಿ […]

ಆರೋಗ್ಯವೇ ಭಾಗ್ಯ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯ ವೆಚ್ಚಗಳು ಬಹಳಷ್ಟು ಹೆಚ್ಚಾಗುತ್ತಿವೆ. ಅನಾರೋಗ್ಯ ಪೀಡಿತರಾಗಿ ಅಥವಾ ಅಪಘಾತಕ್ಕೊಳಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ಗುಣಮುಖರಾದರೂ ಆಸ್ಪತ್ರೆಯ ಬಿಲ್ಲುಗಳು ನಮ್ಮನ್ನು ಮತ್ತೊಮ್ಮೆ ಬಡವರನ್ನಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ತಂತ್ರಜ್ಞಾನಗಳು ಹೆಚ್ಚಾಗಿರುವುದರಿಂದ ಗಂಭೀರ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯುತ್ತದೆ. ಆದರೆ ಈ ಚಿಕಿತ್ಸೆ ವೆಚ್ಚಗಳನ್ನು ಭರಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಒಬ್ಬ ರೋಗಿಯ ಆಸ್ಪತ್ರೆಯ ಚಿಕಿತ್ಸಾ ಎಸ್ಟಿಮೇಟ್ ರೂ. 55 ಲಕ್ಷ ಮೊತ್ತ ಆದ ಬಗ್ಗೆ ವರದಿಯನ್ನು […]

ಆಡದ ಮಾತನ್ನು ಸೇವಕನಾಗಿ ದುಡಿಸಿಕೊಳ್ಳಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಶ್ರೀಕ್ಷೇತ್ರದ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಯಕರ್ತರ ಪಾಲಿನ ‘ಅಮ್ಮ’ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಪ್ರತಿವರ್ಷ ಹೊಸ ವರ್ಷದ ಆರಂಭದ ದಿನ ಯೋಜನೆಯ ಕೇಂದ್ರ ಕಚೇರಿಯ ಕಾರ್ಯಕರ್ತರಿಗೆ ಮಾರ್ಗದರ್ಶನವನ್ನು ನೀಡುತ್ತಾರೆ. ಅಮ್ಮನ ವಾತ್ಸಲ್ಯದ ಮಾತುಗಳನ್ನು ‘ನಿರಂತರ’ದ ಓದುಗರಿಗೆ ಒದಗಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.ಬೀಡು (ಶ್ರೀ ಹೆಗ್ಗಡೆಯವರ ನಿವಾಸ) ಕಟ್ಟುವಾಗ ವಾಸ್ತು ನೋಡುವವರು ಒಬ್ಬರು ಬಂದಿದ್ದರು. ಅವರು ಹೇಳಿದರು, ‘ಮನೆಯ ವಾಸ್ತುವನ್ನು ಯಾರು ಬೇಕಾದರೂ ನೋಡಬಹುದು. ಆದರೆ ಧರ್ಮಚಾವಡಿಯ ವಾಸ್ತು ನೋಡಲು ನುರಿತ […]

ಯೋಜನೆಯ ಸೇವೆ ಎಂಬ ಪುಣ್ಯ ಕಾರ್ಯ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಶ್ರೀ ಹೆಗ್ಗಡೆಯವರು ರಾಜ್ಯದಾದ್ಯಂತ ಪ್ರವಾಸವನ್ನು ಕೈಗೊಂಡು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಮಾರ್ಗದರ್ಶನವನ್ನು ನೀಡುತ್ತಿರುತ್ತಾರೆ. ಶ್ರೀಕ್ಷೇತ್ರದಲ್ಲೆ ಇರುವ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೂ ಆಗಾಗ ಭೇಟಿ ನೀಡಿ ವಿಭಾಗಗಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸುತ್ತಿರುತ್ತಾರೆ. ಇದರೊಂದಿಗೆ ಹೊಸ ವರುಷದ ಆರಂಭದ ದಿನ ಎಷ್ಟೇ ಕೆಲಸಗಳಿದ್ದರೂ ಶ್ರೀ ಹೆಗ್ಗಡೆ ದಂಪತಿಗಳು ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೆ ಬಂದು ಇಲ್ಲಿನ ಕಾರ್ಯಕರ್ತರಿಗೆ ಹೊಸ ವರುಷದ ಶುಭಾಶೀರ್ವಾದಗಳೊಂದಿಗೆ ಮುಂದಿನ ದಿನಗಳಲ್ಲಿ ಯೋಜನೆಯ ಕಾರ್ಯಕರ್ತರು ಹೇಗೆ ಕರ್ತವ್ಯ ನಿರ್ವಹಿಸಬೇಕೆಂದು ಮಾರ್ಗದರ್ಶನವನ್ನು […]

ಒಕ್ಕಣೆಯ ಕೆಲಸವನ್ನು ಸರಳವಾಗಿಸುವ ‘ಒಕ್ಕಣೆ ಯಂತ್ರಗಳು’

ರಾಜ್ಯ ಸರಕಾರ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ 164 ಕೃಷಿಯಂತ್ರಧಾರೆ ಕೇಂದ್ರಗಳು ರೈತರ ಸೇವೆಯಲ್ಲಿ ತೊಡಗಿವೆ. ಸಕಾಲದಲ್ಲಿ ಕಡಿಮೆ ದರದಲ್ಲಿ ಉಪಯುಕ್ತ ಯಂತ್ರಗಳನ್ನು ಒದಗಿಸುವ ಮೂಲಕ ಕೃಷಿಯಂತ್ರಧಾರೆ ಈಗಾಗಲೆ ಮನೆಮಾತಾಗಿದೆ. ಈ ಬಾರಿಯ ಭತ್ತ ಕಟಾವಿಗೆ ಹೆಚ್ಚಿನ ಕಡೆಗಳಲ್ಲಿ ರೈತರು ಕಟಾವು ಯಂತ್ರಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದರು. ಆದರೆ ಅಕಾಲಿಕವಾಗಿ ಎಡೆಬಿಡದೆ ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ನೀರಪಾಲಾದುವು. ಇದರಿಂದಾಗಿ ಕೃಷಿಯಂತ್ರಧಾರಾ ಕಾರ್ಯಕ್ರಮಕ್ಕೂ ಬಹುದೊಡ್ಡ ಹೊಡೆತ ಬಿದ್ದಿದೆ.ಮಳೆ ಅವಾಂತರದಿಂದ ವ್ಯಾಪಕ ನಷ್ಟರಾಜ್ಯದಲ್ಲಿ ಈ ಬಾರಿ ಜುಲೈಯಿಂದ […]