ಬಡವರ ಪಾಲಿನ ಆಶಾಕಿರಣ ಜನೌಷಧ

“ತಾಯಿಯ ಬಿ.ಪಿ. ಮಾತ್ರೆಗೆ ತಿಂಗಳಿಗೆ ಒಂದು ಸಾವಿರದ ಇನ್ನೂರು ರೂಪಾಯಿ ತಗಲುತ್ತಿತ್ತು. ನನಗೆ ಸಿಗುವ 600 ರೂಪಾಯಿ ಸಂಬಳದ ಅರ್ಧಭಾಗ ಮೆಡಿಕಲ್‌ನ ಪಾಲಾಗುತ್ತಿತ್ತು. ಇದೀಗ ಇನ್ನೂರ ಹತ್ತು ರೂಪಾಯಿಯಲ್ಲಿ ತಾಯಿಯ ಬಿ.ಪಿ. ಮಾತ್ರೆ ದೊರೆಯುತ್ತದೆ” ಎನ್ನುವುದು ದಿವ್ಯಾಳೊಬ್ಬಳ ಮಾತಲ್ಲ.
ಜನೌಷಧ ಕೇಂದ್ರಗಳಿಗೆ ಬರುವ ಮಂದಿಯಲ್ಲಿ ಮಾತನಾಡಿದರೆ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಬಡವರಿಗೆ ಕಡಿಮೆ ದರದಲ್ಲಿ ಔಷಧಗಳು ಕೈಗೆಟುಕಬೇಕು ಎನ್ನುವ ಕೇಂದ್ರ ಸರಕಾರದ ಕಲ್ಪನೆ ಇಂದು ಹೆಚ್ಚಿನ ಕಡೆಗಳಲ್ಲಿ ಸಾಕಾರಗೊಂಡಿದೆ. ಜನೌಷಧ ಕೇಂದ್ರದ ಕುರಿತು ಇರುವ ಕೆಲವೊಂದು ತಪ್ಪು ಕಲ್ಪನೆಗಳನ್ನು ದೂರವಾಗಿಸುವ ನಿಟ್ಟಿನಲ್ಲಿ ‘ಪ್ರಧಾನಮಂತ್ರಿ ಜನೌಷಧಿ’ ಪರಿಯೋಜನೆಯ ಕರ್ನಾಟಕ ರಾಜ್ಯದ ನೋಡೆಲ್ ಅಧಿಕಾರಿಯವರನ್ನು ಸಂಪರ್ಕಿಸಿ ಈ ಲೇಖನವನ್ನು ತಯಾರಿಸಲಾಗಿದೆ.
ಗುಣಮಟ್ಟಕ್ಕೆ ಆದ್ಯತೆ ನೀಡುವ ಜನೌಷಧಿ ಕೇಂದ್ರಗಳು
ಪ್ಯಾರಾಸೆಟ್‌ಮೊಲ್, ಆ್ಯಕ್ಷನ್ 500, ಸಿಪ್ಲ, ಅಬೋಟ್ ಲೂಪಿನ್ ಮುಂತಾದ ಹೆಸರುಗಳು ಎಲ್ಲರಿಗೂ ಚಿರಪರಿಚಿತ. ಸಾಮಾನ್ಯವಾಗಿ ಜ್ವರ ಬಂದರೆ ನಾವು ಮೆಡಿಕಲ್‌ಗಳಲ್ಲಿ ‘ಪ್ಯಾರಾಸೆಟ್‌ಮೊಲ್ ಅಥವಾ ಆ್ಯಕ್ಷನ್ 500 ಕೊಡಿ’ ಎಂದು ಕೇಳುತ್ತೇವೆ. ಆದರೆ ಇದ್ಯಾವುದು ಮಾತ್ರೆಗಳ ಹೆಸರುಗಳಲ್ಲ. ಬದಲಾಗಿ ಅದು ಮಾತ್ರೆಯನ್ನು ತಯಾರಿಸುವ ಕಂಪನಿಯ ಹೆಸರು. ಈ ಕಂಪನಿಯ ಮಾತ್ರೆಗಳನ್ನು ನೀವು ಹೋಗಿ ಜನೌಷಧ ಕೇಂದ್ರದಲ್ಲಿ ಕೇಳಿದರೆ ದೊರೆಯುವುದಿಲ್ಲ. ಜನೌಷಧಿ ಕೇಂದ್ರದಲ್ಲಿ ಕಂಪನಿಗೆ ಪ್ರಾಧಾನ್ಯತೆ ನೀಡಲಾಗುವುದಿಲ್ಲ. ಬದಲಾಗಿ ಔಷಧಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. WHO ದಿಂದ ಮಾನ್ಯತೆ ಪಡೆದ ಸಿಪ್ಲ, ಅಬೋಟ್, ಪಿಐಎಲ್, ಲೂಪಿನ್‌ನಂತಹ ದೇಶದ ಹೆಸರಾಂತ ಖಾಸಗಿ ಕಂಪನಿಗಳೇ ಔಷಧವನ್ನು ತಯಾರಿಸಿ ಸರಕಾರಕ್ಕೆ ನೀಡುತ್ತಿವೆ.
ಔಷಧಿಗಳ ಜಿಲ್ಲಾವಾರು ಪರೀಕ್ಷೆ
ಜನೌಷಧ ಕೇಂದ್ರಗಳಲ್ಲಿ ದೊರೆಯುವ ಔಷಧಗಳು ಸಾಮಾನ್ಯ ಔಷಧಾಲಯಗಳಲ್ಲಿ ದೊರೆಯುವ ಔಷಧಿಗಳಿಗಿಂತಲೂ ಇಮ್ಮಡಿ ಪ್ರಮಾಣದಲ್ಲಿ ಗುಣಮಟ್ಟದ ಬಗ್ಗೆ, ಅಡ್ಡಪರಿಣಾಮಗಳ ಬಗ್ಗೆ ಪರೀಕ್ಷೆ ನಡೆದು ಜನೌಷಧಿ ಕೇಂದ್ರವನ್ನು ಸೇರುತ್ತಿವೆ. ಮಾತ್ರೆಗಳನ್ನು ತಯಾರಿಸುವ ಕಂಪನಿಗಳ ಎಲ್ಲ ಹಂತದ ಪರೀಕ್ಷೆಗಳು ನಡೆದು ಅವು ಮಾರಾಟ ಮಾಡಬಹುದೆಂದು ಪ್ರಮಾಣಪತ್ರವನ್ನು ಸರಕಾರಕ್ಕೆ ನೀಡಿದ ನಂತರ BPPI ಸರಕಾರದ ಪರವಾಗಿ ಮತ್ತೆ ಆ ಔಷಧಗಳನ್ನು ಪರೀಕ್ಷೆಗೆ ಒಳಪಡಿಸುತ್ತದೆ. ನಂತರ ಆಯಾ ಜಿಲ್ಲೆಯ ವಾತಾವರಣಕ್ಕೆ ಅನುಗುಣವಾಗಿ ಅಲ್ಲಿನವರಿಗೆ ಸೇವಿಸಲು ಯೋಗ್ಯವೇ? ಎಂಬುದನ್ನು ಪರೀಕ್ಷಿಸಲು ಪ್ರತಿ ಜಿಲ್ಲೆಯ ಡ್ರಗ್ಸ್ ಕಂಟ್ರೋಲ್ಸ್ಗೆ ಔಷಧಗಳನ್ನು ಕಳುಹಿಸಿಕೊಡಲಾಗುತ್ತದೆ. ಔಷಧಗಳು ಆ ಜಿಲ್ಲೆಯ ವಾತಾವರಣಕ್ಕೆ, ಆ ಋತುಗಳಿಗೆ ಸರಿ ಹೊಂದುತ್ತವೆಯೆ ಎಂಬುದನ್ನು ಪ್ರಯೋಗಿಸಿ ನೋಡಿ ಕೊನೆಗೆ ಅಲ್ಲಿನ ಅಸಿಸ್ಟೆಂಟ್ ಡ್ರಗ್ಸ್ ಕಂಟ್ರೋಲರ್ ಜನೌಷಧಿ ಕೇಂದ್ರಕ್ಕೆ ನೀಡಲು ಅನುಮತಿ ನೀಡುತ್ತಾರೆ.
ನಿರ್ವಹಣೆ ಹೇಗೆ?
ಭಾರತೀಯ ಔಷಧಶಾಸ್ತçಗಳ ಇಲಾಖೆಯಡಿ BPPI (ಭಾರತೀಯ ಪಿಎಸ್‌ಯುಗಳ ಫಾರ್ಮ ಬ್ಯೂರೋ) ಕಾರ್ಯನಿರ್ವಹಿಸುತ್ತಿದೆ. ಜನೌಷಧ ಕೇಂದ್ರಗಳನ್ನು ಮುನ್ನಡೆಸುವ ಜವಾಬ್ದಾರಿ ಈ ಇಲಾಖೆಯದ್ದು.
ಗಮನಿಸಿರಿ
ವೈದ್ಯರು ನೀಡುವ ಚೀಟಿಯಲ್ಲಿ ನಮೂದಿಸುವ ಕಂಪನಿಗಳ ಮಾತ್ರೆಗಳು ಜನೌಷಧಿ ಕೇಂದ್ರದಲ್ಲಿ ದೊರೆಯುವುದಿಲ್ಲ. ಯಾಕೆಂದರೆ ಆರಂಭದಲ್ಲಿ ಹೇಳಿದಂತೆ ಇಲ್ಲಿ ಕಂಪನಿಗಿoತ ಔಷಧಕ್ಕೆ ಮಹತ್ವ ನೀಡಲಾಗುತ್ತದೆ. ಆದ್ದರಿಂದ ವೈದ್ಯರು ಚೀಟಿಯಲ್ಲಿ ತಿಳಿಸಿದ ಕಂಪನಿಗಿoತ ಉತ್ತಮ ಕಂಪನಿಯ, ಹೆಚ್ಚಿನ ಗುಣಮಟ್ಟದ ಮಾತ್ರೆ, ಔಷಧಗಳು ಜನೌಷಧ ಕೇಂದ್ರಗಳಲ್ಲಿ ದೊರೆಯುತ್ತವೆ. ಜನೌಷಧ ಕೇಂದ್ರಗಳಲ್ಲಿರುವ ಔಷಧಿಗಳ ಬಗ್ಗೆ ಯಾವುದೇ ಸಂದೇಹಗಳಿದ್ದರೂ ಆರ್.ಟಿ.ಐ. ಮೂಲಕ ಅರ್ಜಿ ಸಲ್ಲಿಸಿ ತಯಾರಿಕಾ ಗುಣಮಟ್ಟದ ವರದಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಸರಕಾರವೇ ಹೇಳುವಂತೆ ಇದು ಇತರ ಔಷಧಾಲಯಗಳ ಜೊತೆ ಸ್ಪರ್ಧೆಗಾಗಿ ಯೋಜನೆ ಅಲ್ಲ. ಶ್ರೀಮಂತರಿಗೂ ಅಲ್ಲ. ಬದಲಾಗಿ ಬಡವರಿಗಾಗಿ ಜಾರಿಗೆ ತಂದ ಯೋಜನೆ ಇದಾಗಿದೆ.
ಎರಡು, ಮೂರು ಆರೋಗ್ಯ ಸಮಸ್ಯೆಗಳಿಗೆ ಒಂದೇ ಮಾತ್ರೆ ನೀಡುವಂತಿಲ್ಲ : ಸುಪ್ರೀಂ ಕೋರ್ಟ್
ಸಾಮಾನ್ಯವಾಗಿ ಜ್ವರ, ತಲೆನೋವು, ಶೀತ, ನೆಗಡಿಗಳಿಗೆಂದು ಮೆಡಿಕಲ್‌ಗಳಿಗೆ ಹೋದಾಗ ಒಂದು ಮಾತ್ರೆಯನ್ನು ನೀಡಿ ಅದು ಎಲ್ಲದಕ್ಕೂ ಆಗುತ್ತದೆ ಎನ್ನುತ್ತಾರೆ. ಒಂದು ಮಾತ್ರೆಯಲ್ಲಿ ಒಂದೇ ಬಗೆಯ ರೋಗವನ್ನು ಗುಣಪಡಿಸುವ ಅಂಶಗಳಿರಬೇಕು. ಒಂದೇ ಮಾತ್ರೆಯಲ್ಲಿ ನಾಲ್ಕೆöÊದು ರೋಗಗಳನ್ನು ಗುಣಪಡಿಸುವ ಶಕ್ತಿಗಳಿರಬಾರದು. ಅಂತಹ ಮಾತ್ರೆಗಳು ದೇಹದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತವೆ. ಅವುಗಳ ಮಾರಾಟವನ್ನು ಮಾಡಬಾರದೆಂಬ ತೀರ್ಪನ್ನು ಈ ಹಿಂದೆಯೇ ಸುಪ್ರೀಂ ಕೋರ್ಟ್ ನೀಡಿದೆ. ಇದನ್ನು ಜನೌಷಧಿ ಕೇಂದ್ರ ಅಕ್ಷರಶಃ ಪಾಲಿಸುತ್ತದೆ.
ನೀವು ಪ್ರಯೋಜನ ಪಡೆಯಿರಿ
ನಿಮ್ಮ ಊರಿನಲ್ಲಿರುವ ಜನೌಷಧ ಕೇಂದ್ರದ ಪ್ರಯೋಜನವನ್ನು ನೀವು ಪಡೆಯಿರಿ. ಅಲ್ಲಿರುವ ಔಷಧಗಳ ಬಗ್ಗೆ ಯಾವುದೇ ರೀತಿಯ ಸಂಶಯಪಡುವ ಅಗತ್ಯವಿಲ್ಲ.
ಜನೌಷಧ ಕೇಂದ್ರವನ್ನು ನೀವೂ ತೆರೆಯಬಹುದು
ನೀವು ಜನೌಷಧ ಕೇಂದ್ರವನ್ನು ತೆರೆಯಬಹುದಾಗಿದೆ. ಇದು ಜನಸಾಮಾನ್ಯರ ಪಾಲಿನ ಯೋಜನೆಯಾಗಿದ್ದು ಜನಸಾಮಾನ್ಯರೇ ಇದನ್ನು ಮುನ್ನಡೆಸಬಹುದಾಗಿದೆ. ಕೇಂದ್ರಕ್ಕೆ ಓರ್ವ ‘ಬಿ – ಫಾರ್ಮಾ’ ಶಿಕ್ಷಣ ಪಡೆದವರು ಬೇಕು. ಒಂದು ತಾಲೂಕಿನಲ್ಲಿ ಎಷ್ಟು ಕೇಂದ್ರಗಳನ್ನು ಬೇಕಾದರೂ ತೆರೆಯಬಹುದಾಗಿದೆ. ಜನೌಷಧ ಕೇಂದ್ರದಲ್ಲಿ ಇತರ ಔಷಧಗಳನ್ನು ಇಡುವಂತಿಲ್ಲ. ಕೇಂದ್ರ ತೆರೆಯಲು ಇಚ್ಛಿಸುವವರು ಆನ್‌ಲೈನ್ ಮೂಲಕ ಜಿಲ್ಲಾ ಔಷಧ ನಿಯಂತ್ರಣ ವಿಭಾಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಮರ್ಪಕವಾಗಿದ್ದರೆ ಆರು ದಿನದೊಳಗಡೆ ಲೈಸೆನ್ಸ್ ದೊರೆಯುತ್ತದೆ.
ಅತೀ ಕಡಿಮೆ ಬೆಲೆ ಅಂದರೆ ತಯಾರಿಕಾ ಬೆಲೆಯಲ್ಲೇ ಬಡವರ ಕೈಗೆ ಔಷಧವನ್ನು ಒದಗಿಸುವ ಈ ಯೋಜನೆ ಬಡವರ ಬದುಕಿಗೆ ಆಧಾರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *