ಬಡವರ ಪಾಲಿನ ಆಶಾಕಿರಣ ಜನೌಷಧ
“ತಾಯಿಯ ಬಿ.ಪಿ. ಮಾತ್ರೆಗೆ ತಿಂಗಳಿಗೆ ಒಂದು ಸಾವಿರದ ಇನ್ನೂರು ರೂಪಾಯಿ ತಗಲುತ್ತಿತ್ತು. ನನಗೆ ಸಿಗುವ 600 ರೂಪಾಯಿ ಸಂಬಳದ ಅರ್ಧಭಾಗ ಮೆಡಿಕಲ್‌ನ ಪಾಲಾಗುತ್ತಿತ್ತು. ಇದೀಗ ಇನ್ನೂರ ಹತ್ತು ರೂಪಾಯಿಯಲ್ಲಿ ತಾಯಿಯ ಬಿ.ಪಿ. ಮಾತ್ರೆ ದೊರೆಯುತ್ತದೆ” ಎನ್ನುವುದು ದಿವ್ಯಾಳೊಬ್ಬಳ ಮಾತಲ್ಲ.ಜನೌಷಧ ಕೇಂದ್ರಗಳಿಗೆ ಬರುವ ಮಂದಿಯಲ್ಲಿ ಮಾತನಾಡಿದರೆ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಬಡವರಿಗೆ ಕಡಿಮೆ ದರದಲ್ಲಿ ಔಷಧಗಳು ಕೈಗೆಟುಕಬೇಕು ಎನ್ನುವ ಕೇಂದ್ರ ಸರಕಾರದ ಕಲ್ಪನೆ ಇಂದು ಹೆಚ್ಚಿನ ಕಡೆಗಳಲ್ಲಿ ಸಾಕಾರಗೊಂಡಿದೆ. ಜನೌಷಧ ಕೇಂದ್ರದ ಕುರಿತು ಇರುವ ಕೆಲವೊಂದು ತಪ್ಪು […]