ಕೆಲಸಗಳಲ್ಲಿ ಸಮಾನತೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ನಾವು ಮಾಡುವ ಯಾವುದೇ ಕೆಲಸಗಳನ್ನು ದೊಡ್ಡ ಕೆಲಸ, ಸಣ್ಣ ಕೆಲಸ ಎಂಬ ವ್ಯತ್ಯಾಸದಿಂದ ಕಾಣಬಾರದು. ಕೆಲಸ ಯಾವುದೇ ಇರಲಿ, ಅದಕ್ಕೆ ಅದರದ್ದೇ ಆದ ಮಹತ್ವವಿದೆ. ಒಂದು ಕಚೇರಿಯಲ್ಲಿ ಯಾರಾದರೂ ಒಬ್ಬರು ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದರೆ ಮುಂದಿನ ಎಲ್ಲ ಕೆಲಸಗಳಿಗೂ ಸಮಸ್ಯೆಯಾಗುತ್ತದೆ. ಉದಾಹರಣೆಗೆ ಒಬ್ಬ ಅಟೆಂಡರ್ ಒಂದು ದಿನ ಕಚೇರಿಯನ್ನು ಸ್ವಚ್ಛಗೊಳಿಸದಿದ್ದರೆ ಕಚೇರಿಯಲ್ಲಿರುವ ಕಚೇರಿ ಸಹಾಯಕರಿಂದ ಹಿಡಿದು ಮೇಲಾಧಿಕಾರಿಯವರೆಗೆ ಯಾರೊಬ್ಬರಿಗೂ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಕೆಲಸ ಮಾಡಿದರೂ […]

ಅಭಿವೃದ್ಧಿಗಾಗಿ ಸುಸ್ಥಿರತೆಯ ಸ್ವಸಹಾಯ ಸಂಘಗಳು

ಶ್ರೀ ಅನಿಲ್ ಕುಮಾರ್ ಎಸ್.ಎಸ್. ಹಿಂದಿನ ಸಂಚಿಕೆಯಲ್ಲಿ ನೂತನ ಸಂಘಗಳ ಸುಸ್ಥಿರತೆಗಾಗಿ ಪ್ರಾರಂಭದಲ್ಲಿ ನೀಡುವ 6 ಪ್ರಮುಖ ತರಬೇತಿಗಳಲ್ಲಿ 1. ಸ್ವಸಹಾಯ ಸಂಘಗಳ ಸಭಾ ನಡವಳಿಕೆ ಮತ್ತು ಶ್ರಮ ವಿನಿಮಯ 2. ಸ್ವಸಹಾಯ ಸಂಘದ ಉಳಿತಾಯ ಮತ್ತು ದಾಖಲಾತಿ ನಿರ್ವಹಣಾ ತರಬೇತಿ 3. ಸ್ವಸಹಾಯ ಸಂಘಗಳ ಹಿಡುವಳಿ ಯೋಜನೆ ತರಬೇತಿಗಳ ಬಗ್ಗೆ ವಿವರಿಸಲಾಗಿದೆ. ಇನ್ನುಳಿದ ಮೂರು ತರಬೇತಿಗಳ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಯೋಣ. 4. ಸ್ವಸಹಾಯ ಸಂಘದ ಸದಸ್ಯರಲ್ಲಿ ನಾಯಕತ್ವ : ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಸಂಘದ […]

ಅನಾಥರ ಆಸರೆ ಸಿಯೋನ್

ಡಾ. ಚಂದ್ರಹಾಸ್ ಚಾರ್ಮಾಡಿ ನಾವು ಮೂರು ಮಂದಿ ಮಕ್ಕಳು. ನಾನು ಮೂರು ತಿಂಗಳ ಮಗುವಾಗಿದ್ದಾಗ ಹೆತ್ತವರು ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿಗೆ ಬಂದು ನೆಲೆಸಿದರು. ನಾಲ್ಕನೇ ತರಗತಿಯವರೆಗೆ ಗಂಡಿಬಾಗಿಲು ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದೆ. ನಂತರ ಐದನೇ ತರಗತಿಗೆ ಅಲ್ಲಿಂದ ಒಂಚೂರು ದೂರದಲ್ಲಿರುವ ನೆರಿಯ ಶಾಲೆಗೆ ಹೋಗಬೇಕಿತ್ತು. ಆ ದಿನಗಳಲ್ಲಿ ಪುಸ್ತಕ, ಬಟ್ಟೆಬರೆ ಹೀಗೆ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ ಐದು ರೂಪಾಯಿ ಬೇಕಿತ್ತು. ಕೃಷಿ ಭೂಮಿ ಇದ್ದರೂ ಅದರಲ್ಲಿ ಹೇಳಿಕೊಳ್ಳುವಂತಹ ಯಾವುದೇ ಆದಾಯದ […]

ಸಂಯಮ ಸಾಧನೆಗೆ ಶಿವರಾತ್ರಿ ಸ್ಫೂರ್ತಿ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮಹಾಶಿವನ ಮಂಗಳಕರ ಶಿವರಾತ್ರಿಯನ್ನು ಪ್ರತಿವರ್ಷ ಭಕ್ತಿಪೂರ್ವಕವಾಗಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಚರಿಸಲಾಗುತ್ತದೆ. ನಾಡಿನ ವಿವಿಧ ಕಡೆಗಳಿಂದ ಬಹಳಷ್ಟು ಮಂದಿ ಭಕ್ತರು ಶ್ರೀಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಬಂದು ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಮಾಡಿ ರಥೋತ್ಸವವನ್ನು ಕಣ್ತುಂಬಿಕೊಂಡು ಶ್ರೀಸ್ವಾಮಿಯ ದರ್ಶನವನ್ನು ಮಾಡುತ್ತಾರೆ. ಕೈಕಾಲು ನೋವು, ಸುಸ್ತನ್ನು ಲೆಕ್ಕಿಸದೆ ಶ್ರೀಕ್ಷೇತ್ರವನ್ನು ತಲುಪಬೇಕು, ಸ್ವಾಮಿಯನ್ನು ಕಾಣಬೇಕೆಂಬ ಭಕ್ತಿ, ಏಕಾಗ್ರತೆ, ಗುರಿಯೊಂದಿಗೆ ಉತ್ಸಾಹಭರಿತವಾಗಿ ಗಾಳಿಯೇ ತಳ್ಳಿಕೊಂಡು ಬಂದ ರೀತಿಯಲ್ಲಿ ಭಕ್ತರು ಏಳೆಂಟು ದಿನಗಳ ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಆಗಮಿಸುತ್ತಾರೆ.ಈ ದೇಹವೆಂಬುವುದು ಒಂದು […]

ಮಹಿಳಾ ಸಬಲೀಕರಣ – ಯಾರ ಹೊಣೆ?

ಡಾ| ಎಲ್.ಎಚ್. ಮಂಜುನಾಥ್ ಪುರುಷ ಪ್ರಧಾನ ಸಂಸ್ಕøತಿಗಳೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ದೊರಕಿಸಿಕೊಡಬೇಕೆಂಬ ಪ್ರಯತ್ನ ಮಾಡಿದವರೆಷ್ಟೋ ಮಹಾಮಹಿಮರು ಆಗಿ ಹೋಗಿದ್ದಾರೆ. ಸತಿಸಹಗಮನ ಪದ್ಧತಿಯನ್ನು ರದ್ದುಗೊಳಿಸುವಲ್ಲಿ ಶ್ರಮಿಸಿದ ರಾಜಾರಾಮ್ ಮೋಹನ್‍ರಾಯ್‍ರಿಂದ ಪ್ರಾರಂಭಿಸಿ ಬಾಲಕಿಯರಿಗೆ ಶಿಕ್ಷಣ ಒದಗಿಸುವ ಕುರಿತು ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆವರೆಗೆ ನಮ್ಮ ದೇಶ ಅನೇಕ ಮಹಿಳಾ ಸಬಲೀಕರಣದ ಅಧ್ವರ್ಯಗಳನ್ನು ಕಂಡಿದೆ. ಅವರುಗಳು ಅನುಸರಿಸಿದ ದಾರಿಗಳೂ ಅಷ್ಟೇ ವೈಶಿಷ್ಟ್ಯಪೂರ್ಣವಾಗಿವೆ.ಮಹಿಳಾ ಸಬಲೀಕರಣ ಎನ್ನುವ ಪದಪುಂಜವನ್ನು ಇತ್ತೀಚಿನ ದಿನಗಳಲ್ಲಿ ನಾವು ಬಹಳಷ್ಟು ಕೇಳುತ್ತಿದ್ದೇವೆ. ಸಬಲೀಕರಣವೆಂದರೆ ಕುಟುಂಬದಲ್ಲಿ […]