ಡಾ| ಎಲ್.ಎಚ್. ಮಂಜುನಾಥ್
ಇದೀಗ ಭಾರತದೆಲ್ಲೆಡೆ ಕ್ರಿಕೆಟ್ ಜ್ವರ. ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಭಾರತ ಅದ್ವಿತೀಯವಾದ ಸಾಧನೆಯನ್ನು ಮಾಡುತ್ತಿದೆ. ಈ ಲೇಖನ ಅಚ್ಚಿಗೆ ಹೋಗುವಾಗ ವಿಶ್ವಕಪ್ ಅಂತಿಮ ಹಣಾಹಣಿಗೆ ಇನ್ನು ಕೇವಲ ಮೂರು ದಿನ ಮಾತ್ರ ಬಾಕಿ ಇದೆ. ಫೈನಲ್‌ನಲ್ಲಿ ಏನೇ ಆಗಲಿ, ಭಾರತ ಈ ತಿಂಗಳಿನಲ್ಲಿ ತೋರಿಸಿದ ಸಾಧನೆ ಎಲ್ಲರನ್ನು ನಿಬ್ಬೆರಗಾಗಿಸಿದೆ. ತಾನು ಆಡಿದ ಹತ್ತು ಪಂದ್ಯಗಳಲ್ಲಿ ವಿವಿಧ ಸಾಮರ್ಥ್ಯಗಳ ಸ್ಪರ್ಧಿಗಳನ್ನು ಸೋಲಿಸಿದೆ. ಈ ಗೆಲುವು, ಯಶಸ್ಸು ಭಾರತೀಯರ ಬದಲಾದ ಮನಸ್ಥಿತಿಯನ್ನು ಎತ್ತಿತೋರಿಸುತ್ತಿದೆ.
ಬ್ರಿಟಿಷರ ಆಟವೆಂದು ಕರೆಯಲ್ಪಡುತ್ತಿದ್ದ ಕ್ರಿಕೆಟಿಗೆ ಇನ್ನೂರು ವರ್ಷಗಳ ಇತಿಹಾಸವಿದೆ. ಇಂಗ್ಲೇoಡ್ ದೇಶದ ವಸಾಹತುವಾಗಿದ್ದ ಭಾರತಕ್ಕೂ ಕೂಡಾ ಕ್ರಿಕೆಟಿನ ಒಲವು ತಗಲಿದ್ದು ಸುಮಾರು ನೂರು ವರ್ಷಗಳ ಹಿಂದೆ. ಸ್ವಾತಂತ್ರೋತ್ತರ ಭಾರತದಲ್ಲಿ ಹಲವಾರು ಉತ್ತಮ ಆಟಗಾರರಿದ್ದರೂ ಕ್ರಿಕೆಟ್‌ನಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವಂತದ್ದೇನೂ ಇರಲಿಲ್ಲ. ಐದು ದಿನಗಳ ಆಟವನ್ನು ಮೂರು ದಿನಗಳಲ್ಲೇ ಸೋತು ಮುಗಿಸುತ್ತಿದ್ದ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಎಲ್ಲರೂ ಅಪಹಾಸ್ಯ ಮಾಡುತ್ತಿದ್ದರು. 70ರ ದಶಕದಲ್ಲಿ ಜಿ.ಆರ್. ವಿಶ್ವನಾಥ್, ಸುನಿಲ್ ಗವಾಸ್ಕರ್, ಬಿಶನ್ ಬೇಡಿ, ಚಂದ್ರಶೇಖರ್, ಪ್ರಸನ್ನ ಮುಂತಾದ ದಿಗ್ಗಜರು ಕ್ರಿಕೆಟ್ ತಂಡವನ್ನು ಸೇರಿಕೊಂಡ ನಂತರ ಆಗೊಮ್ಮೆ ಈಗೊಮ್ಮೆ ಸಣ್ಣಪುಟ್ಟ ಪಂದ್ಯಗಳನ್ನು ಭಾರತ ಗೆದ್ದು ತಾನೂ ಇದ್ದೇನೆ ಎಂದು ತೋರಿಸುತ್ತಿತ್ತು.
60 ಓವರ್‌ಗಳ ನಿಯಮಿತ ಕ್ರಿಕೆಟ್ ಪಂದ್ಯಾಟ ಪ್ರಾರಂಭವಾದದ್ದು 1975ನೇ ಇಸವಿಯಲ್ಲಿ. ಇಂಗ್ಲೇoಡ್‌ನಲ್ಲಿ ನಡೆದ ಈ ಪಂದ್ಯಾಟದಲ್ಲಿ ಇಂಗ್ಲೇoಡ್ ಪಂದ್ಯದಲ್ಲಿ ಭಾರತ ಕೇವಲ 132 ರನ್‌ಗಳನ್ನು ಗಳಿಸಿತ್ತು. 60 ಓವರ್ ಇಡೀ ಬ್ಯಾಟ್ ಮಾಡಿದ ಸುನಿಲ್ ಗವಾಸ್ಕರ್ ಆಗ ಕೇವಲ 37 ರನ್‌ಗಳನ್ನು ಹೊಡೆದಿದ್ದರು. ಭಾರತ ಅಂದು ಆಡಿದ್ದ ಈಸ್ಟ್ಆಫ್ರಿಕಾ ದೇಶವನ್ನು ಮಾತ್ರ ಪಂದ್ಯವೊoದರಲ್ಲಿ ಸೋಲಿಸಿದ್ದು ಬಿಟ್ಟರೆ ಯಾವುದೇ ಸಾಧನೆಯನ್ನು ಮಾಡದೆ ಮರಳಿತ್ತು.1979ನೇ ಇಸವಿಯ 2ನೇ ವಿಶ್ವಕಪ್ ಪಂದ್ಯಾಟದಲ್ಲಿ ಭಾರತ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ನಿರಾಶನಾಗಿ ಮರಳಿತ್ತು. ನಮ್ಮ ದೇಶದ ಕ್ರಿಕೆಟ್‌ಗೆ ಪುನರ್‌ಜೀವ ಕೊಟ್ಟದ್ದು ಕಪಿಲ್‌ದೇವ್ ಎಂಬ ಆಲ್‌ರೌಂಡ್ ಮಾಂತ್ರಿಕ. ಇಪ್ಪತ್ತೆöÊದು ವರ್ಷದ ಈ ಯುವಕನನ್ನು ಭಾರತದ ಕ್ರಿಕೆಟ್ ತಂಡದ ನಾಯಕನನ್ನಾಗಿ 1983ರ ವಿಶ್ವಕಪ್‌ಗೆ ಕಳುಹಿಸಿದಾಗ ಏನನ್ನಾದರೂ ಸಾಧನೆ ಮಾಡಿ ಈ ತಂಡ ಬರುತ್ತದೆ ಎಂದು ನಿರೀಕ್ಷಿಸಿದವರು ಯಾರೂ ಇರಲಿಲ್ಲ. ಸ್ವಯಂ ಆಟಗಾರರಿಗೇ ತಮ್ಮ ಮೇಲೆ ವಿಶ್ವಾಸವಿರಲಿಲ್ಲ. ಇಂತಹ ತಂಡಕ್ಕೆ ಮಿಂಚಿನ ನಾಯಕತ್ವವನ್ನು ಕಪಿಲ್‌ದೇವ್ ಒದಗಿಸಿದ್ದು ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯವೊoದರಲ್ಲಿ. ಆ ಪಂದ್ಯದಲ್ಲಿ ಪ್ರಥಮ ಬ್ಯಾಟ್ ಮಾಡಿದ ಭಾರತೀಯ ತಂಡ ಹದಿನೇಳು ರನ್‌ಗಳಿಗೆ ಐದು ವಿಕೆಟ್ ಅನ್ನು ಕಳೆದುಕೊಂಡು ಮರಳಿ ಊರಿಗೆ ತೆರಳಲು ಸಿದ್ಧತೆ ಮಾಡಿಕೊಂಡoತಿತ್ತು. ಆ ಸಂದರ್ಭದಲ್ಲಿ ಮೈದಾನವನ್ನು ಪ್ರವೇಶಿಸಿದ ಕಪಿಲ್‌ದೇವ್ ಜಿಂಬಾಬ್ವೆ ಬೌಲರ್‌ಗಳನ್ನು ಮನಸ್ಸೋ ಇಚ್ಚೆ ದಂಡಿಸಿ ಬ್ಯಾಟಿಂಗ್ ಮುಗಿಸುವಾಗ 175 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದರು. ಭಾರತೀಯ ತಂಡ 265 ರನ್‌ಗಳನ್ನು ಕಲೆ ಹಾಕಿತ್ತು. ಇದರ ವಿರುದ್ಧ ಹೋರಾಡಲಾಗದೆ ಜಿಂಬಾಬ್ವೆ ಸೋಲನ್ನೊಪ್ಪಿಕೊಂಡ ನಂತರ ಭಾರತೀಯ ತಂಡ ಇನ್ನಿಲ್ಲದಂತೆ ತಿರುಗಿ ನಿಂತಿತು. ನಂತರ ನಡೆದದೆಲ್ಲ ಇತಿಹಾಸ. ಬಲಿಷ್ಠ ವೆಸ್ಟ್ಇಂಡೀಸ್ ತಂಡವನ್ನು ಸೋಲಿಸಿದ್ದಲ್ಲದೆ ಆಸ್ಟೆçÃಲಿಯಾ, ಇಂಗ್ಲೇoಡ್ ತಂಡಗಳನ್ನು ಸೋಲಿಸಿ ಕೊನೆಯ ಫೈನಲ್ ಪಂದ್ಯಾಟದಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದಿದ್ದ ವೆಸ್ಟ್ಇಂಡೀಸ್ ತಂಡವನ್ನು ಲಾರ್ಡ್ಸ್ ಮೈದಾನದಲ್ಲಿ ಕೇವಲ 143 ರನ್‌ಗಳಿಗೆ ಕಟ್ಟಿಹಾಕಿ 29 ರನ್‌ಗಳ ಅದ್ಭುತ ವಿಜಯವನ್ನು ಸಾಧಿಸಿದ್ದು ಇದೇ ಆಲ್‌ರೌಂಡ್ ಮಾಂತ್ರಿಕ ಕಪಿಲ್‌ದೇವ್‌ನ ಸಾಧನೆಯಾಗಿತ್ತು.
ನಂತರ ಭಾರತ ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡುತ್ತ ಹೋದರೂ ಇದಕ್ಕೊಂದು ಹೊಸ ಹೊಳಪು ಬಂದದ್ದು ಐಪಿಎಲ್ ಸೀಮಿತ ೨೦ ಓವರ್ ಕ್ರಿಕೆಟ್ ಅನ್ನು ಭಾರತದಲ್ಲಿ ಪ್ರಾರಂಭಿಸಿದಾಗ. ಇದರಿಂದಾಗಿ ಅನೇಕ ಯುವ ಪೀಳಿಗೆಯ ಆಟಗಾರರಿಗೆ ತಮ್ಮನ್ನು ತಾವು ಕಂಡುಕೊಳ್ಳಲು, ವಿಶೇಷ ಸಾಧನೆ ಮಾಡಲು ಅವಕಾಶವಾಯಿತು. ಸೀಮಿತ ಓವರ್‌ಗಳ ಕ್ರಿಕೆಟ್, 50 ಓವರ್ ಕ್ರಿಕೆಟ್ ಮತ್ತು ಟೆಸ್ಟ್ ಪಂದ್ಯಗಳಲ್ಲಿಯೂ ಸಾಧನೆ ಮಾಡಿದಂತಹ ಅನೇಕ ಯುವ ಆಟಗಾರರು ದೇಶದಲ್ಲಿ ಬೆಳೆಯತೊಡಗಿದರು. ಇದು ಬದಲಾದ ಭಾರತವನ್ನು ಬಿಂಬಿಸುವoತೆ ಕಾಣುತ್ತಿತ್ತು. ಆಗ ಬೆಳೆದು ಬಂದವನೇ ಇನ್ನೋರ್ವ ಯುವ ತಾರೆ ವಿರಾಟ್ ಕೊಹ್ಲಿ. 2023ರ ವಿಶ್ವಕಪ್‌ನಲ್ಲಿ ಸರ್ವಾಧಿಕ ರನ್ ಅನ್ನು ಪೇರಿಸಿರುವ ವಿರಾಟ್ ಕೊಹ್ಲಿ ಭಾರತದ ಯುವ ಪೀಳಿಗೆಗೆ ಆಕ್ರಮಣ ಶೀಲತೆ, ನಿರ್ಧಾರ ಕೈಗೊಳ್ಳುವಿಕೆ, ಶ್ರಮದ ದುಡಿಮೆ, ವೈಯಕ್ತಿಕವಾಗಿ ಶರೀರ ದಾಢ್ಯವನ್ನು ಕಾಪಾಡಿಕೊಳ್ಳುವ, ವ್ಯಾಯಾಮವನ್ನು ಕೈಗೊಳ್ಳುವ ಅನೇಕ ಹೊಸತನಗಳಿಗೆ ಮಾದರಿಯಾಗಿದ್ದಾರೆ. ಇವರನ್ನು ಹಿಂಬಾಲಿಸುವ ಯುವಜನತೆ ವಿರಾಟ್ ಕೊಹ್ಲಿಯಷ್ಟೇ, ಭಾರತೀಯ ತಂಡದಷ್ಟೇ ಆಕ್ರಮಣಶಾಲಿಯಾಗಿದ್ದು ಸಾಧನೆ ಮಾಡಬೇಕೆಂಬ ಹಂಬಲ ತೋರುತ್ತಿರುವುದು ಬದಲಾಗುತ್ತಿರುವ ಯುವ ಭಾರತ ದ್ಯೋತಕವಾಗಿದೆ.
ಏನೇ ಇರಲಿ, ಈಗಾಗಲೇ ಎರಡು ಭಾರಿ ವಿಶ್ವಕಪ್ ಗೆದ್ದಿರುವ ಭಾರತ ತಂಡ ಈ ವರ್ಷವೂ ವಿಶ್ವಕಪ್ ಗೆಲ್ಲುತ್ತದೆ ಎಂಬ ಶುಭಹಾರೈಕೆಯೊಂದಿಗೆ ನಾವೆಲ್ಲರೂ ಪರಿಶ್ರಮಿಗಳಾಗೋಣ, ನಮ್ಮ ದೇಹದಾಢ್ಯವನ್ನು ಕಾಪಾಡಿಕೊಳ್ಳೋಣ. ಉತ್ತಮ ಗುಣಗಳನ್ನು ಬೆಳೆಸಿಕೊಳ್ಳೋಣ. ದುಡಿಮೆಯಲ್ಲಿ ಆಕ್ರಮಣಶೀಲರಾಗೋಣ. ಸಾಧನೆಯನ್ನು ಮಾಡೋಣ.