ರತ್ನಗಿರಿ ಬೆಟ್ಟದ ಬಾಹುಬಲಿ


ರ್ಮಸ್ಥಳ ಆಕರ್ಷಣೀಯ ಸ್ಥಳಗಳಲ್ಲಿ ರತ್ನಗಿರಿ ಬೆಟ್ಟವೂ ಒಂದು. ರತ್ನಗಿರಿ ಬೆಟ್ಟದಲ್ಲಿರುವ ಪ್ರತಿಮೆಯು 39 ಅಡಿ ಎತ್ತರವಿದ್ದು, 1973ರಲ್ಲಿ ರೆಂಜನ ಗೋಪಾಲಕೃಷ್ಣ ಶೆಣೈ ಎಂಬುವವರಿಂದ ಕೆತ್ತೆಲ್ಪಟ್ಟಿದೆ. ಫೆಬ್ರವರಿ 1982ರಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮೂಲಕ ಕ್ಷೇತ್ರಕ್ಕೆ ತರಲಾಯಿತು.
ಬಾಹುಬಲಿ ಪ್ರತಿಮೆಯು ತ್ಯಾಗ ಮತ್ತು ನಿಸ್ವಾರ್ಥತೆಯ ಸಂಕೇತವಾಗಿದೆ. ಜನಪ್ರಿಯ ಜಾನಪದದ ಪ್ರಕಾರ, ಬಾಹುಬಲಿ ಮತ್ತು ಭರತ ಪರಸ್ಪರ ಹೋರಾಡಿ, ಯುದ್ಧ ಗೆದ್ದ ನಂತರ ತನ್ನ ಸಹೋದರನಿಗೆ ಜೀವದಾನ ನೀಡಿದನು. ಈ ಸಂದರ್ಭದಲ್ಲಿ ಯುದ್ಧ ಮತ್ತು ಹತ್ಯೆಗಳ ಬಗ್ಗೆ ನಿಷ್ಪ್ರಯೋಜಕ ಎಂದು ತಿಳಿದುಕೊಂಡ ನಂತರ ಅತ ಭರತನಿಗೆ ರಾಜ್ಯವನ್ನು ಬಿಟ್ಟು ಕೊಟ್ಟ. ದಿಗಂಬರ ಜೈನ ಪಂಥವನ್ನು ಸೇರಿದನು. ಪ್ರಾಯಶ್ಚಿತ ಮಾರ್ಗವನ್ನು ಅನುಸರಿಸಿ, ಬಾಹುಬಲಿಯು ಜ್ಞಾನೋದಯ ಪಡೆಯುವ ತನಕ ಬೆತ್ತಲೆಯಾಗಿಯೇ ಇರುವೆನೆಂದು ನಿರ್ಧರಿಸಿದ. ಎಲ್ಲವನ್ನೂ ತ್ಯಜಿಸಿದನು ಎಂಬ ಕಥೆಯಿದೆ.
ಬಾಹುಬಲಿ ಪ್ರತಿಮೆಯನ್ನು ನೋಡಲು, ಪ್ರವಾಸಿಗರು ಸುಮಾರು 20 ನಿಮಿಷಗಳ ಕಾಲ ರತ್ನಗಿರಿ ಬೆಟ್ಟದ ಮೆಟ್ಟಿಲುಗಳನ್ನು ಏರಬೇಕಾಗುತ್ತದೆ ಅಥವಾ ಮಾರ್ಗದ ಮುಖೇನ ವಾಹನದಲ್ಲೂ ಹೋಗಲು ವ್ಯವಸ್ಥೆಯಿದೆ. ಬೆಟ್ಟದ ಮೇಲೆ ಕುಡಿಯುವ ನೀರು ಮತ್ತು ಪ್ರವಾಸಿಗರಿಗೆ ವಸತಿ ಸೌಲಭ್ಯವಿದೆ.

ಭೇಟಿ ನೀಡಬೇಕಾದ ಸಮಯ ಬೆಳಗ್ಗೆ 8ರಿಂದ 10 ಹಾಗೂ ಸಂಜೆ 6ರಿಂದ 7 ಸೂಕ್ತ ಸಮಯವಾಗಿದೆ

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates