ಕೃಷಿ ಚಟುವಟಿಕೆಗಳಿಗೆ ವರದಾನವಾದ ಯೋಜನೆ
‘ಪ್ರಗತಿಗಾಗಿ ಪ್ರಗತಿಬಂಧು ಸಂಘಗಳು’ ಎನ್ನುವ ವಿಷಯದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೆವು. ಶ್ರಮ ವಿನಿಮಯದ ಮೂಲಕ ಅವರವರ ಭೂಮಿಯಲ್ಲಿ ತಮ್ಮ ಸಂಘದ ಸದಸ್ಯರು ಉಚಿತವಾಗಿ ಒಬ್ಬರಿಗೊಬ್ಬರು ಸಹಕಾರ ಮಾಡುತ್ತಾ ತಮ್ಮ ಕೃಷಿ ಕಾರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬುವುದನ್ನು ವಿವರವಾಗಿ ತಿಳಿದುಕೊಂಡಿದ್ದೆವು. ಸಾಮಾನ್ಯವಾಗಿ ರೈತರೇ ಸದಸ್ಯರಾಗಿರುವ ಈ ಪ್ರಗತಿಬಂಧು ಸಂಘಗಳಿಗೆ ಅವರ ಕೃಷಿ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಪೂಜ್ಯರು ಮತ್ತಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.ಗ್ರಾಮಾಭಿವೃದ್ಧಿ ಯೋಜನೆಯ ಆನೇಕ ಕಾರ್ಯಕ್ರಮಗಳ ಮೂಲಕ ಈ ಕೆಳಕಾಣಿಸಿದ ವಿಶೇಷ ಸೌಲಭ್ಯಗಳನ್ನು ಯೋಜನೆಯ ಕೃಷಿಕ […]