ದಿನೇಶ ಬಿ.ಕಾಂ. ಪದವೀಧರ. ಬೆಂಗಳೂರಿನ ಕಂಪನಿಯೊoದರ ಉದ್ಯೋಗಿ. ಕೈತುಂಬಾ ಸಂಬಳ, ಚಂದದ ಮನೆ ಎಲ್ಲವೂ ಇತ್ತು. ಆದರೆ ಇತ್ತೀಚೆಗೆ ಅವನ ಹೆಣ ಮನೆಯ ಫ್ಯಾನ್‌ನಲ್ಲಿ ನೇತಾಡುತ್ತಿತ್ತು.
ಈ ಘಟನೆ ಪೊಲೀಸರಲ್ಲಿ ಹತ್ತಾರು ಸಂಶಯಗಳನ್ನು ಹುಟ್ಟುಹಾಕಿದವು. ದಿನಕಳೆದಂತೆ ದಿನೇಶನ ಮೊಬೈಲ್‌ಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಂದೇಶಗಳು ಬರತೊಡಗಿದವು. ಇದರ ಬೆನ್ನು ಹತ್ತಿ ಹೋದ ಖಾಕಿಗಳಿಗೆ ಎದುರಾದಳು ‘ಫೇಸ್‌ಬುಕ್ ಮಾಯಾಂಗನೆ.’
ದಿನೇಶನಿಗೆ ಒಂದು ದಿನ ಫೇಸ್‌ಬುಕ್‌ನಲ್ಲಿ ‘ನೇಹಾ ಶರ್ಮಾ’ಳ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ರಿಕ್ವೆಸ್ಟ್ಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ. ದಿನಕಳೆದಂತೆ ನೇಹಾ ಶರ್ಮಾ ಹತ್ತಿರವಾಗತೊಡಗಿದಳು. ಸಂಭಾಷಣೆಗಳು ನಡೆದವು. ಮೆಸೇಜ್‌ಗಳ ಮೂಲಕ ಪರಸ್ಪರ ಹತ್ತಿರವಾದರು. ನೇಹಾ ಶರ್ಮಾ ತನ್ನ ಮಾದಕ ಫೋಟೊಗಳನ್ನು ದಿನೇಶನ ಮೊಬೈಲ್‌ಗೆ ಕಳುಹಿಸತೊಡಗಿದಳು. ಫೋಟೊಗಳನ್ನು ನೋಡುತ್ತಲೇ ದಿನೇಶ್ ನೇಹಾಳ ಗುಂಗಿನಲ್ಲೇ ಮೈಮರೆಯತೊಡಗಿದ.
ಅದೊಂದು ದಿನ ನೇಹಾ ವೀಡಿಯೋ ಕರೆ ಮಾಡುವಂತೆ ಹಟ ಮಾಡಿದಳು. ವೀಡಿಯೋ ಕರೆ ವೇಳೆ ಆಕೆಯ ಸೌಂದರ್ಯಕ್ಕೆ ಮನಸೋತ ಯುವಕ ಆಕೆ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿದ.
ವೀಡಿಯೋ ಕರೆ ಅಂತ್ಯಗೊoಡ ಕೆಲವೇ ಗಂಟೆಗಳಲ್ಲಿ ದಿನೇಶನ ಮೊಬೈಲ್‌ಗೆ ವೀಡಿಯೊವೊಂದು ಬಂದಿತ್ತು. ಅದನ್ನು ನೋಡಿದ ದಿನೇಶನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಆ ವೀಡಿಯೋವನ್ನು ಮುಂದಿಟ್ಟುಕೊoಡು ಶರ್ಮಾಳ ಮ್ಯಾನೇರ‍್ಸ್ ಎಂದು ಪರಿಚಯಿಸಿಕೊಂಡು ತಂಡವೊoದು ಬ್ಲಾö್ಯಕ್ ಮೇಲ್‌ಗೆ ಇಳಿಯಿತು. ಕೇಳಿದಷ್ಟು ಹಣ ನೀಡದಿದ್ದರೆ ಖಾಸಗಿ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದರು. ಕುಟುಂಬಸ್ಥರಿಗೆ, ಸ್ನೇಹಿತರಿಗೆ ಕಳುಹಿಸಿ ಮಾನ ಹರಾಜು ಹಾಕುವುದಾಗಿ ಹೆದರಿಸಿದರು.
ದಿನೇಶ್ ಬೇರೆ ದಾರಿಯಿಲ್ಲದೆ ಮರ್ಯಾದೆಗೆ ಅಂಜಿ ತನ್ನ ಬಳಿಯಿದ್ದ ಹಣವನ್ನೆಲ್ಲ ಅವರ ಖಾತೆಗೆ ವರ್ಗಾಯಿಸಿದ. ಆದರೆ ಹಣಕ್ಕಾಗಿ ಕಿರುಕುಳ ನೀಡುವುದು ಹೆಚ್ಚಾಗುತ್ತಲೇ ಹೋಯಿತು. ತನ್ನ ಗೆಳೆಯರಿಂದ, ಸಂಬoಧಿಕರಿoದ ಸಾಲ ಪಡೆದು ಅವರಿಗೆ ನೀಡಿದ. ಲಕ್ಷಗಟ್ಟಲೆ ಹಣ ನೀಡಿದರೂ ಅವರ ಕಿರುಕುಳ ಮಾತ್ರ ತಪ್ಪಲೇ ಇಲ್ಲ. ಮನೆಯಲ್ಲಿ ವಿಷಯ ಗೊತ್ತಾದರೆ ತನ್ನ ಘನತೆ – ಗೌರವ ಮಣ್ಣು ಪಾಲಾಗುತ್ತದೆ ಅಂದುಕೊoಡು ಒಂದು ದಿನ ಮೊಬೈಲ್ ಸ್ವಿಚ್ಡ್ಆಫ್ ಮಾಡಿ ನೇಣಿಗೆ ಕೊರಳೊಡ್ಡುವ ನಿರ್ಧಾರ ಮಾಡಿದ.
ಹಣ ಕೊಡುತ್ತಿದ್ದ ಯುವಕನ ಮೊಬೈಲ್ ಇದ್ದಕ್ಕಿದ್ದಂತೆ ಸ್ವಿಚ್ಡ್ಆಫ್ ಆಗಿರುವುದು ನೇಹಾ ಶರ್ಮಾ ಆ್ಯಂಡ್ ಗ್ಯಾಂಗ್‌ಗೆ ಅಚ್ಚರಿಯನ್ನುಂಟು ಮಾಡಿತ್ತು. ಅವನ ಫೇಸ್‌ಬುಕ್ ಫ್ರೆಂಡ್ ಲಿಸ್ಟ್ನಲ್ಲಿದ್ದ ಅವನ ಸಹೋದರರಿಗೆ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಲಾಗಿತ್ತು. ಅವರಲ್ಲಿ ದಿನೇಶನ ನಂಬರ್ ನೀಡುವಂತೆ ಪೀಡಿಸತೊಡಗಿದರು. ಅನುಮಾನಗೊಂಡು ಸಹೋದರ ತನ್ನ ಸಂಬoಧಿಕರೊಬ್ಬರ ಮೊಬೈಲ್ ನಂಬರ್ ಅನ್ನು ಕೊಡುತ್ತಾನೆ. ವಂಚಕರ ತಂಡ ಆ ನಂಬರ್‌ಗೆ ಮೆಸೇಜ್ ಕಳುಹಿಸತೊಡಗುತ್ತಾರೆ. “ಅಂತಿಮವಾಗಿ 50ಸಾವಿರ ರೂಪಾಯಿ ಕೊಟ್ಟರೆ ವೀಡಿಯೋ ಡಿಲೀಟ್ ಮಾಡುತ್ತೇವೆ. ಇಲ್ಲದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವನ್ನು ಹರಿಯಬಿಡುತ್ತೇವೆ.” ಎಂದು ಹೆದರಿಸುತ್ತಾರೆ.
ದಿನೇಶನ ಸಾವಿಗೆ ಕಾರಣವಾದ ನೇಹಾ ಶರ್ಮಾಳ ಫೇಸ್‌ಬುಕ್ ಖಾತೆಯ ಯುಆರ್‌ಎಲ್ ಲಿಂಕ್, ಹಣದ ಬೇಡಿಕೆಯ ದೂರವಾಣಿ ಕರೆಗಳ ಬೆನ್ನು ಬಿದ್ದ ಪೊಲೀಸರು ರಾಜಸ್ಥಾನದ ರಸುಲ್‌ಪುರಕ್ಕೆ ತೆರಳಿ ರಾಬಿನ್ ಮತ್ತು ಜಾವೇದ್ ಎಂಬವರನ್ನು ಬಂಧಿಸುತ್ತಾರೆ.
ಇoತಹ ಕೆಲಸಗಳಲ್ಲಿ ನಾಲ್ಕೆöÊದು ಮಂದಿ ಒಂದು ತಂಡವಾಗಿ ಕೆಲಸ ಮಾಡುತ್ತಾರೆ. ಆರೋಪಿಗಳ ತಂಡ ‘ನೇಹಾ ಶರ್ಮಾ’ ಸೇರಿದಂತೆ ಹಲವು ಹೆಸರುಗಳಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ತೆರೆದು ಯುವಕರಿಗೆ ಗಾಳ ಹಾಕುತ್ತಿತ್ತು.
ಯಾರಿವಳು ನೇಹಾ ಶರ್ಮಾ?
ಯುವಕರು ಯುವತಿಯರಂತೆ ಕಾಣುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಪ್ ಬಳಸಿ ವೀಡಿಯೋ ರೆಕಾರ್ಡ್ ಮಾಡುತ್ತಾರೆ. ಯುವತಿಯೇ ಲೈವ್ ವೀಡಿಯೋ ಕರೆಯಲ್ಲಿದ್ದಾಳೆಂದು ಭಾವಿಸಿ ಯುವಕರು ಸಂವಹನ ನಡೆಸುತ್ತಾರೆ. ಈ ವೀಡಿಯೋ ಬಳಸಿಕೊಂಡು ವಂಚಕರ ತಂಡ ಬ್ಲಾö್ಯಕ್ ಮೇಲ್ ಮಾಡಿ ಹಣ ಸಂಗ್ರಹಿಸುತ್ತದೆ.
ಯುವಕರೇ ಎಚ್ಚರ
ಅಪರಿಚಿತ ವ್ಯಕ್ತಿಗಳಿಂದ ಅದರಲ್ಲೂ ಮುಖ್ಯವಾಗಿ ಯುವತಿಯರ ಹೆಸರಿನಲ್ಲಿ ಬರುವ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ಗಳ ಬಗ್ಗೆ ಜಾಗೃತೆ ವಹಿಸಿ. ಒಂದು ವೇಳೆ ಅಪರಿಚಿತ ನಂಬರ್‌ಗಳಿoದ ಸಂಶಯಾಸ್ಪದ ಕರೆ ಅಥವಾ ಸಂದೇಶಗಳು ಬರುತ್ತಿದ್ದರೆ ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರವಹಿಸಿ.