ಆರೋಗ್ಯವೇ ಭಾಗ್ಯ
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯ ವೆಚ್ಚಗಳು ಬಹಳಷ್ಟು ಹೆಚ್ಚಾಗುತ್ತಿವೆ. ಅನಾರೋಗ್ಯ ಪೀಡಿತರಾಗಿ ಅಥವಾ ಅಪಘಾತಕ್ಕೊಳಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ಗುಣಮುಖರಾದರೂ ಆಸ್ಪತ್ರೆಯ ಬಿಲ್ಲುಗಳು ನಮ್ಮನ್ನು ಮತ್ತೊಮ್ಮೆ ಬಡವರನ್ನಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ತಂತ್ರಜ್ಞಾನಗಳು ಹೆಚ್ಚಾಗಿರುವುದರಿಂದ ಗಂಭೀರ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯುತ್ತದೆ. ಆದರೆ ಈ ಚಿಕಿತ್ಸೆ ವೆಚ್ಚಗಳನ್ನು ಭರಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಒಬ್ಬ ರೋಗಿಯ ಆಸ್ಪತ್ರೆಯ ಚಿಕಿತ್ಸಾ ಎಸ್ಟಿಮೇಟ್ ರೂ. 55 ಲಕ್ಷ ಮೊತ್ತ ಆದ ಬಗ್ಗೆ ವರದಿಯನ್ನು […]
ಆಡದ ಮಾತನ್ನು ಸೇವಕನಾಗಿ ದುಡಿಸಿಕೊಳ್ಳಿ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಶ್ರೀಕ್ಷೇತ್ರದ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಯಕರ್ತರ ಪಾಲಿನ ‘ಅಮ್ಮ’ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಪ್ರತಿವರ್ಷ ಹೊಸ ವರ್ಷದ ಆರಂಭದ ದಿನ ಯೋಜನೆಯ ಕೇಂದ್ರ ಕಚೇರಿಯ ಕಾರ್ಯಕರ್ತರಿಗೆ ಮಾರ್ಗದರ್ಶನವನ್ನು ನೀಡುತ್ತಾರೆ. ಅಮ್ಮನ ವಾತ್ಸಲ್ಯದ ಮಾತುಗಳನ್ನು ‘ನಿರಂತರ’ದ ಓದುಗರಿಗೆ ಒದಗಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.ಬೀಡು (ಶ್ರೀ ಹೆಗ್ಗಡೆಯವರ ನಿವಾಸ) ಕಟ್ಟುವಾಗ ವಾಸ್ತು ನೋಡುವವರು ಒಬ್ಬರು ಬಂದಿದ್ದರು. ಅವರು ಹೇಳಿದರು, ‘ಮನೆಯ ವಾಸ್ತುವನ್ನು ಯಾರು ಬೇಕಾದರೂ ನೋಡಬಹುದು. ಆದರೆ ಧರ್ಮಚಾವಡಿಯ ವಾಸ್ತು ನೋಡಲು ನುರಿತ […]
ಬಡತನ ನೀಗಿಸಿದ ಚಕ್ಕುಲಿ ವ್ಯಾಪಾರ
ಚೆಲುವಮ್ಮ ಮೂಲತಃ ತಮಿಳುನಾಡಿನವರು. ಬಡತನದಲ್ಲೆ ಬೆಳೆದವರು. ತಂದೆ – ತಾಯಿ ಕೂಲಿ ಕೆಲಸಕ್ಕೆ ಹೋಗಿ ಬಂದ ಆದಾಯದಲ್ಲಿ ಜೀವನ ನಡೆಸುತ್ತಿದ್ದರು. ಮನೆಮಂದಿಯ ಹೊಟ್ಟೆ ತುಂಬಿಸುವುದೇ ಸವಾಲಾಗಿದ್ದರಿಂದ ಚೆಲುವಮ್ಮನೂ ಶಾಲೆಗೆ ಹೋಗದೆ ಮನೆಯ ಕೆಲಸಗಳನ್ನು ನೋಡಿಕೊಂಡಿರುತ್ತಿದ್ದರು.ವಿವಾಹದ ನಂತರ ಕೆಲವು ವರ್ಷಗಳ ಹಿಂದೆ ಚೆಲುವಮ್ಮ ದಂಪತಿಗಳು ತಿ. ನರಸೀಪುರಕ್ಕೆ ವಲಸೆ ಬಂದರು. ಗಂಡ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಬಡತನ ಇವರ ಬೆನ್ನುಬಿಡಲಿಲ್ಲ. ಕೂಲಿ ಕೆಲಸದಿಂದ ಸಿಗುತ್ತಿದ್ದ ಆದಾಯ ಕುಟುಂಬ ನಿರ್ವಹಣೆಗೆ ಸಾಲದಾಯಿತು. ತಾನು ಯಾವುದಾದರೂ ಸ್ವಉದ್ಯೋಗ ಮಾಡಿ ಆದಾಯ […]
ಉತ್ತರಾಯಣ ಪುಣ್ಯ ಕಾಲ ಅಂದರೆ ಜನವರಿ 07 ರಿಂದ 13ರವರೆಗೆ ನಡೆಯುತ್ತಿರುವ ಸ್ವಚ್ಛತಾ ಕಾರ್ಯಕ್ರಮದಡಿ ರಾಜ್ಯದಾದ್ಯಂತ 10,543 ಶ್ರದ್ಧಾ ಕೇಂದ್ರಗಳು ಸ್ವಚ್ಛಗೊಳ್ಳುತ್ತಿವೆ
ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಂದ ಸಂಕೇಶ್ವರ ತಾಲೂಕಿನ ಹೊಸ ಯೋಜನಾ ಕಛೇರಿ ಉದ್ಘಾಟನೆ
ಓದುಗರ ಮನೆ – ಮನಗಳಿಗೆ ‘ನಿರಂತರ’
‘ನಿರಂತರ’ದ BIG IMPACT
ಹಣತೆಯಿಂದ ಹಣತೆಯ ಹಚ್ಚುತಾ…
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಜಗತ್ತಿನಲ್ಲಿನಲ್ಲಿರುವ ಎಲ್ಲ ಚರಾಚರ ವಸ್ತುಗಳು, ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಹೊಂದುತ್ತಲೇ ಇರುತ್ತವೆ. ಅದೇ ರೀತಿ ಮನುಷ್ಯನ ಅಂತಸ್ತು ಮತ್ತು ಮನಸ್ಥಿತಿಯು ಸಹಿತ ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತಾ ಇರುತ್ತದೆ. ಸ್ವಾತಂತ್ರö್ಯ ಸಿಕ್ಕ ನಂತರ ಸುಮಾರು ೩೦ ವರ್ಷಗಳವರೆಗೂ ದೇಶದಲ್ಲಿ ಸಾಕಷ್ಟು ಬಡತನ ಇತ್ತು. ಜನರಿಗೆ ಮೂಲ ಅಗತ್ಯಗಳಾದ ಅನ್ನ, ವಸ್ತç, ವಸತಿ ಇವುಗಳು ಸಿಕ್ಕುವುದೇ ಕಷ್ಟವಾಗಿತ್ತು. ಅಂದಿನ ಕಾಲದ ಬಡತನವೆಂದರೆ ಮೂರು ಹೊತ್ತಿನ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ.ಎಂಬತ್ತರ ದಶಕದ ನಂತರ […]
ವಿನಯ ಸಂಪನ್ನತೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಜಗತ್ತಿನಲ್ಲಿ ಅನೇಕ ರೀತಿಯ ಸಂಪತ್ತುಗಳನ್ನು ಹೊಂದಿದವರಿರುತ್ತಾರೆ. ಕೆಲವರು ಗುಣ ಸಂಪನ್ನರಾದರೆ, ಕೆಲವರು ಧನ ಸಂಪನ್ನರು, ಜ್ಞಾನ ಸಂಪನ್ನರು, ಕಲಾ ಸಂಪನ್ನರು, ರೂಪ ಸಂಪನ್ನರು, ವಿದ್ಯಾ ಸಂಪನ್ನರು. ಈ ಎಲ್ಲಾ ಸಂಪತ್ತುಗಳಿದ್ದಾಗಲೇ ಸಮಾಜಕ್ಕೆ ಶೋಭೆ. ಆದರೆ ವಿದ್ಯೆ, ರೂಪ, ಗುಣ, ಧನ, ಕಲೆ, ಜ್ಞಾನ ಎಲ್ಲಾ ಇದ್ದು ವಿನಯವಂತರಾಗಿಲ್ಲದಿದ್ದರೆ, ಅಂಥವರೊAದಿಗೆ ವ್ಯವಹರಿಸುವುದು ಕಷ್ಟ. ಧನಿಕನಿದ್ದು ಅಹಂಕಾರಿಯಾದರೆ, ಸಹಾಯ ಯಾಚಿಸಲು ಆತನ ಬಳಿ ಹೋಗಲು ಎಲ್ಲರೂ ಹಿಂದೇಟು ಹಾಕುತ್ತಾರೆ. ಜ್ಞಾನಿ, ವಿದ್ವಾಂಸ ವಿದ್ಯಾವಂತ ಅನ್ನಿಸಿಕೊಂಡವನಲ್ಲಿ […]
ಕಂತು ಬಾಕಿಗೆ ಗುಡ್ ಬೈ ಹೇಳೋಣ
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ನಮ್ಮ ಸದಸ್ಯ ಬಂಧುಗಳಲ್ಲಿ ಒಂದು ಉತ್ತಮ ಆರ್ಥಿಕ ಶಿಸ್ತನ್ನು ಮೂಡಿಸಿ ತನ್ಮೂಲಕ ಅವರ ಆರ್ಥಿಕ ಸಬಲೀಕರಣವನ್ನು ಸಾಧಿಸುವುದು ನಮ್ಮ ಯೋಜನೆಯ ಪ್ರಮುಖ ಧ್ಯೇಯೋದ್ದೇಶಗಲ್ಲೊಂದಾಗಿದೆ. ಸಮಾನ ಮನಸ್ಕರನ್ನು ಒಗ್ಗೂಡಿಸಿ ಸಂಘ ರಚಿಸಿ ಅನೇಕ ಹಂತದ ತರಬೇತಿಗಳ ಮೂಲಕ ಒಂದು ಉತ್ತಮವಾದ ಆರ್ಥಿಕ ಶಿಸ್ತು, ಸಂಘ ಬದ್ಧತೆ ಹಾಗೂ ಕೆಲವು ಜೀವನ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಇಂತಹ ಶಿಸ್ತುಬದ್ಧ ಸದಸ್ಯರನ್ನೊಳಗೊಂಡ ಗುಂಪುಗಳನ್ನು ಅರ್ಹತಾನುಸಾರವಾಗಿ ಬ್ಯಾಂಕ್ನೊAದಿಗೆ ಆರ್ಥಿಕ […]
ನಿರಾಕುಲತೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಸುಖ ಅಂದರೇನು? ಒಂದು ರೀತಿಯಲ್ಲಿ ನಿರಾಕುಲತೆಯ ಹೆಸರೇ ಸುಖ. ಎಲ್ಲಿ ಆಕುಲತೆ, ವಿಕಲ್ಪಗಳಿರುತ್ತವೆಯೋ ಅಲ್ಲಿ ಸುಖವಿಲ್ಲ. ಬೆಳಗ್ಗಿನ ಉಪಾಹಾರ ಸೇವಿಸಬೇಕಾದರೆ ಇದನ್ನು ಯಾರು ಮಾಡಿದ್ದು! ಏನೇನು ಹಾಕಿರಬಹುದು? ಶುಚಿಯಾಗಿ ಮಾಡಿದ್ದಾರೋ, ಇಲ್ಲವೋ ಅಂತ ಯೋಚನೆಗಳು ಶುರುವಾದರೆ ತಿಂಡಿಯಲ್ಲಿ ಮನಸ್ಸು ನಿಲ್ಲುವುದಿಲ್ಲ. ಅದಕ್ಕೆ ಯೋಗಿಗಳು ಮನೆ, ಮಕ್ಕಳ ಗೊಡವೆ ಬಿಟ್ಟು ಆ ಮಟ್ಟಿನ ಆಕುಲತೆಯಿಂದ ದೂರ ಆದರು. ಕೆಲವರಿಗೆ ತಮ್ಮ ಮನೆ ಬಿಟ್ಟು ದೂರ ಹೋದರೆ ಆಕುಲತೆ ಜಾಸ್ತಿ. ತಿಂಡಿ ಸರಿಯಾಗಿ ಸೇರುವುದಿಲ್ಲ, […]
ಭ್ರಷ್ಟಾಚಾರ ವಿರೋಧಿ ನಡೆ ನಮ್ಮೆಲ್ಲರ ಶಿಷ್ಟಾಚಾರವಾಗಲಿ
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ಪ್ರತಿ ವರ್ಷ ಡಿಸೆಂಬರ್ ೦೯ ರಂದು “ಅಂತರಾಷ್ಟಿçÃಯ ಭ್ರಷ್ಟಾಚಾರ ವಿರೋಧಿ ದಿನ”ವನ್ನಾಗಿ ವಿಶ್ವಸಂಸ್ಥೆಯ ನಿರ್ದೇಶನದಂತೆ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಒಂದು ದೇಶದಲ್ಲಿ ಭ್ರಷ್ಟಾಚಾರವು ಯಾವ ಮಟ್ಟದಲ್ಲಿ ಬೇರೂರಿದೆ ಎನ್ನುವುದು ಆ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಟ್ರಾನ್ಸ÷್ಫರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆಯು ವಿಶ್ವದ ದೇಶಗಳಲ್ಲಿರುವ ಭ್ರಷ್ಟಾಚಾರದ ಮಟ್ಟವನ್ನು ಸೂಚ್ಯಂಕಗಳ ಮೂಲಕ ತಿಳಿಸುವ ಅಧಿಕೃತ ಸಂಸ್ಥೆಯಾಗಿದ್ದು, ಪ್ರತಿವರ್ಷ ‘ಭ್ರಷ್ಟಾಚಾರ ಗ್ರಹಿಕೆ’ ಸೂಚ್ಯಂಕದ ಪಟ್ಟಿಯನ್ನು ನೀಡುತ್ತಿದೆ. […]
ಕ್ರೆಡಿಟ್ ಕಾರ್ಡ್ ನ ಸುರಕ್ಷಿತ ಬಳಕೆ ಹೇಗೆ?
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ನಾಗರಿಕ ಸಮಾಜದಲ್ಲಿ ಕಾಲದಿಂದ ಕಾಲಕ್ಕೆ ಹಣ ಚಲಾಯಿಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಾಡಿನಲ್ಲಿದ್ದ ಮಾನವ, ತನ್ನ ವಸಾಹತುಗಳನ್ನು ನಿರ್ಮಿಸಿಕೊಂಡ ಮೊದಲ ದಿನಗಳಲ್ಲಿ ವಸ್ತುಗಳನ್ನು ಬದಲಾಯಿಸಿಕೊಳ್ಳುವ ಪದ್ಧತಿ ಜಾರಿಯಲ್ಲಿತ್ತು. ನಂತರ ಚರ್ಮದ ನಾಣ್ಯ, ಕಲ್ಲಿನ ನಾಣ್ಯ, ಬೆಳ್ಳಿ, ಚಿನ್ನದ ನಾಣ್ಯಗಳು ಆಯಾ ದೇಶ, ಪ್ರದೇಶಗಳ ಅರ್ಥ ವ್ಯವಸ್ಥೆಯ ಸಂಕೇತವಾಗಿ ರೂಪುಗೊಂಡವು. ಚಿನ್ನ, ಬೆಳ್ಳಿಯ ಬೆಲೆ ಗಗನಕ್ಕೇರಿದ ನಂತರ ಹಿತ್ತಾಳೆ, ಅಲ್ಯೂಮಿನಿಯಂ ಮತ್ತು ಕಬ್ಬಿಣದ ನಾಣ್ಯಗಳು ಹೊರಬಂದುವು. ಜಗತ್ತಿನಲ್ಲಿ ಬರೆಯುವ ಕಾಗದದ […]
ಬೀದರ್ ನಲ್ಲಿ ನಡೆದ ಸ್ವ-ಸಹಾಯ ಸಂಘಗಳ ಸಮಾವೇಶ ಹಾಗೂ ಸಮುದಾಯ ಕಾರ್ಯಕ್ರಮದ ಸೌಲಭ್ಯ ವಿತರಣೆ ಸಮಾರಂಭದಲ್ಲಿ ಪೂಜ್ಯ ಹೆಗ್ಗಡೆಯವರು
ಅಮೆರಿಕದ ವೇದಿಕ್ ವೆಲ್ನೆಸ್ ವಿವಿಯಿಂದ ಪೂಜ್ಯ ಹೆಗ್ಗಡೆಯವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಶ್ರೀ ಹೆಗ್ಗಡೆ ದಂಪತಿಗಳಿಂದ ನಿರಂತರ ಪತ್ರಿಕೆಯ ವೆಬ್ಸೈಟ್ ಅನಾವರಣ
‘ಹುಡುಕಾಟ ಕೃತಿ’ಯನ್ನು ಬಿಡುಗಡೆಗೊಳಿಸಿದ ಪೂಜ್ಯ ಹೆಗ್ಗಡೆ ದಂಪತಿಗಳು
ಇಂದಿನ ಮಕ್ಕಳೆ ಮುಂದಿನ ಭಾರತ
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ರಾಯರು ಮೂರು – ನಾಲ್ಕು ವರ್ಷಗಳ ಬಳಿಕ ದೂರದ ಊರಿನಲ್ಲಿ ನೆಲೆಸಿದ್ದ ತನ್ನ ಎರಡನೆಯ ಮಗನನ್ನು ನೋಡಲು ಹೊರಟಿದ್ದರು. ಮಗನಿಗಿಂತಲೂ ಮೊಮ್ಮಗ ಆಯುರ್ನನ್ನು ನೋಡುವ ತವಕ ಎಲ್ಲಿಲ್ಲದಷ್ಟಿತ್ತು. 4 ವರ್ಷಗಳ ಹಿಂದೆ ನೋಡಿದ್ದಾಗ ಕೇವಲ ಮೂರು ವರ್ಷದ ಮಗುವಾಗಿದ್ದ ಆಯುರ್ ಈಗ ಎಷ್ಟು ತುಂಟನಾಗಿರಬಹುದೆಂದೆಲ್ಲಾ ಊಹಿಸುತ್ತಿದ್ದರು. ತನ್ನ ಅಂಗೈಯ ಎರಡರಷ್ಟು ಗಾತ್ರದ ದೊಡ್ಡ ಚಾಕಲೇಟನ್ನು ಆಯುರ್ಗೆ ಕೊಡಬೇಕೆಂದು ಹತ್ತಾರು ಅಂಗಡಿಗಳಲ್ಲಿ ಹುಡುಕಿ […]
ಹಬ್ಬಗಳ ಆಚರಣೆಯಲ್ಲಿ ಪರಿಸರ ಜಾಗೃತಿ ಇರಲಿ
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಭಾರತ ಹಬ್ಬಗಳ ದೇಶ. ಮಳೆಗಾಲದಲ್ಲಿ ನಾಗರಪಂಚಮಿಯಂದು ನಮ್ಮ ಹಬ್ಬಗಳ ಸರಮಾಲೆ ಆರಂಭವಾಗುತ್ತದೆ. ಇದು ಮುಗಿಯುವುದು ನಮ್ಮೂರ ದೇವಸ್ಥಾನದ ಜಾತ್ರೋತ್ಸವದಲ್ಲಿ. ಇದರ ನಡುವೆಯೇ ಕುಟುಂಬಗಳಲ್ಲಿ ನಡೆಯುವ ಮದುವೆ, ಮುಂಜಿ, ಸೀಮಂತ ಇವೆಲ್ಲವೂ ನಮಗೆ ಹಬ್ಬದ ದಿನಗಳೇ ಆಗಿವೆ. ಹಬ್ಬವೆಂದರೆ ನೆಂಟರು, ಇಷ್ಟರು, ಊರಿನವರು ಸೇರುತ್ತಾರೆ. ಗೌಜಿ ಗಮ್ಮತ್ತು ಇರಲೇಬೇಕು. ನಮ್ಮ ದೇಶದ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯವಿದೆ. ನವರಾತ್ರಿಯಂದು ಬಣ್ಣದ ವೇಷ ಹಾಕಿ ಮೆರವಣಿಗೆ ಮಾಡಿ, ಊರೆಲ್ಲ ನರ್ತಿಸಿ, […]
ಗ್ರಾಮಾಭಿವೃದ್ಧಿ ಯೋಜನೆ ಎಂಬ ಕಲ್ಪವೃಕ್ಷ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳ ಬಗ್ಗೆ ಯೋಚಿಸಿದರೆ ಅದೊಂದು ‘ವಿಶ್ವರೂಪ ದರ್ಶನ’ವಾದಂತೆ ಭಾಸವಾಗುತ್ತದೆ. ದುರ್ಗೆಯ ಕೈಗಳಲ್ಲಿರುವ ವೈವಿಧ್ಯಮಯ ಆಯುಧಗಳಂತೆ ಕಾಲ ಕಾಲಕ್ಕೆ ಸಮಾಜದ ನಾನಾ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹೊಸ ಯೋಚನೆ, ಚಿಂತನೆಗಳೊಂದಿಗೆ ಹೊಸ ಹೊಸ ಕಾರ್ಯಕ್ರಮಗಳು ಯೋಜನೆಯ ಮೂಲಕ ಮೂಡಿ ಬಂದಿರುವುದನ್ನು ನಾವು ನೋಡಬಹುದು. ಜನರಲ್ಲಿ ಉಳಿತಾಯದ ಪ್ರಜ್ಞೆಯನ್ನು ಮೂಡಿಸುವುದಕ್ಕಾಗಿ ವಾರದಲ್ಲಿ ರೂ.10ರಂತೆ ಉಳಿತಾಯದ ಉದ್ದೇಶವನ್ನಿಟ್ಟು ಆರಂಭವಾದ ಸಂಘಗಳು ಮುಂದೆ ‘ಪ್ರಗತಿಬಂಧು’ ಎಂದು ಕರೆಸಿಕೊಂಡವು. ಉಳಿತಾಯದೊಂದಿಗೆ ಶ್ರಮ ವಿನಿಮಯವೂ ನಡೆಯಿತು. ಈ […]