ಸುಲಭ ಹಾಗೂ ನಿಖರ ಪ್ರಗತಿನಿಧಿ ಬಡ್ಡಿ ಲೆಕ್ಕಾಚಾರ

ಹಿಂದಿನ ಸಂಚಿಕೆಯಲ್ಲಿ ಯೋಜನೆಯ ವ್ಯವಸ್ಥೆಯಲ್ಲಿ ಸಂಘಗಳಿಗೆ ಬ್ಯಾಂಕ್ ಸಿ.ಸಿ. ಖಾತೆಯ ಮೂಲಕ ಎಷ್ಟೊಂದು ಪ್ರಯೋಜನಗಳಾಗಿವೆ ಎಂದು ವಿವರಿಸಲಾಗಿತ್ತು.
ನಬಾರ್ಡ್ನ ಸುತ್ತೋಲೆ (65(A)/MCID-04/2011-12ರ ಪ್ರಕಾರ ಸ್ವಸಹಾಯ ಸಂಘಗಳಿಗೆ ಸಿ.ಸಿ. ಖಾತೆ ವ್ಯವಸ್ಥೆಯನ್ನು ಒದಗಿಸಬೇಕು, ತನ್ಮೂಲಕ ಅವರಲ್ಲಿ ಆದಾಯ ಇದ್ದಾಗ ನಿರಂತರ ಮರುಪಾವತಿಯೊಂದಿಗೆ ಬಡ್ಡಿ ಹೊರೆಯನ್ನು ಕಡಿಮೆ ಮಾಡಬೇಕೆನ್ನುವ ಒಂದು ಅತ್ಯುತ್ತಮ ಮಾರ್ಗದರ್ಶನ ಇದೆ. ಆ ಮಾರ್ಗದರ್ಶನದನ್ವಯ ಯೋಜನೆಯ ಸಂಘದ ಸಾಲಗಳನ್ನು ಸಿ.ಸಿ. ಖಾತೆಯಾಗಿ ಬ್ಯಾಂಕ್‌ಗಳಲ್ಲಿ ಪರಿವರ್ತಿಸಲಾಯಿತು. ಸಂಘದ ವಾರದ ಸಭೆಯ ಜೊತೆಗೆ ವಾರದ ಮರುಪಾವತಿ ವ್ಯವಸ್ಥೆಯನ್ನು ಒದಗಿಸಲಾಯಿತು. ವಾರದ ಸುಲಭ ಮರುಪಾವತಿ ವ್ಯವಸ್ಥೆಯಲ್ಲಿ ರೂ. 1 ಲಕ್ಷ ಸಾಲಕ್ಕೆ ಒಂದು ವರ್ಷದ ಅವಧಿಗೆ (50 ವಾರಗಳು) ಒಟ್ಟು ಪಾವತಿಸಬೇಕಾದ ಬಡ್ಡಿ ಕೇವಲ ರೂ. 6,992/- ಆಗಿರುತ್ತದೆ ಎಂದು ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೆ. ಬ್ಯಾಂಕಿನ ಸಿ.ಸಿ. ಖಾತೆಯಿಂದ ಸಂಘಗಳು ಸದಸ್ಯರಿಗೆ ನೀಡುವ ಸಾಲದ ಬಡ್ಡಿದರವು ಶೇ. 14 (ವಾರ್ಷಿಕ) ಆಗಿದ್ದರೂ, ವಾರದ ಕಂತುಗಳಲ್ಲಿ ಪಾವತಿಸುವುದರಿಂದ ಕಡಿತದ ಬಡ್ಡಿದರದ ಗರಿಷ್ಠ ಲಾಭ ನಮ್ಮ ಸದಸ್ಯರಿಗೆ ಸಿಗುತ್ತದೆ. ವಾರದಿಂದ ವಾರಕ್ಕೆ ಕಂತು ಕಟ್ಟಿದಾಗ, ಅಸಲು ಕಡಿಮೆ ಆಗುತ್ತಿದ್ದಂತೆಯೇ ಅಸಲಿನ ಮೇಲೆ ಬೀಳುವ ಬಡ್ಡಿಯೂ ಕಡಿಮೆಯಾಗುತ್ತಾ ಹೋಗುತ್ತದೆ. ಇದರ ಫಲಶೃತಿ ರೂ. 1 ಲಕ್ಷಕ್ಕೆ ಶೇ. 14ರ ಬಡ್ಡಿದರದಂತೆ ರೂ. 14,000/- ಬಡ್ಡಿಯನ್ನು ಕಟ್ಟಬೇಕಾಗಿಲ್ಲ. ಬದಲಾಗಿ ಕೇವಲ ರೂ. 6,992/- ಮಾತ್ರ ಪಾವತಿಸಬೇಕಾಗುತ್ತದೆ. ನಿವ್ವಳ ಬಡ್ಡಿದರ ಶೇ.7.27 ಎಂದು ಪರಿಗಣಿಸಬಹುದು.
ಸಾಲ ನೀಡುವಾಗ ಸದಸ್ಯರಿಗೆ ‘ಮರುಪಾವತಿ ಚೀಟಿ’ಯನ್ನು ನೀಡಲಾಗುತ್ತದೆ. ಈ ಮರುಪಾವತಿ ಚೀಟಿಯ ಪ್ರಕಾರ ಅವರು ಪ್ರತೀ ವಾರ ಪಾವತಿಸುವ ಮೊತ್ತ, ಅಸಲು ಪಾವತಿ, ಬಡ್ಡಿ ಪಾವತಿ ಹಾಗೂ ಸಾಲದ ಒಟ್ಟೂ ಅವಧಿಯಲ್ಲಿ ಪಾವತಿಸುವ ನಿವ್ವಳ ಬಡ್ಡಿಯ ಮೊತ್ತ ಎಲ್ಲವನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು ಹಾಗೂ ಪಾರದರ್ಶಕವಾಗಿ ತಮ್ಮ ಸಾಲದ ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ತಾವು ಪ್ರತೀ ವಾರ ಕಟ್ಟುವ ಮೊತ್ತವನ್ನು ಕೊನೆಯ ಕಾಲಂನಲ್ಲಿ ನಮೂದಿಸುವುದರಿಂದ ಎಲ್ಲವೂ ಸ್ಪಷ್ಟವಾಗಿ ಅವರಿಗೆ ಅರ್ಥವಾಗುತ್ತದೆ. ಸದಸ್ಯರಿಗೆ ಇನ್ನೂ ಸುಲಭವಾಗಿ ಅರ್ಥವಾಗುವಂತೆ ಮರುಪಾವತಿ ಚೀಟಿಗಳನ್ನು, ಮಾಸಿಕ ವರದಿಗಳನ್ನು ಇನ್ನಷ್ಟು ಸರಳೀಕರಿಸಿ ಸದಸ್ಯರಿಗೆ ನೀಡಲಾಗುತ್ತಿದೆ. ಓರ್ವ ಸದಸ್ಯ ರೂ. 1 ಲಕ್ಷ ಮೊತ್ತವನ್ನು ಒಂದು ವರ್ಷದ ಅವಧಿಗೆ ತೆಗೆದುಕೊಂಡರೆ ವಾರದ ಕಂತು, ಅಸಲು, ಬಡ್ಡಿ ಲೆಕ್ಕಾಚಾರಗಳನ್ನು ಎಷ್ಟು ಸರಳ ಹಾಗೂ ಪಾರದರ್ಶಕವಾಗಿ ಮರುಪಾವತಿ ಚೀಟಿಯ ಮೂಲಕ ಸದಸ್ಯರು ನಿರ್ವಹಿಸಬಹುದು ಎಂದು ಈ ಮಾದರಿಯ ಮೂಲಕ ತಿಳಿದುಕೊಳ್ಳಬಹುದು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *