ಕಿಡ್ನಿಯಲ್ಲಿ ಕಲ್ಲು

ಡಾ| ಸಂದೀಪ್ ಹೆಚ್.ಎಸ್. ಮಕ್ಕಳ ತಜ್ಞರು

ಇಂದಿನ ಆಧುನಿಕ ಬದುಕಿನಲ್ಲಿ ಕಿಡ್ನಿ ಕಲ್ಲು ಅಪರೂಪವೇನಲ್ಲ. ಭಾರತದ ಶೇ.೧೨ರಷ್ಟು ಜನರು ಜೀವನದಲ್ಲಿ ಒಂದು ಬಾರಿಯಾದರೂ ಈ ಸಮಸ್ಯೆಯಿಂದ ಬಳಲುತ್ತಾರೆ ಎನ್ನುತ್ತದೆ ಸಂಶೋಧನೆ.
ಮೂತ್ರದಲ್ಲಿರುವ ಹಲವಾರು ರಾಸಾಯನಿಕಗಳು ಸೇರಿ ಒಂದು ಗಟ್ಟಿಯಾದ ಭಾಗವಾಗಿ ಕಿಡ್ನಿಯಲ್ಲಿ ಕಂಡು ಬರುವುದೇ ‘ಕಿಡ್ನಿ ಸ್ಟೋನ್’. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಲವು ತ್ಯಾಜ್ಯಗಳು ಮೂತ್ರದ ಮೂಲಕವೇ ನಮ್ಮ ದೇಹದಿಂದ ಹೊರಗೆ ಸಾಗುತ್ತದೆ. ನೀರಿನಾಂಶ ಕಡಿಮೆ ಇದ್ದಾಗ ಇಂತಹ ಕಲ್ಲಿನ ಉತ್ಪತ್ತಿಯಾಗುತ್ತದೆ. ಹಲವಾರು ತ್ಯಾಜ್ಯಗಳ ಕಣಗಳು ಕ್ಯಾಲ್ಸಿಯಂ, ಓಕ್ಸಾಲೇಟ್, ಯುರೇಟ್, ಸಿಸ್ಟೀನ್, ಜಾಂಥೀನ್, ಫಾಸ್ಫೇಟ್‌ನಂತಹ ರಾಸಾಯನಿಕಗಳೊಡನೆ ಸೇರಿ ಮೂತ್ರಕೋಶದಲ್ಲಿ ಕಲ್ಲುಗಳನ್ನು ಉತ್ಪತ್ತಿ ಮಾಡುತ್ತದೆ. ಹೆಚ್ಚಾಗಿ ನಾವು ಸೇವಿಸುವ ನೀರಿನ ಪ್ರಮಾಣ ಹೆಚ್ಚಾಗಿದ್ದರೆ ಮೂತ್ರದ ಮೂಲಕವೇ ಈ ರಾಸಾಯನಿಕ ವಸ್ತುಗಳು ದೇಹದಿಂದ ಹೊರಗೆ ಹೋಗುತ್ತದೆ. ಹೆಚ್ಚು ನೀರನ್ನು ಕುಡಿಯದಿದ್ದಾಗ ಕಲ್ಲುಗಳು ಸುಲಭವಾಗಿ ಕಿಡ್ನಿಯಲ್ಲಿ ಹಾಗೂ ಮೂತ್ರ ಹರಿದು ಹೋಗುವ ದಾರಿಯಲ್ಲಿನ ಮೂತ್ರಪಿಂಡ, ಮೂತ್ರದ್ವಾರ ಮುಂತಾದ ಜಾಗಗಳಲ್ಲಿ ಉಂಟಾಗುತ್ತದೆ.
ಈ ಕಲ್ಲುಗಳು ಕಿಡ್ನಿಯ ಒಳಗೇ ಉಳಿದುಕೊಂಡರೆ ಕೆಲವೊಮ್ಮೆ ಇದು ಮೂತ್ರ ಹರಿದುಹೋಗುವ ದಾರಿಯಲ್ಲಿ ಜಾರುತ್ತಾ ಮೂತ್ರಪಿಂಡದಲ್ಲೋ, ಮೂತ್ರದ್ವಾರ, ಯುರೇಟರ್‌ಗಳಲ್ಲಿ (ಮೂತ್ರನಾಳಗಳಲ್ಲಿ) ಸಿಲುಕಿಹಾಕಿಕೊಳ್ಳುವ ಸಂದರ್ಭಗಳೂ ಇವೆ. ಇದರಿಂದಲೇ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತದೆ.
ಕಿಡ್ನಿಸ್ಟೋನ್ ಏಕೆ ಉಂಟಾಗುತ್ತದೆ?
 ಕಡಿಮೆ ನೀರು ಕುಡಿಯುವುದರಿಂದ.  ಅತೀ ಕಡಿಮೆ ವ್ಯಾಯಾಮ ಮಾಡುವುದರಿಂದ.  ಅತೀ ಹೆಚ್ಚು ವ್ಯಾಯಾಮ ಮಾಡುವುದರಿಂದ.  ದೇಹದ ತೂಕ ಹೆಚ್ಚಿದಾಗ.  ದೇಹದ ತೂಕ ಕಡಿಮೆ ಮಾಡುವಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡ ನಂತರ.  ಊಟದಲ್ಲಿ ಹೆಚ್ಚು ಸಕ್ಕರೆ ಹಾಗೂ ಉಪ್ಪಿನ ಅಂಶ ಸೇವಿಸುವುದರಿಂದ.  ಪದೇ ಪದೇ ಮೂತ್ರದ ಸೋಂಕು ಉಂಟಾಗುವುದರಿoದ.  ಕೆಲವರಲ್ಲಿ ವಂಶಪಾರoರ‍್ಯವಾಗಿ ಕಂಡು ಬರಬಹುದು.  ಊಟದಲ್ಲಿ ‘ಫ್ರಕ್ಟೋಸ್’ ಅಂಶವನ್ನು ಹೆಚ್ಚಾಗಿ ಸೇವಿಸಿದಾಗ. (ಇದು ನಾವು ತಿನ್ನುವ ಸಕ್ಕರೆಯಲ್ಲಿ ಅಧಿಕವಾಗಿ ಇರುತ್ತದೆ.) ಫ್ರಕ್ಟೋಸ್ ಕೆಲವರಲ್ಲಿ Oxalate ಆಗಿ ಪರಿವರ್ತನೆ ಹೊಂದಿ ‘ಕಿಡ್ನಿ ಕಲ್ಲು’ ಉತ್ಪತ್ತಿಯಾಗುತ್ತದೆ.
ಕಿಡ್ನಿಯಲ್ಲಿ ಕಲ್ಲು ಯಾರಲ್ಲಿ ಬರಬಹುದು?
 20-50 ವರುಷದ ಒಳಗಿನವರಲ್ಲಿ.  ಹೆಚ್ಚಾಗಿ ಪುರುಷರಲ್ಲಿ ಕಂಡು ಬರುತ್ತದೆ.  ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಬೊಜ್ಜುತನ, ಮೂಳೆಗಳ ಸವೆತ (osteoporosis) ದೀರ್ಘಕಾಲದ ಭೇದಿ, ಕಿಡ್ನಿಯಲ್ಲಿ ಪುಟ್ಟ ಗುಳ್ಳೆಗಳನ್ನು ಹೊಂದಿರುವವರಲ್ಲಿ ಕಿಡ್ನಿಯಲ್ಲಿ ಕಲ್ಲು ಹೆಚ್ಚಾಗಿ ಕಂಡುಬರುತ್ತದೆ.
ಕಿಡ್ನಿಯಲ್ಲಿ ಕಲ್ಲಿದ್ದರೆ ಕಂಡುಬರುವ ಚಿಹ್ನೆಗಳೇನು?
 ಬೆನ್ನಿನ ಕೆಳಗಿನ ಭಾಗ ಹಾಗೂ ಇಕ್ಕೆಲಗಳಲ್ಲಿ ಅಧಿಕ ಸೆಳೆತ/ನೋವು.  ಹೊಟ್ಟೆನೋವು.  ಮೂತ್ರದಲ್ಲಿ ರಕ್ತ ಕಂಡುಬರುವುದು.  ವಾಕರಿಕೆ, ವಾಂತಿ.  ಜ್ವರ, ಚಳಿ.  ಕಿಡ್ನಿ ಅಥವಾ ಮೂತ್ರದ್ವಾರದಲ್ಲಿನ ಕಲ್ಲುಗಳು ಚೂಪಾಗಿ ಗಾಯಗಳು ಉಂಟಾದಾಗ ಅಥವಾ ಮೂತ್ರದ್ವಾರ ಮುಟ್ಟಿಕೊಂಡಾಗ ನೋವು ತಡೆಯಲಾರದಷ್ಟು ಕಾಣುತ್ತದೆ.
 ಚಿಕ್ಕಪುಟ್ಟ ಕಲ್ಲುಗಳು ನಮಗೆ ತಿಳಿಯದೆಯೇ ಮೂತ್ರದ್ವಾರದ ಮೂಲಕ ಹೊರಗೆ ಬರುತ್ತವೆ.
ಕಂಡು ಹಿಡಿಯುವುದು ಹೇಗೆ?
 ವೈದ್ಯಕೀಯ ತಪಾಸಣೆ.  ಮೂತ್ರ ಪರೀಕ್ಷೆ.
 ಹೊಟ್ಟೆಯ ಎಕ್ಸ್ರೇ (ಕ್ಷ ಕಿರಣ) ಅಥವಾ ಸ್ಕ್ಯಾನಿಂಗ್ ಪರೀಕ್ಷೆ ಮಾಡುವುದು. ಮೂತ್ರದ್ವಾರ, ಮೂತ್ರಕೋಶದ ಎಕ್ಸ್ರೇ.
‘ಕಿಡ್ನಿಯ ಕಲ್ಲು’ಗಳ ಚಿಕಿತ್ಸೆ ಹೇಗೆ?
 ಅಧಿಕ ನೀರಿನ ಸೇವನೆ  ತುಂಬಾ ದೊಡ್ಡ ಕಲ್ಲುಗಳಾಗಿದ್ದರೆ ಅಥವಾ ಅಧಿಕ ತೊಂದರೆಯನ್ನು ಉಂಟು ಮಾಡುತ್ತಿದ್ದರೆ ಶಸ್ತçಚಿಕಿತ್ಸೆಯ ಮೂಲಕ ಕಲ್ಲುಗಳನ್ನು ತೆಗೆಯಲಾಗುತ್ತದೆ.
ಕಲ್ಲಿನಿಂದ ಬೇರೆ ಸಮಸ್ಯೆಗಳುಂಟಾಗಬಹುದೇ?
 ತುಂಬಾ ಸಮಯದಿಂದ ಇರುವ ಕಲ್ಲುಗಳು, ದೀರ್ಘಾವಧಿ ಕಿಡ್ನಿಯ ಕಾಯಿಲೆಗೆ ಕಾರಣವಾಗಬಹುದು.  ಒಂದು ಕಲ್ಲಿರುವುದು ಮುಂದೊoದು ದಿನ ಅಧಿಕವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
 ಮೂತ್ರದ ಸೋಂಕು ಉಂಟಾಗಬಹುದು.
ನಾವು ಹೇಗೆ ಜಾಗ್ರತೆ ವಹಿಸಿಕೊಳ್ಳಬೇಕು?
 ಅಧಿಕ ನೀರಿನ ಸೇವನೆ  ನಮ್ಮ ಮೂತ್ರದ ಬಣ್ಣದ ಮೇಲೆ ಒಂದು ಗಮನವಿಡಬೇಕು. ಹೆಚ್ಚಾಗಿ ಕಡುಹಳದಿ/ ಢಾಳ ಬಣ್ಣದಿಂದ ಕೂಡಿದ ಮೂತ್ರ ನಾವು ತೆಗೆದುಕೊಳ್ಳುವ ನೀರಿನ ಅಂಶವು ಕಡಿಮೆ ಎಂಬುದನ್ನು ಬಿಂಬಿಸುತ್ತದೆ.  ಆದಷ್ಟು ಸೋಡಾ, ಕಾಫಿ, ಟೀ ಸೇವನೆಗಿಂತ ನೀರು ಸೇವನೆಯನ್ನೇ ಹೆಚ್ಚಾಗಿಸಬೇಕು.  ವ್ಯಾಯಾಮ / ಅಧಿಕ ಬಿಸಿಲಿದ್ದಾಗ ಹೆಚ್ಚು ನೀರು ಕುಡಿಯಬೇಕು.  ಸಕ್ಕರೆ ಅಂಶವನ್ನು ನಮ್ಮ ಊಟದಲ್ಲಿ ಮಿತವಾಗಿಡಬೇಕು.  ನಮ್ಮ ದೇಹದ ತೂಕವನ್ನು ಸರಿಯಾಗಿ ಇಟ್ಟುಕೊಳ್ಳಬೇಕು.  ತೂಕ ಇಳಿಸುವ ಚಿಕಿತ್ಸೆಗೆ ಒಳಗಾಗಬಾರದು.  ಊಟದಲ್ಲಿ ಉಪ್ಪಿನ ಅಂಶ ಸೇವನೆಯಲ್ಲಿ ಮಿತಿ ಇರಬೇಕು.  ಒಂದು ದಿನಕ್ಕೆ 50 ಗ್ರಾಂನಷ್ಟು ಪ್ರೊಟೀನ್ ಅನ್ನು ಸೇವಿಸಬಹುದಾಗಿದೆ. ಮೊಟ್ಟೆ, ಮಾಂಸ, ಮೀನು, ಹಾಲುಗಳಲ್ಲಿ ಪ್ರೊಟೀನ್ ಹೆಚ್ಚಾಗಿಯೇ ಇರುತ್ತದೆ.
ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಲು ಆಧುನಿಕ ಚಿಕಿತ್ಸೆಗಳು ಏನು?
ಲಿಥೋಟ್ರಿಪ್ಸ್ : ಈ ಕ್ರಮದಲ್ಲಿ ರೋಗಿಗೆ ಯಾವುದೇ ಆಪರೇಶನ್ ಮಾಡದೇ ಕೇವಲ ಶಕ್ತಿಯುತವಾದ ಶಬ್ದತರಂಗಗಳನ್ನು ಕಲ್ಲಿನ ಮೇಲೆ ಕೇಂದ್ರೀಕರಿಸಿ ಅದನ್ನು ಪುಡಿ ಮಾಡಿ ಅದು ಮೂತ್ರದಲ್ಲಿ ಹೊರಹೋಗುವಂತೆ ಮಾಡುವುದು.
ಎಂಡೋಸ್ಕೋಪಿಕ್ ಲಿಥೋಟ್ರಿಪ್ಸ್ : ಈ ಕ್ರಮದಲ್ಲಿ ಮೂತ್ರನಾಳದಲ್ಲಿ ನಳಿಕೆಯೊಂದನ್ನು ತೂರಿ ಅದರ ತುದಿಯಿಂದ ಶಬ್ದಾತೀತ ತರಂಗಗಳನ್ನು ಅಥವಾ ಲೇಸರ್ ತರಂಗಗಳನ್ನು ಕಲ್ಲಿನ ಮೇಲೆ ಹರಿಸಿ ಆ ಕಲ್ಲನ್ನು ಪುಡಿ ಮಾಡಿ ಕಲ್ಲು ಮೂತ್ರದಲ್ಲಿ ಹೊರಹೋಗುವಂತೆ ಮಾಡುವುದು. ಈ ಕ್ರಮದಿಂದ ದೊಡ್ಡ ದೊಡ್ಡ ಕಲ್ಲುಗಳನ್ನು ಅಂದರೆ 2 ಸೆಂ.ಮೀ.ಗೂ ದೊಡ್ಡ ಕಲ್ಲುಗಳನ್ನು ಅರ್ಥಾತ್ ಸಾಧಾರಣ ರೀತಿಯ ಲಿಥೋಟ್ರಿಪ್ಸಿಯಿಂದ ಸಾಧ್ಯವಾಗದಷ್ಟು ದೊಡ್ಡದಾದ ಕಲ್ಲುಗಳನ್ನೂ ತೆಗೆಯಬಹುದು.
ಪಿ.ಸಿ.ಎನ್.ಎಲ್. : ದೊಡ್ಡದಾದ ಕಲ್ಲುಗಳು ಲಿಥೋಟ್ರಿಪ್ಸಿ ಇಂದ ಹೊಬರಲಾಗದಷ್ಟು ದೊಡ್ಡದಾಗಿದ್ದರೆ ಒಂದು ಸಣ್ಣ ರಂಧ್ರದ ಮೂಲಕ ಅದನ್ನು ಹೊರತೆಗೆಯುವ ಕ್ರಮ.
ಶಸ್ತ್ರಚಿಕಿತ್ಸೆ : ಮೇಲೆ ಹೇಳಿದ ಯಾವುದೇ ರೀತಿಯ ಕ್ರಮಗಳಿಂದ ತೆಗೆಯಲಾಗದಷ್ಟು ದೊಡ್ಡದಾದ ಕಲ್ಲುಗಳಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯುವ ಕ್ರಮ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *