‘ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ಕನ್ನಡದ ಪ್ರಖ್ಯಾತ ಕವಿ ಶ್ರೀ ಎಂ.ಗೋಪಾಲಕೃಷ್ಣ ಅಡಿಗರ ಕವಿತೆಯ ಈ ಮೇಲಿನ ಸಾಲುಗಳು ಇಂದಿಗೂ ಸ್ವಾತಂತ್ರ್ಯ ಪ್ರೇಮಿಗಳಿಗೆ ಪ್ರೇರಣೆಯನ್ನೊದಗಿಸುವ ಕವಿತೆಯಾಗಿದೆ.
ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ,
ಹರೆಯದೀ ಮಾತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!
ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು 1947 ಆಗಸ್ಟ್15, 75 ವರ್ಷಗಳ ಹಿಂದೆ. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸಾವಿರಾರು ಸಾಮಾನ್ಯರು ನೀಡಿದ ಕೊಡುಗೆ ಇಂದು ನಮ್ಮ ಪಾಲಿಗೆ ಅಮೃತ ಮಹೋತ್ಸವವಾಗಿದೆ. ಸ್ವಾತಂತ್ರ್ಯಪೂರ್ವ ಭಾರತವು ಅನೇಕ ರಾಜರು, ಸಾಮಂತರುಗಳ ನಡುವೆ ಹಂಚಿಹೋಗಿತ್ತು. ಸುಮಾರು ೫೦೦ಕ್ಕೂ ಹೆಚ್ಚು ರಾಜ್ಯಗಳು ನಮ್ಮ ದೇಶದಲ್ಲಿದ್ದು, ಅಖಂಡ ಭಾರತ ಎನ್ನುವ ಪರಿಕಲ್ಪನೆ ಬಂದದ್ದೇ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ. ಸುಮಾರು 200 ವರ್ಷಗಳ ಕಾಲ ಈ ನೆಲವನ್ನಾಳಿದ ಬ್ರಿಟಿಷರು ಸ್ವತಂತ್ರರಾಗಬೇಕೆoಬ ಜನರ ಹಂಬಲವನ್ನು ಹತ್ತಿಕ್ಕಲಾಗದೆ ಕೊನೆಗೂ ನಮ್ಮ ದೇಶದ ಜನರಿಗೆ ಆಳ್ವಿಕೆಯನ್ನು ಮಾಡಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟು 1947ರಲ್ಲಿ ನಿರ್ಗಮಿಸಿದರು. ಈ ಸಂದರ್ಭ ದೇಶದ ವಿಭಜನೆ ಆದದ್ದು ಬಹುದೊಡ್ಡ ದುರಂತವಾಗಿದ್ದರೂ, ವಿಭಜನೆಯ ನಂತರ ವಿಭಜನೆಗೊಂಡ ಎರಡೂ ರಾಷ್ಟçಗಳು ಅಂದರೆ, ಭಾರತ ಮತ್ತು ಪಾಕಿಸ್ಥಾನ ಶಾಂತಿ ಮತ್ತು ನೆಮ್ಮದಿಯಿಂದ ಬಾಳಬಹುದೆಂಬ ಆಶಯ ಬಹಳ ಬೇಗನೆ ಸುಳ್ಳಾದದ್ದು ಇದೀಗ ಇತಿಹಾಸ. ಇಂದಿಗೂ ಭಾರತ ಮತ್ತು ಪಾಕಿಸ್ಥಾನದ ನಡುವೆ ಅಸಮಾಧಾನದ ಕಿಡಿಗಳು ಆಗಿಂದಾಗ್ಗೆ ಹತ್ತಿಕೊಳ್ಳುತ್ತಲೇ ಇರುತ್ತವೆ. ಅದೇನೇ ಇದ್ದರೂ ಸ್ವಾತಂತ್ರ್ಯೋತ್ತರ ಭಾರತ ಬಹಳ ಬೇಗನೆ ಪ್ರಗತಿಯನ್ನು ಕಂಡಿತು. 60ರ ದಶಕದಲ್ಲಿ ಆಹಾರ ಧಾನ್ಯಗಳ ಕೊರತೆಯುಂಟಾದಾಗ ಕೈಗೊಂಡ ಹಸಿರು ಕ್ರಾಂತಿಯ ನಿರ್ಧಾರ ನಮ್ಮ ದೇಶದ ಪ್ರಗತಿಯ ಮೈಲುಗಲ್ಲುಗಳಲ್ಲೊಂದು. ನಂತರ 70ರ ದಶಕದ ಶ್ವೇತ ಕ್ರಾಂತಿ, 80ರ ದಶಕದ ನೀಲಿ ಕ್ರಾಂತಿಯಿoದಾಗಿ ದೇಶ ಆಹಾರೋತ್ಪನ್ನಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದಲ್ಲದೇ, ತನ್ನ ಮಿಗತೆಯನ್ನು ರಫ್ತು ಮಾಡಿ ಪ್ರಪಂಚದ ಆಹಾರದ ಕಣಜಗಳಲ್ಲೊಂದು ಎಂದು ಹೆಸರುವಾಸಿಯಾಗುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಹಣ್ಣಿನ ಬೆಳೆ, ವಾಣಿಜ್ಯ ಬೆಳೆಗಳಲ್ಲಿಯೂ ಕೂಡ ನಮ್ಮ ದೇಶ ಸಾಕಷ್ಟು ಹೆಸರು ಮಾಡಿದೆ. ಇನ್ನು ಉದ್ದಿಮೆಗಳಲ್ಲಿಯೂ ತನ್ನ ಛಾಪನ್ನು ಮೂಡಿಸಿದ ಭಾರತ ದೇಶಕ್ಕೆ 90ರ ದಶಕದ ಗ್ಲೋಬಲೈಸೇಶನ್ ( ಮತ್ತು ಲಿಬರಲೈಸೇಶನ್ (ಉದಾರೀಕರಣ) ಗಳು ವರದಾನವಾಗಿ ಬಂದವು.
ತೊAಭತ್ತರ ದಶಕದಲ್ಲಿ ಕಾರಣಾಂತರಗಳಿoದ ವಿದೇಶಿ ವಿನಿಮಯದ ಕೊರತೆಯುಂಟಾದಾಗ, ನಮ್ಮ ದೇಶ ತನ್ನಲ್ಲಿದ್ದ ಚಿನ್ನದ ದಾಸ್ತಾನನ್ನು ವಿಶ್ವ ಬ್ಯಾಂಕಿನಲ್ಲಿ ಒತ್ತೆಯಿಡುವಷ್ಟರ ಮಟ್ಟಿಗೆ ತೊಂದರೆಯನ್ನು ಅನುಭವಿಸಿತ್ತು. ಈ ಪರಿಸ್ಥಿತಿಯನ್ನು ಉದಾರೀಕರಣ ಮತ್ತು ಗ್ಲೋಬಲೈಸೇಶನ್‌ನಿಂದ ಪರಿಹಾರ ಕಂಡುಕೊoಡ ಭಾರತ ಐಟಿ ಟೆಕ್ನಾಲಜಿಯಿಂದ ವಿಶ್ವ ಮಟ್ಟದಲ್ಲಿ ಬೆಳಕಿಗೆ ಬರುವಂತಾಯಿತು. ವಿಶ್ವಕ್ಕೆ ವಿವಿಧ ರೀತಿಯ ಮಾನವ ಸಂಪನ್ಮೂಲವನ್ನು ಒದಗಿಸುವ ನಿರ್ಯಾತ ಕೇಂದ್ರವಾಗಿ ಮೂಡಿ ಬಂದದ್ದರಿoದ ನಮ್ಮ ದೇಶದಲ್ಲಿ ವಿದೇಶಿ ವಿನಿಮಯದ ಕೊರತೆ ಕಾಣದಂತೆ ಅಭಿವೃದ್ಧಿಯನ್ನು ಮಾಡಲಾಗಿದೆ.
ಸ್ವಾತಂತ್ರ್ಯ ಬಂದಾಗ ಇದ್ದಂತಹ ಸಮಸ್ಯೆಗಳ ವ್ಯಾಖ್ಯೆಗಳು ಇದೀಗ ಬದಲಾಗಿದ್ದರೂ ಕೂಡಾ ನಾವಿನ್ನೂ ಸಾಕಷ್ಟು ಪ್ರಗತಿಯನ್ನು ಸಾಧಿಸಬೇಕಾಗಿದೆ. ಲಾಲ್ ಬಹದ್ದೂರ್ ಶಾಸ್ತಿçಯವರು ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷ ವಾಕ್ಯವನ್ನು ನಮಗೆ ನೀಡಿದರೆ, ಅಟಲ್ ಬಿಹಾರಿ ವಾಜಪೆಯಿಯವರು ಇದಕ್ಕೆ ‘ಜೈ ವಿಜ್ಞಾನ್’ ಎಂಬ ಘೋಷವಾಕ್ಯವನ್ನು ಸೇರಿಸಿ, ನಮ್ಮ ದೇಶದಲ್ಲಿ ವಿಜ್ಞಾನದ ಅಭಿವೃದ್ಧಿಗೆ ಎಲ್ಲರ ಗಮನವನ್ನು ಸೆಳೆದರು. ಇದೀಗ ಇದರ ಜೊತೆಯಲ್ಲಿ ‘ಜೈ ಅನುಶಾಸನ್’ (ಶಿಸ್ತನ್ನು) ಅಳವಡಿಸಿಕೊಂಡಲ್ಲಿ ನಮ್ಮ ದೇಶ ತ್ವರಿತವಾಗಿ ಮತ್ತಷ್ಟು ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳಲ್ಲಿರುವ ಶಿಸ್ತು ಉಲ್ಲೇಖನೀಯವಾದುದು. ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಾಗಿರುವ ಸುಮಾರು ೫೦ ಲಕ್ಷ ಕುಟುಂಬಗಳು ಶಿಸ್ತುಬದ್ಧವಾಗಿ ತಮ್ಮ ಸ್ವಸಹಾಯ ಸಂಘಗಳ ನಿರ್ವಹಣೆಯನ್ನು ಮಾಡುವುದಲ್ಲದೆ, ಈ ಶಿಸ್ತನ್ನು ತಮ್ಮ ಸ್ವಂತ ಬದುಕಿನಲ್ಲಿ ಅಳವಡಿಸಿಕೊಂಡಿರುವುದರಿoದ ಪ್ರತಿ ವರ್ಷ ಸಾವಿರಾರು ಕೋಟಿ ಮೊತ್ತದ ವ್ಯವಹಾರಗಳನ್ನು ಸುಲಲಿತವಾಗಿ ಮಾಡಿಕೊಳ್ಳಲು ಸಾಧ್ಯವಾಗಿದೆ. ಮಾತ್ರವಲ್ಲದೆ ತಮ್ಮ ಕುಟುಂಬ ರಕ್ಷಣೆಗಾಗಿ ಆರೋಗ್ಯ ವಿಮೆ, ಜೀವ ವಿಮೆ, ಸೊತ್ತು ವಿಮೆಯನ್ನೂ ಇವರು ಮಾಡಿಕೊಂಡಿದ್ದು, ಇದರಿಂದಾಗಿ ಬರುವಂತಹ ಗಂಡಾoತರವನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗಿದೆ.
ಇದೀಗ ನಮ್ಮ ಸರಕಾರವೂ ಅನೇಕ ರೀತಿಯ ಕಾರ್ಯಕ್ರಮಗಳನ್ನು ಯೋಜನೆಯ ಮುಖಾಂತರ ಅನುಷ್ಠಾನಿಸುತ್ತಿದ್ದು, ನಮ್ಮ ಸದಸ್ಯರುಗಳು ಮತ್ತು ಜನಸಾಮಾನ್ಯರು ಈ ಕಾರ್ಯಕ್ರಮಗಳನ್ನು ಅರ್ಥೈಸಿಕೊಂಡು ಅನುಷ್ಠಾನಿಸಿಕೊಂಡು, ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡಲ್ಲಿ ಎಲ್ಲರ ಬದುಕು ಮತ್ತಷ್ಟು ಹಸನಾಗುವುದರಲ್ಲಿ ಸಂಶಯವಿಲ್ಲ. ಇದಕ್ಕಾಗಿಯೇ ಪೂಜ್ಯರು ರೂಪಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನರಲ್ಲಿ ಈ ಬದಲಾವಣೆಯನ್ನು ತರುವಲ್ಲಿ ಕಟಿಬದ್ಧವಾಗಿದೆ.
ಈ ನಿಟ್ಟಿನಲ್ಲಿ ಸಂಘಗಳ ಸದಸ್ಯರ ಸಹಕಾರ, ಜನಪ್ರತಿನಿಧಿಗಳ, ಅಧಿಕಾರಿಗಳ ಹಾಗೂ ಎಲ್ಲಾ ಧಾರ್ಮಿಕ ಮುಖಂಡರುಗಳ ಸಹಕಾರವನ್ನು ಕೇಳುತ್ತಾ, ‘ಎಲ್ಲರನ್ನು ಒಳಗೊಳ್ಳುವ’ ಕಾರ್ಯಕ್ರಮವಾಗಿ ಬೆಳೆಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜೊತೆಯಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *