ಕಂತು ಬಾಕಿಗೆ ಗುಡ್ ಬೈ ಹೇಳೋಣ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)

ನಮ್ಮ ಸದಸ್ಯ ಬಂಧುಗಳಲ್ಲಿ ಒಂದು ಉತ್ತಮ ಆರ್ಥಿಕ ಶಿಸ್ತನ್ನು ಮೂಡಿಸಿ ತನ್ಮೂಲಕ ಅವರ ಆರ್ಥಿಕ ಸಬಲೀಕರಣವನ್ನು ಸಾಧಿಸುವುದು ನಮ್ಮ ಯೋಜನೆಯ ಪ್ರಮುಖ ಧ್ಯೇಯೋದ್ದೇಶಗಲ್ಲೊಂದಾಗಿದೆ. ಸಮಾನ ಮನಸ್ಕರನ್ನು ಒಗ್ಗೂಡಿಸಿ ಸಂಘ ರಚಿಸಿ ಅನೇಕ ಹಂತದ ತರಬೇತಿಗಳ ಮೂಲಕ ಒಂದು ಉತ್ತಮವಾದ ಆರ್ಥಿಕ ಶಿಸ್ತು, ಸಂಘ ಬದ್ಧತೆ ಹಾಗೂ ಕೆಲವು ಜೀವನ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಇಂತಹ ಶಿಸ್ತುಬದ್ಧ ಸದಸ್ಯರನ್ನೊಳಗೊಂಡ ಗುಂಪುಗಳನ್ನು ಅರ್ಹತಾನುಸಾರವಾಗಿ ಬ್ಯಾಂಕ್‌ನೊAದಿಗೆ ಆರ್ಥಿಕ ಸೇರ್ಪಡೆಗೆ ಒಳಪಡಿಸಲಾಗುವುದು. ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್‌ಗಳೊAದಿಗೆ ಬಿ.ಸಿ ಒಪ್ಪಂದವನ್ನು ಮಾಡಿಕೊಂಡು ತನ್ನ ಅತ್ಯುತ್ತಮ ವ್ಯವಸ್ಥೆಯಲ್ಲಿ ಸಂಘದ ಸದಸ್ಯರ ಆರ್ಥಿಕ ಸಬಲೀಕರಣಕ್ಕಾಗಿ ಅವರಿಗೆ ಸಾಲಗಳನ್ನು ನೀಡುವುದು ಹಾಗೂ ಅಂತಹ ಸಾಲಗಳನ್ನು ಸದಸ್ಯರು ಸದ್ಬಳಕೆ ಮಾಡಿಕೊಂಡು ಅತ್ಯಂತ ಶಿಸ್ತಿನಿಂದ ಮರುಪಾವತಿಯನ್ನು ಮಾಡುವುದರೊಂದಿಗೆ ತಮ್ಮ ವೈಯಕ್ತಿಕ ಜೀವನದಲ್ಲೂ ಪ್ರಗತಿಯನ್ನು ಕಾಣುತ್ತಿರುವುದು ದಶಕಗಳಿಂದ ನಡೆದು ಬಂದ ಶಿಸ್ತುಬದ್ಧ ಸಂಸ್ಕೃತಿಯಾಗಿದೆ.
ಕಳೆದ ಕೋವಿಡ್ ಒಂದನೇ ಅಲೆಯಿಂದಾಗಿ ದೇಶಾದ್ಯಂತ ಆರ್ಥಿಕ ಸಂಕಷ್ಟ ಉಂಟಾದಾಗ ನಮ್ಮ ಸದಸ್ಯರ ಆರ್ಥಿಕ ಸಂಕಷ್ಟವನ್ನು ಪರಿಗಣಿಸಿ ಒಂದು ವಿಶಿಷ್ಟವಾದ ಕಂತು ವಿರಾಮದ ವ್ಯವಸ್ಥೆಯನ್ನು ಮಾಡಿಕೊಡಲಾಯಿತು. ೫ ವಿಶಿಷ್ಟ ರೀತಿಯ ಕಂತು ವಿರಾಮಗಳು ಆಯಾ ಸದಸ್ಯನ ಆರ್ಥಿಕ ಸಂಕಷ್ಟಗಳಿಗೆ ಅನುಗುಣವಾಗಿ ಹಾಗೂ ಅಗತ್ಯಾನುಸಾರವಾಗಿ ನೀಡಲಾಯಿತು. ನಮ್ಮ ಲಕ್ಷಾಂತರ ಸದಸ್ಯರು ಈ ಸೌಲಭ್ಯವನ್ನು ಪಡೆದುಕೊಳ್ಳುವಂತಾಯಿತು. ಇದೇ ಸಂದರ್ಭದಲ್ಲಿ ಬ್ಯಾಂಕ್‌ಗಳು ಕೂಡ ತನ್ನ ಗ್ರಾಹಕರಿಗೆ ಕಂತು ವಿರಾಮವನ್ನು ಖಃI ನಿರ್ದೇಶನದಂತೆ ನೀಡಿದ್ದವು. ಕೋವಿಡ್ ಒಂದನೇ ಅಲೆಯ ಸಮಸ್ಯೆ ಹೆಚ್ಚು ಕಡಿಮೆ ಅಂತ್ಯಗೊಳ್ಳುತ್ತಾ ಆರ್ಥಿಕ ಚಟುವಟಿಕೆಗಳು ಪುನರ್ ಪ್ರಾರಂಭಗೊAಡು ಆದಾಯ ಜನರ ಕೈ ಸೇರುತ್ತಿದ್ದಂತೆಯೇ ಮುಂದಿನ ನಾಲ್ಕೆöÊದು ತಿಂಗಳುಗಳಲ್ಲೇ ಕೋವಿಡ್ ಎರಡನೇ ಅಲೆಯು ಕೂಡ ಬಂದಬ್ಬರಿಸಿತು. ಸಾಮಾನ್ಯ ಆರ್ಥಿಕ ಸಂಕಷ್ಟ ಎದುರಾಗಿದ್ದ ಆ ಸಂದರ್ಭದಲ್ಲಿ ಖಃI ಎರಡನೆ ಬಾರಿ ಕಂತು ವಿರಾಮ ನೀಡಲು ಬ್ಯಾಂಕ್‌ಗಳಿಗೆ ಸಾರ್ವತ್ರಿಕವಾಗಿ ನಿರ್ದೇಶನ ನೀಡಲಿಲ್ಲ ಹಾಗೆಯೇ ಬ್ಯಾಂಕ್‌ಗಳೂ ಕೂಡ ತನ್ನ ಗ್ರಾಹಕರಿಗೆ ಮೊದಲಿನಂತೆ ಸಾರ್ವತ್ರಿಕವಾಗಿ ಕಂತು ವಿರಾಮದ ಸೌಲಭ್ಯವನ್ನು ಒದಗಿಸಲಿಲ್ಲ. ಆದರೆ ನಮ್ಮ ಸದಸ್ಯರ ಸಂಕಷ್ಟದಲ್ಲಿ ಸದಾ ಭಾಗಿಯಾಗುವ ನಮ್ಮ ಯೋಜನೆಯು ಸಾರ್ವತ್ರಿಕವಾಗಿ ಅಗತ್ಯವಿರುವ ಸದಸ್ಯರಿಗೆ ಇನ್ನೊಂದು ಕಂತುವಿರಾಮ ಪಡೆದುಕೊಳ್ಳುವ ಅವಕಾಶವನ್ನು ನೀಡಿತ್ತು. ಅತ್ಯಂತ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕೆಲವು ಸದಸ್ಯರು ಕಳೆದ ತಿಂಗಳು ಅಂದರೆ ಡಿಸೆಂಬರ್ ೨೦೨೧ ರ ವರೆಗೂ ಈ ಅವಕಾಶವನ್ನು ಬಳಸಿಕೊಂಡರು.
ಹೀಗೆ ಎರಡೆರಡು ಬಾರಿ ಕಂತು ವಿರಾಮದ ವರದಾನವನ್ನು ನಮ್ಮ ಸದಸ್ಯರಿಗೆ ನೀಡಿದ್ದರೂ ಕೂಡ ಅಗತ್ಯವಿರುವ ಅರ್ಹ ಸದಸ್ಯರಿಗೆ ಸಾಲ ನೀಡುವುದರಲ್ಲಿ ಎಂದಿಗೂ ಒಮ್ಮೆಯೂ ಹಿಂದೇಟು ಹಾಕಲಿಲ್ಲ. ಬಹುಷಃ ಒಂದು ಅನಿಶ್ಚಿತತೆ ಹಾಗೂ ಗೊಂದಲದ ಸಂದರ್ಭದಲ್ಲಿ ಸದಸ್ಯರಿಗೆ ಸಾಲದ ಮರುಪಾವತಿಯಲ್ಲಿ ಬಹಳಷ್ಟು ವಿರಾಮಗಳ ಸೌಲಭ್ಯಗಳನ್ನು ನೀಡುತ್ತಾ, ಇನ್ನೊಂದು ಕಡೆ ಸದಸ್ಯರ ಅಗತ್ಯ ಮತ್ತು ಅರ್ಹತಾನುಸಾರವಾಗಿ ನಿರಂತರವಾಗಿ ಯಾವ ಹಿಂಜರಿಕೆಯೂ ಇಲ್ಲದೇ ತನ್ನ ಸದಸ್ಯರಿಗೆ ಸಾಲ ನೀಡುವ ನಮ್ಮ ಯೋಜನೆಯು ದೇಶದ ಆರ್ಥಿಕ ಕ್ಷೇತ್ರದಲ್ಲಿ ಒಂದು ಅಪರೂಪದ ಸಂಸ್ಥೆ ಎಂದರೂ ಅತಿಶಯೋಕ್ತಿ ಆಗಲಾರದು. ಇಷ್ಟೇ ಏಕೆ, ನಮ್ಮ ಸದಸ್ಯರ ಇನ್ನೂ ಹೆಚ್ಚಿನ ಆರ್ಥಿಕ ಪುನಶ್ಚೇತನಕ್ಕಾಗಿ ದೊಡ್ಡ ಮೊತ್ತದ ಲಾಭಾಂಶವನ್ನು ಸದಸ್ಯರು ಹಂಚಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಯಿತು. ಈ ಎಲ್ಲಾ ಸೌಲಭ್ಯಗಳಿಂದಾಗಿ ನಮ್ಮ ಸದಸ್ಯರು ಆರ್ಥಿಕ ಸಂಕಷ್ಟದಿAದ ಪಾರಾಗಿರುವುದು ಅಲ್ಲದೇ ಇನ್ನೂ ಹೆಚ್ಚಿನ ಅನುಕೂಲಗಳಾಯಿತು. ಪ್ರಸ್ತುತ ಆರ್ಥಿಕ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದ್ದು, ಸದಸ್ಯರು ಹಿಂದಿನAತೆ ಉತ್ತಮ ಆರ್ಥಿಕ ಶಿಸ್ತು ಹಾಗೂ ಜವಾಬ್ದಾರಿಯೊಂದಿಗೆ ಸಾಲದ ಮರುಪಾವತಿಯನ್ನು ಮಾಡುತ್ತಿದ್ದಾರೆ ಹಾಗೂ ತಮ್ಮ ಸಂಘದ ಉತ್ತಮ ಗ್ರೇಡ್ ಅನ್ನು ಹಾಗೆಯೇ ಉಳಿಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಉತ್ತಮ ವ್ಯವಸ್ಥೆಗಳಿದ್ದರೂ ಕೂಡ ಕೆಲವು ಸದಸ್ಯರು ತಮ್ಮ ಉದಾಸೀನತೆಯಿಂದಲೋ ಅಥವಾ ಇತರೆ ನ್ಯೂನತೆಯಿಂದಲೋ ಕಂತುಬಾಕಿಯನ್ನು ಉಳಿಸಿಕೊಳ್ಳುತ್ತಾ ತಾವು ಪಾಲಿಸಿಕೊಂಡು ಬಂದ ಶಿಸ್ತನ್ನು ಮರೆಯುತ್ತಿದ್ದಾರೆ. ಇವರು ಆತ್ಮಾವಲೋಕನ ಮಾಡಿಕೊಂಡು ತಮ್ಮ ಕಂತು ಬಾಕಿಯನ್ನು ಕಟ್ಟಿ ತಮ್ಮ ಹಾಗೂ ಸಂಘದ ಉತ್ತಮ ವ್ಯವಹಾರದ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕಾಗಿರುತ್ತದೆ.
ಇಷ್ಟೆಲ್ಲಾ ಸವಲತ್ತುಗಳನ್ನು ಬಳಸಿಕೊಂಡ ನಂತರವೂ ಇನ್ನೂ ಕಂತುಬಾಕಿ ಇಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಹೇಗೆ ಎಲ್ಲಾ ಉಳಿದ ಸದಸ್ಯರು ಹಿಂದಿನAತೆಯೇ ತಮ್ಮ ಆದಾಯದಲ್ಲಿ ಕಂತುಗಳನ್ನು ಕಟ್ಟಿಕೊಂಡು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಲ ಸೌಲಭ್ಯಗಳನ್ನು ಪಡೆದು ಪ್ರಗತಿ ಹೊಂದುವ ಯೋಜಿತಗಳನ್ನು ಇಟ್ಟುಕೊಂಡಿರುತ್ತಾರೆಯೋ ಹಾಗೆಯೇ ಆರ್ಥಿಕ ಶಿಸ್ತನ್ನು ಮರೆತ ಸದಸ್ಯರು ಇತರ ಸದಸ್ಯರ ಗುಣಗಳನ್ನು ಪಾಲಿಸಬೇಕಾಗಿರುತ್ತದೆ. ಇದು ಅವರ ಮುಂದಿನ ಜೀವನಕ್ಕೆ ಶ್ರೇಯೋಕರ ಇಲ್ಲದಿದ್ದಲ್ಲಿ ಓರ್ವ ಸದಸ್ಯನ ಬೇಜವಾಬ್ದಾರಿಯಿಂದಾಗಿ ಇಡೀ ಗುಂಪಿನ ಗ್ರೇಡ್ ತಳಮಟ್ಟಕ್ಕೆ ಬಂದು ಉಳಿದ ಎಲ್ಲಾ ಸದಸ್ಯರ ಸುಂದರ ಭವಿಷ್ಯಕ್ಕೆ ಮಾರವಾಗಲಿರುವುದರಲ್ಲಿ ಇದೆ, ಮುಂದೆ ಅನೇಕ ಸವಲತ್ತುಗಳಿಂದ ಎಲ್ಲರೂ ವಂಚಿತರಾಗಬೇಕಾಗಿರುತ್ತದೆ. ಆದ್ದರಿಂದ ಇಂತಹ ಕೆಲವೇ ಕೆಲವು ಸದಸ್ಯರನ್ನು ಆಯಾ ಸಂಘದ ಉಳಿದ ಸದಸ್ಯರು, ಒಕ್ಕೂಟದ ಸದಸ್ಯರು ಮನವೊಲಿಸಿ ಅವರ ಕಂತುಬಾಕಿಯನ್ನು ಕಟ್ಟಿಸಿ ನಿಮ್ಮ ನಿಮ್ಮ ಸಂಘದ ಗುಣಮಟ್ಟ ಮತ್ತು ಗ್ರೇಡಿಂಗ್‌ನ್ನು ಕಾಪಾಡಿಕೊಂಡು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಹೊಂದಿರಿ. “ಕಂತು ಬಾಕಿಗೆ ಗುಡ್ ಬೈ ; ಶಿಸ್ತಿನ ಸಂಘ ಬದ್ಧತೆಗೆ ಜೈ”.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates