ಡಾ| ಎಲ್.ಎಚ್. ಮಂಜುನಾಥ್
ಬಡಿದೆಬ್ಬಿಸುವ ಭಾಷಣಗಳಿಲ್ಲ
ರೋಚಕವೆನಿಸುವ ವಾಕ್ಯಗಳಿಲ್ಲ
ಗಹಗಹಿಸಿ ನಗಿಸಿ ಮರೆಸುವ ಉಲ್ಲೇಖಗಳಿಲ್ಲ
ಕಣ್ಣೀರು ತರಿಸುವ ಕಥೆಗಳಂತೂ ಇಲ್ಲವೇ ಇಲ್ಲ
ಬಡಿದೆಬ್ಬಿಸಲು ಅವರಲಿ ಬಡಿಗೆಯೇ ಇಲ್ಲ
ರಣ ಕಹಳೆಯನೂದುವ ಅಬ್ಬರವಲ್ಲಿಲ್ಲ
ಅನುಕಂಪದಲೆ ಹರಿಸುವ ರಾಜಕಾರಣಿಯವರಲ್ಲ
ಕ್ಷಣಿಕದಾಕರ್ಷಣೆಯ ವಾಗ್ಮಯ ಅವರದಲ್ಲ
ನಮ್ಮಮ್ಮ ಹೇಮಮ್ಮ ಹೇಮಾವತಮ್ಮ
ಹೊರನೋಟದಲಿ ಕಾಣದಾ ಜ್ಞಾನಸಾಗರ
ಆಂತರ್ಯದೊಳಗಿಹುದು ಸಾಹಿತ್ಯ ಅಪಾರ
ಶುಭ್ರಾಗಸದಲ್ಲಿ ಎಂದಿಗಾದರೊಮ್ಮೆ
ಹೊಳೆವ ಕೋಲ್ಮಿಂಚಿನoದದಲಿ
ಹೊರಬರುವ ಭಂಡಾರ
ಪರoಪರೆಗೆ ವಿಜ್ಞಾನವನು ಲೇಪಿಸುವ ಅವರ ಚಾತುರ್ಯ
ಅಬಲೆಯರಿಗೆ ಬಲನೀಡುವ ನಿತ್ಯದಾ ಕೈಂಕರ್ಯ
ಜೊತೆಯಲೇ ಬಲಹೀನರಿಗೆ ನಿಂತು ನೀಡುವ ಔದಾರ್ಯ
ವದನದಲಿ ಆ ಜಿಹ್ವದಲಿ ಎಂದೂ ಮಾಸದ ಮಾಧುರ್ಯ
ಈ ಪರಿಯ ಸೊಬಗಂತೂ ಕಾಣುವುದು ಅಪರೂಪ
ಯುಗಗಳಿಗೊಮ್ಮೆ ಮಾತ್ರ ಜನಿಸಿ ಬರುವ ಹೇಮ ಸ್ವರೂಪ
ಸಂಭ್ರಮವು ಎಮಗಿಂದು ತಮ್ಮ ಕಾಣುವ ತವಕ
ನಿಮಗೆಲ್ಲಿ ನೆನಪಿಹುದು ಬಹಳಿಹುದು ತಮಗೆ ಕಾಯಕ