ವೈದ್ಯಕೀಯ ಶಿಕ್ಷಣ ಪಡೆಯುವುದು ಹೇಗೆ?

ಗುರುಪ್ರಸಾದ್ ಟಿ. ಎನ್. ಭಾರತದಲ್ಲಿ ವೈದ್ಯರಾಗಲು ವಿದ್ಯಾರ್ಥಿಯೊಬ್ಬ ಪದವಿಪೂರ್ವ ಶಿಕ್ಷಣ (ಪಿಯುಸಿ ಅಥವಾ 10+9 ವನ್ನು ಭೌತಶಾಸ್ತç, ರಸಾಯನಶಾಸ್ತç ಮತ್ತು ಜೀವಶಾಸ್ತç ವಿಷಯಗಳೊಂದಿಗೆ ಪೂರ್ಣಗೊಳಿಸಿರಬೇಕು. ಜೊತೆಗೆ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಟ ಶೇ.೫೦ ಅಂಕಗಳನ್ನು ಗಳಿಸುವುದು ಮೊದಲ ಅರ್ಹತೆ. ಬಳಿಕ ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್) ಪದವಿಯನ್ನು ಪೂರ್ಣಗೊಳಿಸಬೇಕು.ಭಾರತದಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪರವಾಗಿ ರಾಷ್ಟಿçÃಯ ಪರೀಕ್ಷಾ […]

ಮಕ್ಕಳಿಗೆಷ್ಟು ಸಮಯ ಕೊಡುತ್ತೀರಾ?

ಅಶ್ವಿನಿ ಹೆಚ್. ಮನಃಶಾಸ್ತ್ರಜ್ಞರು ಲಲಿತಮ್ಮ ವಯೋಸಹಜ ಖಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದರು. ಮನೆಯಲ್ಲಿ ಇದ್ದಷ್ಟು ದಿನ ಮೊಮ್ಮಗನ ತುಂಟಾಟ ನೋಡುವುದು ಅವರ ದಿನಚರಿ. ಆಸ್ಪತ್ರೆ ಸೇರಿದಾಗಿನಿಂದ ಮೊಮ್ಮಗನ ಒಡನಾಟವಿಲ್ಲದೆ ಅವನದ್ದೇ ಚಿಂತೆಯಲ್ಲಿ ಅವರ ಆರೋಗ್ಯ ಸಮಸ್ಯೆಯು ಬಿಗಡಾಯಿಸಿತು. ಒಂದು ದಿನ ಮೊಮ್ಮಗ ಅಜ್ಜಿಯನ್ನು ನೋಡಲು ಬಂದ. ಮಗು ಬಂದ ಮಾರನೇ ದಿನ ಲಲಿತಮ್ಮ ಚೇತರಿಸಿಕೊಂಡರು. ಮಾತ್ರವಲ್ಲದೇ ಇದಾದ ಎರಡನೇ ದಿನಕ್ಕೆ ಆಸ್ಪತ್ರೆಯಿಂದ ಮನೆಗೆ ವಾಪಸಾದರು. ಇದು ಮಕ್ಕಳೊಂದಿಗಿನ ಒಡನಾಟ ಹಿರಿಯರ ಮೇಲೆ ಬೀರುವ ಪ್ರಭಾವವೂ ಹೌದು.ಮಕ್ಕಳು – […]

ಕತ್ತಲ ಸಂಸಾರಕೆ ಕಮಲ ಆಸರೆ

ಡಾ| ಚಂದ್ರಹಾಸ್ ಚಾರ್ಮಾಡಿ ಮೂರು ಗಂಡು, ನಾಲ್ಕು ಹೆಣ್ಮಕ್ಕಳಲ್ಲಿ ಕಮಲ ಎಲ್ಲರಿಗೆ ಅಕ್ಕ. ಏಳು ಮಂದಿಯಲ್ಲಿ ತಂಗಿಯೊಬ್ಬಳು ಹದಿನೆಂಟನೆ ವಯಸ್ಸಿನಲ್ಲೆ ಮೂರ್ಛೆರೋಗದಿಂದಾಗಿ ಇಹಲೋಕ ತ್ಯಜಿಸಿದ್ದಾಳೆ. ತಮ್ಮನೊಬ್ಬ ಮಾನಸಿಕ ಅಸ್ವಸ್ಥನಾಗಿ ಊರು ಬಿಟ್ಟು ಹೋದವನ ಪತ್ತೆಯೇ ಇಲ್ಲ. ಕಮಲಳಿಗೆ ವಯಸ್ಸು 63. ತಂಗಿಯರಾದ ಬೇಬಿಗೆ 62, ಯಶೋದoಗೆ 43. ಒಡಹುಟ್ಟಿದವರು ಸಾಮಾನ್ಯರಂತೆ ಇರುತ್ತಿದ್ದರೆ ಕಮಲ ಇಷ್ಟೊತ್ತಿಗೆ ಮದುವೆಯಾಗಿ ಗಂಡನ ಮನೆಯಲ್ಲಿ ಇರುತ್ತಿದ್ದಳು. ಆದರೆ ಇಲ್ಲಿ ಭಗವಂತನ ಆಟವೇ ಬೇರೆಯಾಗಿದೆ. ಕಮಲ ಸಂಸಾರದ ನೊಗವನ್ನು ಹೊತ್ತು ತನ್ನ ಸಹೋದರ – […]

ಸಿಹಿತಿಂಡಿ ಘಟಕದ ಮಾಲಕಿಯಾದ ದಿನಗೂಲಿ ಮಹಿಳೆ

ಡಾ| ಚಂದ್ರಹಾಸ್ ಚಾರ್ಮಾಡಿ ಮುಂಬೈ ಬದುಕನ್ನು ಬಿಟ್ಟು ತವರು ನೆಲದಲ್ಲಿ ಸ್ವಂತ ಬೇಕರಿ ಉದ್ಯಮವನ್ನು ಆರಂಭಿಸಿ ಊರಿನ ಒಂದಷ್ಟು ಮಂದಿಯ ಬದುಕನ್ನು ಸಿಹಿಯಾಗಿಸಿದ ಅನಿತಾ – ರವೀಂದ್ರ ಪೂಜಾರಿ ದಂಪತಿಗಳ ಸಾಹಸದ ಕಥೆಯನ್ನು ಅನಿತಾರವರೇ ಹೇಳುತ್ತಾರೆ…‘ನಾನು ಹುಟ್ಟು ಶ್ರೀಮಂತೆಯಲ್ಲ. ಮೂರು ಮಂದಿ ಹೆಣ್ಮಕ್ಕಳಲ್ಲಿ ನಾನೇ ದೊಡ್ಡವಳು. ಬಜಗೋಳಿಯಲ್ಲಿ ನಮಗಿದ್ದುದು ಕೇವಲ ಐದು ಸೆನ್ಸ್ ಜಮೀನು. ತಂದೆ ಹೋಟೆಲ್‌ನಲ್ಲಿ ದುಡಿದರೆ, ತಾಯಿ ಬೀಡಿ ಕಟ್ಟಿದರೆ ಮಾತ್ರ ಹೊಟ್ಟೆ ತುಂಬುತ್ತಿತ್ತು. ಪಿಯುಸಿವರೆಗಾದರೂ ಓದಬೇಕೆಂಬ ನಿಟ್ಟಿನಲ್ಲಿ ಸಂಜೆ 6 ಗಂಟೆಯಿoದ 9 […]

ಅಡಕೆ ಗಿಡ ನೆಟ್ಟುಕೊಟ್ಟ ಶೌರ್ಯ ಸಾಹಸಿಗರು

ಬೆಳ್ತಂಗಡಿ ತಾಲೂಕಿನ ನಡ ಕನ್ಯಾಡಿ ‘ಶೌರ್ಯ ವಿಪತ್ತು ನಿರ್ವಹಣಾ ಘಟಕ’ದ ಸ್ವಯಂಸೇವಕರ ಕುರಿತು ಯಶೋಗಾಥೆಯನ್ನು ತಯಾರಿಸಬೇಕೆಂದು ನಡ ಗ್ರಾಮಕ್ಕೆ ಹೋದಾಗ ಶೌರ್ಯ ತಂಡದ ಸಂಯೋಜಕಿ ಕು| ವಸಂತಿ ಕೆ.ಯವರು ನಡಿಬೆಟ್ಟು ಅಶೋಕ್ ಗೌಡ ಮತ್ತು ರೂಪವತಿ ದಂಪತಿಗಳ ಮನೆಗೆ ಕರೆದುಕೊಂಡು ಹೋದರು.ಅವರದು ಸಿಮೆಂಟ್ ಇಟ್ಟಿಗೆ ಮತ್ತು ಶೀಟ್‌ನಿಂದ ನಿರ್ಮಿಸಿದ ಪುಟ್ಟ ಮನೆ. ಮನೆ ತುಂಬಾ ಬಡತನವಿದ್ದರೂ ಗಂಡ – ಹೆಂಡತಿ ಇಬ್ಬರೂ ದುಡಿದು ಹೇಗೋ ಜೀವನ ನಿರ್ವಹಣೆ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಕೆಲಸಬಿಟ್ಟು ಮನೆಗೆ […]

ಶ್ರದ್ಧಾಕೇಂದ್ರಗಳೆಂಬ ದೀಪಸ್ತಂಭ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಹಿoದೆ ಎಲ್ಲರೂ ಊರಲ್ಲೇ ಇದ್ದು ವಿವಿಧ ಕೆಲಸಗಳಲ್ಲಿ ತೊಡಗಿರುತ್ತಿದ್ದರು. ಇಂದು ಉದ್ಯೋಗವನ್ನು ಹುಡುಕಿ ಹಳ್ಳಿಯಿಂದ ಪೇಟೆಗೆ ಹೋಗುವವರ ಸಂಖ್ಯೆಯು ಗಣನೀಯವಾಗಿ ಏರಿದೆ. ಹೀಗೆ ನಗರ, ದೇಶವನ್ನರಿಸಿ ದೂರ ಹೋದರೂ ನಮ್ಮೂರು, ನಮ್ಮ ದೇಶವನ್ನು ಮರೆಯಬಾರದು. ನಮ್ಮ ಹುಟ್ಟೂರು, ತಾಲೂಕು, ಜಿಲ್ಲೆ, ರಾಜ್ಯ, ದೇಶದ ಅಭಿವೃದ್ಧಿಗೆ ನಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು. ಇದು ಸಮಾಜದ ಋಣ ತೀರಿಸುವ ಕೆಲಸ. ವ್ಯಕ್ತಿ ಹೇಗಿರಬೇಕೆಂಬ ಅನೇಕ ಮಾರ್ಗದರ್ಶಿ ಸೂತ್ರಗಳು ಗ್ರಂಥಗಳಲ್ಲಿ ಲಭ್ಯ. ವ್ಯಕ್ತಿಯ ಪರಿವರ್ತನೆಯಿಂದ ಸಂಸಾರದ […]

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಗಳ ಬಗ್ಗೆ ಜಾಗ್ರತೆ ಇರಲಿ

ಡಾ| ಎಲ್.ಎಚ್. ಮಂಜುನಾಥ್ 21ನೇ ಶತಮಾನದಲ್ಲಿ ಜನರನ್ನು ಅತಿ ಹೆಚ್ಚು ಮುಟ್ಟಿದ ಅನ್ವೇಷಣೆ ಎಂದರೆ ಅದು ಮೊಬೈಲ್ ಚಳುವಳಿಯೇ ಆಗಿದೆ. ಎಲ್ಲರ ಕೈಯಲ್ಲಿ ಮೊಬೈಲ್ ತಲುಪಿದ ನಂತರ ಮಾಹಿತಿಯನ್ನು ಕೊಡುವ ಅನೇಕ ತಂತ್ರಜ್ಞಾನಗಳ ಸಂಶೋಧನೆಯಾಗಿದ್ದು ಇದರಿಂದಾಗಿ ಪ್ರಪಂಚದಲ್ಲಿ ನಡೆಯುವ ಆಗುಹೋಗುಗಳ ಕುರಿತಾಗಿ ಮಾಹಿತಿಯು ಕ್ಷಣ ಮಾತ್ರದಲ್ಲಿ ಜನರಿಗೆ ಲಭ್ಯವಾಗುತ್ತಿದೆ. ಇಂದು ಜಗತ್ತಿನಾದ್ಯಂತ ಪ್ರಸಿದ್ಧವಾಗಿರುವ ಯೂಟ್ಯೂಬ್, ಫೇಸ್‌ಬುಕ್, ಟ್ವಿಟ್ಟರ್, ವ್ಯಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳು ಜನರ ಪ್ರತಿಭೆಯನ್ನು, ಭಾವನೆಗಳನ್ನು ಹೊರಹಾಕಲು ಸುಂದರವಾದ ವೇದಿಕೆಯನ್ನು ಒದಗಿಸಿರುವಂತೆಯೇ ವಿಕೃತ ಮನಸ್ಸುಗಳ, ವಿಕೃತ […]