ಗಿನಿಪಿಗ್ ನೋಡಿದಿರಾ!
ಡಾ. ಚಂದ್ರಹಾಸ್ ಚಾರ್ಮಾಡಿ ಮುಂಗುಸಿಯoತಹ ಮೂತಿ, ಮೊಲದಂತೆ ಚುರುಕು, ಇಲಿಯ ಮೈಕಟ್ಟು ಹೊಂದಿರುವ ಇಲಿಯೂ ಅಲ್ಲದ ಹಂದಿಯೂ ಅಲ್ಲದ ಈ ಪ್ರಾಣಿಯ ಹೆಸರು ಗಿನಿಪಿಗ್. ರಾಜ್ಯದಲ್ಲಿ ಬೆರಳಣಿಕೆಯಷ್ಟು ಮಂದಿ ಗಿನಿಪಿಗ್ ಸಾಕಿ ಅವುಗಳಿಂದ ಕೈತುಂಬಾ ಅದಾಯವನ್ನು ಗಳಿಸುತ್ತಿದ್ದಾರೆ.ದೀಪಕ್ ಹಾಸನ ಜಿಲ್ಲೆಯ ಅರಸೀಕೆರೆಯವರು. ಐ.ಟಿ.ಐ. ಶಿಕ್ಷಣವನ್ನು ಮುಗಿಸಿದ ನಂತರ ಎಂಟು ವರ್ಷಗಳ ಕಾಲ ಬೆಂಗಳೂರಿನಲ್ಲಿ ದುಡಿದರು. ಮುಂದಿನ ದಿನಗಳಲ್ಲಿ ಕೃಷಿಯೊಂದಿಗಿನ ಒಲವು ದೀಪಕ್ರವರನ್ನು ಮತ್ತೆ ಊರಿಗೆ ಕರೆಯಿತು. ತನ್ನ ಮೂರುವರೆ ಎಕರೆ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರು. ಕೃಷಿಗೆ […]
ದಾಕ್ಷಿಣ್ಯಕ್ಕೂ ಮಿತಿಯಿರಲಿ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ದಯೆ – ದಾಕ್ಷಿಣ್ಯ ಇವೆಲ್ಲಾ ಮಾನವನಲ್ಲಿರಬೇಕಾದ ಒಳ್ಳೆಯ ಗುಣಗಳು. ಇವುಗಳನ್ನು ನಾವು ಬಾಲ್ಯದಿಂದಲೇ ಕಲಿತುಕೊಂಡಿದ್ದೇವೆ. ಆದರೆ ಇಂದು ದಾಕ್ಷಿಣ್ಯಕ್ಕೂ ಒಂದು ಮಿತಿಯನ್ನು ಹಾಕಿಕೊಳ್ಳಬೇಕಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ದಾಕ್ಷಿಣ್ಯ ಮಾಡದಿರುವುದೂ ಬಹಳ ಒಳ್ಳೆಯದು. ಅದು ಮನೆಯಲ್ಲಿ, ಕಚೇರಿ ಅಥವಾ ರಾಜಕೀಯ ಕ್ಷೇತ್ರ ಹೀಗೆ ಎಲ್ಲೇ ಇರಬಹುದು. ಕೆಲವೊಮ್ಮೆ ನಾವು ನೇರವಾಗಿ ‘ಇಲ್ಲ, ಆಗುವುದಿಲ್ಲ’ ಎಂದು ಹೇಳುವ ಧೈರ್ಯವನ್ನು ತೋರಬೇಕಾಗುತ್ತದೆ. ಇಲ್ಲವಾದರೆ ‘ದಾಕ್ಷಿಣ್ಯಕ್ಕೆ ಹೋದ ಮೂಗು ಮತ್ತೆ ಬರುವುದಿಲ’್ಲ ಎಂಬoತಾಗುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳು […]
ಬಡವರ ಕನಸಿನ ಮನೆಯನ್ನು ನನಸು ಮಾಡಿದ ಯೋಜನೆ
ಶ್ರೀಯುತ ಅನಿಲ್ ಕುಮಾರ್ ಎಸ್. ಎಸ್. ಹಿಂದಿನ ಸಂಚಿಕೆಯಲ್ಲಿ ಸುಸ್ಥಿರತೆಯ ಸಂಘಗಳ ಭದ್ರ ಬುನಾದಿಯ ಬಗ್ಗೆ ಚರ್ಚಿಸಿದೆವು. ಇನ್ನು ಮುಂದೆ ಪೂಜ್ಯರ ಮಾರ್ಗದರ್ಶನದಲ್ಲಿ ಪ್ರಾರಂಭಗೊoಡ ಸ್ವಸಹಾಯ ಸಂಘ ಚಳುವಳಿ ರಾಜ್ಯದಲ್ಲಿ ಸೃಷ್ಟಿಸಿದ ಪರಿವರ್ತನೆಯ ಬಗ್ಗೆ ಒಂದು ನೋಟ ಬೀರೋಣ. ನಮ್ಮ ಅಂಕಿ ಅಂಶದ ಪ್ರಕಾರ ಯೋಜನೆಯು ಪ್ರಾರಂಭಗೊoಡ ದಿನದಿಂದ ಇಲ್ಲಿಯವರೆಗೆ ಒಟ್ಟು 31 ಲಕ್ಷ ಪ್ರಗತಿನಿಧಿ ಸಾಲಗಳನ್ನು ಮನೆ ನಿರ್ಮಾಣ, ದುರಸ್ಥಿ, ಖರೀದಿ ಹಾಗೂ ಇತರೆ ಗೃಹಸಾಲ ಸಂಬoಧ ಉದ್ದೇಶಗಳಿಗೆ ನೀಡಲಾಗಿದೆ. ಇನ್ನು ಒಟ್ಟು ಪಡೆದುಕೊಂಡ ಸಾಲದ […]
ಅಪಘಾತಗಳ ಸಂಖ್ಯೆ ತಗ್ಗಲಿ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಎರಡು ವಾಹನಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು. ಒಂದು ವಾಹನ ರಸ್ತೆ ವಿಭಾಜಕವನ್ನು ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಕಾರಣ ಆರು ಜನರ ಅಪಮೃತ್ಯುವಾಯಿತು’ ಇಂತಹ ಸುದ್ದಿಗಳನ್ನು ಓದಿದಾಗ ಬೇಸರವಾಗುತ್ತದೆ. ಅಲ್ಲದೆ ‘ಪಾಪ ಅವರಿಗೇನೋ ಗ್ರಹಚಾರ ಸರಿ ಇರಲಿಲ್ಲ, ಕೆಟ್ಟ ಘಳಿಗೆ, ಹಾಗಾಗಿ ಅಪಮೃತ್ಯು ಬಂತು’ ಎಂದು ಹೇಳುತ್ತೇವೆ. ನಮ್ಮ ದೌರ್ಬಲ್ಯವೆಂದರೆ ನಿತ್ಯವೂ ಬರುವ ಇಂತಹ ವರದಿಗಳನ್ನು ಓದಿ ಅದನ್ನು ಬದಿಗೆ ಇಟ್ಟುಬಿಡುತ್ತೇವೆ. ವರದಿಯಲ್ಲಿ ಓದಿದ ಸಾವಿನ […]
ಮತದಾನವೆಂಬ ಅಧಿಕಾರ, ಹಕ್ಕು ಮತ್ತು ಬಾಧ್ಯತೆ
ಡಾ| ಎಲ್. ಎಚ್. ಮಂಜುನಾಥ್ ನಮ್ಮ ದೇಶಕ್ಕೆ ಸ್ವಾತಂತ್ರö್ಯ ಕೊಡಿಸಿದ ಹಿರಿಯರು ಪ್ರಜೆಗಳಲ್ಲಿಯೇ ಸರಕಾರ ನಿರ್ವಹಣೆಯ ಅಧಿಕಾರ ಇರಬೇಕೆಂಬ ಕಲ್ಪನೆಯೊಂದಿಗೆ ಪ್ರಜಾಪ್ರಭುತ್ವ ಮಾದರಿಯನ್ನು ಅಂಗೀಕರಿಸಿದರು. ಸ್ವಾತಂತ್ರö್ಯ ನಂತರದ 76 ವರ್ಷಗಳಲ್ಲಿ ಅನೇಕ ಸವಾಲುಗಳ ಹೊರತಾಗಿಯೂ ಈ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿ ಬೆಳೆದು ನಿಂತಿದೆ ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾಗಿ ಮೂಡಿಬಂದಿದೆ.ನಮ್ಮ ದೇಶದಲ್ಲಿ ಲೋಕಸಭೆಗೆ, ವಿಧಾನಸಭೆಗೆ ಚುನಾವಣೆಗಳು ಆಗುತ್ತವೆ. ಜೊತೆಗೆ ಗ್ರಾಮ ಪಂಚಾಯತ್ಗಳಿಗೆ ಪ್ರತ್ಯೇಕ ಚುನಾವಣೆಗಳು ನಡೆಯುತ್ತವೆ. ಕೆಲವು ರಾಜ್ಯಗಳಲ್ಲಿ ಮಧ್ಯಮ ಸ್ಥರದಲ್ಲಿ ಜಿಲ್ಲಾ […]