ಬದುಕಿಗೆ ಭದ್ರತೆ ನೀಡುವ ‘ಮೈಕ್ರೋ ಬಚತ್’

ಅತೀ ಕಡಿಮೆ ಪ್ರೀಮಿಯಂನೊ0ದಿಗೆ ಹೆಚ್ಚು ವಿಮಾ ರಕ್ಷಣೆಯ ಜೊತೆಗೆ ಖಚಿತ ವಿಮಾ ಮೊತ್ತವನ್ನು ಒದಗಿಸುವ ಭಾರತೀಯ ಜೀವ ವಿಮಾ ನಿಗಮದ ‘ಮೈಕ್ರೋ ಬಚತ್’ ಎಂಬ ಪಾಲಿಸಿಯ ಸೌಲಭ್ಯವನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳ ಸದಸ್ಯರುಗಳ ಬೇಡಿಕೆಯ ಮೇರೆಗೆ ಅವರಿಗೆ ಒದಗಿಸುವ ಕೆಲಸವನ್ನು ಕಳೆದ ಮೂರು ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ.
ಮೈಕ್ರೋ ಬಚತ್ ಪಾಲಿಸಿಯ ವಿಶೇಷತೆ
ಕನಿಷ್ಠ ೧೮ ವರ್ಷಗಳಿಂದ ಗರಿಷ್ಠ 55 ವಯಸ್ಸಿನವರೆಗೆ ಯಾರು ಬೇಕಾದರೂ ಮೈಕ್ರೋ ಬಚತ್ ಪಾಲಿಸಿಯನ್ನು ಪಡೆಯಬಹುದಾಗಿದೆ. ಪಾಲಿಸಿಯ ಅವಧಿ ಹತ್ತರಿಂದ ಹದಿನೈದು ವರ್ಷಗಳಾಗಿರುತ್ತದೆ. ಪಾಲಿಸಿಯ ಕನಿಷ್ಟ ವಿಮಾ ಮೊತ್ತ ರೂ.50 ಸಾವಿರದಿಂದ ಗರಿಷ್ಠ ರೂ.2 ಲಕ್ಷ ಆಗಿರುತ್ತದೆ. ನಾವು ನಿಗದಿಗೊಳಿಸಿದ ವಿಮಾ ಮೊತ್ತಕ್ಕನುಗುಣವಾಗಿ ಪ್ರೀಮಿಯಂ ಮೊತ್ತವನ್ನು ವಾರ್ಷಿಕವಾಗಿ ಪಾವತಿಸಬೇಕಾಗುತ್ತದೆ. ಪಾಲಿಸಿ ಮಾಡಲು ಆಸಕ್ತರಿಗೆ ಅಗತ್ಯವಿದ್ದಲ್ಲಿ ಹಣಕಾಸಿನ ನೆರವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡಲಾಗುತ್ತದೆ.
ಪಾಲಿಸಿಯ ಪ್ರಯೋಜನಗಳೇನು?
ಭಾರತೀಯ ಜೀವ ವಿಮಾ ನಿಗಮದವರೇ ಹೇಳುವಂತೆ, ಟಿ ಪಾಲಿಸಿಯನ್ನು ಸಾಲಕ್ಕೆ ಭದ್ರತೆಯಾಗಿ ಇಡಬಹುದಾಗಿದೆ. ಟಿ ಲ್ಯಾಪ್ಸ್ ಆದ ಪಾಲಿಸಿಯನ್ನು ಎರಡು ವರ್ಷಗಳ ಒಳಗೆ ಪುನರುಜ್ಜೀವನ ಮಾಡುವ ಸೌಲಭ್ಯವಿದೆ. ಟಿ ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ. ಟಿ ವಾರ್ಷಿಕವಾಗಿ ಕಂತು ತುಂಬಿದರೆ ಶೇ.2 ರಿಯಾಯಿತಿ ಇದೆ. ಟಿ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ ಮರಣ ಹೊಂದಿದಲ್ಲಿ ಪೂರ್ತಿ ವಿಮಾ ಮೊತ್ತ ದೊರೆಯುತ್ತದೆ. ಟಿ ಪಾಲಿಸಿಯ ಅವಧಿ ಮುಗಿದ ನಂತರ ಪೂರ್ತಿ ವಿಮಾ ಮೊತ್ತ ಹಾಗೂ ಲಾಯಲ್ಟಿಯೊಂದಿಗೆ ದೊರೆಯುತ್ತದೆ. ಟಿ ಅಪಘಾತ ವಿಮಾ ಸೌಲಭ್ಯವು ಇದರಲ್ಲಿದೆ.
2021-22ರ ಸಾಲಿನಲ್ಲಿ ಹೊಸದಾಗಿ 2,23,545 ಮಂದಿ ಮೈಕ್ರೋಬಚತ್ ಪಾಲಿಸಿಯನ್ನು ಮಾಡಿಸಿದ್ದಾರೆ. 3,54,137 ಪಾಲಿಸಿಗಳನ್ನು ನವೀಕರಿಸಲಾಗಿದೆ.
ಇದುವರೆಗೆ ಒಟ್ಟು 9,16,446 ಮಂದಿ ಮೈಕ್ರೋ ಬಚತ್ ಪಾಲಿಸಿಯಡಿ ನೋಂದಾಯಿಸಿಕೊ0ಡಿದ್ದಾರೆ. ಇವರುಗಳಿಂದ ರೂ.1,114 ಕೋಟಿ ಮೊತ್ತದ ಪ್ರೀಮಿಯಂ ಭಾರತೀಯ ಜೀವ ವಿಮಾ ನಿಗಮಕ್ಕೆ ಪಾವತಿಯಾಗಿದೆ.
ರಿವೈವಲ್ ಕ್ಯಾಂಪೇನ್ ಮೂಲಕ ಬಡ್ಡಿ ರಿಯಾಯಿತಿ
ಪಾಲಿಸಿ ಪಡೆದು ಒಂದು ಪ್ರೀಮಿಯಂ ಅನ್ನು ಕಟ್ಟಿ ನಂತರ ಒಂದೆರಡು ವರ್ಷ ಕಟ್ಟದೆ ಇದ್ದರೆ ಹಿಂದಿನ ವರ್ಷದ ಪ್ರೀಮಿಯಂ ಮೊತ್ತವನ್ನು ಕಟ್ಟುವಾಗ ಅದಕ್ಕೆ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಆದರೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡಿಸಲಾದ ಮೈಕ್ರೋ ಬಚತ್ ಪಾಲಿಸಿಯ ಸದಸ್ಯರಿಗೆ ಭಾರತೀಯ ಜೀವ ವಿಮಾ ಸಂಸ್ಥೆ ಈ ಹಿಂದೆ ಕಟ್ಟಲು ಬಾಕಿ ಇಟ್ಟುಕೊಂಡಿದ್ದ ಪ್ರೀಮಿಯಂ ಅನ್ನು ಬಡ್ಡಿರಹಿತವಾಗಿ ಪಾವತಿಸಲು ಎರಡು ತಿಂಗಳ ಕಾಲ (ಆಗಸ್ಟ್ 23, 2021ರಿಂದ ಅಕ್ಟೋಬರ್ 22, 2021) ವಿಶೇಷ ಅವಕಾಶವನ್ನು ನೀಡಿತ್ತು. ಇದಕ್ಕೆ ರಿವೈವಲ್ ಕ್ಯಾಂಪೇನ್ ಎಂದು ಹೆಸರಿಡಲಾಗಿದೆ.
ಗ್ರಾಮಾಭಿವೃದ್ಧಿ ಯೋಜನೆಯು ‘ರಿವೈವಲ್ ಕ್ಯಾಂಪೇನ್’ ಅನ್ನು ಒಂದು ಅಭಿಯಾನದಂತೆ ಕೈಗೊಂಡಿತ್ತು. ಪಾಲಿಸಿದಾರರ ಮನೆ ಭೇಟಿ ಮಾಡಿ, ಅವರಿಗೆ ಸರಿಯಾದ ಮಾಹಿತಿ ನೀಡಿದುದರ ಪರಿಣಾಮವಾಗಿ 56,838 ಪಾಲಿಸಿದಾರರು ಕಟ್ಟಲು ಬಾಕಿ ಇದ್ದ ಸುಮಾರು
ರೂ.30.26 ಕೋಟಿ ಪ್ರೀಮಿಯಂ ಮೊತ್ತವನ್ನು ಎಲ್‌ಐಸಿಗೆ ಪಾವತಿಸಿ ನವೀಕರಿಸಿದ್ದಾರೆ. ಇದರಿಂದಾಗಿ ಪಾಲಿಸಿದಾರರಿಗೆ ರೂ.72.18 ಲಕ್ಷ ಬಡ್ಡಿ ರಿಯಾಯಿತಿ ದೊರೆತಿರುತ್ತದೆ.
ಮರಣ ಸಾಂತ್ವನ

ಪಾಲಿಸಿದಾರರು ಪ್ರೀಮಿಯಂ ಪಾವತಿಸುತ್ತಿರುವ ದಿನಗಳಲ್ಲಿ ಮರಣ ಹೊಂದಿದರೆ ಅವರಿಗೆ ಪೂರ್ತಿ ವಿಮಾ ಮೊತ್ತ ದೊರೆಯುತ್ತದೆ. ಪಾಲಿಸಿದಾರರ ಮರಣ ವಿವರ, ದಾಖಲಾತಿಗಳನ್ನು ಭಾರತೀಯ ಜೀವ ವಿಮಾ ನಿಗಮಕ್ಕೆ ಸಲ್ಲಿಸಿ ಸಾಂತ್ವನ ಮೊತ್ತವನ್ನು ದೊರಕಿಸಿಕೊಡುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತದೆ. ಈವರೆಗೆ 1,758 ಮಂದಿ ಮೈಕ್ರೋ ಬಚತ್ ಪಾಲಿಸಿದಾರರಿಗೆ ಸುಮಾರು ರೂ. 21 ಕೋಟಿ ಮೊತ್ತವನ್ನು ಮರಣ ಸಾಂತ್ವನವಾಗಿ ಜೀವ ವಿಮಾ ನಿಗಮದವರು ನೀಡಿರುತ್ತಾರೆ.
ವಿಮಾ ಗ್ರಾಮ
ಸೇವಾಪ್ರತಿನಿಧಿ ಪ್ರತಿನಿಧಿಸುವ ವಲಯದಲ್ಲಿ 25 ಮಂದಿ ಪಾಲಿಸಿದಾರರಿದ್ದರೆ ಆ ವಲಯವನ್ನು ಭಾರತೀಯ ಜೀವ ವಿಮಾ ನಿಗಮದಿಂದ ‘ವಿಮಾ ಗ್ರಾಮ’ ಎಂದು ಗುರುತಿಸಲಾಗುತ್ತದೆ. ಆ ಗ್ರಾಮದ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಶಾಲಾ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ದೇವಸ್ಥಾನಗಳಲ್ಲಿ ವಾಟರ್ ಫಿಲ್ಟರ್ ಅಳವಡಿಸಲು, ಶಾಲೆಗಳಿಗೆ ಮೂಲಭೂತ ಅಗತ್ಯಗಳಿಗೆ ಮುಂತಾದ ವ್ಯವಸ್ಥೆಗಳಿಗಾಗಿ ಭಾರತೀಯ ಜೀವ ವಿಮಾ ನಿಗಮದವರು ರೂ.25 ಸಾವಿರ ಮೊತ್ತವನ್ನು ನೀಡುತ್ತಾರೆ. ಇದೀಗ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯದಿಂದ 215 ವಿಮಾ ಗ್ರಾಮಗಳನ್ನು ಗುರುತಿಸಲಾಗಿದೆ.

ಮೈಕ್ರೋ ಬಚತ್ ಪಾಲಿಸಿಯ ಒಂದು ಪ್ರೀಮಿಯಂ ಅನ್ನು ಮಾತ್ರ ಕಟ್ಟಿದ್ದೆ. ಮುಂದಿನ ವರ್ಷ ಕೊರೊನಾದಿಂದಾಗಿ ಪ್ರೀಮಿಯಂ ಕಟ್ಟಲು ಕೈಯಲ್ಲಿ ಹಣವಿರಲಿಲ್ಲ. ಈ ಬಾರಿ ಎರಡು ವರ್ಷದ ಪ್ರೀಮಿಯಂ ಅನ್ನು ಕಟ್ಟುವಾಗ ಎಷ್ಟು ಬಡ್ಡಿ ವಿಧಿಸುತ್ತಾರೋ ಎಂಬ ಚಿಂತೆಯಲ್ಲಿದ್ದೆ. ಆಗ ಯೋಜನೆಯ ಕಾರ್ಯಕರ್ತರು ಬಡ್ಡಿರಹಿತವಾಗಿ ಹಿಂದಿನ ಪ್ರೀಮಿಯಂ ಅನ್ನು ಕಟ್ಟಬಹುದೆಂದು ಮಾಹಿತಿ ನೀಡಿದರು. ಬಡ್ಡಿರಹಿತವಾಗಿ ಹಿಂದಿನ ಪ್ರೀಮಿಯಂ ಅನ್ನು ಪಾವತಿಸಿದೆ. ಇದರಿಂದಾಗಿ ಪಾಲಿಸಿಯನ್ನು ಮುಂದುವರೆಸಲು ಸಾಧ್ಯವಾಯಿತು. – ಟಿ. ಪಾರ್ವತಿ ಭಟ್ಕಳ (ಹೆಸರು ಬದಲಾಯಿಸಲಾಗಿದೆ.)

ಗಂಡನ ದಿನಗೂಲಿಯಿಂದ ನಮ್ಮ ಸಂಸಾರ ಸಾಗುತ್ತಿತ್ತು. ಧರ್ಮಸ್ಥಳ ಸಂಘದ ಮುಖೇನ ಮೈಕ್ರೋ ಬಚತ್ ಮಾಡಿದ್ದರು. ಕೆಲವು ತಿಂಗಳ ಹಿಂದೆ ಗಂಡ ಹೃದಯಾಘಾತದಿಂದ ನಮ್ಮನ್ನಗಲಿದಾಗ ನನಗೆ ಮತ್ತು ಇಬ್ಬರು ಪುಟ್ಟ ಮಕ್ಕಳಿಗೆ ಸಂಸಾರ ಮುನ್ನಡೆಸುವುದು ಹೇಗೆಂದೇ ಗೊತ್ತಾಗಲಿಲ್ಲ. ಮಕ್ಕಳ ಶಾಲಾ ಶುಲ್ಕ ಕಟ್ಟಲು ಕಷ್ಟವಾಯಿತು. ಶಾಲೆ ಬಿಡಿಸುವ ಹಂತದಲ್ಲಿದ್ದೆ. ಅಷ್ಟರಲ್ಲಿ ನನ್ನ ಬ್ಯಾಂಕ್ ಖಾತೆಗೆ ರೂ.2 ಲಕ್ಷ ಭಾರತೀಯ ಜೀವ ವಿಮಾ ನಿಗಮದಿಂದ ಜಮೆಯಾಯಿತು. ಈ ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಅದರ ಬಡ್ಡಿಯಲ್ಲಿ ಮಕ್ಕಳ ವಿದ್ಯಾಭ್ಯಾಸ ಪೂರ್ತಿಗೊಳಿಸಬೇಕೆಂಬುದು ನನ್ನ ಯೋಚನೆ. ಪಾಲಿಸಿಯನ್ನು ಒದಗಿಸಿಕೊಟ್ಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
ಟಿ. ಲಕ್ಷ್ಮಮ್ಮ ಧಾರವಾಡ (ಹೆಸರು ಬದಲಾಯಿಸಲಾಗಿದೆ.)

ಡಾ| ಎಲ್. ಎಚ್. ಮಂಜುನಾಥ್

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *