ರೊಟ್ಟಿ ತಯಾರಿಸಿ ಸ್ವಾವಲಂಬಿಯಾದರು

ರೊಟ್ಟಿಗೂ ಉತ್ತರ ಕರ್ನಾಟಕದ ಜನರಿಗೂ ಸಾಂಪ್ರದಾಯಿಕ ನಂಟು. ರೊಟ್ಟಿ ಇಲ್ಲಿನ ಜನರ ನಿತ್ಯದ ಆಹಾರ. ರೊಟ್ಟಿಯಿದ್ದರಷ್ಟೆ ಇವರ ಊಟ ಪರಿಪೂರ್ಣವಾಗುತ್ತದೆ. ಈ ಭಾಗಗಳಲ್ಲಿ ಮುಂಜಾನೆ ಹೆಚ್ಚಿನ ಮನೆಗಳಲ್ಲಿ ಕೈಯಲ್ಲೆ ಬಡಿದು ರೊಟ್ಟಿ ತಯಾರಿಸುವ ಸದ್ದು ಕೇಳಿ ಬರುವುದು ಸರ್ವೇಸಾಮಾನ್ಯ. ಕೈಯಿಂದ ರೊಟ್ಟಿ ತಯಾರಿಗೆ ಹೆಚ್ಚು ಸಮಯ ತಗಲುವುದರಿಂದ ಅನೇಕರು ರೊಟ್ಟಿ ಮಾರಾಟಗಾರರಿಂದ ಖರೀದಿಸುತ್ತಾರೆ. ರೊಟ್ಟಿ ತಯಾರಕರು ಯಂತ್ರಗಳ ಮೊರೆ ಹೋಗುತ್ತಾರೆ. ಸಮಾರಂಭಗಳಲ್ಲಿ, ಹೊಟೇಲ್‍ಗಳಿಗೆ ಪೂರೈಸಲು ಹೆಚ್ಚು ರೊಟ್ಟಿಗಳು ಅಗತ್ಯವಿರುವುದರಿಂದ ರೊಟ್ಟಿ ತಯಾರಿಗೆ ಇತ್ತೀಚಿನ ವರ್ಷಗಳಲ್ಲಿ ಯಾಂತ್ರಿಕತೆಯ ಸ್ಪರ್ಶ […]

ಕೈ ಹಿಡಿದ ಸ್ವ ಉದ್ಯೋಗ

ರಾಣೇಬೆನ್ನೂರು ತಾಲೂಕಿನ ಕಂಚಿಗಾರ್ ಓಣಿಯ ರವಿ ಕುಮಾರ್‍ರವರದ್ದು ಹತ್ತು ಮಂದಿಯೊಂದಿಗಿನ ಕೂಡು ಕುಟುಂಬ. ಮನೆಗೆ ಇವರೇ ಹಿರಿಯ ಮಗ. ಇವರು ಓದಿದ್ದು 8ನೇ ತರಗತಿಯಾದರೂ, ಚಿಕ್ಕಂದಿನಲ್ಲೇ ಜೀವನದ ಬಗ್ಗೆ ಕಲಿತ ಪಾಠ ಬೆಟ್ಟದಷ್ಟು.ರವಿ ಅವರ ತಂದೆ ಹಲವು ವರ್ಷಗಳಿಂದ ಮನೆಯಲ್ಲೇ ಬೇಕರಿ ತಿಂಡಿ ತಯಾರಿಸುತ್ತಿದ್ದರು. ಪ್ರಾರಂಭದಲ್ಲಿ ಇವರು ಮಾಡುತ್ತಿದ್ದ ತಿಂಡಿ ಸಾಕಷ್ಟು ಹೆಸರು ಪಡೆದಿತ್ತು. 200 ಮಂದಿಗೆ ಇವರು ಅನ್ನದಾತರಾಗಿದ್ದರು. ಆದರೆ ಮುಂದೊಂದು ದಿನ ಉದ್ಯೋಗದಲ್ಲಿ ನಷ್ಟ ಉಂಟಾಗಿ ತಿಂಡಿ ತಯಾರಿ ಕಾಯಕವನ್ನು ಕೈ ಬಿಡುವ ಸಂದರ್ಭ […]

ಆನ್‍ಲೈನ್ ಲೋನ್
ಬಗ್ಗೆ ಎಚ್ಚರ!

ಕಿನ್ನಿಗೋಳಿಯ ಯುವಕನೊಬ್ಬ ಇತ್ತೀಚೆಗೆ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ತನಿಖೆಯ ಬೆನ್ನು ಹಿಡಿದ ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಮೊಬೈಲ್ ಆ್ಯಪ್ ಲೋನ್ ಮೂಲಕ ಲೋನ್ ಪಡೆದು ಅವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿಗಳು ದೊರೆತವು. ಈ ಘಟನೆ ಮರೆಮಾಚುವ ಮುನ್ನವೇ ಸುಶಾಂತ್ ಎಂಬ ಯುವಕ ಮಂಗಳೂರಿನಲ್ಲಿ ನೇಣಿಗೆ ಶರಣಾದ. ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಯಿತು. ಹಲವಾರು ಸಂಶಯಗಳೊಂದಿಗೆ ತನಿಖೆಯ ಬೆನ್ನು ಹತ್ತಿದ ಖಾಕಿಗಳಿಗೆ ಸುಶಾಂತ್ ಆ್ಯಪ್‍ವೊಂದರ ಮೂಲಕ ರೂ.30 ಸಾವಿರ ಆನ್‍ಲೈನ್ ಸಾಲ ಪಡೆದಿದ್ದ. ಪಡೆದ […]

ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ನೀರು ಬದುಕಿನ ಜೀವಾಳ. ಅನ್ಯಗ್ರಹಗಳ ಅನ್ವೇಷಣೆಗೆ ಹೊರಡುವ ಮಾನವ ಮೊದಲು ಹುಡುಕುವುದು ನೀರನ್ನೇ. ಅನಾದಿ ಕಾಲದಿಂದ ನೀರಿನ ಪ್ರಾಮುಖ್ಯತೆ ಕುರಿತಂತೆ ಎಲ್ಲ ಧರ್ಮಗಳಲ್ಲಿಯೂ ವಿವರಿಸಲಾಗಿದೆ. ಪ್ರಾಕೃತಿಕವಾಗಿ ದೊರೆಯುವ ನೀರು ಒಂದು ಕಾಲದಲ್ಲಿ ಯಥೇಚ್ಛವಾಗಿ ಇದ್ದರೂ ಈ ಶತಮಾನದಲ್ಲಿ ನೀರಿನ ಕೊರತೆ ಹೆಚ್ಚಾಗಿ ಕಾಣುತ್ತಿದೆ. ಉಚಿತವಾಗಿ ದೊರೆಯುತ್ತಿದ್ದ ನೀರಿಗೆ ಜನರು ಹಣ ಪಾವತಿಸತೊಡಗಿ ದಶಕಗಳೇ ಕಳೆದಿವೆ. ಶಹರಗಳಲ್ಲಿ ಬಡವರು ಒಂದು ಬಕೆಟ್ ನೀರಿಗಾಗಿ ರೂ.10ರವರೆಗೆ ಪಾವತಿಸುತ್ತಾರೆಂದರೆ ಅದನ್ನು ನಂಬಲೇಬೇಕು.ಕರ್ನಾಟಕ ರಾಜ್ಯ […]

ಅರ್ಧ ‘ಹಾಲಿನ ಚಹಾ’

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ನಾನು ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಂದು ದಿನ ಇಳಿ ವಯಸ್ಸಿನ ವೃದ್ಧರು ಬಹಳ ಆತಂಕದಿಂದ ನನ್ನಲ್ಲಿ ಬಂದು ‘ನನ್ನ ಖಾತೆಗೆ ಇನ್ನೂ ಪಿಂಚಣಿ ಬಿದ್ದಿಲ್ಲ, ಏನಾದರೂ ಮಾಡಿ ಪಿಂಚಣಿ ಕೊಟ್ಟು ನನ್ನನ್ನು ಉಳಿಸಿ’ ಎಂದು ಉದ್ವೇಗದಿಂದ ಕೇಳಿದರು. ನಡುಗುತ್ತಿರುವ ಅವರ ಕೈಯನ್ನು ಹಿಡಿದು ಸಾಂತ್ವನ ಹೇಳುತ್ತಾ, ಪಕ್ಕದಲ್ಲಿರುವ ಚೇರ್‍ನಲ್ಲಿ ಅವರನ್ನು ಕುಳ್ಳರಿಸಿ ಅವರ ಪಕ್ಕದಲ್ಲಿಯೇ ನಾನು ಕುಳಿತುಕೊಂಡು, ಯಾಕೆ ಏನಾಯಿತು ಎಂದು […]

ಅತ್ತೆ – ಸೊಸೆ ಬಾಂಧವ್ಯ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಭಾರತೀಯರಿಗೆ `ಮದುವೆ’ ಎಂಬುದೊಂದು ದೊಡ್ಡ ಸಂಭ್ರಮದ ವಿಚಾರ. ಮನೆಯಲ್ಲಿ ಮದುವೆ ಇದೆ ಅಂದ್ರೆ ಒಂದೆರಡು ತಿಂಗಳ ಮೊದಲೇ ತಯಾರಿ ಆರಂಭವಾಗುತ್ತದೆ. ಕಲ್ಯಾಣ ಮಂಟಪವನ್ನು ಕಾಯ್ದಿರಿಸುವುದರಿಂದ ಹಿಡಿದು ಮಂಟಪದ ಅಲಂಕಾರ, ಅಡುಗೆಯವರು, ವಾದ್ಯದವರು, ಆಮಂತ್ರಣ ಪತ್ರಿಕೆ ತಯಾರಿ ಹೀಗೆ ಮನೆ ಯಜಮಾನನಿಗೆ ಪುರುಸೊತ್ತಿಲ್ಲದಂತೆ ತಯಾರಿ ಕಾರ್ಯ ನಡೆಯಬೇಕು. ಹೆಂಗಸರಂತೂ ವಧು – ವರರ ಬಟ್ಟೆ, ಚಿನ್ನ, ಉಡುಗೊರೆಗಳ ಖರೀದಿ, ಆಹ್ವಾನಿಸಬೇಕಾದ ಅತಿಥಿಗಳ ಪಟ್ಟಿ, ಜೊತೆಗೆ ಮೂರು ಹೊತ್ತಿನ ಊಟ – ತಿಂಡಿಗಳ ಮೆನುವನ್ನು […]

ಬಸವರಾಜ ಬೊಮ್ಮಾಯಿಯವರಿಂದ ಫಲಾನುಭವಿಗಳಿಗೆ ಇ – ಶ್ರಮ್ ಕಾರ್ಡ್ ವಿತರಣೆ

ಕೇಂದ್ರ ಸರಕಾರವು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಜಾರಿಗೊಳಿಸಿರುವ ಇ – ಶ್ರಮ್ ಕಾರ್ಡ್ ಅನ್ನು ಫಲಾನುಭವಿಗಳಿಗೆ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಕಾರ್ಯಕ್ರಮದ ಮೂಲಕ ಉಚಿತವಾಗಿ ವಿತರಿಸಲಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಇ – ಶ್ರಮ್ ಕಾರ್ಡ್ ಅನ್ನು ಶಿಗ್ಗಾವಿಯಲ್ಲಿ ಫಲಾನುಭವಿಗಳಿಗೆ ವಿತರಿಸಿ ಶುಭಹಾರೈಸಿದರು.

ಏ.27 : ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಹೆಗ್ಗಡೆಯವರ ನೇತೃತ್ವದಲ್ಲಿ ಏಪ್ರಿಲ್ 27ರಂದು ಸಂಜೆ 6.50ಕ್ಕೆ ಗೋಧೋಳಿ ಲಗ್ನದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ.ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಳ ಸೂತ್ರ, ಹೂವಿನ ಹಾರ ನೀಡಲಾಗುವುದು. ಎರಡನೇ ವಿವಾಹಕ್ಕೆ ಅವಕಾಶವಿರುವುದಿಲ್ಲ. ಮದುವೆಯ ಎಲ್ಲಾ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದಲೇ ಭರಿಸಲಾಗುವುದು.ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಾಧಿಕಾರಿಯವರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಆರಂಭಿಸಿದ […]

ಅರ್ಥ ಚಾರಿತ್ಯ ಮತ್ತು ಕ್ರೆಡಿಟ್ ರೇಟಿಂಗ್ ಮಾನದಂಡಗಳು

ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್. ಕ್ರೆಡಿಟ್ ರೇಟಿಂಗ್ ಮಾನದಂಡಗಳು ಇಂದಿನ ಆರ್ಥಿಕ ವ್ಯವಹಾರದ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಾರರ ಕ್ಷಮತೆಯನ್ನು ನಿರ್ಧರಿಸಲು ಒಂದು ಮಾನದಂಡವನ್ನು ರೂಪಿಸಲು ಕ್ರಮ ಕೈಗೊಂಡಿದ್ದು, ಅದರ ಮುಂದಿನ ಫಲಶ್ರುತಿಯೇ 1988ನೇ ಅಸವಿಯಲ್ಲಿ ಕ್ರೆಡಿಟ್ ರೇಟಿಂಗ್ ವ್ಯವಸ್ಥೆಯನ್ನು ದೇಶದಲ್ಲಿ CRISILAನ ಮೂಲಕ ಪರಿಚಯಿಸಲಾಯಿತು. ಹಾಗೆಯೇ ಸಿಬಿಲ್ (CIBIL) 2000ನೇ ಇಸವಿಯಲ್ಲಿ ಸ್ಥಾಪನೆಗೊಂಡಿತು. ಪ್ರಸ್ತುತ ಸಿಬಿಲ್ ಮತ್ತು ಕ್ರಿಸಿಲ್ ಸಂಸ್ಥೆಗಳು ವ್ಯಕ್ತಿಗತ ಸಾಲ ಮರುಪಾವತಿ ದಕ್ಷತೆಯ ಮಾನದಂಡವನ್ನು ನೀಡುವ ಪ್ರಮುಖ […]

ಬದುಕು ಸಿಹಿಯಾಗಿಸಿದ ಸಿಹಿತಿಂಡಿ ತಯಾರಿ

ರಾಣೇಬೆನ್ನೂರು ತಾಲೂಕಿನ ಸಾಯಿ ನಗರದ ರೂಪಾ ಹೆಚ್. ಶ್ರೀಹರಿಯವರದ್ದು ಇಬ್ಬರು ಮಕ್ಕಳೊಂದಿಗಿನ ಪುಟ್ಟ ಕುಟುಂಬ. ಪತಿ ಸರಕಾರಿ ಉದ್ಯೋಗಿ. ತನ್ನ ಗಂಡನಿಗೆ ತಾನು ಕೈಲಾದ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ರೂಪಾರವರು ಹನ್ನೊಂದು ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಪ್ರಾರ್ಥನಾ’ ಸ್ವಸಹಾಯ ಸಂಘದ ಸದಸ್ಯರಾದರು.ಯೋಜನೆಗೆ ಸೇರಿದ ನಂತರ ಯೋಜನೆಯಿಂದ ಮಾಹಿತಿ ಪಡೆದು ಐದು ವರ್ಷಗಳ ಕಾಲ ಟೈಲರಿಂಗ್ ವೃತ್ತಿಯನ್ನು ನಡೆಸಿದರು. ನಂತರ ಎದುರಾದ ಅನಾರೋಗ್ಯ ಸಮಸ್ಯೆಯಿಂದ ತನ್ನ ಟೈಲರಿಂಗ್ ವೃತ್ತಿಯನ್ನು ಬಿಟ್ಟು ಬಿಡುತ್ತಾರೆ. ಮತ್ತೆ ಯೋಜನೆಯ […]

ವಿಶೇಷಚೇತನರ ಪಾಲಿನ ಭಾಗ್ಯದ ಬಾಗಿಲು ಸೇವಾ ಅಂಧರ ಸಂಸ್ಥೆ

ಪ್ರತಿ ವರ್ಷ ರಾಜ್ಯಾದಾದ್ಯಂತ ಸುತ್ತಾಡಿ ಬೇರೆ ಬೇರೆ ಕಡೆಗಳಲ್ಲಿರುವ ಕಿವುಡ, ಮೂಕ, ಅಂಧ ಮಕ್ಕಳನ್ನು ಗುರುತಿಸಿ ಅವರನ್ನು ಕರೆತಂದು ಅವರಿಗೆ ವಸತಿ ವ್ಯವಸ್ಥೆಯೊಂದಿಗೆ ವಿದ್ಯಾಭ್ಯಾಸವನ್ನು ಕಲ್ಪಿಸಿ, ಉದ್ಯೋಗವಕಾಶವನ್ನು ಒದಗಿಸಿಕೊಡುವ ಸಂಸ್ಥೆಯೊಂದು ರಾಣೇಬೆನ್ನೂರು ತಾಲೂಕಿನ ಮಾರುತಿ ನಗರದಲ್ಲಿದೆ.ಸೇವೆಯ ಆರಂಭದ ಕಥೆ‘ಸೇವಾ ಅಂಧರ ಸಂಸ್ಥೆ’ಯ ಸ್ಥಾಪಕರಾದ ಎಚ್.ಆರ್. ಶಿವಕುಮಾರ್ ಹುಟ್ಟಿದ್ದು ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ. ಸಿದ್ಧಗಂಗಾ ಮಠದಲ್ಲಿ ಆಶ್ರಯ ಪಡೆದ ಅವರು ಬಾಲ್ಯದಲ್ಲೇ ಮುಂದೆ ತಾನು ಕೂಡಾ ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಏನಾದರೊಂದು ಕೆಲಸ ಮಾಡಬೇಕೆಂದು ನಿರ್ಧರಿಸಿದರು. ಶಾಲಾ ದಿನಗಳಲ್ಲೆ […]

ವೈನ್‍ಶಾಪ್ ಗಿರಾಕಿ ಶೇಂಗಾ ಮಾರಾಟಗಾರನಾದ ಕತೆ!

‘ನನ್ನ ಮನೆಯಿಂದ ಸ್ವಲ್ಪ ದೂರದಲ್ಲೆ ವೈನ್‍ಶಾಪ್ ಇದೆ. ನನಗಾಗಿಯೇ ಇಲ್ಲಿ ವೈನ್‍ಶಾಪ್ ತೆರೆದಿದ್ದಾರೇನೋ ಎನ್ನುವಷ್ಟು ಖುಷಿಯಿಂದ ಪ್ರತಿ ದಿನ ವೈನ್‍ಶಾಪ್‍ನ ಬಾಗಿಲು ತೆರೆಯುವ ಹೊತ್ತಿಗೆ ಅಲ್ಲಿಗೆ ಹಾಜರಾಗುತ್ತಿದ್ದೆ. ಮದ್ಯ ಸೇವಿಸಲು ಕುಳಿತಾಗ ದಿನನಿತ್ಯ ಇನ್ನೂರರಿಂದ ಐನೂರು ರೂಪಾಯಿಷ್ಟು ಕುಡಿದೇ ಅಭ್ಯಾಸ! ಮದ್ಯ ಸೇವಿಸುವಾಗ ತಿನ್ನಲು ಹುರಿದ ಶೇಂಗಾ ಬೀಜವೂ ಜೊತೆಗೆ ಬೇಕೇ ಬೇಕು. ಬೀಜಗಳನ್ನು ತಿನ್ನುತ್ತಾ ನನ್ನನ್ನು ನಾನು ಮರೆತು ಬಿಡುತ್ತಿದ್ದೆ. ಅಮಲೇರಿದ ನಂತರ ಯಾವ ಹೊತ್ತಿಗಾದರೂ ಸರಿ ಮನೆ ಸೇರುತ್ತಿದ್ದೆ. ಕೆಲವೊಮ್ಮೆ ಹಾಡಹಗಲೇ ರಸ್ತೆಯ ಬದಿಯಲ್ಲಿ […]