ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಗಳ ಬಗ್ಗೆ ಜಾಗ್ರತೆ ಇರಲಿ

ಡಾ| ಎಲ್.ಎಚ್. ಮಂಜುನಾಥ್

21ನೇ ಶತಮಾನದಲ್ಲಿ ಜನರನ್ನು ಅತಿ ಹೆಚ್ಚು ಮುಟ್ಟಿದ ಅನ್ವೇಷಣೆ ಎಂದರೆ ಅದು ಮೊಬೈಲ್ ಚಳುವಳಿಯೇ ಆಗಿದೆ. ಎಲ್ಲರ ಕೈಯಲ್ಲಿ ಮೊಬೈಲ್ ತಲುಪಿದ ನಂತರ ಮಾಹಿತಿಯನ್ನು ಕೊಡುವ ಅನೇಕ ತಂತ್ರಜ್ಞಾನಗಳ ಸಂಶೋಧನೆಯಾಗಿದ್ದು ಇದರಿಂದಾಗಿ ಪ್ರಪಂಚದಲ್ಲಿ ನಡೆಯುವ ಆಗುಹೋಗುಗಳ ಕುರಿತಾಗಿ ಮಾಹಿತಿಯು ಕ್ಷಣ ಮಾತ್ರದಲ್ಲಿ ಜನರಿಗೆ ಲಭ್ಯವಾಗುತ್ತಿದೆ. ಇಂದು ಜಗತ್ತಿನಾದ್ಯಂತ ಪ್ರಸಿದ್ಧವಾಗಿರುವ ಯೂಟ್ಯೂಬ್, ಫೇಸ್‌ಬುಕ್, ಟ್ವಿಟ್ಟರ್, ವ್ಯಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳು ಜನರ ಪ್ರತಿಭೆಯನ್ನು, ಭಾವನೆಗಳನ್ನು ಹೊರಹಾಕಲು ಸುಂದರವಾದ ವೇದಿಕೆಯನ್ನು ಒದಗಿಸಿರುವಂತೆಯೇ ವಿಕೃತ ಮನಸ್ಸುಗಳ, ವಿಕೃತ ಅಭಿಪ್ರಾಯಗಳಿಗೂ ವೇದಿಕೆ ಒದಗಿಸಿಕೊಡುತ್ತದೆ.
ಜಗತ್ತಿನ ಮೂಲೆ ಮೂಲೆಗಳಿಂದ ದೊರೆಯುವ ವಿಷಯಗಳನ್ನು ಎಲ್ಲರಿಗೂ ತಲುಪಿಸುವುದು ಸಾಮಾಜಿಕ ಜಾಲತಾಣಗಳ ಶಕ್ತಿ ಒಂದು ಕಡೆಯಾದರೆ ‘ಫೇಕ್ ನ್ಯೂಸ್, ಸುಳ್ಳು ಸುದ್ದಿ’ಯನ್ನು ಹರಡುವ ಅತಿ ದೊಡ್ಡ ದೌರ್ಬಲ್ಯ ಜಾಲತಾಣಗಳಿಗೆ ಇದೆ. ಯಾವುದೇ ವ್ಯಕ್ತಿಯ ಮೇಲೆ, ಯಾವುದೇ ರೀತಿಯ ಆರೋಪಗಳನ್ನು, ಯಾವುದೇ ಸಂಸ್ಥೆಯ ಕುರಿತಾಗಿ ಸುಳ್ಳು ಸುದ್ದಿಗಳನ್ನು, ಮಾಡದೇ ಇರುವ ಅನ್ವೇಷಣೆಗಳನ್ನು ವಿವರಿಸುವ ಸುದ್ದಿಗಳನ್ನು, ಆಗದೇ ಇರುವ ಘಟನೆಗಳನ್ನು ಆದಂತೆ ಬಿಂಬಿಸುವ ಸುದ್ದಿಗಳನ್ನು ಈ ಜಾಲತಾಣಗಳು ಸುಲಭವಾಗಿ ಹರಡುತ್ತವೆ. ಈ ದೃಶ್ಯ ಮಾಧ್ಯಮಗಳಲ್ಲಿ ಫೋಟೋಗಳನ್ನು ಎಡಿಟ್ ಮಾಡಿ ತುಂಡರಿಸಿ ಬೇಕು ಬೇಕಾದಂತೆ ಜೋಡಿಸುವ ತಂತ್ರಜ್ಞಾನ ಎಲ್ಲರ ಕೈಯಲ್ಲೂ ಲಭ್ಯವಾದ ನಂತರ ಸುಳ್ಳು ಸುದ್ದಿಗಳು ಲಂಗು ಲಗಾಮಿಲ್ಲದೆ ಹಬ್ಬುವಂತಹ ಪ್ರಕ್ರಿಯೆಗಳು ಶುರುವಾಗಿವೆ. ಇನ್ನೊಬ್ಬರನ್ನು ದೂಷಿಸುವ, ನಿಂದಿಸುವ, ಆಗದೇ ಇರುವ ಘಟನೆಗಳ ಬಗ್ಗೆ ಸುಂದರವಾಗಿ ವಿವರಣೆ ನೀಡುವ, ಜನರನ್ನು ತಪ್ಪು ದಾರಿಗೆ ಎಳೆಯುವ ಸುಳ್ಳು ಸುದ್ದಿಗಳು ಇಂದು ಸಮೂಹ ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಅದೇ ರೀತಿ ಯಾರನ್ನಾದರೂ ಬೆಂಬಲಿಸಬೇಕೆoದರೆ ಅವರ ಕುರಿತಾಗಿ ಉತ್ಪೆçÃಕ್ಷಿತವಾಗಿ ಬರೆಯುವ, ಅವರ ಇಲ್ಲದ ಸಾಧನೆಗಳನ್ನು ಬಿಂಬಿಸುವ ಸುದ್ದಿಗಳು ಈ ಮಾಧ್ಯಮದಲ್ಲಿ ಪ್ರಕಟವಾಗುತ್ತಿವೆ. ಇದರಿಂದಾಗಿ ಜನರಿಗೆ ಸುಳ್ಳು ಯಾವುದು? ಮತ್ತು ಸತ್ಯ ಯಾವುದು? ಎಂಬುದನ್ನು ತಿಳಿಯಲಾರದಷ್ಟರ ಮಟ್ಟಿಗೆ ಈ ಸಮೂಹ ಮಾಧ್ಯಮಗಳು ಜನರನ್ನು ಗೊಂದಲಕ್ಕೆ ದೂಡಿವೆ.
ಇವುಗಳೆಲ್ಲದರ ನಡುವೆ ಯಾರೋ ಒಬ್ಬ ನಾಯಕನನ್ನು ಹಿಂಬಾಲಿಸುವ ಜನರು ಆತ ಹೇಳಿದ್ದೆಲ್ಲ ಸತ್ಯ ಎಂದುಕೊ0ಡು ಅಥವಾ ಅವನು ಪ್ರಕಟಿಸುವ ವರದಿಗಳೆಲ್ಲ ಸತ್ಯ ಎಂದು ಕಣ್ಣುಮುಚ್ಚಿ ಅವನ್ನು ಬೆಂಬಲಿಸುವ ಮತ್ತು ಅವನ ಉತ್ಪೆçÃಕ್ಷಿತ ಮಾತುಗಳಿಗೆ ಬಲಿಯಾಗಿ ಇತರರನ್ನು ನಿಂದಿಸುವ, ಹಾನಿಗೊಳಿಸುವ ಮಟ್ಟಿಗೆ ಪ್ರಚೋದನೆಗೊಳಿಸುವ ಸಾಮರ್ಥ್ಯ ಈ ಸಮೂಹ ಮಾಧ್ಯಮಗಳಿಗೆ ಲಭ್ಯವಾಗಿರುವುದು ಬಹುಶಃ 21ನೇ ಶತಮಾನದ ದುರಂತ ಎಂದೇ ಹೇಳಬೇಕಾಗಿದೆ. ಈ ಸಮೂಹ ಮಾಧ್ಯಮಗಳ ಉತ್ಪೆçÃಕ್ಷಿತ ಸುಳ್ಳು ವರದಿಗಳಿಗೆ ಬಲಿಯಾಗದವರು ಬಹುಶಃ ಈ ಜಗತ್ತಿನಲ್ಲಿ ಯಾರೂ ಇರಲಿಕ್ಕಿಲ್ಲ. ಸಮಾಜದಲ್ಲಿ ಎಲ್ಲರೂ ಕೆಟ್ಟವರೆಂದು ಬಿಂಬಿಸಿಬಿಟ್ಟರೆ ಕೆಟ್ಟವರಿಗೂ ಗೌರವ ಲಭ್ಯವಾಗುತ್ತದೆಯೆಂಬ ಭಂಡತನವೂ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವಲ್ಲಿ ಅಡಗಿರಬಹುದು.
ಇದರ ಜೊತೆಯಲ್ಲಿ, ಪ್ರಕಟಗೊಂಡ ಸುಳ್ಳು ಸುದ್ದಿಗಳನ್ನು ಇತರರಿಗೆ ಫಾರ್ವರ್ಡ್ ಮಾಡುವ ಚಟ ಅತೀ ಹೆಚ್ಚು ಜನರಿಗೆ ಇರುವುದರಿಂದ ಸುಳ್ಳು ಸುದ್ದಿಗಳು ಅತಿ ಬೇಗನೆ ಜನರನ್ನು ತಲುಪುತ್ತಿರುವುದು ಸಮೂಹ ಮಾಧ್ಯಮಗಳ ಇನ್ನೊಂದು ಬಹಳ ದೊಡ್ಡ ಸಮಸ್ಯೆ ಆಗಿರುತ್ತದೆ. ಸಮೂಹ ಮಾಧ್ಯಮಗಳ ಸುಳ್ಳು ಸುದ್ದಿಗಳು ಅತಿ ಹೆಚ್ಚಿನ ಪ್ರಭಾವ ಬೀರುವುದು ಯುವಜನತೆಯ ಮೇಲೆ. ಎಲ್ಲರನ್ನೂ ನಂಬುವ ಉತ್ಸಾಹದ ಯುವಜನರು ಸುಳ್ಳು ಸುದ್ದಿಗಳನ್ನು ನಂಬಿ ಅದರಲ್ಲಿ ತಾವು ನಾಯಕನೆಂದು ನಂಬುವ ವ್ಯಕ್ತಿಯ ಮುಖವಾಣಿಯಿಂದ ಬಂದoತಹ ಈ ಸುದ್ದಿಗಳು ಸತ್ಯವೆಂದು ನಂಬಿ ಮಾಡಬಾರದ್ದನ್ನು ಮಾಡಿ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವ ಅನೇಕ ಘಟನೆಗಳು ಬಂದಿವೆ. ಆದುದರಿಂದ ಇಂದಿನ ದಿನಗಳಲ್ಲಿ ಸಮೂಹ ಮಾಧ್ಯಮಗಳಲ್ಲಿ ಬರುವ ಎಲ್ಲ ವರದಿಗಳು ಸತ್ಯವಲ್ಲ ಎಂಬುದನ್ನು ಪ್ರಥಮವಾಗಿ ನಾವೆಲ್ಲ ಅರಿತುಕೊಳ್ಳಬೇಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂತೋಷದಿoದ ಆನಂದಿಸಬಹುದು. ಆದರೆ ನ್ಯೂಸ್, ವರದಿಗಳು, ವರದಿ ಸಂಬAಧಿತ ವಿಡಿಯೋಗಳು, ಫೇಸ್‌ಬುಕ್ ಚಾಟ್‌ಗಳು, ವ್ಯಾಟ್ಸಪ್ ಚಾಟ್‌ಗಳು, ಭಾವಚಿತ್ರಗಳು ಈ ಬಗ್ಗೆ ಎಚ್ಚರಿಕೆಯಿಂದ, ಅನುಮಾನದ ಕಣ್ಣುಗಳಿಂದ ಪರೀಕ್ಷಿಸುವಂತಹ ಅಗತ್ಯ ಬಹಳವಾಗಿದೆ. ಅದರಲ್ಲಿಯೂ ಯುವಜನತೆಯನ್ನು ದಾರಿತಪ್ಪಿಸುವ ಉದ್ದೇಶದಿಂದ ಪ್ರಕಟವಾಗುವಂತಹ ಇಂತಹ ವರದಿಗಳ ಕುರಿತಾಗಿ ಪೋಷಕರು ಜಾಗ್ರತೆ ವಹಿಸುವ ಅಗತ್ಯವಿದೆ. ಯುವಜನತೆ ತಮಗೆ ಬಂದ ಸುಳ್ಳು ಮಾಹಿತಿಯನ್ನು ನಂಬಿ ಭಾವನಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸತೊಡಗಿದರೆ ಮುಂದೊoದು ದಿನ ಸಮಸ್ಯೆಗೆ ಒಳಗಾಗಬಹುದೆಂಬ ಅರಿವು ಕೂಡಾ ಜನರಿಗೆ ಮೂಡಿಸುವ ಅಗತ್ಯವಿದೆ. ಇಂತಹ ವರದಿಗಳನ್ನು ಫಾರ್ವರ್ಡ್ ಮಾಡುವ ಮೊದಲು ಇದು ಸತ್ಯವಿರಬಹುದೇ? ಇಲ್ಲವೇ? ಎಂದು ಆಲೋಚಿಸಿ, ಇದರ ಹಿನ್ನೆಲೆಯನ್ನು ಸ್ವಲ್ಪ ಪರಿಶೀಲಿಸಿ ಮುಂದುವರಿಸುವoತಹ ಅಗತ್ಯವೂ ಇದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳ ಬಗ್ಗೆ ಕ್ರಮಕೈಗೊಳ್ಳುವುದಾಗಿ ಸರಕಾರಗಳು ಹೇಳುತ್ತಿದ್ದರೂ ನಿಯಮಾವಳಿಗಳನ್ನು ರೂಪಿಸುತ್ತಿದ್ದರೂ ಈ ಪ್ರಕ್ರಿಯೆಗಳು ಪಕ್ವವಾಗಲು ಇನ್ನಷ್ಟು ಕಾಲ ಬೇಕಾಗುತ್ತದೆ. ಈ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಿಂದ ಸುಳ್ಳು ಸುದ್ದಿಯನ್ನು ಹಬ್ಬಿಸಿ ನಿಜವಾಗಿ ಸಮಾಜ ಸೇವೆ ಮಾಡುತ್ತಿರುವವರ ಮುಖಕ್ಕೆ ಮಸಿ ಬಳಿಯುವವರ ಪ್ರಯತ್ನದ ಬಗ್ಗೆ ನಾವೆಲ್ಲರೂ ಜಾಗ್ರತರಾಗಿರುವುದು ಅಗತ್ಯವಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates