ಕಿಡ್ನಿಯಲ್ಲಿ ಕಲ್ಲು

ಡಾ| ಸಂದೀಪ್ ಹೆಚ್.ಎಸ್. ಮಕ್ಕಳ ತಜ್ಞರು ಇಂದಿನ ಆಧುನಿಕ ಬದುಕಿನಲ್ಲಿ ಕಿಡ್ನಿ ಕಲ್ಲು ಅಪರೂಪವೇನಲ್ಲ. ಭಾರತದ ಶೇ.೧೨ರಷ್ಟು ಜನರು ಜೀವನದಲ್ಲಿ ಒಂದು ಬಾರಿಯಾದರೂ ಈ ಸಮಸ್ಯೆಯಿಂದ ಬಳಲುತ್ತಾರೆ ಎನ್ನುತ್ತದೆ ಸಂಶೋಧನೆ.ಮೂತ್ರದಲ್ಲಿರುವ ಹಲವಾರು ರಾಸಾಯನಿಕಗಳು ಸೇರಿ ಒಂದು ಗಟ್ಟಿಯಾದ ಭಾಗವಾಗಿ ಕಿಡ್ನಿಯಲ್ಲಿ ಕಂಡು ಬರುವುದೇ ‘ಕಿಡ್ನಿ ಸ್ಟೋನ್’. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಲವು ತ್ಯಾಜ್ಯಗಳು ಮೂತ್ರದ ಮೂಲಕವೇ ನಮ್ಮ ದೇಹದಿಂದ ಹೊರಗೆ ಸಾಗುತ್ತದೆ. ನೀರಿನಾಂಶ ಕಡಿಮೆ ಇದ್ದಾಗ ಇಂತಹ ಕಲ್ಲಿನ ಉತ್ಪತ್ತಿಯಾಗುತ್ತದೆ. ಹಲವಾರು ತ್ಯಾಜ್ಯಗಳ ಕಣಗಳು ಕ್ಯಾಲ್ಸಿಯಂ, ಓಕ್ಸಾಲೇಟ್, […]

ಬದಲಾವಣೆ ಜಗದ ನಿಯಮ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಬದಲಾವಣೆ ಜಗದ ನಿಯಮ. ಅದನ್ನು ಯಾರೂ ನಿಲ್ಲಿಸುವಂತಿಲ್ಲ. ಒಂದು ಮಗು ಹುಟ್ಟಿ ದಿನೇ ದಿನೇ ಬೆಳೆಯುವುದಕ್ಕೆ ಆರಂಭಿಸುತ್ತದೆ. ಮಲಗಿದ್ದ ಮಗು ಎದ್ದು ಕುಳಿತು ನಿಧಾನಕ್ಕೆ ನಡೆಯಲು ಆರಂಭಿಸುತ್ತದೆ. ಹಲ್ಲುಗಳು ಮೂಡುತ್ತವೆ. ಆದರೆ ಅಲ್ಲಿಗೆ ನಿಲ್ಲದ ಮಗುತನ ಯೌವನ, ಯೌವನವೂ ನಿಧಾನಕ್ಕೆ ವೃದ್ಧಾಪ್ಯಕ್ಕೆ ಎಡೆಮಾಡಿಕೊಡುತ್ತದೆ. ಇಂದು ಬಿತ್ತಿದ ಬೀಜ ಕೆಲವೆ ದಿನಗಳಲ್ಲಿ ಮೊಳಕೆ ಒಡೆದು ಮುಂದೆ ಅದೇ ಗಿಡ ಮರವಾಗಿ ಬೆಳೆದು ಹೂವು, ಹಣ್ಣುಗಳಿಂದ ಕಂಗೊಳಿಸುತ್ತದೆ. “ಎಳೆಗರುಂ ಎತ್ತಾಗದೆ” ಎಂಬoತೆ ಸಣ್ಣ ಕರು […]

ಹಾಜರಿಯೂ ನಿನ್ನದು, ಗೈರು ನಿನ್ನದು, ಆರದಿರಲಿ ಸಂಘದ ಬದುಕು

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ., ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ‘ಇನ್ನು ಗುರುವಾರಕ್ಕೆ ಕೇವಲ ಎರಡೇ ದಿನ ಬಾಕಿ’ ಎಂದು ಸಂಭ್ರಮದಿoದ ಶಾಂತಮ್ಮ ಬೀಗುತ್ತಿದ್ದರು. ಏಕೆಂದರೆ ನಾಡಿದ್ದು ಗುರುವಾರ ಸಂಘದ ವಾರದ ಸಭೆಗೆ ಶಾಂತಮ್ಮನೇ ಅಧ್ಯಕ್ಷೆ. ಹತ್ತು ಜನರ ಸರದಿಯಂತೆ ಎರಡುವರೆ ತಿಂಗಳಿನ ಹಿಂದೆ ತನ್ನ ಅಧ್ಯಕ್ಷತೆಯಲ್ಲಿ ನಡೆದ ವಾರದ ಸಭೆಯ ಸಂತೋಷವನ್ನು ನೆನಪಿಸಿಕೊಂಡರು.ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಬಂದು ವೃತ್ತಾಕಾರದಲ್ಲಿ ಕುಳಿತುಕೊಳ್ಳುವುದು, ದೇವರ ಫೋಟೋ ಇಟ್ಟು, ದೀಪ ಹಚ್ಚಿ ಮಾತೃಶ್ರೀ ಹೇಮಾವತಿ […]

ನವಜೀವನ ಸದಸ್ಯರಿಂದ ನಡೆಯಿತು ‘ಮದ್ಯವರ್ಜನ ಶಿಬಿರ’

ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರಗಳಿಗೆ ಸೇರಿ ಮದ್ಯಮುಕ್ತರಾದ ನಂತರ ಕಂಪೆನಿಯ ಮಾಲಕರಾದ, ತಾನು ದುಡಿಯುತ್ತಿದ್ದ ಬಸ್ಸನ್ನೇ ಖರೀದಿಸಿದ, ಹೊಸ ಮನೆ ಕಟ್ಟಿದ, ಅಂಗಡಿ ತೆರೆದ, ರೊಟ್ಟಿ ಘಟಕವನ್ನು ಆರಂಭಿಸಿದ, ಜಮೀನು ಖರೀದಿ, ಚುನಾವಣೆಯಲ್ಲಿ ಗೆದ್ದ, ಇತರ ನೂರಾರು ಮಂದಿಯನ್ನು ಶಿಬಿರಕ್ಕೆ ಸೇರಿಸಿ ಅವರನ್ನು ಮದ್ಯಮುಕ್ತರನ್ನಾಗಿಸಿದ, ನವಜೀವನ ಸಮಿತಿಯ ಸದಸ್ಯರು ಸೇರಿಕೊಂಡು ಬಸ್ ಸ್ಟ್ಯಾಂಡ್ ನಿರ್ಮಿಸಿದ, ಊರಿನ ಬಡ ಹೆಣ್ಮಕ್ಕಳಿಗೆ ಮದುವೆ ಮಾಡಿಸಿದ, ಊರಿನ ಕಷ್ಟ – ಸುಖಗಳಲ್ಲಿ ಸಮಭಾಗಿಗಳಾದ, ಕುಡಿತದ […]

ಚಿಗಿತುಕೊಳ್ಳಲಿ ಚೀತಾ

ರಾಕೇಶ್ ಎನ್. ಎಸ್. ಭಾರತದ ಅರಣ್ಯದಿಂದ 25ವರ್ಷಗಳ ಹಿಂದೆ ಮರೆಯಾಗಿದ್ದ ಚೀತಾಗಳು ಮತ್ತೆ ಕಾಣಿಸಿಕೊಳ್ಳುವ ಸುಸಮಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಆಫ್ರಿಕಾ ಖಂಡದ ನಮೀಬಿಯಾ ದೇಶದಿಂದ ಮೂರು ಗಂಡು ಮತ್ತು ಐದು ಹೆಣ್ಣು ಚಿರತೆಗಳು ಹುಲಿಯ ಚಿತ್ರದ ವಿಮಾನವೇರಿ ಭಾರತದ ಭೂಸ್ಪರ್ಶ ಮಾಡಿವೆ. ಎರಡರಿಂದ ಆರು ವರ್ಷದೊಳಗಿನ ಈ ಚೀತಾಗಳಿಗೆ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿರುವ ಕುನ್ಹೋ ರಾಷ್ಟ್ರೀಯ ಉದ್ಯಾನ ಆವಾಸ ಸ್ಥಾನವಾಗಿದೆ.1947ರಲ್ಲಿ ಕೊನೆಯ ಬಾರಿ ಚೀತಾ ಭಾರತದಲ್ಲಿ ಕಾಣಿಸಿಕೊಂಡಿತ್ತು. 1953ರಲ್ಲಿ […]

ಮತ್ತೊಂದು ಕ್ರೀಡಾ ಲೀಗ್ – ಅಲ್ಟಿಮೇಟ್ ಖೋ ಖೋ

ದಿನಕರ ಯಾವಾಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಬ ಕ್ರಿಕೆಟ್ ಟೂರ್ನಿಯು ಅತ್ಯಂತ ಯಶಸ್ವಿಯಾಯಿತೋ ಅದರ ಬಳಿಕ ಭಾರತದಲ್ಲಿ ಹಲವಾರು ಕ್ರೀಡೆಗಳನ್ನು ಅದೇ ರೀತಿ ಜನಪ್ರಿಯತೆಗೆ ತರಲು ಪ್ರಯತ್ನಗಳು ಸಾಗಿದವು. ಅದೇ ಬಗೆಯ ಕಬಡ್ಡಿ, ಹಾಕಿ, ಬ್ಯಾಡ್ಮಿಂಟನ್, ಫುಟ್ಬಾಲ್ ಮುಂತಾದ ಲೀಗ್ ಟೂರ್ನಿಗಳು ಶುರುವಾದವು. ಕಬಡ್ಡಿಯಂತಹ ಟೂರ್ನಿಗಳು ಭಾರೀ ಯಶಸ್ಸು ಕಂಡರೂ ಕೆಲವು ಅಷ್ಟರಮಟ್ಟಿಗೆ ಯಶಸ್ಸು ಕಾಣಲಿಲ್ಲವೆನ್ನುವುದೂ ನಿಜ.ಅಲ್ಟಿಮೇಟ್ ಖೋ ಖೋಖೋ ಖೋ ಪಂದ್ಯದ ಲೀಗ್ ಟೂರ್ನಿಯ ಮೊತ್ತಮೊದಲ ಸೀಸನ್ ಆಗಸ್ಟ್ 14ಕ್ಕೆ ಆರಂಭವಾಗಿ ಸೆಪ್ಟೆಂಬರ್ ಮೊದಲ […]

ಸಾಗರದಲ್ಲಿನ ಕ್ರಾಂತಿ ‘ವಿಕ್ರಾಂತ್’

ಬರಹ : ರಾಜೀವ ಹೆಗಡೆ ಭಾರತದ ‘ಆತ್ಮನಿರ್ಭರತೆ’ಯ ಹೊಸ ರೂಪವೇ ಐಎನ್‌ಎಸ್ ವಿಕ್ರಾಂತ್. ದಶಕಗಳ ಕಾಲ ನೌಕಾದಳ ಹಾಗೂ ಭಾರತೀಯರ ಪಾಲಿಗೆ ಗಗನ ಕುಸುಮವಾಗಿದ್ದ ಸ್ವದೇಶಿ ಯುದ್ಧ ನೌಕೆ ನಿರ್ಮಾಣದ ಕನಸನ್ನು ನನಸು ಮಾಡಿದ್ದು ವಿಕ್ರಾಂತ್ ಯುದ್ಧನೌಕೆ. ಕೋಟ್ಯಾಂತರ ಜನರಲ್ಲಿ ‘ಆತ್ಮನಿರ್ಭರತೆ’ಯ ಹೊಸ ಮಂತ್ರವು ಮತ್ತೊಮ್ಮೆ ಮಾರ್ದನಿಸುವಂತೆ ಮಾಡಿದ್ದು ಈ ಸಾಗರ ಸಮರವೀರ ‘ವಿಕ್ರಾಂತ್’. ಸ್ವಾತಂತ್ರದ ಅಮೃತಮಹೋತ್ಸವದ ವರ್ಷದಲ್ಲಿ ರಕ್ಷಣಾ ಪಡೆಗಳಿಗೆ ಸ್ವದೇಶಿ ಅಮೃತದಂತೆ ಐಎನ್‌ಎಸ್ ವಿಕ್ರಾಂತ್ ದೊರೆತಿದೆ. ಈ ಮೂಲಕ ಸ್ವದೇಶಿ ನಿರ್ಮಿತ ಯುದ್ಧನೌಕೆ ಹೊಂದಿದ […]

ಭಜನೆಯಿಂದ ಬದಲಾವಣೆ

ಬರಹ : ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಕಳೆದ 24 ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ಪ್ರತಿ ವರ್ಷ ಒಂದು ವಾರಗಳ ಕಾಲ ಭಜನಾ ತರಬೇತಿ ಕಮ್ಮಟವನ್ನು ಆಯೋಜಿಸಲಾಗುತ್ತಿದೆ. ರಾಜ್ಯದ ಬೇರೆ ಬೇರೆ ತಾಲೂಕುಗಳಿಂದ ಈವರೆಗೆ ಸರಿಸುಮಾರು 4,500 ಮಂದಿ ಭಜಕರು ಕಮ್ಮಟದಲ್ಲಿ ಭಾಗವಹಿಸುವ ಮೂಲಕ ಕಮ್ಮಟದ ಪ್ರಯೋಜವನ್ನು ಪಡೆದಿದ್ದಾರೆ. ತಮಗೆ ಭಜನಾ ಸಂಸ್ಕೃತಿಯ ಮೇಲಿರುವ ವಿಶ್ವಾಸ, ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ರಾಜ್ಯದಿಂದ ಮಾತ್ರವಲ್ಲದೇ ಮುಂಬೈಯಿoದಲೂ ಬಂದ ಭಜಕರು ಬಂದು ಒಂದು ವಾರಗಳ ಕಾಲ ಕಮ್ಮಟದಲ್ಲಿದ್ದು ತರಬೇತಿ ಪಡೆದು […]

ಸುಸ್ಥಿರ ಮಾದರಿಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆ

ಬರಹ : ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. ಸರಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು. ಸರಕಾರಿ ಸಂಸ್ಥೆಗಳು ಸರಕಾರದ ಹಣದಿಂದ ಎಲ್ಲ ಖರ್ಚು ವೆಚ್ಚಗಳನ್ನು ನಿರ್ವಹಿಸಿದರೆ ಖಾಸಗಿ ಸಂಸ್ಥೆಗಳು ವ್ಯವಹಾರ ಮಾಡಿ ಆದಾಯ ಗಳಿಸಿ ಖರ್ಚನ್ನು ನಿರ್ವಹಿಸುತ್ತವೆ. ಸ್ವಯಂಸೇವಾ ಸಂಸ್ಥೆಗಳಾದರೋ ದಾನಿಗಳು ನೀಡುವ ಬಂಡವಾಳವನ್ನು ಉಪಯೋಗಿಸಿಕೊಂಡು ತಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನಿಸುತ್ತವೆ. 40 ವರ್ಷಗಳ ಹಿಂದೆ ಪ್ರಾರಂಭಗೊ೦ಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು […]