ಭ್ರಷ್ಟಾಚಾರ ವಿರೋಧಿ ನಡೆ ನಮ್ಮೆಲ್ಲರ ಶಿಷ್ಟಾಚಾರವಾಗಲಿ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)


ಪ್ರತಿ ವರ್ಷ ಡಿಸೆಂಬರ್ ೦೯ ರಂದು “ಅಂತರಾಷ್ಟಿçÃಯ ಭ್ರಷ್ಟಾಚಾರ ವಿರೋಧಿ ದಿನ”ವನ್ನಾಗಿ ವಿಶ್ವಸಂಸ್ಥೆಯ ನಿರ್ದೇಶನದಂತೆ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಒಂದು ದೇಶದಲ್ಲಿ ಭ್ರಷ್ಟಾಚಾರವು ಯಾವ ಮಟ್ಟದಲ್ಲಿ ಬೇರೂರಿದೆ ಎನ್ನುವುದು ಆ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಟ್ರಾನ್ಸ÷್ಫರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯು ವಿಶ್ವದ ದೇಶಗಳಲ್ಲಿರುವ ಭ್ರಷ್ಟಾಚಾರದ ಮಟ್ಟವನ್ನು ಸೂಚ್ಯಂಕಗಳ ಮೂಲಕ ತಿಳಿಸುವ ಅಧಿಕೃತ ಸಂಸ್ಥೆಯಾಗಿದ್ದು, ಪ್ರತಿವರ್ಷ ‘ಭ್ರಷ್ಟಾಚಾರ ಗ್ರಹಿಕೆ’ ಸೂಚ್ಯಂಕದ ಪಟ್ಟಿಯನ್ನು ನೀಡುತ್ತಿದೆ. ಈ ಸೂಚ್ಯಂಕದ ಮೂಲಕ ಆಯಾ ದೇಶಗಳಲ್ಲಿ ಯಾವ ಮಟ್ಟದಲ್ಲಿ ಭ್ರಷ್ಟಾಚಾರ ಇದೆ ಎಂದು ತಿಳಿಯುತ್ತದೆ. ಈ ಪಟ್ಟಿಯನ್ನು ಗಮನಿಸಿದಾಗ ಅತ್ಯುತ್ತಮ ಅಭಿವೃದ್ಧಿಯಲ್ಲಿರುವ ದೇಶಗಳು ಅತ್ಯುತ್ತಮ ರ‍್ಯಾಂಕ್‌ನ್ನು ಹೊಂದಿರುತ್ತವೆ. ಉದಾ: ನ್ಯೂಜಿಲ್ಯಾಂಡ್ ಪ್ರಥಮ ಸ್ಥಾನ, ಸಿಂಗಾಪುರ ಮೂರನೇ ಸ್ಥಾನದಲ್ಲಿದ್ದು, ಕೆನಡಾ ೧೧ ನೇ ಸ್ಥಾನದಲ್ಲಿರುತ್ತದೆ. ಹಾಗೆಯೇ ತೀವ್ರ ಅಭಿವೃದ್ಧಿ ಕುಂಠಿತ ರಾಷ್ಟçಗಳು ಕೊನೆಯ ಸ್ಥಾನದಲ್ಲಿವೆ. ಉದಾ: ಸಿರಿಯಾ, ದಕ್ಷಿಣ ಸೂಡಾ, ಸೋಮಾಲಿಯಾ ದೇಶಗಳು ಕ್ರಮವಾಗಿ ಕೊನೆಯ ಮೂರು ಸ್ಥಾನವನ್ನು ಪಡೆದಿವೆ. ಈ ಸೂಚ್ಯಂಕವು ಆ ದೇಶಗಳ ಕಾನೂನು ವ್ಯವಸ್ಥೆ, ಸುರಕ್ಷತೆ ಹಾಗೂ ಅಭಿವೃದ್ಧಿಯ ಪ್ರತೀಕಗಳನ್ನು ಸೂಚಿಸುವುದರೊಂದಿಗೆ ಆ ದೇಶಕ್ಕಿರುವ ವಿಶ್ವಮಾನ್ಯತೆಯನ್ನು ಪ್ರತಿಬಿಂಬಿಸುತ್ತದೆ.
ನಮ್ಮ ದೇಶ ಭಾರತ ಕೂಡ ಈ ಸೂಚ್ಯಂಕ ಪಟ್ಟಿಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ರ‍್ಯಾಂಕಿAಗ್‌ನ್ನು ಪಡೆಯುತ್ತಾ ಭ್ರಷ್ಟಾಚಾರವನ್ನು ಕ್ಷಿಪ್ರಗತಿಯಲ್ಲಿ ನಿರ್ಮೂಲನೆ ಮಾಡುತ್ತಿದೆ. ೨೦೧೨ ರಲ್ಲಿ ೯೪ನೇ ರ‍್ಯಾಂಕಿAಗ್‌ನಲ್ಲಿದ್ದ ನಮ್ಮ ದೇಶವು ೨೦೨೦ಕ್ಕೆ ೮೬ನೇ ರ‍್ಯಾಂಕಿAಗ್ ಪಡೆದು ಬಹಳಷ್ಟು ಸಾಧನೆ ಆಗಿರುತ್ತದೆ. ನಮ್ಮ ದೇಶದ ನಾಗರೀಕರಲ್ಲಿರುವ ಪ್ರಜ್ಞಾವಂತಿಕೆ, ಆಡಳಿತದಲ್ಲಿ ಪಾರದರ್ಶಕತೆಗಾಗಿ ಅತ್ಯುತ್ತಮ ತಂತ್ರಜ್ಞಾನದ ಅಳವಡಿಕೆ, ಉತ್ತಮವಾದ ಕಾನೂನು ವ್ಯವಸ್ಥೆ, ಶಿಕ್ಷಣಕ್ಕೆ ಪ್ರಾಮುಖ್ಯತೆ, ಮುಖ್ಯವಾಗಿ ಡಿಜಿಟಲೀಕರಣದ ಎಲ್ಲಾ ಮಜಲುಗಳ ಮಹತ್ತರ ಬೆಳವಣಿಗೆಗಳು ನಮ್ಮ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದರಲ್ಲಿ ಅತ್ಯುನ್ನತ ಕೊಡುಗೆಗಳನ್ನು ನೀಡಿದೆ. ಹಿಂದೆ ಸರ್ಕಾರದ ಸವಲತ್ತುಗಳು ಕೊನೆಯ ಹಂತದ ಫಲಾನುಭವಿಗೆ ತಲುಪುವಾಗ ಗರಿಷ್ಠ ಮಟ್ಟದ ಸೋರಿಕೆಯಾಗಿ ಕನಿಷ್ಠ ಉಳಿಕೆಯ ಫಲ ಮಾತ್ರ ಸಿಗುತ್ತಿತ್ತು. ಆದರೆ ಈಗಿನ Direct Benefit Transfer (ಫಲಾನುಭವಿಗೆ ನೇರ ವರ್ಗಾವಣೆ) ವ್ಯವಸ್ಥೆಯ ಮೂಲಕ ಸರ್ಕಾರದ ಯೋಜನೆಯ ಫಲಗಳು ಯಾವುದೇ ಸೋರಿಕೆ ಇಲ್ಲದೇ ಅಂತಿಮ ಫಲಾನುಭವಿಗೆ ಪೂರ್ಣ ಪ್ರಮಾಣದಲ್ಲಿ ಸಿಗುತ್ತದೆ. ಇ- Government ಹಾಗೂ ಇ-Governance ನ ಪಕ್ವ ಸಮನ್ವಯತೆಯೊಂದಿಗೆ ನಮ್ಮ ದೇಶದಲ್ಲಿ ಇಂದು ಪಾರದರ್ಶಕತೆಯ ಆಡಳಿತ ವ್ಯವಸ್ಥೆಯನ್ನು ಹೊಂದುವ ಹಾದಿಯಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ದೇಶ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಇನ್ನು ಅತ್ಯುನ್ನತ ರ‍್ಯಾಂಕಿAಗ್ ಪಡೆಯುವ ಎಲ್ಲಾ ಲಕ್ಷಣಗಳು ಈಗಿನಿಂದಲೇ ಗೋಚರವಾಗುತ್ತಿದೆ.
ಪರಮ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಮೂರು ದಶಕಗಳ ಹಿಂದೆಯೇ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸರ್ಕಾರದ ಅನೇಕ ಯೋಜನೆಗಳನ್ನು ಜನ ಸಾಮಾನ್ಯರಿಗೆ ನೇರವಾಗಿ ಒದಗಿಸುವ ವ್ಯವಸ್ಥೆಗೆ ಚಾಲನೆ ನೀಡಿದರು. ಅವರು ಗಮನಿಸಿದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಅತ್ಯುತ್ತಮ ಯೋಜನೆಗಳನ್ನು ಜನಸಾಮಾನ್ಯರ ಅಭಿವೃದ್ಧಿಗಾಗಿ ಯೋಜಿಸಿ ಪ್ರಾರಂಭಿಸಿದ್ದರೂ ಕೂಡ ಅವುಗಳನ್ನು ಹೇಗೆ ಪಡೆದುಕೊಳ್ಳುವುದು ಎಂದು ಜನ ಸಾಮಾನ್ಯರು ತಿಳಿದುಕೊಳ್ಳದೇ ಅವುಗಳ ಯೋಜಿತ ವಿನಿಯೋಗದಿಂದ ವಂಚಿತರಾಗಿಯೇ ಉಳಿಯುತ್ತಾರೆ. ಇದನ್ನರಿತ ಪೂಜ್ಯರು ದಶಕಗಳ ಹಿಂದೆಯೇ ಸರ್ಕಾರದ ಯೋಜನೆಗಳನ್ನು ನೇರವಾಗಿ ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ಗ್ರಾಮಾಭಿವೃದ್ಧಿ ಯೋಜನೆಯನ್ನು ಒಂದು ಪಾರದರ್ಶಕ ಸೇತುವೆಯಾನ್ನಾಗಿ ಸಮಾಜಕ್ಕೆ ಅರ್ಪಿಸಿದರು. ಯೋಜನೆಯ ಮೂಲಕ ಸರ್ಕಾರದ ಅನೇಕ ಸೌಲಭ್ಯಗಳ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಜನತೆಗೆ ಅರಿವು ಮೂಡಿಸುವುದರೊಂದಿಗೆ ಅವುಗಳನ್ನು ಹೇಗೆ ಪಡೆದುಕೊಳ್ಳಬೇಕೆನ್ನುವುದನ್ನೂ ತಿಳಿಸಲಾಗುತ್ತಿದ್ದು, ಸೌಲಭ್ಯಗಳನ್ನು ಪಡೆಯಲು ಸಲ್ಲಿಸಬೇಕಾದ ಅರ್ಜಿಗಳನ್ನು ಜನ ಸಾಮಾನ್ಯರಿಗೆ ಸುಲಭವಾಗಿ ಸಿಗುವಂತಹ ವ್ಯವಸ್ಥೆಗಳನ್ನು ಯೋಜನೆಯ ಕಚೇರಿಗಳಲ್ಲಿ ಮಾಡಲಾಗಿತ್ತು. ಆರ್ಥಿಕ ಸೇರ್ಪಡೆ ವಿಚಾರದಲ್ಲಿಯೂ ಸುಮಾರು ೧೫ ಲಕ್ಷ ಸದಸ್ಯರಿಗೆ ‘ಜನ್‌ಧನ್’ ಖಾತೆಗಳನ್ನು ತೆರೆಯುವುದರ ಮೂಲಕ ಅನೇಕ ಸರ್ಕಾರಿ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ಸಿಗುವಂತೆ ಅನುವು ಮಾಡಿಕೊಟ್ಟಿತು. ಸ್ವಾವಲಂಬನ್ ಪಿಂಚಣಿ ಸೌಲಭ್ಯ(NPS), ಅಟಲ್ ಪಿಂಚಣಿ ಸೌಲಭ್ಯ(APY), PMSBY, PMJJBY, ಆಯುಷ್ಮಾನ್ ಭಾರತ್ ಯೋಜನೆ ಹೀಗೆ ಅನೇಕ ಸವಲತ್ತುಗಳನ್ನು ಯೋಜನೆಯು ತನ್ನ ಪಾಲುದಾರ ಕುಟುಂಬಗಳಿಗೆ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದೆ. ಮಾತೃಶ್ರೀ ಅಮ್ಮನವರ ಪರಿಕಲ್ಪನೆಯ ಕಾರ್ಯನಿರ್ವಹಿಸುತ್ತಿರುವ ‘ಜ್ಞಾನವಿಕಾಸ ಕಾರ್ಯಕ್ರಮ’ವು ವಿಶೇಷವಾಗಿ ಗ್ರಾಮೀಣ ಜನತೆಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ.
ಹೀಗೆ ಸಾಮಾನ್ಯ ಜನರಲ್ಲಿ ಸರ್ಕಾರದ ಸೌಲಭ್ಯಗಳ ಮಹತ್ವ ಹಾಗೂ ಅವುಗಳ ಸದ್ವಿನಿಯೋಗದ ಬಗ್ಗೆ ಅರಿವನ್ನು ಮೂಡಿಸುತ್ತ ಒಂದು ಪಾರದರ್ಶಕ ವ್ಯವಸ್ಥೆಯಲ್ಲಿ ಅವುಗಳನ್ನು ತಲುಪಿಸುವ ಪ್ರಯತ್ನವನ್ನು ಮಾಡುತ್ತಾ ತನ್ಮೂಲಕ ನಮ್ಮ ಯೋಜನೆ ರಾಜ್ಯದಲ್ಲಿ ಭ್ರಷ್ಟಾಚಾರದ ನಿರ್ಮೂಲನೆಗಾಗಿ ತನ್ನದೇ ಆದ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *