ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ‘ಜ್ಞಾನವಿಕಾಸ’

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)

ಹೆಣ್ಣು ಸಮಾಜದ ಕಣ್ಣು ಎನ್ನುವುದು ಅತ್ಯಂತ ಅರ್ಥಗರ್ಭಿತವಾದ ಮಾತು. ಆದರೆ ಎಷ್ಟೋ ಸಂದರ್ಭದಲ್ಲಿ ಅವಕಾಶವಂಚಿತರಾದ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಅಜ್ಞಾನದ ಅಂಧಕಾರದಿAದಾಗಿ ಕಣ್ಣನ್ನೇ ತೆರೆಯಲಾಗದಂತಹ ಸ್ಥಿತಿಯಲ್ಲಿರುವಾಗ ಸಮಾಜದ ಕಣ್ಣಾಗುವುದು ಎನಿತು? ಗ್ರ‍್ರಾಮೀಣ ಪ್ರದೇಶದಲ್ಲಿ ಇದು ಸಾಮಾನ್ಯ. ಅದರಲ್ಲೂ ಸಂಸಾರಸ್ಥ ಮಹಿಳೆಯರ ಸಂಖ್ಯೆ ಬಹಳಷ್ಟು. ಹಳ್ಳಿಗಳಲ್ಲಿ ಮಕ್ಕಳ ಶಿಕ್ಷಣವೇ ಕಷ್ಟ, ಇನ್ನು ಸಂಸಾರಸ್ಥ ಮಹಿಳೆಯರಿಗೆ ಇನ್ನೆಲ್ಲಿ ಶಿಕ್ಷಣ? ಶತಮಾನಗಳಿಂದಲೂ ಇದ್ದ ಈ ಗಂಭೀರ ಸಮಸ್ಯೆಯನ್ನು ಸೂಕ್ಷö್ಮತೆಯಿಂದ ಅಧ್ಯಯನ ಮಾಡಿ ಒಂದು ಸೂಕ್ತ ಮಾರ್ಗೋಪಾಯವನ್ನು ಕಂಡುಕೊAಡವರು ನಮ್ಮ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು. ಅದೇ ಜ್ಞಾನವಿಕಾಸ ಕಾರ್ಯಕ್ರಮ. ಜ್ಞಾನವಿಕಾಸ ಕಾರ್ಯಕ್ರಮ ಗ್ರಾಮಾಭಿವೃದ್ಧಿ ಯೋಜನೆಯ ಅತ್ಯಂತ ವೈಶಿಷ್ಟö್ಯ ಪೂರ್ಣ ಕಾರ್ಯಕ್ರಮವಾಗಿದೆ. ಇದು ಶೈಕ್ಷಣಿಕ ಶಿಕ್ಷಣ ನೀಡುವಂತಹ ಸಾಂಪ್ರದಾಯಿಕ ಪದ್ಧತಿಯಾಗಿಲ್ಲ, ಬದಲಾಗಿ ಮಹಿಳೆಯರಲ್ಲಿದ್ದ ಅಂಧಕಾರವನ್ನು ತೊಲಗಿಸಿ ಜ್ಞಾನವನ್ನು ವಿಕಸಿತಗೊಳಿಸುವ ಬದುಕಿನ ಶಿಕ್ಷಣವಾಗಿದೆ. ಮಾತೃಶ್ರೀಯವರು ನಮ್ಮ ರಾಜ್ಯದಲ್ಲಿ ಜ್ಞಾನವಿಕಾಸ ಕಾರ್ಯಕ್ರಮವನ್ನು ಯೋಜನೆಯ ಮೂಲಕ ೧೯೯೩ ರಂದು ಪ್ರಾರಂಭಿಸಿದರು. ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ರಾಜ್ಯದ ಉದ್ದಗಲಕ್ಕೂ ಪ್ರಸರಿಸಿತು. ಒಂದು ತಾಲೂಕಿನಲ್ಲಿ ಕನಿಷ್ಟ ೨೫ ಕೇಂದ್ರದAತೆ ರಾಜ್ಯಾದ್ಯಂತ ಒಟ್ಟು ೫೨೦೫ ಜ್ಞಾನವಿಕಾಸ ಕೇಂದ್ರಗಳನ್ನು ಸ್ಥಾಪಿಸಿ, ಪ್ರತೀ ಗ್ರಾಮ ಮಟ್ಟದ ಕೇಂದ್ರದಲ್ಲಿ ಅಲ್ಲಿಯ ಮಹಿಳೆಯರು ಈ ಕಾರ್ಯಕ್ರಮದ ಸದಸ್ಯರಾಗಲು ಅವಕಾಶ ಕಲ್ಪಿಸಿದರು. ಕೌಟುಂಬಿಕ ಸಾಮರಸ್ಯ, ಆರೋಗ್ಯ ಮತ್ತು ನೈರ್ಮಲ್ಯ, ಶಿಕ್ಷಣ, ಪೌಷ್ಠಿಕ ಆಹಾರ, ಸರ್ಕಾರದ ಯೋಜನೆಗಳು ಮತ್ತು ಕಾನೂನು ಹಾಗೂ ಸ್ವ-ಉದ್ಯೋಗಗಳೆಂಬ ೬ ಮೂಲಭೂತ ವಿಷಯಾಧಾರಿತವಾಗಿ ಮಾತೃಶ್ರೀಯವರು ಈ ಕಾರ್ಯಕ್ರಮವನ್ನು ರೂಪಿಸಿದರು. ಗ್ರಾಮಗಳಲ್ಲಿರುವ ನಮ್ಮ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರೆ ಜ್ಞಾನವಿಕಾಸ ಕಾರ್ಯಕ್ರಮದ ಸದಸ್ಯರಾಗಿ ಅಲ್ಲಿಯ ಕೇಂದ್ರಗಳಲ್ಲಿ ಸೇರಿಕೊಂಡು ಮೇಲಿನ ೬ ವಿಷಯಾಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ತಾಲೂಕಿಗೆ ಓರ್ವರಂತೆ ಇರುವ ಜ್ಞಾನವಿಕಾಸ ಸಮನ್ವಯಾಧಿಕಾರಿ ಈ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಜ್ಞಾನವಿಕಾಸದ ಪ್ರತಿಯೊಂದು ಕಾರ್ಯಕ್ರಮನ್ನು ಮಾತೃಶ್ರೀ ಅಮ್ಮನವರೇ ಬಹಳ ಸೂಕ್ಷö್ಮತೆಯಿಂದ ರೂಪಿಸಿ, ಪ್ರತಿ ಗ್ರಾಮ ಮಟ್ಟದ ಕೇಂದ್ರಗಳಲ್ಲಿ ಅವುಗಳು ಸಮರ್ಪಕವಾಗಿ ಅನುಷ್ಠಾನ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ, ವಿಷಯಾಧಾರಿತ ತಜ್ಞರಿಂದ ಇಂತಹ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಮಾಹಿತಿ ಕಾರ್ಯಾಗಾರ, ವಿಮರ್ಶೆ, ಅಭಿಪ್ರಾಯ ವಿಚಾರಗೋಷ್ಠಿಯಂತಹ ಅನೇಕ ಕಾರ್ಯಕ್ರಮಗಳು ಮಹಿಳೆಯರಿಗೆ ಸಾಕಷ್ಟು ಅರಿವನ್ನು ಮೂಡಿಸುತ್ತಿವೆ. ಅವುಗಳ ಜೊತೆಗೆ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳು, ಸೃಜನಶೀಲ ಕಾರ್ಯಕ್ರಮಗಳು, ಸ್ವ-ಉದ್ಯೋಗ ತರಬೇತಿಗಳು, ಅಧ್ಯಯನ ಪ್ರವಾಸ ಹಾಗೂ ಜ್ವಲಂತ ವಿಷಯಾಧಾರಿತ ಕಾರ್ಯಕ್ರಮಗಳಂತ ಅನೇಕ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳು ಒಳ್ಳೆಯ ಅನುಭವ ಹಾಗೂ ಕೌಶಲ್ಯಗಳನ್ನು ಕಲಿಸಿಕೊಡುತ್ತಿದ್ದವು. ಈ ಅರಿವು ಮತ್ತು ಅನುಭವಗಳು ಪರಿಪಕ್ವ ಸಮನ್ವತೆಯೊಂದಿಗೆ ಅವರ ಜ್ಞಾನವನ್ನು ವಿಕಸಿತಗೊಳಿಸುತ್ತಾ, ಅವರನ್ನು ಪ್ರಜ್ಞಾವಂತ ಮಹಿಳೆಯರನ್ನಾಗಿಸಿದೆ.ಕಳೆದ ಮೂರು ವರ್ಷಗಳಿಂದ ಒಟ್ಟು ೧,೨೨,೬೧೪ ಜ್ಞಾನವಿಕಾಸ ಕಾರ್ಯಕ್ರಮಗಳು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದು ಲಕ್ಷಾಂತರ ಗ್ರಾಮೀಣ ಮಹಿಳೆಯರ ಕಣ್ತೆರೆಸಿದೆ.
ಇಂದು ಜ್ಞಾನವಿಕಾಸ ಸದಸ್ಯರು ಉತ್ತಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಸಂಸಾರ ಹಾಗೂ ಸಮಾಜದ ನಿಜಾರ್ಥದ ಕಣ್ಣುಗಳಾಗಿದ್ದಾರೆ. ಯೋಜನೆಯ ಅನೇಕ ಕಾರ್ಯಕ್ರಮಗಳನ್ನು ಸದುಪಯೋಗ ಪಡೆದುಕೊಂಡವರಲ್ಲಿ ಇವರೇ ಮೊದಲಿಗರು. ತಾವು ಅವಿದ್ಯಾವಂತರಾದರೂ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸುತ್ತಿದ್ದಾರೆ. ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುತ್ತಿದ್ದಾರೆ. ಸ್ವಚ್ಛತೆ, ಆರೋಗ್ಯದ ಅರಿವಿದ್ದುದರಿಂದ ಆರೋಗ್ಯ ಕುಟುಂಬಕ್ಕೆ ಕಾರಣರಾಗಿದ್ದಾರೆ, ಉತ್ತಮ ವ್ಯವಹಾರ ಜ್ಞಾನವನ್ನು ಕಲಿತಿದ್ದಾರೆ, ಯೋಜನೆಯಿಂದ ಸಾಲವನ್ನು ಪಡೆದು ಅನೇಕ ಆದಾಯ ಚಟುವಟಿಕೆಗಳನ್ನು ಕೈಗೊಂಡು ಉತ್ತಮ ಆದಾಯಗಳಿಸುತ್ತಿದ್ದಾರೆ. ಸಂಖ್ಯಾಶಾಸ್ತç ತಿಳಿದಿಲ್ಲದಿದ್ದರೂ, ಉತ್ತಮ ವ್ಯವಹಾರ ಜ್ಞಾನ ಹೊಂದಿದ್ದು, ಸ್ವತಂತ್ರವಾಗಿ ಸಂಘದ ಹಾಗೂ ಬ್ಯಾಂಕಿನ ವ್ಯವಹಾರ ಮಾಡುತ್ತಿದ್ದಾರೆ. ಅಸಲು, ಬಡ್ಡಿ, ಕಂತು, ಮರುಪಾವತಿ, ಉಳಿತಾಯ ಎಲ್ಲಾ ಲೆಕ್ಕಾಚಾರದಲ್ಲಿ ಪರಿಣಿತರಾಗಿದ್ದಾರೆ. ಸಾಮಾನ್ಯ ಜ್ಞಾನದೊಂದಿಗೆ ಸಮಾಜದ ಆಗು ಹೋಗುಗಳ ಅರಿವಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆದು ಸದ್ವಿನಿಯೋಗಿಸುತ್ತಿದ್ದಾರೆ. ಸಂಘದ ವಾರದ ಸಭೆಗಳಲ್ಲಾಗಲಿ, ಗ್ರಾಮದ ಸಭೆಗಳಲ್ಲಾಗಲಿ ಅಳುಕಿಲ್ಲದೆ ಮುಂದೆ ಬಂದು ಮಾತಾನಾಡುತ್ತಾರೆ. ಅದು ಸುಮ್ಮನೆ ಮಾತಲ,್ಲ ಉತ್ತಮ ವಿಷಯಗಳನ್ನು ಮಂಡಿಸುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಹೆಣ್ಣು ಸಮಾಜದ ಕಣ್ಣು ಎನ್ನುವುದಕ್ಕೆ ಜ್ಞಾನವಿಕಾಸ ಕಾರ್ಯಕ್ರಮ ನಿಜವಾದ ಅರ್ಥ ತುಂಬಿದೆ. ಇದೊಂದು ರೀತಿಯಲ್ಲಿ ಗ್ರಾಮೀಣ ಮಹಿಳಾ ಸಬಲೀಕರಣದ ಯಶೋಗಾಥೆಯೇ ಸರಿ. ಈ ಯಶೋಗಾಥೆಗೆ ಕಾರಣೀಭೂತರಾದ ಮಾತೃಶ್ರೀ ಹೇಮಾವತಿ ಅಮ್ಮನವರ ಈ ದೀರ್ಘ ಸೇವಾ ತಪಸ್ಸನ್ನು ಮಂಗಳೂರು ವಿಶ್ವವಿದ್ಯಾನಿಲಯ ವಿಶೇಷವಾಗಿ ಅವಲೋಕಿಸಿ ಬಹುವಾಗಿ ಮೆಚ್ಚಿಕೊಂಡಿದೆ. ತನ್ನ ೪೦ ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯದ ಘನವೆತ್ತ ರಾಜ್ಯಪಾಲರಿಂದ ಮಾತೃಶ್ರೀ ಅಮ್ಮನವರಿಗೆ “ಶಿಕ್ಷಣ ಮತು ಸಮಾಜ ಸೇವೆಯಾಧಾರಿತ ಗೌರವ ಡಾಕ್ಟರೇಟ್” ಪ್ರಶಸ್ತಿ ನೀಡಿ ವಿಶೇಷವಾಗಿ ಗೌರವಿಸಿದೆ. ಈ ವಿಶೇಷ ಮಾನ್ಯತೆಯಿಂದಾಗಿ ಇಂದಿನ ಯುವ ಪೀಳಿಗೆಗೆ ಮಾತೃಶ್ರೀ ಅಮ್ಮನವರ ಈ ಕಾರ್ಯಕ್ರಮದ ಮೇಲೆ ಇನ್ನು ಹೆಚ್ಚಿನ ಸಂಶೋಧನೆಯನ್ನು ಮಾಡಲು ಅವಕಾಶ ತೆರೆದಂತಾಗಿದೆ. ಹಾಗೆಯೇ ಇತರ ರಾಜ್ಯದ ಸೇವಾ ಸಂಸ್ಥೆಗಳಿಗೂ ಈ ಕಾರ್ಯಕ್ರಮವನ್ನು ಅಧ್ಯಯನ ಮಾಡಿ ಅವರ ರಾಜ್ಯದಲ್ಲಿ ಹಮ್ಮಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *