ಪ್ರಿಯ ಸದಸ್ಯರೆ,
ತಮಗೆಲ್ಲರಿಗೂ ಅನುಕೂಲವಾಗುವಂತೆ ಅನಾರೋಗ್ಯ ಉಂಟಾದಾಗ ಆಸ್ಪತ್ರೆಯ ಚಿಕಿತ್ಸೆ ಪಡೆದುಕೊಳ್ಳಲು ಸಂಪೂರ್ಣ ಸುರಕ್ಷಾ ಎಂಬ ವಿಮಾ ಯೋಜನೆಯು 2003 ರಿಂದ ಜಾರಿಯಲ್ಲಿದೆ. ಈ ವಿಮಾ ಯೋಜನೆಯಡಿ ಹೋದ ವರ್ಷ 9 ಲಕ್ಷ ಸದಸ್ಯರು ನೋಂದಾಯಿಸಿಕೊ0ಡಿದ್ದರು. ಈ ವಿಮಾ ಯೋಜನೆಯಲ್ಲಿ ಪ್ರತಿಯೋರ್ವ ಸದಸ್ಯನಿಗೆ ರೂ. 20,000 ದಂತೆ ಕುಟುಂಬದ 6 ಸದಸ್ಯರಿಗೆ ಒಟ್ಟಾಗಿ ರೂ. 1,20,000 ದವರೆಗೆ ವಿಮಾ ಸೌಲಭ್ಯವು ಲಭ್ಯವಿದ್ದು, ಆಸ್ಪತ್ರೆಯ ಒಳರೋಗಿಯಾಗಿ ಚಿಕಿತ್ಸೆ ಮಾಡಿಕೊಂಡವರಿಗೆ ಈ ಮೊತ್ತವು ದೊರೆಯುತ್ತದೆ. ಇದಕ್ಕೆ ವಿಧಿಸಲಾದ ಪ್ರೀಮಿಯಂ ಮೊತ್ತ ರೂ. 750 ಆಗಿರುತ್ತದೆ.
ಮುಂದಿನ ವರ್ಷ ಅಂದರೆ 2022-23 ಕ್ಕೆ ಈ ವಿಮಾ ಯೋಜನೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ್ದು, ಸದಸ್ಯರಿಗೆ ಅತ್ಯಾಕರ್ಷಕವಾಗುವಂತೆ ರೂಪಿಸಲಾಗಿದೆ.
1 ಈ ವಿಮಾ ಯೋಜನೆಯು 1-4-2022 ರಿಂದ 31-3-2022 ರವರೆಗೆ ಅನಾರೋಗ್ಯದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುವ ನೋಂದಾಯಿತ ಸದಸ್ಯರಿಗೆ ಸೌಲಭ್ಯವನ್ನು ಒದಗಿಸುತ್ತದೆ.
2. ಈ ಯೋಜನೆಯಲ್ಲಿ ಕುಟುಂಬದ ಪ್ರತಿಯೊಬ್ಬ ನೋಂದಾಯಿತ ಸದಸ್ಯನಿಗೂ ತಲಾ ರೂ. 20,000 ದಂತೆ ಗರಿಷ್ಠ ರೂ. 1,20,000 ಸೌಲಭ್ಯವು ಲಭ್ಯವಿರುತ್ತದೆ. ಈ ಮೊತ್ತವನ್ನು ಕುಟುಂಬದ ಯಾರೇ ಒಬ್ಬ ನೋಂದಾಯಿತ ಸದಸ್ಯನಾಗಲಿ ಅಥವಾ ಎಲ್ಲರೂ ಆಗಲಿ ಪಡೆದುಕೊಳ್ಳಬಹುದಾಗಿದೆ.
3. ಕ್ಯಾಶ್ ಲೆಸ್ ಫೆಸಿಲಿಟಿ : ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ನೋಂದಾಯಿತ ಆಸ್ಪತ್ರೆಗೆ ಫಲಾನುಭವಿಯು ಒಳರೋಗಿಯಾಗಿ ಚಿಕಿತ್ಸೆ ಪಡಕೊಂಡರೆ ಅದಕ್ಕೆ ಆಸ್ಪತ್ರೆಯಿಂದ ಒಪ್ಪ್ಪಿಗೆ ಪಡೆದುಕೊಂಡು ಉಚಿತವಾಗಿ ಹಣ ಪಾವತಿಸದೇ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
4. ಪ್ಯಾಕೇಜ್ : ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ ಚಿಕಿತ್ಸೆ ನೀಡಲಾಗುವ ಹೆಚ್ಚಿನ ಚಿಕಿತ್ಸೆಗಳನ್ನು ಪ್ಯಾಕೇಜ್ ಮಾಡಲಾಗಿದೆ. ಅಂದರೆ ನಿರ್ದಿಷ್ಟ ಚಿಕಿತ್ಸೆಗೆ ನಿರ್ದಿಷ್ಟ ಮೊತ್ತವನ್ನು ಆಸ್ಪತ್ರೆಗೆ ಫಲಾನುಭವಿಯ ವಿಮಾ ಮೊತ್ತದಿಂದ ಪಾವತಿಸಲಾಗುವುದು. 2022-23 ರ ಸಾಲಿಗೆ ಎಲ್ಲ ಪ್ಯಾಕೇಜ್‌ಗಳ ಮೊತ್ತವನ್ನು ಶೇಕಡಾ 15ರಷ್ಟು ಹೆಚ್ಚಿಸಲಾಗಿದ್ದು, ಫಲಾನುಭವಿಗಳು ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಯಾವುದೇ ಮೊತ್ತವನ್ನು ಆಸ್ಪತ್ರೆಗೆ ಪಾವತಿಸುವ ಅಗತ್ಯವಿರುವುದಿಲ್ಲ.
5. ಓಪನ್ ಬಿಲ್ಲಿಂಗ್ ಸಿಸ್ಟಂ : ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ಯಾವುದೇ ಪ್ರದೇಶದ ನೋಂದಾಯಿತ ಆಸ್ಪತ್ರೆಗೆ ಫಲಾನುಭವಿಯು ಒಳರೋಗಿಯಾಗಿ ದಾಖಲಾಗಬಹುದು. ಇಂತಹ ಸಂದರ್ಭದಲ್ಲಿ ಫಲಾನುಭವಿಯು ಆಸ್ಪತ್ರೆಯ ಬಿಲ್ಲನ್ನು ಕಟ್ಟಿ ಡಿಸ್ಚಾರ್ಜ್ ಸಮ್ಮರಿ ಮತ್ತು ಬಿಲ್ಲನ್ನು ಕಳುಹಿಸಿಕೊಟ್ಟಲ್ಲಿ ಅವರಿಗೆ ಶೀಘ್ರದಲ್ಲಿಯೇ ಮೊತ್ತದಲ್ಲಿ ಪಾವತಿಸಲಾಗುವುದು.
6. ಹೆರಿಗೆ ಚಿಕಿತ್ಸೆ : ವಿಮಾದಾರರಿಗೆ ನಿಯಮಿತ ರೂಪದಲ್ಲಿ ಹೆರಿಗೆ ಖರ್ಚಿನ ಮೊತ್ತವನ್ನು ಪಾವತಿಸುವ ವ್ಯವಸ್ಥೆಯಿರುತ್ತದೆ.
7. ಉಚಿತ ಓಪಿಡಿ ಸೌಲಭ್ಯ : ಪೂಜ್ಯರು ನಡೆಸುತ್ತಿರುವ ಎಸ್.ಡಿ.ಎಂ. ಆಸ್ಪತ್ರೆ ಉಜಿರೆ ಮತ್ತು ಎಸ್.ಡಿ.ಎಂ. ಮೆಡಿಕಲ್ ಆಸ್ಪತ್ರೆ ಧಾರವಾಡ ಇಲ್ಲಿ ‘ಸಂಪೂರ್ಣ ಸುರಕ್ಷಾ’ ನೋಂದಾಯಿತ ಸದಸ್ಯರಿಗೆ ಉಚಿತ ಓಪಿಡಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಸೌಲಭ್ಯದನ್ವಯ ಡಾಕ್ಟರ್ ಕನ್ಸಲ್ಟೇಶನ್ ಖರ್ಚು, ಓಪಿಡಿಯಲ್ಲಿ ಟೆಸ್ಟಿಂಗ್ ಖರ್ಚುಗಳಿಗೆ ವಿನಾಯಿತಿ ನೀಡಲಾಗಿದೆ. ಎಕ್ಸ್ರೇ, ಸಿಟಿ ಸ್ಕಾö್ಯನ್, ಎಮ್‌ಆರ್‌ಐ ಮುಂತಾದ ಪರೀಕ್ಷೆಗಳಿಗೆ ಈ ಸೌಲಭ್ಯದನ್ವಯ ವಿನಾಯಿತಿ ನೀಡಲಾಗುವುದು.
8. ವಯೋಮಿತಿ : 3 ತಿಂಗಳಿನಿ0ದ 79 ವರ್ಷ ವಯಸ್ಸಿನವರಿಗೆ ಈ ಸೌಲಭ್ಯವನ್ನು ಒದಗಿಸಲಾಗುವುದು.
9. ಪ್ರೀಮಿಯಂ ಮೊತ್ತ : ರೂ. 750/- (ಪ್ರತಿಯೊಬ್ಬರಿಗೆ.)
10. ಪ್ರೀಮಿಯಂ ಪಾವತಿಸಲು ಪ್ರಗತಿನಿಧಿ ಸೌಲಭ್ಯ : 9 ಜನರ ಒಂದು ಕುಟುಂಬಕ್ಕೆ ರೂ. 4,500 ಮೊತ್ತ ಪ್ರೀಮಿಯಂನ್ನು ಪಾವತಿಸಬೇಕಾಗಿದ್ದು, ಅಗತ್ಯಬಿದ್ದಲ್ಲಿ ಇದಕ್ಕೆ ಸಂಘದ ವತಿಯಿಂದ ಪ್ರಗತಿನಿಧಿ ಸೌಲಭ್ಯವನ್ನು ಮಾಡಿಕೊಡಲಾಗುವುದು. ಇದನ್ನು 50 ವಾರದ ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ.
11. ನೋಂದಾವಣೆ : ಸಂಪೂರ್ಣ ಸುರಕ್ಷಾ ವಿಮಾ ಕಾರ್ಯಕ್ರಮದ ನೋಂದಾವಣೆಯನ್ನು ಇದೀಗ ಪ್ರಾರಂಭಿಸಲಾಗಿದ್ದು, ಫೆಬ್ರವರಿ 15 ರೊಳಗಾಗಿ ತಮ್ಮ ಮತ್ತು ತಮ್ಮ ಕುಟುಂಬದವರನ್ನು ನೋಂದಾಯಿಸಬಹುದಾಗಿದೆ.
12. ಸಂಪೂರ್ಣ ಸುರಕ್ಷಾ ಕಾರ್ಡ್ : ನೋಂದಾಯಿತ ಸದಸ್ಯರಿಗೆ ‘ಸಂಪೂರ್ಣ ಸುರಕ್ಷಾ ಕಾರ್ಡ್’ ಅನ್ನು ನೀಡಲಾಗುವುದು.
ಹೀಗೆ ಈ ಬಾರಿಯ ಸಂಪೂರ್ಣ ಸುರಕ್ಷಾ ವಿಮಾ ಕಾರ್ಯಕ್ರಮವು ಆಕರ್ಷಕವಾಗಿದ್ದು, ಇದು ಯೋಜನೆಯ ಸದಸ್ಯರಿಗೆ ಮತ್ತು ಅವರ ಕುಟುಂಬಕ್ಕೆ ವರದಾನವಾಗಲಿದೆ. ಸರ್ವ ಸದಸ್ಯರು ಬಳಕೆ ಮಾಡಿಕೊಳ್ಳುತ್ತಾರೆಂದು ಆಶಿಸಲಾಗಿದೆ.
ಡಾ| ಎಲ್. ಎಚ್. ಮಂಜುನಾಥ್
