ಸುಮಾರು 7 ತಿಂಗಳ ಹಿಂದಿನ ಮಾತು. ಅಂದು ಅಮ್ಮ ಮಗಳಿಬ್ಬರು ಆಸ್ಪತ್ರೆಗೆ ಬಂದರು. ಮಗಳಿಗೆ 14ವರ್ಷ. ಆದರೆ ಅವಳ ತೂಕ 85 ಕೆ.ಜಿ. ತಾಯಿ ಹೇಳಿದರು ಕೊರೊನಾ ಬರುವುದಕ್ಕೆ ಮೊದಲು, ಅಂದರೆ 2020 ಕ್ಕಿಂತ ಮುಂಚೆ ಅವಳ ತೂಕ 50 ಕೆ.ಜಿ. ಇತ್ತು. ಈ 2 ವರ್ಷದಲ್ಲಿ ಅವಳ ತೂಕದಲ್ಲಿ ಇಷ್ಟು ಹೆಚ್ಚಾಗಿದೆ ಎಂದು. ಮಗಳ ತೂಕದ ಬಗ್ಗೆ ಬಹಳಷ್ಟು ಚಿಂತಿತರಾಗಿದ್ದ ಅವರು ನಾನು ಕೇಳುವುದಕ್ಕೂ ಮೊದಲೇ ಮಾಡಿಸಿಕೊಂಡು ಬಂದಿದ್ದ ಥೈರಾಯ್ಡ್ ರಿಪೋರ್ಟ್ ಅನ್ನು ಸಹ ತೋರಿಸಿದರು. ಅದು ಅವರ ವಯಸ್ಸಿಗೆ ಸರಿಯಾಗಿಯೇ ಇತ್ತು. ತಾಯಿಯ ಪ್ರಶ್ನೆ ಇಷ್ಟೇ. ‘ಅಲ್ಲ ಡಾಕ್ಟೆçà ಮಗಳ ಥೈರಾಯ್ಡ್ ನಾರ್ಮಲ್ ಇದೆ. ಮತ್ತೇಕೆ ಅವಳ ತೂಕ ಹೆಚ್ಚುತ್ತಿದೆ. ಅದನ್ನು ನಾನೀಗ ಹೇಗೆ ಸರಿ ಮಾಡಬೇಕು?’
ಅದು ಥೈರಾಯ್ಡ್ ಸಮಸ್ಯೆ ಆಗಿರಲಿಲ್ಲ. ಮಕ್ಕಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿರುವ ‘ಬೊಜ್ಜು’ ಸಮಸ್ಯೆಯಾಗಿತ್ತು.
ನಮ್ಮ ತಂದೆ – ತಾಯಿ 75,70 ವರ್ಷದವರಿದ್ದು ತೆಳ್ಳಗೆ ಇದ್ದಾರೆ. ನನ್ನ ಮಗುವಿಗೆ ಏಕೆ ಇಷ್ಟು ಚಿಕ್ಕ ವಯಸ್ಸಿಗೆ ಬೊಜ್ಜು ಬಂದಿದೆ? ಬೊಜ್ಜು ಅನುವಂಶಿಕವೇ?
ಬೊಜ್ಜು ಬರುವುದಕ್ಕೆ ಅನುವಂಶಿಕತೆ ಹಾಗೆಯೇ ಪರಿಸರ ಮತ್ತು ಜೀವನ ಶೈಲಿಗಳೂ ಕಾರಣ.
ಟಿ ಒಮ್ಮೆಯೇ ತುಂಬಾ ಆಹಾರ ಸೇವನೆ ಮಾಡುವುದು. ಟಿ ಹೆಚ್ಚು ಸಕ್ಕರೆ ಅಂಶ ಇರುವ ಆಹಾರ ಸೇವನೆ ಮಾಡುವುದು. ಟಿ ಹೆಚ್ಚು ಕೊಬ್ಬಿನಂಶ ಇರುವ ಆಹಾರ ಸೇವನೆ ಮಾಡುವುದು. ಟಿ ಮನೆ ಆಹಾರ ಕಡಿಮೆ ತಿಂದು ಹೊರಗಿನ ಆಹಾರ ಹೆಚ್ಚು ತಿನ್ನುವುದು. ಟಿ ಬೆಳಗಿನ ಉಪಹಾರ ತಿನ್ನದೇ ಇರುವುದು.ಟಿ ಹಣ್ಣು ಹಂಪಲು ಕಡಿಮೆ ತಿನ್ನುವುದು. ಟಿ ಟಿ.ವಿ., ಲ್ಯಾಪ್‌ಟಾಪ್, ಮೊಬೈಲ್ ನೋಡಿಕೊಂಡು ತಿನ್ನುವುದು. ಟಿ ಕಡಿಮೆ ದೈಹಿಕ ಚಟುವಟಿಕೆಗಳು. ಟಿ ತರಕಾರಿ ಸೊಪ್ಪುಗಳ ಬಳಕೆ ಕಡಿಮೆ ಮಾಡುವುದು. ಟಿ ‘ಫಾಸ್ಟ್ ಫುಡ್’ ಸೇವನೆ. ಇವೆಲ್ಲ ಬೊಜ್ಜಿನ ಪಿಡುಗಿಗೆ ನಾಂದಿ ಹಾಡುತ್ತವೆ.
ಬೊಜ್ಜು ಕಡಿಮೆ ಮಾಡಲು ಏನು ಮಾಡಬೇಕು?
ಮಕ್ಕಳು ಪೋಷಕರನ್ನು ನೋಡಿ ಕಲಿಯುತ್ತಾರೆಯೇ ಹೊರತು ಅವರು ಹೇಳಿದ್ದನ್ನು ಕಲಿಯುವುದು ಕಡಿಮೆ. ಹಾಗಾಗಿ ಜೀವನಶೈಲಿಯ ಬದಲಾವಣೆ ಮಕ್ಕಳಿಗಷ್ಟೇ ಅಲ್ಲ. ಅವರ ಪೋಷಕರಿಗೂ ಆಗಬೇಕು.
ದೈಹಿಕ ಚಟುವಟಿಕೆ ಹೆಚ್ಚಾಗಬೇಕು. ಕುಳಿತೇ ಇರುವುದು ಸಲ್ಲದು. ಸಿಗರೇಟ್, ಮದ್ಯ ಮೊದಲಾದ ವ್ಯಸನಗಳಿಂದ ದೂರವಿರುವುದು. ಹೆಚ್ಚು ಸಕ್ಕರೆ ಅಂಶ ಇರುವ, ಕೊಬ್ಬು ಹೆಚ್ಚಿರುವ ಆಹಾರಗಳನ್ನು ಕಡಿತಗೊಳಿಸುವುದು. ಹಣ್ಣು, ತರಕಾರಿ, ಸೊಪ್ಪು, ಸಿರಿಧಾನ್ಯಗಳ ಬಳಕೆ ಹೆಚ್ಚು ಮಾಡಬೇಕು. ಮನೆಯೂಟಕ್ಕೆ ಪ್ರಾಶಸ್ತö್ಯ, ಬೇಕರಿ, ಕುರುಕಲು ತಿಂಡಿಗಳನ್ನು ಬಿಡುವುದು. ಉಣ್ಣುವಾಗ ಟಿ.ವಿ., ಮೊಬೈಲ್ ನೋಡದೆ ಇರುವುದು. ಚೆನ್ನಾಗಿ ನೀರು ಕುಡಿಯುವುದು. ಕುರುಕಲು ಆಹಾರದ ವಸ್ತುಗಳನ್ನು ಎಂದೂ ಮಕ್ಕಳಿಗೆ ಗಿಫ್ಟ್ ಆಗಿ ಕೊಡದಿರುವುದು. ಆರೋಗ್ಯಕರ ದಿನಚರಿಯನ್ನು ರೂಢಿಸಿಕೊಳ್ಳುವುದು. ಯೋಗ, ಕರಾಟೆ, ನಡೆಯುವುದು, ಓಡುವುದು, ಹತ್ತುವುದು, ವಿವಿಧ ಆಟಗಳು, ಈಜು ಇವುಗಳನ್ನು ಪ್ರೋತ್ಸಾಹಿಸುವುದು. ಉತ್ತಮ ನಿದ್ರೆ, ಧನ್ಯತಾ ಭಾವ, ಸಂತೋಷವಾಗಿ ಇರುವುದು, ಸೇವಾಭಾವ ಮೊದಲಾದ ಉತ್ತಮ ಸ್ವಭಾವಗಳನ್ನು ರೂಢಿಸಿಕೊಳ್ಳುವುದು.
ಬೊಜ್ಜು ಕರಗಿಸಲು ಮಾತ್ರೆಗಳಿವೆಯೇ?
ಬೊಜ್ಜು ಕರಗಿಸುವ ಔಷಧಗಳು ಮಕ್ಕಳಿಗೆ ಸೂಕ್ತವಲ್ಲ. ಉತ್ತಮ ಜೀವನಶೈಲಿಯೇ ಸೂಕ್ತವಾದ ಪರಿಹಾರ.
ಮಕ್ಕಳಿಗೆ ಬೊಜ್ಜಿನ ಶಸ್ತçಚಿಕಿತ್ಸೆ ಮಾಡಿಸಬಹುದೇ?
ಬೊಜ್ಜಿನ ಶಸ್ತçಚಿಕಿತ್ಸೆ ಮಕ್ಕಳಿಗೆ ಸೂಕ್ತವಲ್ಲ. ಜೀವನಶೈಲಿಯ ಬದಲಾವಣೆಯೇ ಸೂಕ್ತ ಪರಿಹಾರ.
ಒಟ್ಟಿನಲ್ಲಿ ಬೊಜ್ಜಿನ ಸಮಸ್ಯೆ ಕ್ಷÄಲ್ಲಕವೆಂದು ಕಡೆಗಣಿಸುವುದೂ ಸಲ್ಲ. ಅದರ ಬಗ್ಗೆ ಚಿಂತಿಸುತ್ತಾ ಪರಿಹಾರದ ಕಡೆ ಗಮನ ಕೊಡದಿರುವುದೂ ಸಲ್ಲ. ಆರೋಗ್ಯವಂತ ಜೀವನಕ್ಕೆ ಆರೋಗ್ಯಕರ ‘ಜೀವನಶೈಲಿ’ಯೇ ಬುನಾದಿ ಎಂಬುದನ್ನು ಮರೆಯದಿರೋಣ. ಮಕ್ಕಳ ಮುಂದಿನ ಸುಂದರ ಬದುಕಿಗೆ ಅವರ ಇಂದಿನ ಆಹಾರವೇ ಅಡಿಪಾಯ ಎಂಬುದನ್ನು ಮರೆಯದಿರೋಣ.