2026 – ಮೇ
ಧೈರ್ಯ ತುಂಬಿದ ಪೂಜ್ಯರ ಆಗಮನ – ಕೊಡಗಿನ ಮೊಣ್ಣಂಗೇರಿ ಮರುನಿರ್ಮಾಣ
‘ಕೊಡಗು’ ಈ ಹೆಸರನ್ನು ಕೇಳಿದ ಕೂಡಲೇ ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರ, ಭಾರತಾಂಬೆಯ ರಕ್ಷಣೆಗೆ ಈ ಭೂಮಿ ನೀಡಿದ-ನೀಡುತ್ತಿರುವ ಕೊಡುಗೆ, ಚುಮುಚುಮು ಚಳಿ, ಕಾಫಿ ತೋಟ, ಸುಂದರ ತಾಣಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಹೂರಣ ನಮ್ಮ ಕಣ್ಣೆದುರಿನಲ್ಲಿ ರಾರಾಜಿಸುತ್ತದೆ. ಆದರೆ 2018ರ ಆಗಸ್ಟ್ 16 ಕೊಡಗಿನ ಸುಂದರ ಬದುಕಿನ ಕಥೆಗೆ ‘ಪ್ರಕೃತಿ ವಿಕೋಪ’ ಹೊಸ ಅಧ್ಯಾಯವೊಂದನ್ನು ಬರೆದಿದೆ.ನಿಶ್ಯಬ್ಧವಾಗಿದ್ದ ಕೊಡಗಿನಲ್ಲಿ ಪ್ರಕೃತಿ ಮುನಿಸಿಕೊಂಡು ರೌದ್ರನರ್ತನವನ್ನು ಪ್ರದರ್ಶಿಸಿದ ಪರಿಣಾಮ ಮಕ್ಕಂದೂರು, ಗಾಳಿಬೀಡು, ಮಾದಪುರ, ಮದೆನಾಡು, ಕೆ. ನಿಡುಗನೆ, ಹಟ್ಟಿಹೊಳೆ, ಎರಡನೇ […]
ಅರಿವೆಯ ಅರಿವು
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ದಾಸರ ಮಾತಿನಂತೆ ಮನುಷ್ಯ ಮೊದಲು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಬಗ್ಗೆ ಚಿಂತಿಸಿದರೆ, ಎರಡನೇಯದಾಗಿ ಬಟ್ಟೆಯ ಬಗ್ಗೆ ಚಿಂತಿಸುತ್ತಾನೆ. ಐರೋಪ್ಯ ದೇಶದ ಜನಪದ ಕಥೆಯೊಂದರಲ್ಲಿ ರಾಕ್ಷಸನೊಬ್ಬ ಪುರುಷರು ಯಾರೂ ಮನೆಯಲ್ಲಿ ಇಲ್ಲದ ವೇಳೆ ಒಂದು ಮನೆಗೆ ಬರುತ್ತಾನೆ. ಆಗ ಆ ಮನೆಯಲ್ಲಿದ್ದ ಮಹಿಳೆಗೆ ಬೇರೆ ದಾರಿ ಕಾಣದೆ ಗಂಡನ ಕೋಟಿನಿಂದ ತನ್ನ ಮತ್ತು ಮಕ್ಕಳ ರಕ್ಷಣೆ ಮಾಡುತ್ತಾಳಂತೆ. ಇದೊಂದು ಉಪಮೆ ಅಷ್ಟೇ. ಆದರೆ ಅನೇಕ […]
ರುದ್ರಭೂಮಿಗೆ ನೂತನ ಪರಿಕಲ್ಪನೆ ನೀಡಿದ ಗ್ರಾ.ಯೋಜನೆ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ಜ್ಞಾನದೀಪ ಶಿಕ್ಷಕರ ಒದಗಣೆ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ‘ರುದ್ರಭೂಮಿ’ಗಳ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆ ನೀಡಿದ ಕೊಡುಗೆಯ ಬಗ್ಗೆ ತಿಳಿದುಕೊಳ್ಳೋಣ.ಪ್ರತಿಯೊಬ್ಬರ ಪಾಲಿಗೂ ಸಾವು ಸಹಜ. ಉಸಿರು ನಿಂತು ಹೋದ ಮೇಲೆ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಶಾಸ್ತೊçÃಕ್ತವಾಗಿ ಪವಿತ್ರವಾದ ಸ್ಥಳದಲ್ಲಿ ನಡೆಯಬೇಕು. ಅಂತಹ ಮಹತ್ವದ ಕೆಲಸ ನಡೆಯುವುದೇ ‘ರುದ್ರಭೂಮಿ’ಗಳಲ್ಲಿ. ರುದ್ರಭೂಮಿ ಎಂದರೆ ಶಿವನ ಸ್ಥಾನ ಎಂದರ್ಥ. ಅವನ ಆವಾಸಸ್ಥಾನದಲ್ಲಿ ಅಗ್ನಿ ಸಂಸ್ಕಾರದಂತಹ ಮಹತ್ವಪೂರ್ಣ ಕಾರ್ಯಗಳು ನಡೆಯುವುದರಿಂದ […]
ಕಚ್ಛಾ ತೈಲ ಸಾಮ್ರಾಜ್ಯದಲ್ಲಿ ಭಾರತ
ಕಳೆದೊಂದು ತಿಂಗಳಿನಿಂದ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯಗಳೆಂದರೆ ಯುದ್ಧ ಹಾಗೂ ಇಂಧನದ ಬೆಲೆ. ಇವೆರಡೂ ವಿಚಾರದಲ್ಲಿ ಭಾರತವು ಅತ್ಯಂತ ನಾಜೂಕಿನ ಜಾಗದಲ್ಲಿ ಕುಳಿತಿದೆ. ಹಾಗೆಯೇ ಭಾರತವು ಜಾಗತಿಕವಾಗಿ ಕಚ್ಛಾತೈಲಗಳ ಆಮದು, ಬಳಕೆದಾರರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಹೊಂದಿದ್ದರೆ, ಅಚ್ಚರಿಯ ರೀತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಲ್ಲೂ ಎರಡನೇ ಸ್ಥಾನವನ್ನು ಪಡೆದಿದೆ. ಇದು ಭಾರತದ ಪೆಟ್ರೋಲಿಯಂ ವಹಿವಾಟಿನ ಸಂಕೀರ್ಣತೆಯನ್ನು ತೋರಿಸುತ್ತದೆ. ಇಂತಹ ವೈವಿಧ್ಯತೆಯ ಕಾರಣದಿಂದಲೇ ಜಾಗತಿಕ ಸಮರ ಕಾಲದಲ್ಲಿ ಭಾರತವು ಇಂಧನ ಸಂಕಷ್ಟದಲ್ಲಿ ಸಿಲುಕಿಲ್ಲ ಎನ್ನುವ ವಾದವಿದೆ. ಏಕೆಂದರೆ […]
ಮನಸ್ಸನ್ನು ಗೆಲ್ಲುವುದೆ ಮಹಾಸಾಧನೆ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಜಗತ್ತಿನ ಅತ್ಯದ್ಭುತ ಸೃಷ್ಟಿ ಯಾವುದು ಎಂದು ಕೇಳಿದರೆ ಅದು ಮನುಷ್ಯನ ಮನಸ್ಸು. ಅದು ಅದೃಶ್ಯ. ಆದರೆ ತನ್ನ ಇರುವಿಕೆಯನ್ನು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳ ಮೂಲಕ ಅಭಿವ್ಯಕ್ತಗೊಳಿಸುತ್ತಿರುತ್ತದೆ. ಮನುಷ್ಯನಿಗೆ ದೇವರು ಕೊಟ್ಟ ಅತ್ಯಂತ ಶಕ್ತಿಶಾಲಿ ಅಸ್ತçವಿದು.ಏಕಾಗ್ರತೆ ಹೊಂದಿರುವ ಮನಸ್ಸು, ಚಂಚಲ ಮನಸ್ಸು, ಒಳ್ಳೆಯ ಆಲೋಚನೆ, ಕೆಟ್ಟ ಆಲೋಚನೆಯ ಮನಸ್ಸುಗಳನ್ನು ನಾವು ಕಾಣುತ್ತೇವೆ. ಮನಸ್ಸು ಮನುಷ್ಯನ ನಡತೆಯ ಪ್ರತಿಬಿಂಬದಂತೆ ವರ್ತಿಸುತ್ತದೆ. ದೇಹ ಭೌತಿಕವಾದರೆ ಮನಸ್ಸು ಅಂತರ್ಯ. ಅದನ್ನು ಆತ್ಮದ ಬಂಧು ಎನ್ನಬಹುದು.ಮನಸ್ಸು ಎಲ್ಲಿದೆ? […]
ಚಿನ್ನದಂಥ ಸಾಲ ಮಾಡಿ ಜಾಣೆಯರಾದ ಯೋಜನೆಯ ಸದಸ್ಯರು
ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ‘ಚಿನ್ನಕ್ಕೆ ಚಿನ್ನವೇ ಸಾಟಿ’ ಎನ್ನುವ ಮಾತಿದೆ. ಜಗತ್ತಿನ ಎಲ್ಲಾ ದೇಶಗಳಲ್ಲೂ ಬೆಲೆಬಾಳುವ ವಸ್ತು ಚಿನ್ನ ಆಗಿದೆ. ಆರ್ಥಿಕ ವಿಚಾರದಲ್ಲಿ ಹಣ, ದುಡ್ಡು, ಕಾಸು ಭಾರತದಲ್ಲಿ ರೂಪಾಯಿ ಆದರೆ, ಅಮೆರಿಕಾದಲ್ಲಿ ಡಾಲರ್, ಜಪಾನ್‌ನಲ್ಲಿ ಯೆನ್ ಹಾಗೂ ಇತರ ದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಬಳಕೆಯಾಗುತ್ತಿವೆ. ಇವುಗಳ ಮೌಲ್ಯಗಳು ವಿದೇಶಿ ಕರೆನ್ಸಿಯ ವಿನಿಮಯದ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿವೆ. ಆದರೆ ಎಲ್ಲಾ ದೇಶಗಳಲ್ಲೂ ಆ ದೇಶದ ಕರೆನ್ಸಿಯ ನಂತರ ಗಟ್ಟಿಯಾಗಿ ನಿಲ್ಲುವ […]