ಸೀಗೆಕಾಯಿಯಿಂದ ಕಂಪನಿ ಕಟ್ಟಿದರು

ಹಿಂದೆ ಒಂದು ಕಾಲವಿತ್ತು. ಸಾಬೂನು ಶ್ಯಾಂಪ್‌ಗಳ ಪರಿಚಯ ಹೆಚ್ಚಿನವರಿಗೆ ಇರಲಿಲ್ಲ. ಕಾಡಿನಲ್ಲಿ ದೊರೆಯುವ ಸೀಗೆಕಾಯಿಯನ್ನು ಹೆಕ್ಕಿ ತಂದು ಒಣಗಿಸಿ ಕಲ್ಲಿನಲ್ಲಿ ಗುದ್ದಿ ಹುಡಿ ಮಾಡಿ, ಉಂಡೆ ಮಾಡಿ ಜೋಪಾನವಾಗಿ ಇಡುತ್ತಿದ್ದರು. ತೆಂಗಿನ ಗೆರಟೆಗೆ ಹಾಕಿ ಹುಡಿಯನ್ನು ಸಾಬೂನಿನ ಬದಲು ಬಳಸಲಾಗುತ್ತಿತ್ತು. ಹೀರೆನಾರನ್ನು ಮೈ ಉಜ್ಜುವ ಬ್ರೆಶ್ ಆಗಿ ಬಳಸುತ್ತಿದ್ದರು. ದಿನಕಳೆದಂತೆ ಪೈಪೋಟಿಗೆ ಬಿದ್ದವರಂತೆ ಸೋಪ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಅವುಗಳ ಕೃತಕ ಸುಗಂಧಗಳಿಗೆ ಮನಸೋತ ಮಂದಿ ಸೀಗೆಕಾಯಿ ಹುಡಿಗೆ ಗುಡ್‌ಬೈ ಹೇಳಿದರು. ಸೀಗೆಕಾಯಿ ಬಳಸುತ್ತಿದ್ದಾಗ ಉದುರದಿದ್ದ ತಲೆಗೂದಲುಗಳು […]

ಕತ್ತಲಲ್ಲಿ ದೀಪ ಹಚ್ಚುವವರು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಯಾವುದೇ ಕತೆ, ಕಾದಂಬರಿಯನ್ನು ಓದಿದರೂ ಮಧ್ಯಮ ಮತ್ತು ಬಡವರ್ಗದ ಜನರ ಬದುಕಿನಲ್ಲಿ ಕಷ್ಟಗಳು ಆರಂಭವಾಗುವುದು ಗಂಡ ಕುಡಿತದ ಚಟ ಆರಂಭಿಸಿದಾಗ ಅಥವಾ ಬೇರೊಬ್ಬ ಹೆಣ್ಣಿನ ಮೋಹಕ್ಕೆ ಬಿದ್ದಾಗ. ಅದರಲ್ಲೂ ಮುಖ್ಯವಾಗಿ ಮದ್ಯಪಾನ ಒಂದಿರದಿದ್ದರೆ ಹೆಚ್ಚಿನ ಹೆಣ್ಣು ಮಕ್ಕಳ ಬದುಕು ಸ್ವಲ್ಪವಾದರೂ ಸಹನೀಯವಾಗಿರುತ್ತಿತ್ತೇನು! ಹಾಗೆಂದು ಮೇಲ್ವರ್ಗದವರ, ವಿದ್ಯಾವಂತರ, ಉದ್ಯಮಿಗಳ ಮನೆಗಳಲ್ಲೂ ಕುಡಿತ ಇಲ್ಲವೆಂದಿಲ್ಲ. ಆದರೆ ಅದನ್ನೆಲ್ಲ ನಿಭಾಯಿಸಬಲ್ಲ ಆರ್ಥಿಕ ಶಕ್ತಿ ಅವರಲ್ಲಿ ಇರುವುದರಿಂದ ನೆಮ್ಮದಿ, ಆರೋಗ್ಯ ಎಲ್ಲವನ್ನೂ ಸಾಕಷ್ಟು ಹಣ ಖರ್ಚುಮಾಡಿ ಅವರು […]

ನೆಲೆಯಿಲ್ಲದ ಬದುಕಿಗೆ ಜೀವಸೆಲೆಯಾದ ವಾತ್ಸಲ್ಯ

ಅನಿಲ್ ಕುಮಾರ್ ಎಸ್‍.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ನವಚೇತನ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಇಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ‘ವಾತ್ಸಲ್ಯ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಶ್ರೀ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಕೈಗೊಂಡ ಅನೇಕ ಕಾರ್ಯಕ್ರಮಗಳಲ್ಲಿ ‘ಮಾಸಾಶನ’ ಕಾರ್ಯಕ್ರಮ ಪ್ರಮುಖವಾದುದು. ಮಾಸಾಶನ ಕಾರ್ಯಕ್ರಮದಡಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸುಮಾರು 20 ಸಾವಿರ ಮಂದಿ ಯಾರ ಪೋಷಣೆಯೂ ಇಲ್ಲದ, ದುಡಿಯಲಾಗದ ಅಸಹಾಯಕ ಸ್ಥಿತಿಯಲ್ಲಿರುವ ವೃದ್ಧರಿಗೆ, ವಿಶೇಷಚೇತನರಿಗೆ ಪ್ರತಿ ತಿಂಗಳು ರೂ. […]

ಬದುಕಿಗೆ ಖುಷಿ ನೀಡಿದ ನೈಸರ್ಗಿಕ ಕೃಷಿ

ಭೂಮಿಗೆ ಒಂಚೂರು ರಾಸಾಯನಿಕ ಹಾಕದೆ ಸರ್ವ ಹಣ್ಣುಗಳನ್ನು ಹೇಗೆ ಬೆಳೆಯಬಹುದು ಎಂಬ ಪ್ರಶ್ನೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರಾಂಪುರ ಗ್ರಾಮದ ಕುಮಾರ್‌ರವರ ಪ್ರಯತ್ನ ಉತ್ತಮ ಉದಾಹರಣೆ.ಕುಮಾರ್‌ರವರು ತನ್ನ ಭೂಮಿಗೆ ಸಾವಿರಾರು ರೂಪಾಯಿ ತೊಡಗಿಸಿ ಮೂಟೆ ಮೂಟೆ ರಸಗೊಬ್ಬರ ಸುರಿದು ಕೃಷಿ ಬೆಳೆಯುವ ಬದಲು ಶೂನ್ಯ ಬಂಡವಾಳದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದುಕೊAಡಾಗ ಅವರನ್ನು ಸೆಳೆದದ್ದೆ ಈ ನೈಸರ್ಗಿಕ ಕೃಷಿ ವಿಧಾನ. ಐದು ವರ್ಷಗಳ ಹಿಂದೆ ತನ್ನ ಈ ಯೋಚನೆಗೆ ಜೀವ ತುಂಬಲು ಮೊದಲಾಗಿ ಹೈನುಗಾರಿಕೆಯನ್ನು ಆರಂಭಿಸಿ ಕೃಷಿಗಾಗಿ […]

ಮೂಲ ನಂಬಿಕೆ ಉಳಿಸುವ ಭಜನೆ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಮ್ಮ ಹಿರಿಯರು ಅನೇಕ ಸಂಸ್ಕೃತಿ-ಸಂಪ್ರದಾಯಗಳನ್ನು ಅನೂಚಾನವಾಗಿ ತಮ್ಮ ಬದುಕಿನ ಉದ್ದಕ್ಕೂ ಪಾಲಿಸಿಕೊಂಡು ಬಂದರು. ಅಂತಹ ಶ್ರೇಷ್ಠ ಸಂಪ್ರದಾಯಗಳಲ್ಲಿ ಭಜನೆಯೂ ಒಂದು. ಅದು ಮುಂದೆ ಭಜನಾ ಸಂಸ್ಕೃತಿಯಾಗಿ ಮೇಳೈಸಿತು. ಸಂಜೆಯ ಹೊತ್ತು ಶುಚಿರ್ಭೂತರಾಗಿ ದೇವರಿಗೆ ದೀಪವನ್ನು ಬೆಳಗಿ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಒಂದಷ್ಟು ಹೊತ್ತು ದೇವರ ನಾಮಸ್ಮರಣೆ ಮಾಡುವ, ಭಜಿಸುವ ಪರಿಪಾಠ ಬೆಳೆದು ಬಂದಿತ್ತು. ಕಾಲಕ್ರಮೇಣ ಜನಜೀವನ, ವ್ಯವಸ್ಥೆ, ಸೌಕರ್ಯದ ಜೊತೆಗೆ ಆಧುನಿಕತೆಯ ಗಾಳಿ ಸೋಕಿ ಇಂತಹ ಪರಿಪಾಠಗಳು ನಿಧಾನವಾಗಿ ತೆರೆಮರೆಗೆ ಸರಿಯತೊಡಗಿದವು.ದಿನದಿಂದ […]

ಗಾಂಧೀಜಿಯವರ ಕನಸು ನನಸು ಮಾಡುವ ಖಾವಂದರು

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಂಡಾಗ ನಮ್ಮ ಕಣ್ಣ ಮುಂದೆ ಮೂಡುವ ಮಹಾನ್ ವ್ಯಕ್ತಿತ್ವಗಳಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರು ಅಗ್ರಗಣ್ಯರು. ಅವರು ಕೇವಲ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲ, ಭಾರತದ ಭವಿಷ್ಯವನ್ನು ಹಲವು ದಶಕಗಳ ಹಿಂದೆಯೇ ದೂರದೃಷ್ಟಿಯಿಂದ ಕಂಡ ಮಹಾನ್ ರಾಷ್ಟ್ರನಿರ್ಮಾತೃ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಬಹಳಷ್ಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಅನುಭವಿಸಿದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣಕ್ಕೆ ಚೇತರಿಸಿಕೊಳ್ಳಲಾಗಲಿಲ್ಲ. ಸ್ವತಂತ್ರರಾದ ನಂತರವು ಅನೇಕ […]