ಬಡತನ ನೀಗಿಸಿದ ಚಕ್ಕುಲಿ ವ್ಯಾಪಾರ
ಚೆಲುವಮ್ಮ ಮೂಲತಃ ತಮಿಳುನಾಡಿನವರು. ಬಡತನದಲ್ಲೆ ಬೆಳೆದವರು. ತಂದೆ – ತಾಯಿ ಕೂಲಿ ಕೆಲಸಕ್ಕೆ ಹೋಗಿ ಬಂದ ಆದಾಯದಲ್ಲಿ ಜೀವನ ನಡೆಸುತ್ತಿದ್ದರು. ಮನೆಮಂದಿಯ ಹೊಟ್ಟೆ ತುಂಬಿಸುವುದೇ ಸವಾಲಾಗಿದ್ದರಿಂದ ಚೆಲುವಮ್ಮನೂ ಶಾಲೆಗೆ ಹೋಗದೆ ಮನೆಯ ಕೆಲಸಗಳನ್ನು ನೋಡಿಕೊಂಡಿರುತ್ತಿದ್ದರು.ವಿವಾಹದ ನಂತರ ಕೆಲವು ವರ್ಷಗಳ ಹಿಂದೆ ಚೆಲುವಮ್ಮ ದಂಪತಿಗಳು ತಿ. ನರಸೀಪುರಕ್ಕೆ ವಲಸೆ ಬಂದರು. ಗಂಡ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಬಡತನ ಇವರ ಬೆನ್ನುಬಿಡಲಿಲ್ಲ. ಕೂಲಿ ಕೆಲಸದಿಂದ ಸಿಗುತ್ತಿದ್ದ ಆದಾಯ ಕುಟುಂಬ ನಿರ್ವಹಣೆಗೆ ಸಾಲದಾಯಿತು. ತಾನು ಯಾವುದಾದರೂ ಸ್ವಉದ್ಯೋಗ ಮಾಡಿ ಆದಾಯ […]
ಹಾಲು ಉತ್ಪಾದನೆಯಲ್ಲಿ ವ್ಯತ್ಯಯವಾಗುತ್ತಿದೆಯೇ?
ಹೈನುಗಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಲ್ಲಿ ಹಾಲು ಉತ್ಪಾದನೆಯಲ್ಲಿನ ವ್ಯತ್ಯಯ ಕೂಡಾ ಬಹುಮುಖ್ಯವಾದುದು.ಕಾರಣ ಮತ್ತು ಪರಿಹಾರಆಹಾರ : ದಿನನಿತ್ಯ ಪಶು ಆಹಾರ ಕೊಡುವ ಪ್ರಮಾಣ ಅಥವಾ ಸಮಯದಲ್ಲಿ ವ್ಯತ್ಯಾಸವಾದರೂ ಕೂಡಾ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಗರ್ಭದ ಅವಧಿಯಲ್ಲಿ ಆರೈಕೆ ಸರಿಯಾಗದಿದ್ದರೆ, ಆಹಾರದ ಕೊರತೆಯಾದರೆ, ಅಗತ್ಯವಿರುವ ಪೋಷಕಾಂಶಗಳು ಸಿಗದಿದ್ದಲ್ಲಿ ಹಾಲು ಉತ್ಪಾದನೆಯಲ್ಲಿ ವ್ಯತ್ಯಯಗಳಾಗುತ್ತವೆ. ದಿನನಿತ್ಯ ನೀಡುವ ಹಸಿರು ಮೇವಿನ ಪ್ರಮಾಣ ಕಡಿಮೆಯಾದರೂ ಹಾಲು ಉತ್ಪಾದನೆಯಲ್ಲಿ ವ್ಯತ್ಯಾಸ ಕಾಣಬಹುದು. ಆದ್ದರಿಂದ ದಿನನಿತ್ಯ ಲವಣ ಮಿಶ್ರಣ ನೀಡುವುದೊಳಿತು. ಆಹಾರದಲ್ಲಿ ಎಣ್ಣೆಕಾಳು […]
ಹೆಚ್ಚು ನೀರು ಕುಡಿಸಿರಿ!
ನೀವು ಸಾಕುವ ಹಸು, ಎಮ್ಮೆ ಹೆಚ್ಚು ಹಾಲು ನೀಡಬೇಕಾದರೆ ಹೆಚ್ಚು ನೀರು ಕುಡಿಯಲೇಬೇಕು. ಏಕೆಂದರೆ ಹಾಲಿನಲ್ಲಿ ಶೇ.85 ರಷ್ಟು ನೀರೇ ಇರುತ್ತದೆ. ಇನ್ನು ಶೇ.15 ರಷ್ಟು ಉಳಿದ ಪೋಷಕಾಂಶಗಳಿರುತ್ತವೆ. ಉಳಿದ ಪೋಷಕಾಂಶಗಳಿಗಾಗಿ ಪಶು ಆಹಾರ ನೀಡುವುದರಿಂದ ಸರಿ ಹೊಂದುತ್ತದೆ. ರೈತರು ತಮ್ಮ ಜಾನುವಾರುಗಳಿಗೆ ಅವು ಕುಡಿಯುವಷ್ಟು ನೀರನ್ನು ಒದಗಿಸದಿದ್ದಲ್ಲಿ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ.ನೀರು ಏಕೆ ಅವಶ್ಯಕ?ಸಸಾರಜನಕ, ಕೊಬ್ಬು, ಶರ್ಕರಪಿಷ್ಟ, ಲವಣ ಮುಂತಾದ ಜೀವಸತ್ವಗಳಂತೆ ನೀರು ಕೂಡಾ ಪ್ರಮುಖವಾದ ಹಾಗೂ ಅಗತ್ಯವಾದ ಪೋಷಕಾಂಶ. ನೀರು ದೇಹದಲ್ಲಿನ ಹಲವಾರು ಶಾರೀರಿಕ […]
ಥರ್ಮಕೋಲ್ ಬಳಸಿ – ಭತ್ತದ ಸಸಿ ತಯಾರಿಸಿ
‘ದುಂಬು ಎನ್ಪ ಸೆನ್ಸ್ ಕಂಡಗ್ ಪದಿನೈನ್ ಜನ ಮೂಜಿ ದಿನೊಟ್ ನೇಜಿ ನಡ್ಪೆದ. ಇತ್ತೆ ಥರ್ಮಕೋಲ್‌ಡ್ ನೇಜಿ ಮಲ್ಪುನೆಡ್ದ್ ಆವಾರ ಎಣ್ಮ ಜನ ಒಂಜೆ ದಿನಟ್ ನಡ್ದ್ ಮುಗಿಪುಬ.’ (ಹಿಂದೆ ೮೦ ಸೆನ್ಸ್ ಗದ್ದೆಗೆೆ ನೇಜಿ ನಾಟಿ ಮಾಡಲು ಹದಿನೈದು ಮಂದಿ ಬೇಕಿತ್ತು. ಮೂರು ದಿನ ತಗಲುತ್ತಿತ್ತು. ಇದೀಗ ಥರ್ಮಕೋಲ್‌ನಲ್ಲಿ ನೇಜಿ ತಯಾರಿಸುವುದರಿಂದ ೮ ಮಂದಿ ಒಂದೇ ದಿನದಲ್ಲಿ ನೇಜಿ ನೆಟ್ಟು ಮುಗಿಸುತ್ತೇವೆ ಎನ್ನುತ್ತಾ ವಿಜಯ್ ಕುಂದರ್‌ರವರ ತಾಯಿ ಲೀಲಾವತಿ ಥರ್ಮಕೋಲ್‌ನಲ್ಲಿ ನೇಜಿ ತಯಾರಿಸುವುದರಿಂದ ರೈತರಿಗೆ ಆಗುವ […]
ಮಳೆಗಾಲದಲ್ಲಿ ಜಾನುವಾರುಗಳ ಆರೈಕೆ
ಮುಂಗಾರು ಮಳೆಯ ಹನಿಗಳು ಮನುಷ್ಯರನ್ನು ಮಾತ್ರ ತಣಿಸಬಲ್ಲವು. ಆದರೆ ಆ ಹನಿಗಳ ‘ಲೀಲೆ’ಯಿಂದ ಪರಿಸರದಲ್ಲಿ ಜಾನುವಾರುಗಳ ಪ್ರಾಣಕ್ಕೂ ಸಂಚಕಾರ ತರಬಲ್ಲ ಸೂಕ್ಷö್ಮ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಹಲವಾರು ರೋಗಗಳು ಜಾನುವಾರುಗಳನ್ನು ಪೀಡಿಸುತ್ತಿವೆ. ಬಿತ್ತನೆ ತಯಾರಿಯ ಸಮಯದಲ್ಲಿ ಎತ್ತುಗಳಿಗೆ ಕಾಯಿಲೆ ಬಂದರೆ ರೈತನಿಗೆ ಭಾರೀ ಪೆಟ್ಟು ಬಿದ್ದಂತೆ. ಆದ್ದರಿಂದ ಮಳೆಗಾಲದಲ್ಲಿ ಜಾನುವಾರುಗಳಿಗೆ ಬರುವ ರೋಗಗಳು ಮತ್ತು ಏನೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು ಎಂಬ ಮಾಹಿತಿ ಇಲ್ಲಿ ಇದೆ.ಮೂಗುಣ್ಣು / ಮೂಗೂರಿ (ಪೀನಾಸಿ ರೋಗ) : ವಿಶೇಷವಾಗಿ ಮೂಗುಣ್ಣು/ ಮೂಗುರಿ ಎಂಬ […]