ನಾವೇನಾಗಬೇಕು ನಿರ್ಧಾರ ನಮ್ಮದೇ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಗಂಧದ ಮರಕ್ಕೆ ಇತರ ಎಲ್ಲಾ ಮರಗಳಿಗಿಂತ ಬೆಲೆ ಜಾಸ್ತಿ. ಹಾಗಂತ ಆ ಮರ ಯಾವುದೇ ಹೂ, ಹಣ್ಣುಗಳನ್ನು ಕೊಡುವುದಿಲ್ಲ. ಅದರ ಸುವಾಸನೆಯಿಂದಾಗಿ ಅದರ ಚಂದನ ದೇವರಿಗೆ ಪ್ರಿಯವಾಗುತ್ತದೆ. ಪ್ರತಿಯೊಂದು ಮರಗಿಡಗಳೂ ಪ್ರಕೃತಿ, ಪ್ರಾಣಿ, ಪಕ್ಷಿ, ಮನುಷ್ಯರಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತವೆ. ಕೆಲವು ಮರಗಳಲ್ಲಿ ಹೂ, ಹಣ್ಣುಗಳಿರದಿದ್ದರೂ ಅದು ವಿಶಾಲವಾಗಿ ಹಬ್ಬಿಕೊಂಡಿರುವ ತನ್ನ ಕೊಂಬೆ ಹಾಗೂ ತುಂಬಿಕೊoಡ ಹಸಿರೆಲೆಗಳಿಂದಾಗಿ ದಾರಿ ಹೋಕರಿಗೆ ದಣಿವರಿಸಿಕೊಳ್ಳಲು ಸಹಾಯಮಾಡುತ್ತವೆ. ಕೆಲವು ಮರಗಳು ಕೊಂಬೆಗಳಿಲ್ಲದೆ ಉದ್ದಕ್ಕೆ ಬೆಳೆದರೂ […]
ದಿಢೀರ್ ಶ್ರೀಮಂತರಾಗುವ ದುರಾಸೆಯಿಂದ ದೂರವಿರಿ
ಡಾ| ಎಲ್. ಎಚ್. ಮಂಜುನಾಥ್ ತೀರಾ ಇತ್ತೀಚೆಗೆ ಧಾರುಣವಾದ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂವರನ್ನು ಹತ್ಯೆ ಮಾಡಿ ಅವರು ಪ್ರಯಾಣಿಸುತ್ತಿದ್ದ ಕಾರನ್ನೇ ಸುಡಲಾಗಿತ್ತು. ಈ ಹತ್ಯೆಯ ಜಾಡನ್ನು ಹಿಡಿದು ಹೊರಟ ಪೊಲೀಸರ ತನಿಖೆಯಿಂದ ಹೊರಬಂದ ವಿಚಾರವೆಂದರೆ, ಈ ಮೂವರು ಸುಲಭವಾಗಿ ದೊರೆಯುವ ಚಿನ್ನದ ಆಸೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಜೋಡಿಸಿಕೊಂಡು ತುಮಕೂರಿಗೆ ತೆರಳಿ, ಅಲ್ಲಿ ಚಿನ್ನವನ್ನು ಮಾರುತ್ತೇನೆಂದು ನಂಬಿಸಿದ ವ್ಯಕ್ತಿಯ ಕೈಯಲ್ಲಿ ಹಣವನ್ನಿತ್ತು, ಅವರಿಂದಲೇ ಅಮಾನುಷವಾಗಿ ಕೊಲೆಗೀಡಾಗಿದ್ದರು. ವ್ಯಕ್ತಿಯೋರ್ವ […]
ಬಡವರ ಕನಸಿನ ಮನೆಯನ್ನುನನಸು ಮಾಡಿದ ಯೋಜನೆ
ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಹಿಂದಿನ ಸಂಚಿಕೆಯಲ್ಲಿ ಗೃಹ ಸಾಲ ಪಡೆಯಲು ಸುಮಾರು 16 ದಾಖಲೆಗಳನ್ನು ನೀಡಿ ಬ್ಯಾಂಕಿನ ವಕೀಲರಿಂದ ಲೀಗಲ್ ಒಪಿನಿಯನ್ ಪಡೆದು, ಮುಂದೆ ಏನು ಮಾಡಬೇಕೆಂದು ತಿಳಿಸುತ್ತೇನೆ ಎಂದಿದ್ದೆ. ಮುಂದಿನ ಹಂತವನ್ನು ಈಗ ತಿಳಿದುಕೊಳ್ಳೋಣ.ಗೃಹ ಸಾಲ ಬೇಕಾದ ಗ್ರಾಹಕ ಅನೇಕ ಒಡಾಟಗಳೊಂದಿಗೆ ಲೀಗಲ್ ಒಪಿನಿಯನ್ ಪಡೆದ ನಂತರ ಆ ಎಲ್ಲಾ ದಾಖಲೆಗಳೊಂದಿಗೆ ಲೀಗಲ್ ಒಪಿನಿಯನ್ ಅನ್ನು ಬ್ಯಾಂಕ್‌ನ ಮ್ಯಾನೇಜರ್‌ಗೆ ಸಲ್ಲಿಸಬೇಕು. ಮ್ಯಾನೆಜರ್ ಅವುಗಳನ್ನು ಪರಿಶೀಲಿಸಿ ಮುಂದಿನ ಹಂತವಾದ ಬ್ಯಾಂಕ್ ಇಂಜಿನಿಯರ್‌ನ ಪರಿಶೀಲನೆ ಮತ್ತು […]
ಆನಂದದಿಂದ ಧಿರ್ಘಾಯುಷ್ಯ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಾವು ದೈಹಿಕವಾಗಿ ಆರೋಗ್ಯಪೂರ್ಣವಾಗಿ ಇರಬೇಕಾದರೆ ಕೆಲವು ದಿನಚರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆರೋಗ್ಯಪೂರ್ಣವಾದ ಆಹಾರದ ಕ್ರಮ, ಸರಳ ಜೀವನ ಮತ್ತು ಒಳ್ಳೆಯ ವಾತಾವರಣ ಹೆಚ್ಚು ಸಮಯ ಬದುಕುವುದಕ್ಕೆ ಕಾರಣವಾಗುತ್ತದೆ ಎಂಬುದಾಗಿ ಜಪಾನೀಯರ ಅಭಿಪ್ರಾಯ. ಪ್ರಪಂಚದಲ್ಲಿ ದೀರ್ಘಾಯುಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಜಪಾನ್ ದೇಶದ ಇಕಿಗಾವಾ ಎಂಬ ಪ್ರದೇಶದಲ್ಲಿ. ಅಲ್ಲಿಯ ಜನರು ಪರಸ್ಪರ ಸೌಹಾರ್ದದಿಂದ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತ ಸಹೋದರತ್ವ ಭಾವದಿಂದ ಬದುಕುತ್ತಾರಂತೆ. ಜಪಾನಿನ ‘ಉಗಿಮಿ’ ಎಂಬ ಹಳ್ಳಿಯ ಬಹುತೇಕರು ಆರೋಗ್ಯವಂತರು. ಇಲ್ಲಿ ಶತಾಯುಷಿಗಳು […]