ಸಂಪೂರ್ಣ ಸುರಕ್ಷಾ ಯೋಜನೆ

ಪ್ರಿಯ ಸದಸ್ಯರೆ,
ತಮಗೆಲ್ಲರಿಗೂ ಅನುಕೂಲವಾಗುವಂತೆ ಅನಾರೋಗ್ಯ ಉಂಟಾದಾಗ ಆಸ್ಪತ್ರೆಯ ಚಿಕಿತ್ಸೆ ಪಡೆದುಕೊಳ್ಳಲು ಸಂಪೂರ್ಣ ಸುರಕ್ಷಾ ಎಂಬ ವಿಮಾ ಯೋಜನೆಯು 2003 ರಿಂದ ಜಾರಿಯಲ್ಲಿದೆ. ಈ ವಿಮಾ ಯೋಜನೆಯಡಿ ಹೋದ ವರ್ಷ 9 ಲಕ್ಷ ಸದಸ್ಯರು ನೋಂದಾಯಿಸಿಕೊ0ಡಿದ್ದರು. ಈ ವಿಮಾ ಯೋಜನೆಯಲ್ಲಿ ಪ್ರತಿಯೋರ್ವ ಸದಸ್ಯನಿಗೆ ರೂ. 20,000 ದಂತೆ ಕುಟುಂಬದ 6 ಸದಸ್ಯರಿಗೆ ಒಟ್ಟಾಗಿ ರೂ. 1,20,000 ದವರೆಗೆ ವಿಮಾ ಸೌಲಭ್ಯವು ಲಭ್ಯವಿದ್ದು, ಆಸ್ಪತ್ರೆಯ ಒಳರೋಗಿಯಾಗಿ ಚಿಕಿತ್ಸೆ ಮಾಡಿಕೊಂಡವರಿಗೆ ಈ ಮೊತ್ತವು ದೊರೆಯುತ್ತದೆ. ಇದಕ್ಕೆ ವಿಧಿಸಲಾದ ಪ್ರೀಮಿಯಂ ಮೊತ್ತ ರೂ. 750 ಆಗಿರುತ್ತದೆ.
ಮುಂದಿನ ವರ್ಷ ಅಂದರೆ 2022-23 ಕ್ಕೆ ಈ ವಿಮಾ ಯೋಜನೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ್ದು, ಸದಸ್ಯರಿಗೆ ಅತ್ಯಾಕರ್ಷಕವಾಗುವಂತೆ ರೂಪಿಸಲಾಗಿದೆ.
1 ಈ ವಿಮಾ ಯೋಜನೆಯು 1-4-2022 ರಿಂದ 31-3-2022 ರವರೆಗೆ ಅನಾರೋಗ್ಯದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುವ ನೋಂದಾಯಿತ ಸದಸ್ಯರಿಗೆ ಸೌಲಭ್ಯವನ್ನು ಒದಗಿಸುತ್ತದೆ.
2. ಈ ಯೋಜನೆಯಲ್ಲಿ ಕುಟುಂಬದ ಪ್ರತಿಯೊಬ್ಬ ನೋಂದಾಯಿತ ಸದಸ್ಯನಿಗೂ ತಲಾ ರೂ. 20,000 ದಂತೆ ಗರಿಷ್ಠ ರೂ. 1,20,000 ಸೌಲಭ್ಯವು ಲಭ್ಯವಿರುತ್ತದೆ. ಈ ಮೊತ್ತವನ್ನು ಕುಟುಂಬದ ಯಾರೇ ಒಬ್ಬ ನೋಂದಾಯಿತ ಸದಸ್ಯನಾಗಲಿ ಅಥವಾ ಎಲ್ಲರೂ ಆಗಲಿ ಪಡೆದುಕೊಳ್ಳಬಹುದಾಗಿದೆ.
3. ಕ್ಯಾಶ್ ಲೆಸ್ ಫೆಸಿಲಿಟಿ : ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ನೋಂದಾಯಿತ ಆಸ್ಪತ್ರೆಗೆ ಫಲಾನುಭವಿಯು ಒಳರೋಗಿಯಾಗಿ ಚಿಕಿತ್ಸೆ ಪಡಕೊಂಡರೆ ಅದಕ್ಕೆ ಆಸ್ಪತ್ರೆಯಿಂದ ಒಪ್ಪ್ಪಿಗೆ ಪಡೆದುಕೊಂಡು ಉಚಿತವಾಗಿ ಹಣ ಪಾವತಿಸದೇ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
4. ಪ್ಯಾಕೇಜ್ : ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ ಚಿಕಿತ್ಸೆ ನೀಡಲಾಗುವ ಹೆಚ್ಚಿನ ಚಿಕಿತ್ಸೆಗಳನ್ನು ಪ್ಯಾಕೇಜ್ ಮಾಡಲಾಗಿದೆ. ಅಂದರೆ ನಿರ್ದಿಷ್ಟ ಚಿಕಿತ್ಸೆಗೆ ನಿರ್ದಿಷ್ಟ ಮೊತ್ತವನ್ನು ಆಸ್ಪತ್ರೆಗೆ ಫಲಾನುಭವಿಯ ವಿಮಾ ಮೊತ್ತದಿಂದ ಪಾವತಿಸಲಾಗುವುದು. 2022-23 ರ ಸಾಲಿಗೆ ಎಲ್ಲ ಪ್ಯಾಕೇಜ್‌ಗಳ ಮೊತ್ತವನ್ನು ಶೇಕಡಾ 15ರಷ್ಟು ಹೆಚ್ಚಿಸಲಾಗಿದ್ದು, ಫಲಾನುಭವಿಗಳು ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಯಾವುದೇ ಮೊತ್ತವನ್ನು ಆಸ್ಪತ್ರೆಗೆ ಪಾವತಿಸುವ ಅಗತ್ಯವಿರುವುದಿಲ್ಲ.
5. ಓಪನ್ ಬಿಲ್ಲಿಂಗ್ ಸಿಸ್ಟಂ : ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ಯಾವುದೇ ಪ್ರದೇಶದ ನೋಂದಾಯಿತ ಆಸ್ಪತ್ರೆಗೆ ಫಲಾನುಭವಿಯು ಒಳರೋಗಿಯಾಗಿ ದಾಖಲಾಗಬಹುದು. ಇಂತಹ ಸಂದರ್ಭದಲ್ಲಿ ಫಲಾನುಭವಿಯು ಆಸ್ಪತ್ರೆಯ ಬಿಲ್ಲನ್ನು ಕಟ್ಟಿ ಡಿಸ್ಚಾರ್ಜ್ ಸಮ್ಮರಿ ಮತ್ತು ಬಿಲ್ಲನ್ನು ಕಳುಹಿಸಿಕೊಟ್ಟಲ್ಲಿ ಅವರಿಗೆ ಶೀಘ್ರದಲ್ಲಿಯೇ ಮೊತ್ತದಲ್ಲಿ ಪಾವತಿಸಲಾಗುವುದು.
6. ಹೆರಿಗೆ ಚಿಕಿತ್ಸೆ : ವಿಮಾದಾರರಿಗೆ ನಿಯಮಿತ ರೂಪದಲ್ಲಿ ಹೆರಿಗೆ ಖರ್ಚಿನ ಮೊತ್ತವನ್ನು ಪಾವತಿಸುವ ವ್ಯವಸ್ಥೆಯಿರುತ್ತದೆ.
7. ಉಚಿತ ಓಪಿಡಿ ಸೌಲಭ್ಯ : ಪೂಜ್ಯರು ನಡೆಸುತ್ತಿರುವ ಎಸ್.ಡಿ.ಎಂ. ಆಸ್ಪತ್ರೆ ಉಜಿರೆ ಮತ್ತು ಎಸ್.ಡಿ.ಎಂ. ಮೆಡಿಕಲ್ ಆಸ್ಪತ್ರೆ ಧಾರವಾಡ ಇಲ್ಲಿ ‘ಸಂಪೂರ್ಣ ಸುರಕ್ಷಾ’ ನೋಂದಾಯಿತ ಸದಸ್ಯರಿಗೆ ಉಚಿತ ಓಪಿಡಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಸೌಲಭ್ಯದನ್ವಯ ಡಾಕ್ಟರ್ ಕನ್ಸಲ್ಟೇಶನ್ ಖರ್ಚು, ಓಪಿಡಿಯಲ್ಲಿ ಟೆಸ್ಟಿಂಗ್ ಖರ್ಚುಗಳಿಗೆ ವಿನಾಯಿತಿ ನೀಡಲಾಗಿದೆ. ಎಕ್ಸ್ರೇ, ಸಿಟಿ ಸ್ಕಾö್ಯನ್, ಎಮ್‌ಆರ್‌ಐ ಮುಂತಾದ ಪರೀಕ್ಷೆಗಳಿಗೆ ಈ ಸೌಲಭ್ಯದನ್ವಯ ವಿನಾಯಿತಿ ನೀಡಲಾಗುವುದು.
8. ವಯೋಮಿತಿ : 3 ತಿಂಗಳಿನಿ0ದ 79 ವರ್ಷ ವಯಸ್ಸಿನವರಿಗೆ ಈ ಸೌಲಭ್ಯವನ್ನು ಒದಗಿಸಲಾಗುವುದು.
9. ಪ್ರೀಮಿಯಂ ಮೊತ್ತ : ರೂ. 750/- (ಪ್ರತಿಯೊಬ್ಬರಿಗೆ.)
10. ಪ್ರೀಮಿಯಂ ಪಾವತಿಸಲು ಪ್ರಗತಿನಿಧಿ ಸೌಲಭ್ಯ : 9 ಜನರ ಒಂದು ಕುಟುಂಬಕ್ಕೆ ರೂ. 4,500 ಮೊತ್ತ ಪ್ರೀಮಿಯಂನ್ನು ಪಾವತಿಸಬೇಕಾಗಿದ್ದು, ಅಗತ್ಯಬಿದ್ದಲ್ಲಿ ಇದಕ್ಕೆ ಸಂಘದ ವತಿಯಿಂದ ಪ್ರಗತಿನಿಧಿ ಸೌಲಭ್ಯವನ್ನು ಮಾಡಿಕೊಡಲಾಗುವುದು. ಇದನ್ನು 50 ವಾರದ ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ.
11. ನೋಂದಾವಣೆ : ಸಂಪೂರ್ಣ ಸುರಕ್ಷಾ ವಿಮಾ ಕಾರ್ಯಕ್ರಮದ ನೋಂದಾವಣೆಯನ್ನು ಇದೀಗ ಪ್ರಾರಂಭಿಸಲಾಗಿದ್ದು, ಫೆಬ್ರವರಿ 15 ರೊಳಗಾಗಿ ತಮ್ಮ ಮತ್ತು ತಮ್ಮ ಕುಟುಂಬದವರನ್ನು ನೋಂದಾಯಿಸಬಹುದಾಗಿದೆ.
12. ಸಂಪೂರ್ಣ ಸುರಕ್ಷಾ ಕಾರ್ಡ್ : ನೋಂದಾಯಿತ ಸದಸ್ಯರಿಗೆ ‘ಸಂಪೂರ್ಣ ಸುರಕ್ಷಾ ಕಾರ್ಡ್’ ಅನ್ನು ನೀಡಲಾಗುವುದು.
ಹೀಗೆ ಈ ಬಾರಿಯ ಸಂಪೂರ್ಣ ಸುರಕ್ಷಾ ವಿಮಾ ಕಾರ್ಯಕ್ರಮವು ಆಕರ್ಷಕವಾಗಿದ್ದು, ಇದು ಯೋಜನೆಯ ಸದಸ್ಯರಿಗೆ ಮತ್ತು ಅವರ ಕುಟುಂಬಕ್ಕೆ ವರದಾನವಾಗಲಿದೆ. ಸರ್ವ ಸದಸ್ಯರು ಬಳಕೆ ಮಾಡಿಕೊಳ್ಳುತ್ತಾರೆಂದು ಆಶಿಸಲಾಗಿದೆ.

ಡಾ| ಎಲ್. ಎಚ್. ಮಂಜುನಾಥ್

Facebook
Twitter
WhatsApp
LinkedIn
Telegram

8 Responses

  1. ಸರ್ ಧಾರವಾಡ ಜನರಿಗೆ opd ಸೌಲಭ್ಯ ಕೊಟ್ಟಿದಿರಿ ಅದೇ ತರ ಮಂಗಳೂರು, ಉಡುಪಿ ಕಡೆ ನು ಸೌಲಭ್ಯ ಕೊಡಿ. ಏನಾದ್ರು ಪ್ರಾಬ್ಲಮ್ ಆಗಿದೆ ಅಂತ ಸಂಪೂರ್ಣ ಸುರಕ್ಷಾ ಇರುವ ಆಸ್ಪತ್ರೆಗೆ ಸೇರಿದರೆ ಆ ಟೆಸ್ಟ್ ಮಾಡಬೇಕು, ಈ ಟೆಸ್ಟ್ ಮಾಡ್ಬೇಕ್ ಅಂತ ಹೇಳಿ ಅಡ್ಮಿಟ್ ಮಾಡ್ಕೊಳ್ತೇತಾರೆ. ಆಮೇಲೆ 5,6 ದಿನ ಟ್ರೀಟ್ ಮೆಂಟ್ ಆದಮೇಲೆ. ನಿಮಗೆ ಯಾವ ಖಾಯಿಲೆ ಇಲ್ಲಾ ಅಂತ ಬಿಲ್ಲ್ ಅಪ್ರೋವ್ ಮಾಡಲ್ಲಾ ಆಮೇಲೆ ಕ್ಯಾಶ್ ಕೊಟ್ಟು ಡಿಸ್ಟ್ರೆಚ್ ಮಾಡ್ಬೇಕಾಯಿತು. ಏನು ಖಾಯಿಲೆ ಇಲ್ಲಾ ಅಂದ್ಮೇಲೆ ಯಾಕೆ 50,60 ಸಾವಿರ ಬಿಲ್ಲ್ ಮಾಡತಾರೆ? ಯಾರಿಗೂ ಆಸ್ಪತ್ರೆಗೆ ಬರುವ ತನಕ ಗೊತ್ತಾಗಲ್ಲ.ಎಕ್ಸರೆ, ಸ್ಕ್ಯಾನ್ ಮಾಡಿದ್ದು ಸಿಗಲ್ಲಾ ಮತ್ತೆ ಅಡ್ಮಿಟ್ ಆದ್ರೂ ಏನು ಪ್ರಾಬ್ಲಮ್ ಬಂದಿಲ್ಲಾ ಅಂದ್ರು ಕ್ಲೇಮ್ ಆಗಲ್ಲಾ. ಮತ್ತೆ ಯಾಕೆ ಸುರಕ್ಷಾ ಮಾಡುದು? ಧಾರವಾಡ ಕ್ಕೆ ಒಂದ್ ತರ, ಮಂಗಳೂರ್, ಉಡುಪಿ ಕಡೆ ಒಂದ್ ತರ ಮಾಡ್ಬೇಡಿ. ನಾವು ಕಟ್ಟುದು ದುಡ್ಡು, ಅವರು ಕಟ್ಟಿದ್ದು ದುಡ್ಡು all are equal….

  2. ಸರ್ ನಾವು ನಮ್ಮ ಕುಟುಂಬದವರಿಗೆ ಆಗಾಗಲೆ ಸಂಪೂರ್ಣ ಸುರಕ್ಷಾ ಕಾರ್ಡ್ ಮಾಡಿದ್ದೀವಿ ಮತ್ತಿ ನಮ್ಮ ತಂದೆ ಬಹಳ ಸರೆ sdm ಆಸ್ಪತ್ರೆ ಯಲ್ಲಿ ತುಂಬಾ ಸರೆ ಚಿಕಿತ್ಸೆ ಮಾಡಿಸಿ ಕೊಂಡಿದ್ದಾರೆ .ಕೆಲವು ದಿನಗಳ ನಂತರ ಅವರು sdm ನಲ್ಲಿ ಚಿಕಿತ್ಸೆ ತಾಗೊಳ್ತಿದ್ದಂಗೆ ಮರಣ ಹೊಂದಿದ್ದಾರೆ ಅದಕ್ಕೆ ನಾವು ಒಂದು ಸಾರಿ ಗೂಗ್ಲ್ search ಮಾಡಿದ್ದವಿ ಆಗಾ ನಮಗೆ ಒಂದು ವಿಷಯ ಗೊತ್ತಾಗಿದೆ ಅದು ಏನೆಂದರೆ ಅದರಲ್ಲಿ ” ಮರಣ ಪರಿಹಾರ ” ಎನ್ನುವುದು ಇದೆ ಎಂದು ನನಗೆ ಗೊತ್ತಾಗಿದೆ ಆ ಮರಣ ಪರಿಹಾರ ಹೊಂದಲು ನಾವು ಏನು ಮಾಡಬೇಕು ಎಂದು ಹೇಳುತ್ತೀರಾ ಸರ್.
    ಧನ್ಯವಾದಗಳು

  3. ಯಾವ ಕಾಯಿಲೆಗೆ ಏನು ಖರ್ಚು ಬರುತ್ತದೆ ಹಾಗೂ ನಿರ್ದಿಷ್ಟವಾಗಿ ಈ ಎಲ್ಲಾ ಕಾಯಿಲೆ ದಾಖಲೆ ಲಿಖಿತ ಭರವಸೆ ಕೊಟ್ಟರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಸಂಪೂರ್ಣ ಸುರಕ್ಷಾ ಭರವಸೆ ಒಳಗೊಂಡ ರೀತಿ ಒಳ್ಳೆಯದು.

Leave a Reply

Your email address will not be published. Required fields are marked *