ಮಳೆಗಾಲದ ಕೃಷಿ ತಯಾರಿಗೆ ಸಿದ್ಧರಾಗಿ

ತ್ತನೆ ಬೀಜ, ಗೊಬ್ಬರಗಳ ಸಂಗ್ರಹ ಪೂರ್ವ ಸಿದ್ಧತೆ ಹೀಗಿರಲಿಮಳೆಗಾಲದ ಸಿದ್ಧತೆ ಒಂದು ರೀತಿಯಲ್ಲಿ ಯುದ್ಧ ಸಿದ್ಧತೆಯೇ ಸರಿ! ಪ್ರಕೃತಿಯ ‘ಮುನಿಸು’ ‘ರೌದ್ರಾವತಾರ’ ಎದುರಿಸುವುದೆಂದರೆ ಸಣ್ಣ ಮಾತಲ್ಲ ತಾನೆ!? ಹಾಗಾಗಿ ಮಳೆಗಾಲದ ಪೂರ್ವ ಸಿದ್ಧತೆಗೆ ಒತ್ತು ನೀಡುವುದು ಬಹಳ ಮುಖ್ಯ. ಅದರಲ್ಲೂ ‘ಈ ಬಾರಿ ವಿಪರೀತ ಮಳೆಯಾದರೆ ಏನು ಮಾಡಬೇಕು?’ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಆ ಕಲ್ಪನೆಯಲ್ಲೇ ನಮ್ಮ ಸಿದ್ಧತೆ ನಡೆಯಬೇಕಾಗುತ್ತದೆ. ಒಂದು ಸಣ್ಣ ಉಡಾಫೆಯೂ ಇಲ್ಲಿ ಭಾರೀ ಬೆಲೆ ತೆರುವಂತೆ ಮಾಡಬಹುದು. ಉದಾಹರಣೆಗೆ ತೋಟದಲ್ಲಿ ಅಥವಾ ಹೊಲದ ಬದುಗಳಲ್ಲಿ […]

ಸಾಮೂಹಿಕ ವಿವಾಹಗಳ ರೂವಾರಿ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಮುಂದಾಳತ್ವದಲ್ಲಿ ಪ್ರಾರಂಭಗೊAಡ ‘ಸಾಮೂಹಿಕ ವಿವಾಹ’ ಕಾರ್ಯಕ್ರಮಕ್ಕೆ ಇದೀಗ ಸುವರ್ಣ ಮಹೋತ್ಸವದ ಸಂಭ್ರಮ. ದಾನ ಪರಂಪರೆಯ ಧರ್ಮಸ್ಥಳ ಕ್ಷೇತ್ರದ ‘ಹೆಗ್ಗಡೆ’ ಜವಾಬ್ದಾರಿಯನ್ನು ೧೯೬೮ರಲ್ಲಿ ವಹಿಸಿಕೊಂಡ ಪೂಜ್ಯ ವೀರೇಂದ್ರ ಹೆಗ್ಗಡೆಯವರದ್ದು ದೂರದೃಷ್ಟಿಯ ಮನೋಭಾವ. ಅಗತ್ಯವಿದ್ದವರಿಗೆ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ಅವರು ದಾರ್ಶನಿಕರೇ ಸರಿ. ಎರಡು ಹೊತ್ತಿನ ಊಟ ಮಾಡುವುದೇ ಕಷ್ಟವಾಗಿದ್ದ ಆ ದಿನಗಳಲ್ಲಿ ಬಡ ಕುಟುಂಬಗಳು ತಮ್ಮ ಮಕ್ಕಳಿಗೆ ವಿವಾಹ […]

ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ‘ಜ್ಞಾನವಿಕಾಸ’

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಹೆಣ್ಣು ಸಮಾಜದ ಕಣ್ಣು ಎನ್ನುವುದು ಅತ್ಯಂತ ಅರ್ಥಗರ್ಭಿತವಾದ ಮಾತು. ಆದರೆ ಎಷ್ಟೋ ಸಂದರ್ಭದಲ್ಲಿ ಅವಕಾಶವಂಚಿತರಾದ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಅಜ್ಞಾನದ ಅಂಧಕಾರದಿAದಾಗಿ ಕಣ್ಣನ್ನೇ ತೆರೆಯಲಾಗದಂತಹ ಸ್ಥಿತಿಯಲ್ಲಿರುವಾಗ ಸಮಾಜದ ಕಣ್ಣಾಗುವುದು ಎನಿತು? ಗ್ರ‍್ರಾಮೀಣ ಪ್ರದೇಶದಲ್ಲಿ ಇದು ಸಾಮಾನ್ಯ. ಅದರಲ್ಲೂ ಸಂಸಾರಸ್ಥ ಮಹಿಳೆಯರ ಸಂಖ್ಯೆ ಬಹಳಷ್ಟು. ಹಳ್ಳಿಗಳಲ್ಲಿ ಮಕ್ಕಳ ಶಿಕ್ಷಣವೇ ಕಷ್ಟ, ಇನ್ನು ಸಂಸಾರಸ್ಥ ಮಹಿಳೆಯರಿಗೆ ಇನ್ನೆಲ್ಲಿ ಶಿಕ್ಷಣ? ಶತಮಾನಗಳಿಂದಲೂ ಇದ್ದ ಈ […]

ದಿಟ್ಟತನದಿಂದ ಬದುಕನ್ನು ಎದುರಿಸಿ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಶ್ರೀಕ್ಷೇತ್ರದ ವತಿಯಿಂದ ನಾಲ್ಕು ರೀತಿಯ ದಾನಗಳು ನಡೆಯಬೇಕೆಂದು ಧರ್ಮದೇವತೆಗಳು ಅಪ್ಪಣೆ ಮಾಡಿದ್ದಾರೆ. ಮೊದಲನೆಯದು ಅನ್ನದಾನ. ನಿಮಗೆ ತಿಳಿದಿರುವಂತೆ ಧರ್ಮಸ್ಥಳಕ್ಕೆ ಬಂದಾಗ ಎಲ್ಲರಿಗೂ ಪ್ರಸಾದ ವಿತರಣೆ, ದಾಸೋಹ ನಡೆಯುತ್ತದೆ. ಎರಡನೆಯದಾಗಿ ಔಷಧದಾನ. ಯಾರಿಗಾದರೂ ಅನಾರೋಗ್ಯವಾದರೆ ಅವರಿಗೆ ಬೇಕಾದ ಚಿಕಿತ್ಸೆಗೆ ಸಹಕಾರ ಮಾಡುವುದು. ಮೂರನೆಯದು ವಿದ್ಯಾದಾನ. ವಿದ್ಯೆ ಕಲಿಯುವವರಿಗೆ ಸಹಾಯಹಸ್ತ ಚಾಚುವುದು. ನಾಲ್ಕನೆಯದು ಅಭಯದಾನ. ಅಂದರೆ ಯಾರು ಯಾವುದನ್ನೇ ಕೇಳಲಿ ಅವರಿಗೆ ನೀಡುವುದು ಮತ್ತು ಭಯಪಡಬೇಡಿ ಎಂದು ಧೈರ್ಯ ತುಂಬುವುದು. ಕ್ಷೇತ್ರಕ್ಕೆ ಸಾವಿರಾರು ಮಂದಿ […]