ಇಂದುಧರ ಹಳೆಯಂಗಡಿ
ಈ ಮೊದಲು ಸಿಡಿ, ಡಿವಿಡಿ, ಕ್ಯಾಸೆಟ್‌ಗಳು ಮಾಡುತ್ತಿದ್ದ ಕೆಲಸಗಳನ್ನು ಇಂದು ‘ಮೆಮೊರಿ ಕಾರ್ಡ್’ ಮತ್ತು ‘ಪೆನ್‌ಡ್ರೈವ್’ಗಳು ಮಾಡುತ್ತಿವೆ. ಫೋಟೋ, ವೀಡಿಯೋ ಸಹಿತವಾಗಿ ಎಲ್ಲಾ ರೀತಿಯ ಡಿಜಿಟಲ್ ಡೇಟಾಗಳನ್ನು ಸಂಗ್ರಹಿಸಿಡಲು ಮತ್ತು ಬೇರೆಯವರಿಗೆ ಹಂಚಲು ಇಂದು ವ್ಯಾಪಕವಾಗಿ ಮೆಮೊರಿ ಕಾರ್ಡ್ ಹಾಗೂ ಪೆನ್‌ಡ್ರೈವ್‌ಗಳನ್ನು ಬಳಸಲಾಗುತ್ತಿದೆ. ಇಂಟರ್ನೆಟ್ ಬೆಳೆದು ಇಂದು ಆನ್‌ಲೈನ್ ಸಂಗ್ರಹ ವ್ಯವಸ್ಥೆ ಬಹಳ ಪ್ರಚಾರ ಪಡೆಯುತ್ತಿದ್ದರೂ, ಕ್ಯಾಮೆರಾಗಳಿಗೆ ಮೆಮೊರಿ ಕಾರ್ಡ್ ಹಾಗೂ ಆಫ್‌ಲೈನ್ ಸ್ಟೋರೇಜ್‌ಗಾಗಿ ಪೆನ್‌ಡ್ರೈವ್‌ಗಳು ಬಳಸಲ್ಪಡುತ್ತಿವೆ.
ಇವೆರಡೂ ಬಹುತೇಕ ಒಂದೇ ರೀತಿಯ ವೈಶಿಷ್ಟö್ಯಗಳನ್ನು ಹೊಂದಿದ್ದರೂ ಕೂಡಾ ಇವುಗಳಲ್ಲಿ ಬೇರೆ ಬೇರೆ ಪ್ರಕಾರಗಳಿವೆ. ಉದಾಹರಣೆಗೆ ಪೆನ್‌ಡ್ರೈವ್‌ಗಳಲ್ಲಿ 2.0, 3.0 ಎಂಬ ಆವೃತ್ತಿಗಳಿದ್ದರೆ ಮೆಮೊರಿ ಕಾರ್ಡ್ಗಳಲ್ಲಿ SD, SDHC, SDXC ಎಂಬ ಆವೃತ್ತಿಗಳಿವೆ. ಪ್ರತಿಯೊಂದಕ್ಕೂ ಅದರದ್ದೇ ಆದ ವೈಶಿಷ್ಟö್ಯಗಳಿವೆ. ನಾವು ನಮ್ಮ ಡಿವೈಸ್ ಮತ್ತು ಅಗತ್ಯತೆಗೆ ತಕ್ಕಂತೆ, ಬಳಕೆಗೆ ಅನುಗುಣವಾಗಿ ಸರಿಯಾದ ಮೆಮೊರಿ ಕಾರ್ಡ್ ಹಾಗೂ ಪೆನ್‌ಡ್ರೆöÊವ್‌ಗಳನ್ನು ಬಳಸಬೇಕಾಗುತ್ತದೆ.
32 ಜಿ.ಬಿ. ಪೆನ್‌ಡ್ರೈವ್‌ನ ಬೆಲೆಯಲ್ಲಿ ವ್ಯತ್ಯಯಗಳಿರುವುದನ್ನು ಕಾಣಬಹುದು. ಅಂದರೆ 32 ಜಿ.ಬಿ.ಯಲ್ಲೂ 2.0 ಮತ್ತು 3.0 ಎಂಬ ಎರಡು ವಿಧಗಳಿವೆ. 3.0 ವೇಗವಾಗಿ ಕಾರ್ಯನಿರ್ವಹಿಸುವ ಪೆನ್‌ಡ್ರೈವ್ ಆಗಿದ್ದು ಇದರ ಬೆಲೆ 2.0ಕ್ಕಿಂತ ಒಂಚೂರು ಹೆಚ್ಚಿರುತ್ತದೆ.
ಪೆನ್‌ಡ್ರೈವ್
ಯುಎಸ್‌ಬಿ ಫ್ಲಾಶ್ ಡ್ರೈವ್ ಎಂದೂ ಕರೆಯಲ್ಪಡುವ ಪೆನ್‌ಡ್ರೈವ್‌ಗಳು ಒಂದು ಸಣ್ಣ ಪೋರ್ಟೇಬಲ್ ಶೇಖರಣಾ ಸಾಧನವಾಗಿದ್ದು ಇವುಗಳನ್ನು ಡೇಟಾವನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಇದು ಯುಎಸ್‌ಬಿ ಪೋರ್ಟ್ ಮೂಲಕ ಕಂಪ್ಯೂಟರ್ ಮತ್ತು ಇತರ ಸಾಧನಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಫೈಲ್‌ಗಳನ್ನು ವರ್ಗಾಯಿಸಲು, ಪ್ರಮುಖ ಡೇಟಾವನ್ನು ಬ್ಯಾಕಪ್ ಮಾಡಲು ಮತ್ತು ಡಾಕ್ಯುಮೆಂಟ್, ಫೋಟೋ, ವೀಡಿಯೊ ಮತ್ತು ಸಾಫ್ಟ್ವೇರ್ ಇತ್ಯಾದಿಗಳನ್ನು ಆಫ್‌ಲೈನ್‌ನಲ್ಲಿ ಸಾಗಿಸಲು ಪೆನ್‌ಡ್ರೈವ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. 2 ಜಿಬಿಯಿಂದ 2 ಟಿಬಿವರೆಗಿನ ಗಾತ್ರದ ಪೆನ್‌ಡ್ರೈವ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಪೆನ್‌ಡ್ರೈವ್‌ಗಳು ವಿವಿಧ ಯುಎಸ್‌ಬಿ ಆವೃತ್ತಿಗಳಲ್ಲಿ ಬರುತ್ತವೆ. ಯುಎಸ್‌ಬಿ 2.0 : ಇದು ಅತ್ಯಂತ ಹಳೆಯ ಆವೃತ್ತಿ. ಪ್ರತಿ ಸೆಕೆಂಡ್‌ಗೆ 480 ಎಂ.ಬಿ. ಗಾತ್ರದಷ್ಟು ಫೈಲ್‌ಗಳನ್ನು ವರ್ಗಾವಣೆ ಮಾಡಲು ಸಾಧ್ಯ. ಫೈಲ್ ಸಂಗ್ರಹಣೆ ಮತ್ತು ದೈನಂದಿನ ಬಳಕೆಗೆ ಇದು ಸೂಕ್ತವಾಗಿದೆ.
ಯುಎಸ್‌ಬಿ 3.0 : ಪ್ರತಿ ಸೆಕೆಂಡ್‌ಗೆ 5 ಜಿಬಿ ಗಾತ್ರದಷ್ಟು ಫೈಲ್‌ಗಳನ್ನು ವರ್ಗಾಯಿಸಲು ಸಾಧ್ಯವಿದೆ. ದೊಡ್ಡ ಗಾತ್ರದ ಫೈಲ್‌ಗಳನ್ನು ತ್ವರಿತವಾಗಿ ವರ್ಗಾಯಿಸಲು ಇದು ಸೂಕ್ತ.
ಯುಎಸ್‌ಬಿ 3.1/ಯುಎಸ್‌ಬಿ 3.2 : ಇನ್ನೂ ವೇಗವಾಗಿ ಪ್ರತಿ ಸೆಕೆಂಡ್‌ಗೆ 10 ಜಿಬಿ ಗಾತ್ರದ ಫೈಲ್‌ಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಯುಎಸ್‌ಬಿ ಟೈಪ್-ಸಿ ಕನೆಕ್ಟ್ರ್‌ಗಳನ್ನೂ ಬೆಂಬಲಿಸುತ್ತದೆ.
ಇದನ್ನೂ ಗಮನದಲ್ಲಿರಿಸಿ. ಪೆನ್‌ಡ್ರೈವ್‌ಗಳಲ್ಲಿ ವಿಭಿನ್ನ ಪ್ರಕಾರದ ಕನೆಕ್ಟರ್‌ಗಳೂ ಇವೆ. ಯುಎಸ್‌ಬಿ ಟೈಪ್-ಎ (ಪ್ರಮಾಣಿತ), ಯುಎಸ್‌ಬಿ ಟೈಪ್-ಸಿ (ಹೊಸದು) ಮತ್ತು ಮೈಕ್ರೋ ಯುಎಸ್‌ಬಿ.
ಮೆಮೊರಿ ಕಾರ್ಡ್
ಕ್ಯಾಮೆರಾಗಳು, ಸ್ಮಾರ್ಟ್ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಗೇಮ್ ಕನ್ಸೋಲ್‌ಗಳಂತಹ ಗ್ಯಾಜೆಟ್‌ಗಳಲ್ಲಿ ಮೆಮೊರಿ ಕಾರ್ಡ್ಗಳನ್ನು ಬಳಸಲಾಗುತ್ತದೆ. ಮೆಮೊರಿ ಕಾರ್ಡ್ಗಳು ಫ್ಲಾö್ಯಷ್ ಮೆಮೊರಿಯನ್ನು ಬಳಸುತ್ತದೆ ಮತ್ತು ಇವು ಎಸ್‌ಡಿ, ಮೈಕ್ರೋ ಎಸ್‌ಡಿ ಮತ್ತು ಕಾಂಪ್ಯಾಕ್ಟ್ಫ್ಲ್ಯಾಶ್‌ನoತಹ ವಿಭಿನ್ನ ಸ್ವರೂಪಗಳಲ್ಲಿ ಲಭ್ಯವಿದೆ. ಅವುಗಳ ಶೇಖರಣಾ ಸಾಮರ್ಥ್ಯ ಮತ್ತು ವೇಗದಲ್ಲಿ ವ್ಯತ್ಯಾಸವಿರುತ್ತದೆ.
ಎಸ್‌ಡಿ (ಸುರಕ್ಷಿತ ಡಿಜಿಟಲ್) : ಮೂಲ ಪ್ರಮಾಣಿತ, 2 ಜಿಬಿ ಸಾಮರ್ಥ್ಯದವರೆಗೆ.
ಎಸ್‌ಡಿಎಚ್‌ಸಿ (ಹೆಚ್ಚಿನ ಸಾಮರ್ಥ್ಯ) : 32 ಜಿಬಿವರೆಗೆ ಸಂಗ್ರಹಣೆ, ಪ್ರಮಾಣಿತ.
ಎಸ್‌ಡಿಗಿಂತಲೂ ತ್ವರಿತ ವೇಗ. ಎಸ್‌ಡಿಎಕ್ಸ್ಸಿ (ವಿಸ್ತೃತ ಸಾಮರ್ಥ್ಯ) : ಎಚ್‌ಡಿ ಮತ್ತು ೪ಕೆ ಗಾತ್ರದ ವೀಡಿಯೋಗಳಿಗೆ ಇದು ಸೂಕ್ತ. ಹೆಚ್ಚಿನ ವೇಗದೊಂದಿಗೆ 32 ಜಿಬಿಯಿಂದ 2 ಟಿಬಿವರೆಗಿನ ಕಾರ್ಡ್ಗಳು ಲಭ್ಯವಿದೆ.
ಪ್ರತಿಯೊಂದು ಮೆಮೊರಿ ಕಾರ್ಡ್ಗಳು ಪ್ರತ್ಯೇಕ ರೈಟಿಂಗ್ ಸ್ಪೀಡ್ ಅನ್ನು ಹೊಂದಿರುತ್ತವೆ. ಅಂದರೆ ಕಡತಗಳ ವರ್ಗಾವಣೆ ವೇಗ ಬೇರೆ ಬೇರೆಯದ್ದಾಗಿರುತ್ತವೆ. ಉದಾಹರಣೆಗೆ : 2, 4, 6, 10 ಇತ್ಯಾದಿ. ಈ ಸಂಖ್ಯೆ ದೊಡ್ಡದಿದ್ದಷ್ಟು ವೇಗ ಹೆಚ್ಚಾಗಿರುತ್ತದೆ.
ಇನ್ನು ಇದೇ ರೀತಿ ಯುಎಚ್‌ಎಸ್ (ಅಲ್ಟಾç ಹೈಸ್ಪೀಡ್) ಕ್ಲಾಸ್‌ಗಳೂ ಬೇರೆ ಬೇರೆಯದ್ದಿವೆ. ಯುಎಚ್‌ಎಸ್ – |, ಯುಎಚ್‌ಎಸ್ – || ಮತ್ತು ಯುಎಚ್‌ಎಸ್ – |||. ವೃತ್ತಿಪರ ಫೋಟೋ ಹಾಗೂ ವೀಡಿಯೋಗ್ರಾಫಿ ಮಾಡುವವರು ಇದನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅತ್ಯಗತ್ಯ.
ಪತ್ತೆ ಹಚ್ಚುವುದು ಹೇಗೆ?
ಪೆನ್‌ಡ್ರೈವ್ ಯುಎಸ್‌ಬಿ ಕನೆಕ್ಟರ್‌ನ ಒಳಗಿನ ಬಣ್ಣವನ್ನು ನೋಡಿ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ನೀಲಿ ಬಣ್ಣದಲ್ಲಿದ್ದರೆ ಅವು ಸಾಮಾನ್ಯವಾಗಿ ಯುಎಸ್‌ಬಿ 3.0 ಅಥವಾ ಮೇಲಿನ ಆವೃತ್ತಿ ಎಂಬುದನ್ನು ಸೂಚಿಸುತ್ತದೆ. ಇನ್ನು ಕಪ್ಪು ಬಣ್ಣದಲ್ಲಿದ್ದರೆ ಯುಎಸ್‌ಬಿ 2.0 ಆವೃತ್ತಿಯದ್ದಾಗಿರುತ್ತದೆ. ಕೆಂಪು ಅಥವಾ ಬೇರೆ ಬಣ್ಣಗಳಿದ್ದರೆ ಅವು ಯುಎಸ್‌ಬಿ 3.1 ಹಾಗೂ ಅದರ ಮೇಲಿನ ಆವೃತ್ತಿಗಳಲ್ಲಿರುತ್ತವೆ. ಬಹುತೇಕ ಪೆನ್‌ಡ್ರೈವ್‌ಗಳ ಮೇಲ್ಮೆöÊಯಲ್ಲೇ ಯು.ಎಸ್.ಬಿ. 3.0, 3.1 ಎಂದು ಸ್ಪಷ್ಟವಾಗಿ ಬರೆಯಲಾಗುತ್ತದೆ. ಇತ್ತೀಚೆಗೆ ಟೈಪ್-ಸಿ ಕನೆಕ್ಟರ್‌ಗಳಿರುವ ಪೆನ್‌ಡ್ರೆöÊವ್‌ಗಳು ಜನಪ್ರಿಯತೆಗಿಟ್ಟಿಸುತ್ತಿವೆ. ಅವು ಇನ್ನೂ ಉತ್ತಮ ವೇಗವನ್ನು ಹೊಂದಿರುತ್ತವೆ.
ಮೆಮೊರಿ ಕಾರ್ಡ್ಗಳ ಲೇಬಲ್‌ನಲ್ಲೇ ಅವುಗಳ ಆವೃತ್ತಿ ಯಾವುದು ಎಂದು ನಮೂದಾಗಿರುತ್ತದೆ. ಎಸ್‌ಡಿ, ಎಸ್‌ಡಿಎಚ್‌ಸಿ, ಎಸ್‌ಡಿಎಕ್ಸ್ಸಿ ಹೀಗೆ ಅದರ ಸಾಮರ್ಥ್ಯ ಏನು ಎಂದು ಇದನ್ನು ನೋಡುವಾಗಲೇ ಗೊತ್ತಾಗುತ್ತದೆ. ಅದರ ರೈಟಿಂಗ್ ಸ್ಪೀಡ್ (2, 4, 6,10) ಅನ್ನೂ ನಮೂದಿಸುತ್ತಾರೆ.
