ಬುದ್ಧಿ ಮತ್ತು ಭಾವ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ದೋಣಿಯೊಂದರಲ್ಲಿ ಒಂದಷ್ಟು ಮಂದಿ ಪ್ರಯಾಣ ಮಾಡುತ್ತಿದ್ದರು. ನೋಡನೋಡುತ್ತಿದ್ದಂತೆ ಜೋರಾಗಿ ಬೀಸಿದ ಬಿರುಗಾಳಿಗೆ ಸಿಲುಕಿ ದೋಣಿ ಮಗುಚಿ ಬೀಳುತ್ತದೆ. ದೋಣಿಯಲ್ಲಿದ್ದ ಕೆಲವರು ನೀರು ಪಾಲಾಗುತ್ತಾರೆ. ಅವರಲ್ಲಿ ಇಬ್ಬರು ವ್ಯಕ್ತಿಗಳು ಈಜುತ್ತಾ ಹೇಗೋ ದಡ ಸೇರುತ್ತಾರೆ. ಅವರಲ್ಲೊಬ್ಬ ತನ್ನಲ್ಲಿದ್ದ ಕಂಪ್ಯೂಟರ್ ಅನ್ನು ನೀರು ತಾಗಿದರೂ ಒದ್ದೆಯಾಗದ ಬ್ಯಾಗ್‌ನಲ್ಲಿ ಇಟ್ಟಿದ್ದರಿಂದ ಅದು ಸುರಕ್ಷಿತವಾಗಿರುತ್ತದೆ. ಇನ್ನೊಬ್ಬನ ಕೈಯಲ್ಲಿ ಕೊಳಲು ಇರುತ್ತದೆ. ಅದೂ ಕೂಡ ಸುರಕ್ಷಿತವಾಗಿರುತ್ತದೆ. ಇಬ್ಬರು ದಡ ಸೇರಿದ ಕೆಲವೇ ಕ್ಷಣಗಳಲ್ಲಿ ಒಡೆದ ದೋಣಿ ಕೂಡ ದಡ […]
ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ಜ್ಞಾನವಿಕಾಸ
ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ‘ಹಿಂದಿನ ಸಂಚಿಕೆಯಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘದಿoದ ಉಂಟಾದ ಪರಿವರ್ತನೆಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇದರ ಯಶಸ್ಸಿನಿಂದಾಗಿ ಪೂಜ್ಯರು ಹಾಗೂ ಮಾತೃಶ್ರೀಯವರ ಚಿತ್ತ ಮಹಿಳಾ ಸಬಲೀಕರಣದತ್ತ ವಾಲಿತು. ಪ್ರಾರಂಭದ ಉತ್ತಮವಾದ ಪರಿಣಾಮದಿಂದಾಗಿ ಮಹಿಳಾ ಸ್ವಸಹಾಯ ಸಂಘಗಳ ಅದ್ಭುತ ಪರಿಕಲ್ಪನೆಗೆ 1990ರ ದಶಕದ ಆರಂಭದಲ್ಲಿ ಚಾಲನೆ ಸಿಕ್ಕಿತು. ಅಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಹಿಳೆಯರ ಸ್ಥಿತಿಗತಿಗಳು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತದ್ದು ಎಂತಹ ದೊಡ್ಡ ಕಠಿಣ ಸವಾಲಾಗಿತ್ತು ಎಂಬುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೂ ಕಾರ್ಯಕರ್ತರ […]
ಬದುಕು ಮತ್ತು ಬದುಕಗೊಡು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ಸಾವಿರಾರು ವರ್ಷಗಳಿಂದ ಪ್ರಕೃತಿಯ ಮೇಲೆ ಆಘಾತಗಳು ನಡೆಯುತ್ತಾ ಬಂದಿವೆ. ಕೃಷಿ, ಜನವಸತಿ ಪ್ರದೇಶ ನಿರ್ಮಿಸಲು, ವಾಣಿಜ್ಯ ಉದ್ದೇಶಗಳಿಗಾಗಿ ಹೀಗೆ ಸುತ್ತಮುತ್ತಲಿರುವ ಕಾಡುಗಳನ್ನು ನಾಶಮಾಡಿದ ಪರಿಣಾಮ ಕಾಡು ಪ್ರಾಣಿಗಳು ತಾವು ವಾಸಿಸುವ ಕಾಡಿನಿಂದ ದೂರ ಹೋಗಬೇಕಾದ ಅನಿವಾರ್ಯತೆ ಎದುರಾಯಿತು. ದಿನಕಳೆದಂತೆ ಅನೇಕ ಕಾರಣಗಳಿಗಾಗಿ ಕಾಡನ್ನು ನಾಶ ಮಾಡುವ ಮನಸ್ಥಿತಿ ಹೆಚ್ಚಾಗುತ್ತಾ ಬಂತು. ಕಾಡು ನಾಶ ಒಂದೆಡೆಯಾದರೆ ಕಾಡನ್ನು ರಕ್ಷಣೆ ಮಾಡುವ ನಿಟ್ಟಿನಲ್ಲೂ ಅನೇಕರು ತಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡಿದ್ದಾರೆ. ಇಂದಿಗೂ ಪರಿಸರ […]
ದ್ವಿಸಹಸ್ರ ಮದ್ಯರ‍್ಜನ ಶಿಬಿರ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಮಹಾತ್ಮಾ ಗಾಂಧೀಜಿಯವರು ಅಂದು ಕಂಡ ಗ್ರಾಮಗಳ ಅಭಿವೃದ್ಧಿ, ಮಹಿಳಾ ಸಬಲೀಕರಣ, ಯುವಜನತೆಗೆ ಉದ್ಯೋಗ, ಸ್ವಚ್ಛ ಭಾರತ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ, ನೈತಿಕ ಶಿಕ್ಷಣ, ಯೋಗ, ಭಜನೆ ಮದ್ಯವರ್ಜಿತ ಭಾರತ ಹೀಗೆ ಎಷ್ಟೋ ಕನಸುಗಳನ್ನು ಕರ್ನಾಟಕ ರಾಜ್ಯದಲ್ಲಿ ಅಕ್ಷರಶಃ ನನಸು ಮಾಡುತ್ತಿರುವವರು ನಮ್ಮ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು.ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳಲ್ಲಿ ‘ಜನಜಾಗೃತಿ ವೇದಿಕೆ’ಯ ಕಾರ್ಯಕ್ರಮ ಮುಖ್ಯವಾದ ಕಾರ್ಯಕ್ರಮವಾಗಿದೆ. ಜನಜಾಗೃತಿ ವೇದಿಕೆಯ ಮೂಲಕ ಕೈಗೊಳ್ಳಲಾಗುವ ‘ಮದ್ಯವರ್ಜನ ಶಿಬಿರ’ ಒಂದು ವ್ಯಕ್ತಿಗತ […]