2026 ಡಿಸೆಂಬರ್
2026 ಡಿಸೆಂಬರ್
ಸಕಾರಾತ್ಮಕ ಸ್ಪಂದನೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಎಲ್ಲರಲ್ಲೂ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳು ಇದ್ದೇ ಇರುತ್ತದೆ. ಆದರೆ ಜನ ನಕಾರಾತ್ಮಕ ಭಾವನೆಗಳಿಗೆ ಸ್ಪಂದಿಸಿದಷ್ಟು ಬೇಗ ಸಕಾರಾತ್ಮಕ ಭಾವನೆಗಳಿಗೆ ಸ್ಪಂದಿಸುವುದಿಲ್ಲ. ಯಾರ ಬಗ್ಗೆ ಅಥವಾ ಯಾವುದರ ಬಗ್ಗೆಯೆ ಆಗಿರಲಿ ನಾವು ಬೇಗ ನಕಾರಾತ್ಮಕವಾಗಿ ಯೋಚಿಸುತ್ತೇವೆ. ಬಸ್ಸು, ರೈಲು, ವಿಮಾನ ದುರಂತ ಸಂಭವಿಸಿದ ಸುದ್ದಿ ತಿಳಿದಾಗ ನಮ್ಮವರು ಅದರಲ್ಲಿ ಪ್ರಯಾಣಿಸುತ್ತಿದ್ದಾರೆಂದಾದರೆ ಅವರಿಗೇನಾಯಿತೋ! ಎಂಬ ಆತಂಕದಲ್ಲಿ ಅತ್ತು, ಕರೆದು ಮನೆ ಮಂದಿಯನ್ನೆಲ್ಲ ಆತಂಕಕ್ಕೆ ಈಡು ಮಾಡುತ್ತೇವೆ. ಇತರ ಪ್ರಯಾಣಿಕರ ಬಗ್ಗೆ ನಾವು ಹೆಚ್ಚು […]
ಅಸಹಾಯಕರ ಪಾಲಿನ ಆಸರೆ ಮಾಸಾಶನ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಹಿಂದಿನ ಸಂಚಿಕೆಯಲ್ಲಿ ವೃದ್ಧಾಪ್ಯ ಕಾಲದಲ್ಲಿ ಯಾರು ಇಲ್ಲದೇ ಅಸಹಾಯಕರಾಗಿ ಯಾತನೆಯಿಂದ ಬದುಕುತ್ತಿರುವವರ ಹಿನ್ನೆಲೆಯನ್ನು ತಿಳಿದುಕೊಂಡಿದ್ದೇವೆ. ಹಾಗೆಯೇ ಅಂತಹ ಅಸಹಾಯಕ ವ್ಯಕ್ತಿಗಳ ಪೋಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳವು ‘ಮಾಸಾಶನ’ ಕಾರ್ಯಕ್ರಮದ ಮೂಲಕ ಹೇಗೆ ನೆರವಾಗಿದೆ ಎನ್ನುವುದನ್ನು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಪೂಜ್ಯ ಶ್ರೀ ಹೆಗ್ಗಡೆಯವರು 1990ರಲ್ಲಿ ಯೋಜನೆಯ ಮೂಲಕ ಮಾಸಾಶನ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ವಾತ್ಸಲ್ಯ ಕಾರ್ಯಕ್ರಮವು ನಮ್ಮ ದೇಶಕ್ಕೇ ಒಂದು ಮಾದರಿ ಕಾರ್ಯಕ್ರಮವಾಗಿದೆ. ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ನಂತರ […]
ಸುಜ್ಞಾನದ ಅರಿವಿಗೆ ಸಮ್ಮೇಳನಗಳು ವೇದಿಕೆಯಾಗಲಿ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಭಾರತದಲ್ಲಿ ಇರುವಷ್ಟು ಧರ್ಮ, ಮತ, ಪಂಥಗಳು ಮತ್ತು ಅವುಗಳ ಆಚರಣೆಗಳು ಬಹುಶಃ ವಿಶ್ವದ ಯಾವ ದೇಶದಲ್ಲೂ ಇರಲಾರದು. ನಮ್ಮ ದೇಶದ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಪ್ರತಿ ಹೆಜ್ಜೆ ಹೆಜ್ಜೆಗೂ ವಿವಿಧತೆಯನ್ನು ಕಾಣಬಹುದಾಗಿದೆ. ಜಗತ್ತಿಗೆ ಮಾದರಿ ಎಂಬಂತೆ ಆ ವಿವಿಧತೆಯಲ್ಲೂ ಏಕತೆಯನ್ನು ಸಾರಿದ ಮತ್ತು ಈಗಲೂ ಸಾರುತ್ತಿರುವ ರಾಷ್ಟ್ರದಲ್ಲಿ ನಾವು ಹುಟ್ಟಿ ಬೆಳೆದಿದ್ದೇವೆ ಎಂಬುವುದೇ ನಮಗೆ ಹೆಮ್ಮೆ. ಇಲ್ಲಿ ಎಷ್ಟೇ ಧರ್ಮಗಳಿದ್ದರೂ ಎಲ್ಲರೂ ಅವರವರ ಪಾಡಿಗೆ ತಮ್ಮ-ತಮ್ಮ ಧರ್ಮ, ರೀತಿ ನೀತಿಗಳನ್ನು […]
ಅಪಘಾತ ಸಂತ್ರಸ್ತರಿಗೆ ಉಚಿತ ಚಿಕಿತ್ಸೆಗಾಗಿ ಪಿ.ಎಂ.ರಾಹತ್
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ನಾವು ಎಷ್ಟೇ ಜಾಗರೂಕರಾಗಿ ವಾಹನ ಚಲಾಯಿಸಿದರೂ, ವರ್ಷಾನುಗಟ್ಟಲೆ ಅನುಭವಗಳಿದ್ದರೂ ಎದುರಿನಿಂದ ಅಥವಾ ಹಿಂದುಗಡೆಯಿAದ ಬರುವ ವಾಹನ ಸವಾರ ಮಾಡುವ ಸಣ್ಣ ತಪ್ಪಿನಿಂದ ನಾವು ನಮ್ಮ ದೇಹದ ಅಂಗಾಂಗಗಳನ್ನು ಕಳೆದುಕೊಳ್ಳಬಹುದು. ಕೆಲವೊಮ್ಮೆ ಪ್ರಾಣಪಕ್ಷಿಯೆ ಹಾರಿ ಹೋಗಬಹುದು.ನಮ್ಮ ದೇಶದ ಅಪಘಾತದ ಅಂಕಿಅಂಶವನ್ನೊಮ್ಮೆ ಗಮನಿಸಿದರೆ ವಾಹನ ಚಲಾಯಿಸಲು ಒಮ್ಮೆ ಹೆದರಬೇಕಾಗುತ್ತದೆ. ‘ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ’ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತ ದೇಶದಲ್ಲಿ 2025ರಲ್ಲಿ 5,13,474 ರಸ್ತೆ ಅಪಘಾತಗಳು […]