ಮೊಬೈಲ್ ದುನಿಯಾ

ಚೇತನಾ ಚಾರ್ಮಾಡಿ

ಮೊಬೈಲ್ ಎನ್ನುವುದು ಇದೀಗ ಪ್ರತಿಯೊಬ್ಬರ ಬದುಕಿನ ಅಗತ್ಯಗಳಲ್ಲೊಂದಾಗಿದೆ. ಪ್ರಾರಂಭದಲ್ಲಿ ಸೂಟ್‌ಕೇಸ್‌ನಂತೆ ಇದ್ದ ಮೊಬೈಲ್ ಫೋನ್‌ಗಳು ಇಂದು ಅಂಗೈಯಗಲಕ್ಕಿoತಲೂ ಕಿರಿದಾಗಿವೆ. ಕೇವಲ ಕರೆ, ಸಂದೇಶ ಕಳುಹಿಸಲು ಮಾತ್ರ ಸಾಧ್ಯವಾಗುತ್ತಿದ್ದ ಮೊಬೈಲ್‌ಗಳಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದು ಇಂದು ಒಂದು ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಶೇ. 70 ರಷ್ಟು ಕೆಲಸಗಳು ಮೊಬೈಲ್‌ನಲ್ಲಿ ಮಾಡಲು ಸಾಧ್ಯವಾಗುತ್ತಿದೆ.
ಮೊಬೈಲ್ ಫೋನ್‌ನ ಹುಟ್ಟು : ಜಗತ್ತಿನಲ್ಲೆ ಮೊತ್ತ ಮೊದಲ ಬಾರಿಗೆ ಮೊಬೈಲ್ ಫೋನ್ ಅನ್ನು ಕಂಡುಹಿಡಿದ ಕೀರ್ತಿ ಮೊಟರೊಲಾ ಸಂಸ್ಥೆಗೆ ಸೇರುತ್ತದೆ. ಅಲ್ಲದೆ ಇದೇ ಸಂಸ್ಥೆಯ ಉದ್ಯೋಗಿ ಮಾರ್ಟಿನ್ ಕೂಪರ್ 1973ರ ಏಪ್ರಿಲ್ ತಿಂಗಳಲ್ಲಿ ತನ್ನ ಪ್ರತಿಸ್ಪರ್ಧಿ ಇಂಜಿನಿಯರ್ ಜೋಯೆಲ್ ಎಂಗೆಲ್‌ರವರಿಗೆ ಮೊಬೈಲ್ ಮೂಲಕ ಕರೆ ಮಾಡಿ ಇದೀಗ 5 ದಶಕಗಳು ಕಳೆದಿವೆ. ಅಂದು ಆರಂಭವಾದ ಈ ಸೇವೆ ಇಂದು ಹಲವಾರು ಬದಲಾವಣೆಯೊಂದಿಗೆ ಕೋಟ್ಯಾಂತರ ಜನರನ್ನು ತಲುಪಿದೆ.
ಕಾರ್‌ಫೋನ್ ಪ್ರಯೋಗ : 1947ರಲ್ಲಿ ಅಮೆರಿಕದ ಬೆಲ್ ಲ್ಯಾಬ್ ಸಂಸ್ಥೆಯು ಸೆಲ್ಯುಲರ್ ಟೆಲಿಫೋನ್ ಟವರ್ ಬಳಸಿ, ಚಲಿಸುವ ಕಾರಿನಲ್ಲಿಯೂ ಕರೆ ಮಾಡಬಹುದಾದ 36 ಕೆ.ಜಿ. ತೂಕವನ್ನು ಹೊಂದಿರುವ ಸಾಧನವನ್ನು ಕಾರಿಗೆ ಅಳವಡಿಸಿತ್ತು. ಆದರೆ ಇದರಲ್ಲಿ ಹಲವು ಮಿತಿಗಳಿದ್ದವು. ಒಂದು ಕರೆ ಕನೆಕ್ಟ್ ಆಗಲು 6 ರಿಂದ 7 ಗಂಟೆ ಪಡೆದುಕೊಳ್ಳುತ್ತಿತ್ತು. ಇದರ ಬೆಲೆ ಅಧಿಕವಾಗಿದ್ದ ಕಾರಣ ಇದು ಶ್ರೀಮಂತರಿಗಷ್ಟೇ ಸೀಮಿತವಾಗಿತ್ತು. ಹೀಗಾಗಿ ಈ ಪ್ರಯೋಗ ಅಷ್ಟೊಂದು ಯಶಸ್ಸನ್ನು ಕಾಣಲಿಲ್ಲ.
10 ವರ್ಷಗಳ ನಂತರ ಮಾರುಕಟ್ಟೆಗೆ ಹೆಜ್ಜೆ ಇಟ್ಟ ಮೊಬೈಲ್
ತನ್ನ ಮೂಲ ಮಾದರಿಯಿಂದ ಈಗಿನ ಮೊಬೈಲ್ ಫೋನ್‌ನಂತೆ ರೂಪ ಪಡೆಯಲು ಸುಮಾರು 10 ವರ್ಷಗಳು ಬೇಕಾಯಿತು. ಇದಕ್ಕಾಗಿ ಮೊಟರೊಲಾ ಸಂಸ್ಥೆ ಸುಮಾರು 800 ಕೋಟಿಯಷ್ಟು ಹಣವನ್ನು ವ್ಯಯಿಸಿದೆ. ಆಚಿಥಿಟಿಚಿಣಚಿಛಿ 800x ಮೊಬೈಲ್ 1983ರಲ್ಲಿ ಮಾರುಕಟ್ಟೆಗೆ ಬಂತು. ಅಂದು ಅದರ ಬೆಲೆ ರೂ.9.67ಲಕ್ಷ. ಇದನ್ನು 10 ಗಂಟೆ ಚಾರ್ಜ್ ಮಾಡಿದರೆ 35 ನಿಮಿಷಗಳ ಕಾಲ ಮಾತ್ರ ಮಾತನಾಡಲು ಸಾಧ್ಯವಾಗುತ್ತಿತ್ತು. ಈ ಮೊಬೈಲ್ ಮುಕ್ಕಾಲು ಕೆ.ಜಿ. ತೂಕವನ್ನು ಹೊಂದಿದ್ದು 10ಇಂಚು ಉದ್ದವಿತ್ತು.
ಭಾರತದಲ್ಲೂ ಹುಟ್ಟು ಪಡೆದ ಮೊಬೈಲ್ ತಂತ್ರಜ್ಞಾನ: ಮೊಬೈಲ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ ಕೀರ್ತಿ ಕೈಗಾರಿಕೋದ್ಯಮಿ ಬಿ.ಕೆ. ಮೋದಿಯವರಿಗೆ ಸಲ್ಲುತ್ತದೆ. ಆಸ್ಟೆçಲಿಯನ್ ಕಂಪನಿ ಟೆಲ್‌ಸ್ಟಾç ಮತ್ತು ನೋಕಿಯಾವನ್ನು ಸಂಪರ್ಕಿಸಿ ಭಾರತದಲ್ಲಿ ಸೆಲ್ಯುಲರ್ ಸೇವೆಯನ್ನು ಆರಂಭಿಸಿದರು. ಈ ಪರಿಣಾಮವಾಗಿ 2000ನೇ ವರ್ಷದ ವೇಳೆಗೆ ಬಡವರ ಕೈಯಲ್ಲೂ ನೋಕಿಯಾ ರಾರಾಜಿಸುತ್ತಿತ್ತು.
ಆರಂಭದ ಕರೆಗಳ ಬೆಲೆ ಎಷ್ಟು? : 1995ರಲ್ಲಿ ದಿಲ್ಲಿಯ ದೂರಸಂಪರ್ಕ ಸಚಿವಾಲಯದ ಕಚೇರಿಯಿಂದ ಅಂದಿನ ಸಚಿವರಾದ ಸುಖ್‌ರಾಮ್‌ರವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರೊಂದಿಗೆ ಮೊದಲ ಬಾರಿಗೆ ಕರೆ ಮಾಡಿ ಮಾತನಾಡಿದ್ದರು. ಆರಂಭದಲ್ಲಿ ಕೇವಲ ಹೊರಹೋಗುವ ಕರೆಗಳಿಗೆ ನಿಮಿಷಕ್ಕೆ ರೂ. 16 ವಿಧಿಸಲಾಗುತ್ತಿತ್ತು.
ಭಾರತದ ಮೊದಲ ಕ್ಯಾಮೆರಾ ಫೋನ್ : ಇದನ್ನು ಮೊದಲು ಪರಿಚಯಿಸಿದ್ದು ನೋಕಿಯಾ ಕಂಪನಿ. ನೋಕಿಯಾ 7650 ಮೊಬೈಲ್ ಫೋನ್ ಭಾರತದಲ್ಲಿ ಬಿಡುಗಡೆಯಾದ ಮೊದಲ ಮೊಬೈಲ್ ಕ್ಯಾಮೆರಾ ಫೋನ್ ಆಗಿತ್ತು. 2010ರಲ್ಲಿ ಸ್ಮಾರ್ಟ್ಫೋನ್‌ಗಳು ಟ್ರೆಂಡ್ ಪಡೆದವು. ಮೊಬೈಲ್ ಫೋನ್‌ಗಳಲ್ಲೇ ಬ್ರಾö್ಯಂಡ್ ಆಗಿ ಕಾಣಿಸಿಕೊಂಡ ಮೈಕ್ರೋಮ್ಯಾಕ್ಸ್ ವಿದೇಶಿ ಬ್ರಾö್ಯಂಡ್‌ಗಳನ್ನು ಹಿಂದಿಕ್ಕಿ ಕೆಲವು ವರ್ಷಗಳವರೆಗೆ ಜನಮನ್ನಣೆಯನ್ನು ಪಡೆಯಿತು.
ವಿಶ್ವದಲ್ಲಿ ಅತಿಹೆಚ್ಚು ಮಾರಾಟವಾದ ಮೊಬೈಲ್ : 2003ರಲ್ಲಿ ಆರಂಭವಾದ ನೋಕಿಯಾ 1100 ಮೊಬೈಲ್ 25 ಕೋಟಿ, 2005ರಲ್ಲಿ ಆರಂಭವಾದ ನೋಕಿಯಾ 1110 24.7 ಕೋಟಿ, 2004ರಲ್ಲಿ ಆರಂಭವಾದ ಐಫೋನ್ 6s 22.2 ಕೋಟಿಯಷ್ಟು ಮಾರಾಟವಾಗಿ ಮುಂಚೂಣಿಯಲ್ಲಿವೆ.
ಜಗತ್ತಿನಲ್ಲಿರುವ ಮೊಬೈಲ್ ಬಳಕೆದಾರರೆಷ್ಟು? : 2010 ರಿಂದ 2022ರ ವರೆಗೆ ಜಗತ್ತಿನಲ್ಲಿ 2200 ಕೋಟಿ ಮೊಬೈಲ್‌ಗಳು ಮಾರಾಟವಾಗಿವೆ. ಪ್ರಸ್ತುತ ಜಗತ್ತಿನಲ್ಲಿ ಸುಮಾರು 7 ಬಿಲಿಯನ್ ಸಕ್ರಿಯ ಸ್ಮಾರ್ಟ್ಫೋನ್ ನೆಟ್‌ವರ್ಕ್ ಚಂದಾದಾರಿಕೆ ಇದೆ. ಸುಮಾರು 700 ಕೋಟಿಗೂ ಅಧಿಕ ಸ್ಮಾರ್ಟ್ಫೋನ್‌ಗಳನ್ನು ಬಳಸಲಾಗುತ್ತಿದೆ.
ಪ್ರಸ್ತುತ ನಾವು ಮೊಬೈಲ್ ಫೋನ್ ಅನ್ನು ಬಿಟ್ಟಿರಲಾರದಷ್ಟು ಅದರ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ಅದರ ಸಾಧಕ – ಬಾಧಕಗಳನ್ನು ಅರಿತು ಮೊಬೈಲ್ ಫೋನ್‌ಗಳನ್ನು ಬಳಸಬೇಕಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates