2026 ಆಗಸ್ಟ್
ಸ್ವಾತಂತ್ರ‍್ಯದ ಹೊಸ ದೃಷ್ಟಿ
ಶ್ರೀಮತಿ ಹೇಮಾವತಿ ವೀ, ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಆರಂಭದ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆಗಳಿಗೆ ನಮ್ಮ ಕಾರ್ಯಕರ್ತರು ತೆರಳಿದಾಗ ಮನೆಯೊಳಗಿದ್ದ ಮಹಿಳೆಯರು ಕಿಟಕಿಯಿಂದ ಇಣುಕಿ ನೋಡಿ ‘ಯಜಮಾನರು ಮನೆಯಲ್ಲಿ ಇಲ್ಲ, ನಾಳೆ ಬನ್ನಿ’ ಎಂದು ಹೇಳಿ ಮನೆಯೊಳಗೆ ಸೇರುತ್ತಿದ್ದರು. ಮನೆಯ ಹೊರಗೆ ಬಂದು ಮಾತನಾಡುವ ಧೈರ್ಯವಾಗಲಿ, ಪ್ರಯತ್ನವನ್ನಾಗಲಿ ಯಾವೊಬ್ಬ ಹೆಣ್ಣು ಮಗಳು ಮಾಡುತ್ತಿರಲಿಲ್ಲ. ಆ ದಿನಗಳಲ್ಲಿ ತಾನು ಕೂಡಾ ಆ ‘ಮನೆಯ ಯಜಮಾನಿ’ ಎಂಬ ಕಲ್ಪನೆ ಅವರಲ್ಲಿ ಇರಲಿಲ್ಲ. 1947ರಲ್ಲಿ ದೇಶಕ್ಕೆ ಸ್ವಾತಂತ್ರö್ಯ ದೊರೆತಿರುವುದು ನಿಜ. ಆದರೆ […]
ಗ್ರಾಮಗಳ ಅಭ್ಯುದಯಕ್ಕಾಗಿ ಗ್ರಾಮ ಕಲ್ಯಾಣ
ಶ್ರೀ ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ನಮ್ಮೂರು ನಮ್ಮ ಕರೆ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ‘ಗ್ರಾಮ ಕಲ್ಯಾಣ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.ಕಳೆದ ನಾಲ್ಕು ದಶಕಗಳ ಹಿಂದೆ ಅಂದರೆ ಗ್ರಾಮಾಭಿವೃದ್ಧಿ ಯೋಜನೆಯ ಆರಂಭದ ದಿನಗಳಲ್ಲಿ ಹಳ್ಳಿ ಪ್ರದೇಶಗಳ ಜನರು ಅಗತ್ಯವಾದ ಮೂಲಸೌಕರ್ಯಗಳಿಂದ ವಂಚಿತರಾಗಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ, ಸಮುದಾಯ ಭವನಗಳು, ಗ್ರಂಥಾಲಯ, ಮಂದಿರಗಳು ಕಾಣಸಿಗುವುದೇ ಅಪರೂಪವಾಗಿತ್ತು. ಈ ಸಮಸ್ಯೆಯನ್ನು ಹತ್ತಿರದಿಂದ ಕಂಡ […]
ಉದ್ಯೋಗವನ್ನರಸಿ ವಿದೇಶಕ್ಕೆ ಹೋಗುವ ಕನಸು ನಿಮ್ಮಲ್ಲಿದೆಯಾ…!
ಮೇಘ ಶಿವರಾಜ್ ಇತ್ತೀಚಿನ ದಿನಗಳಲ್ಲಿ ಯುವಕರು ಉತ್ತಮ ಸಂಬಳದ ವೃತ್ತಿಯನ್ನು ಆರಿಸಿಕೊಳ್ಳಲು ವಿದೇಶದಲ್ಲಿ ಉದ್ಯೋಗವನ್ನು ಪಡೆಯುವ ಕನಸನ್ನು ಕಾಣುತ್ತಿದ್ದಾರೆ. ಆದರೆ ಇದಕ್ಕೆ ಸರಿಯಾದ ಯೋಜನೆ, ತಯಾರಿ ಮತ್ತು ಮಾಹಿತಿ ಅಗತ್ಯ. ವಿದೇಶ ಕನಸಿನ ಹಾದಿಯಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಬಹಳ ಸೂಕ್ಷ್ಮವಾಗಿಡಬೇಕು. ಅದರಲ್ಲೂ ಮೊದಲಿಗೆ ನೀವು ಯಾವ ದೇಶದಲ್ಲಿ ಕೆಲಸ ಮಾಡಲು ಬಯಸುತ್ತೀರಿ ಎಂಬ ಸ್ಪಷ್ಟತೆ ಇರಬೇಕು. ಪ್ರತಿಯೊಂದು ದೇಶದಲ್ಲಿ ಉದ್ಯೋಗಾವಕಾಶಗಳು, ಸಂಬಳ, ವೀಸಾ ನಿಯಮಗಳು ಮತ್ತು ಜೀವನ ವೆಚ್ಚಗಳು ವಿಭಿನ್ನವಾಗಿರುತ್ತವೆ. ಉದಾಹರಣೆಗೆ, ಜರ್ಮನಿಯಲ್ಲಿ ಎಂಜಿನಿಯರಿಂಗ್, ಐಟಿ, ಆರೋಗ್ಯ […]
ಶಾಸ್ತ್ರಿಯವರ ಸರಳತೆ
ಓದುವುದು ಎಂದರೆ ನನಗೆ ಅಚ್ಚುಮೆಚ್ಚು. ಅದರಲ್ಲೂ ಹೊಸ-ಹೊಸ ವಿಷಯಗಳ ಪುಸ್ತಕಗಳೆಂದರೆ ಬಲು ಇಷ್ಟ. ಇತ್ತೀಚೆಗೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಚರಿತ್ರೆಯ ಪುಸ್ತಕ ಓದಿದಾಗ ಅವರ ಖಾಸಗಿ ಜೀವನದ ಬಗ್ಗೆ ಸಾಕಷ್ಟು ಕುತೂಹಲ ಹಾಗೂ ಆಶ್ಚರ್ಯವೂ ಉಂಟಾಯಿತು.ಶಾಸ್ತ್ರಿಯವರು ಭಾರತ ದೇಶದ ಪ್ರಧಾನಿಯಾಗಿದ್ದರು. ಅವರಿಗೆ ಇಡೀ ರಾಷ್ಟ್ರದ ಬಗ್ಗೆ ಚಿಂತೆ, ಚಿಂತನೆಗಳು, ಒತ್ತಡಗಳಿರುವುದು ಸಾಮಾನ್ಯ. ಆದರೆ ಅವರು ಮನೆಗೆ ಬಂದಾಗ ಪ್ರಧಾನಿಯಾಗಿರುತ್ತಿರಲಿಲ್ಲ. ರಾಷ್ಟçದ ಉನ್ನತ ಅಧಿಕಾರ ಸ್ಥಾನವನ್ನು ಏರಿದ್ದೇನೆ ಎಂಬ ಭಾವನೆಯೇ ಇರಲಿಲ್ಲವಂತೆ. ಕಚೇರಿಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ […]
ಏಕಕಾಲದಲ್ಲಿ ಸ್ವಾಸ್ಥ್ಯ ಸಂಕಲ್ಪ ಕೈಗೊಂಡ 1.31 ಲಕ್ಷ ವಿದ್ಯಾರ್ಥಿಗಳು
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಮದ್ಯಪಾನ ಹಾಗೂ ದುಶ್ಚಟಮುಕ್ತ ಸಮಾಜದ ಕನಸನ್ನು ಕಂಡವರು ಮಹಾತ್ಮ ಗಾಂಧೀಜಿಯವರು. ಆ ಕನಸನ್ನು ನನಸು ಮಾಡಿದವರು ಪೂಜ್ಯ ಶ್ರೀ ಹೆಗ್ಗಡೆಯವರು. ಕಳೆದ 35 ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದುಶ್ಚಟಮುಕ್ತ ಸಮಾಜದ ನಿರ್ಮಾಣಕ್ಕೆ ಅನನ್ಯ ಕೊಡುಗೆಯನ್ನು ಅವರು ನೀಡಿದ್ದಾರೆ. ‘ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ’ಯ ಮೂಲಕ ರಾಜ್ಯಾದ್ಯಂತ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಮದ್ಯವ್ಯಸನಿಗಳನ್ನು ಮದ್ಯಮುಕ್ತರನ್ನಾಗಿಸಿ ಸಮಾಜದ ಅದ್ಭುತ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಪರಿವರ್ತಿಸಿದ್ದಾರೆ. ದೇಶದಲ್ಲೇ ಇದೊಂದು ಅಪರೂಪವಾದ ಮಹಾನ್ ಪರಿವರ್ತನೆಯ ಕಾರ್ಯವಾಗಿದೆ.ಮದ್ಯಪಾನವು […]