ಮಳೆಗಾಲದ ಕೃಷಿ ತಯಾರಿಗೆ ಸಿದ್ಧರಾಗಿ

ತ್ತನೆ ಬೀಜ, ಗೊಬ್ಬರಗಳ ಸಂಗ್ರಹ ಪೂರ್ವ ಸಿದ್ಧತೆ ಹೀಗಿರಲಿಮಳೆಗಾಲದ ಸಿದ್ಧತೆ ಒಂದು ರೀತಿಯಲ್ಲಿ ಯುದ್ಧ ಸಿದ್ಧತೆಯೇ ಸರಿ! ಪ್ರಕೃತಿಯ ‘ಮುನಿಸು’ ‘ರೌದ್ರಾವತಾರ’ ಎದುರಿಸುವುದೆಂದರೆ ಸಣ್ಣ ಮಾತಲ್ಲ ತಾನೆ!? ಹಾಗಾಗಿ ಮಳೆಗಾಲದ ಪೂರ್ವ ಸಿದ್ಧತೆಗೆ ಒತ್ತು ನೀಡುವುದು ಬಹಳ ಮುಖ್ಯ. ಅದರಲ್ಲೂ ‘ಈ ಬಾರಿ ವಿಪರೀತ ಮಳೆಯಾದರೆ ಏನು ಮಾಡಬೇಕು?’ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಆ ಕಲ್ಪನೆಯಲ್ಲೇ ನಮ್ಮ ಸಿದ್ಧತೆ ನಡೆಯಬೇಕಾಗುತ್ತದೆ. ಒಂದು ಸಣ್ಣ ಉಡಾಫೆಯೂ ಇಲ್ಲಿ ಭಾರೀ ಬೆಲೆ ತೆರುವಂತೆ ಮಾಡಬಹುದು. ಉದಾಹರಣೆಗೆ ತೋಟದಲ್ಲಿ ಅಥವಾ ಹೊಲದ ಬದುಗಳಲ್ಲಿ […]

ದಿಟ್ಟತನದಿಂದ ಬದುಕನ್ನು ಎದುರಿಸಿ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಶ್ರೀಕ್ಷೇತ್ರದ ವತಿಯಿಂದ ನಾಲ್ಕು ರೀತಿಯ ದಾನಗಳು ನಡೆಯಬೇಕೆಂದು ಧರ್ಮದೇವತೆಗಳು ಅಪ್ಪಣೆ ಮಾಡಿದ್ದಾರೆ. ಮೊದಲನೆಯದು ಅನ್ನದಾನ. ನಿಮಗೆ ತಿಳಿದಿರುವಂತೆ ಧರ್ಮಸ್ಥಳಕ್ಕೆ ಬಂದಾಗ ಎಲ್ಲರಿಗೂ ಪ್ರಸಾದ ವಿತರಣೆ, ದಾಸೋಹ ನಡೆಯುತ್ತದೆ. ಎರಡನೆಯದಾಗಿ ಔಷಧದಾನ. ಯಾರಿಗಾದರೂ ಅನಾರೋಗ್ಯವಾದರೆ ಅವರಿಗೆ ಬೇಕಾದ ಚಿಕಿತ್ಸೆಗೆ ಸಹಕಾರ ಮಾಡುವುದು. ಮೂರನೆಯದು ವಿದ್ಯಾದಾನ. ವಿದ್ಯೆ ಕಲಿಯುವವರಿಗೆ ಸಹಾಯಹಸ್ತ ಚಾಚುವುದು. ನಾಲ್ಕನೆಯದು ಅಭಯದಾನ. ಅಂದರೆ ಯಾರು ಯಾವುದನ್ನೇ ಕೇಳಲಿ ಅವರಿಗೆ ನೀಡುವುದು ಮತ್ತು ಭಯಪಡಬೇಡಿ ಎಂದು ಧೈರ್ಯ ತುಂಬುವುದು. ಕ್ಷೇತ್ರಕ್ಕೆ ಸಾವಿರಾರು ಮಂದಿ […]