ಮನಸ್ಸಿಗೆ ಪಾಠ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಈ ಜಗತ್ತು ಒಳಿತು-ಕೆಡುಕುಗಳೆರಡರ ಸಮ್ಮಿಶ್ರಣ. ಇಲ್ಲಿ ಹತ್ತು ಹಲವು ರೀತಿಯ, ವ್ಯಕ್ತಿತ್ವ, ಸ್ವಭಾವದ ಜನರನ್ನು ಕಾಣಬಹುದು. ಮುಖ್ಯವಾಗಿ ಸಮಾಜದಲ್ಲಿ ಎಲ್ಲ ಕಡೆ ಒಳ್ಳೆಯವರ ಒಂದು ಪ್ರತ್ಯೇಕ ಪಂಗಡವಿರುತ್ತದೆ. ಅವರು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಿರುತ್ತಾರೆ. ಅವರು ಪರೋಪಕಾರಿಗಳು, ಸಜ್ಜನರ ಸಂಗವನ್ನೆ ಬಯಸುವವರು, ಜೇನು ನೊಣದಂತಿರುತ್ತಾರೆ. ಅಂದರೆ ಜೇನು ನೊಣ ಯಾವಾಗಲೂ ಹೂವಿನೊಳಗಿನ ಮಧುವನ್ನು ಹೂವಿಗೆ ನೋವಾಗದಂತೆ ಸಂಗ್ರಹಿಸುತ್ತದೆ. ಜೇನು ಬಂದರೆ ಮಾತ್ರ ಹೂವಿನ ಪರಾಗಸ್ಪರ್ಶ ಕ್ರಿಯೆ ನಡೆಯುತ್ತದೆ. ಇವರುಗಳು ಎಲ್ಲಿ ಒಳ್ಳೆಯ ಕಾರ್ಯಗಳು […]

ಜಲಕ್ರಾಂತಿಗೆ ಮುನ್ನುಡಿ ಬರೆದ ನಮ್ಮೂರು ನಮ್ಮ ಕೆರೆ

ಅನಿಲ್ ಕುಮಾರ್ ಎಸ್‍. ಎಸ್‍. ಕಳೆದ ಸಂಚಿಕೆಯಲ್ಲಿ ‘ಶುದ್ಧಗಂಗಾ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಇಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಅತ್ಯಮೂಲ್ಯ ಕಾರ್ಯಕ್ರಮಗಳಲ್ಲಿ ಒಂದಾದ ‘ನಮ್ಮೂರು ನಮ್ಮ ಕರೆ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.ಒಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿ ಅತೀ ಕಡಿಮೆ ಅಂತರ್ಜಲ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನವನ್ನು ಪಡೆದಿದೆ. ಅಂದರೆ ನೀರಿನ ಸಮಸ್ಯೆ ಬಡವರ ನಿತ್ಯ ಸಮಸ್ಯೆಯಾಗಿಯೇ ಉಳಿದಿತ್ತು. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ದೊಡ್ಡ ಕೆರೆಗಳಿದ್ದರೂ, ಮಳೆಗಾಲ ಮುಗಿದ ಒಂದೆರಡು ತಿಂಗಳುಗಳಲ್ಲಿಯೇ ಕೆರೆಗಳು ಬತ್ತಿ ಹೋಗುತ್ತಿದ್ದವು. […]

ಜಗತ್ತನ್ನೇ ಬೆದರಿಸುತ್ತಿರುವ ಅಣ್ವಸ್ತ್ರ ಲೋಕದ ಸುತ್ತಮುತ್ತ

ರಾಜೀವ ಹೆಗಡೆ ಸುಮಾರು ಎಂಟು ದಶಕಗಳ ಹಿಂದೆ ಜಪಾನ್ ಮೇಲೆ ಅಣು ಬಾಂಬ್ ಹಾಕಿ ಎರಡು ಲಕ್ಷ ಜನರ ಪ್ರಾಣ ತೆಗೆದು ರಕ್ಕಸತನ ಮೆರೆದಿದ್ದ ಅಮೆರಿಕವು ಇಂದು ಅದೇ ಅಣು ಶಕ್ತಿ ಹೆಸರಿನ ಇರಾನ್ ಅನ್ನು ನಿರ್ನಾಮ ಮಾಡುವ ಪ್ರಯತ್ನಕ್ಕಿಳಿದಿದೆ. ಈ ಜಗತ್ತು ಕಂಡ ಪ್ರಳಯಾಂತಕ ಅಣು ಬಾಂಬ್ ಮೂಲಕ ವಿಶ್ವವು ತನ್ನದೇ ಆಯಾಮದಲ್ಲಿ ಶಾಂತಿ ವ್ಯಾಖ್ಯಾನವನ್ನು ಮಾಡುತ್ತಿದೆ. ಅಂತಾರಾಷ್ಟ್ರೀಯ ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲದವರಿಗೆ ಈ ಅಣು ಬಾಂಬ್ ದೊಡ್ಡ ಗೊಂದಲವನ್ನು ಸೃಷ್ಟಿಸಿದೆ. ಏಕೆಂದರೆ ಇದರಿಂದ […]

ಪಟ ಪಟ್‌ ವೀಡಿಯೋ ಎಡಿಟಿಂಗ್‌ಗೆ ಕ್ಯಾಪ್‌ಕಟ್

ಇಂದುಧರ ಹಳೆಯಂಗಡಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ವೀಡಿಯೋ ಕಂಟೆಂಟ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಯೂಟ್ಯೂಬ್, ಇನ್‌ಸ್ಟಾಗ್ರಾಮ್ ರೀಲ್ಸ್, ಫೇಸ್‌ಬುಕ್, ಶಾರ್ಟ್ಸ್ ಹಾಗೂ ಇತರ ವೇದಿಕೆಗಳಲ್ಲಿ ಪ್ರತಿದಿನ ಲಕ್ಷಾಂತರ ವೀಡಿಯೋಗಳು ಅಪ್‌ಲೋಡ್ ಆಗುತ್ತಿವೆ. ಈ ಬೆಳವಣಿಗೆಯ ನಡುವೆ ವೀಡಿಯೋ ಎಡಿಟಿಂಗ್ ಅನ್ನು ಸುಲಭಗೊಳಿಸಿದ ಆ್ಯಪ್‌ಗಳಲ್ಲಿ ಕಂಟೆಂಟ್ ಕ್ರಿಯೇಟರ್‌ಗಳ ನಡುವೆ ಜನಪ್ರಿಯವಾಗಿರುವ ಒಂದು ಆ್ಯಪ್ ‘ಕ್ಯಾಪ್‌ಕಟ್’. ಇದು ಚೀನಾದ ಬೈಟ್ ಡ್ಯಾನ್ಸ್ ಕಂಪನಿ ಅಭಿವೃದ್ಧಿಪಡಿಸಿರುವ ವೀಡಿಯೋ ಎಡಿಟಿಂಗ್ ಆ್ಯಪ್ ಆಗಿದೆ. ಕ್ಯಾಪ್‌ಕಟ್‌ನ ವಿಶೇಷತೆ ಎಂದರೆ ವೃತ್ತಿಪರ ಎಡಿಟಿಂಗ್ […]

ಜೀವನ ಪಾಠ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಜೀವನದಲ್ಲಿ ಸಮಸ್ಯೆ, ವಿಪತ್ತು ಅಥವಾ ಅಪಾಯಗಳು ಹೇಳಿ ಕೇಳಿ ಬರುವುದಿಲ್ಲ. ಅದು ಅನಿರೀಕ್ಷಿತ. ಯಾವಾಗ, ಹೇಗೆ, ಯಾವ ರೂಪ, ರೀತಿಯಲ್ಲಿ ಬಂದೆರಗುತ್ತವೆ ಎಂಬುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅನಾರೋಗ್ಯ, ಅಪಘಾತ, ಅವಘಡ, ಪ್ರಾಕೃತಿಕ ವಿಕೋಪ, ಕಷ್ಟ-ನಷ್ಟ, ನೋವು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅಪಾಯ ಎದುರಾಗಬಹುದು. ಪರಿಣಾಮವಾಗಿ ನಿತ್ಯ ಜೀವನದಲ್ಲಿ ಏರು-ಪೇರುಗಳಾಗಬಹುದು. ಬದುಕೇ ಸಾಕೆಂದೆನಿಸಿ ಕೆಲವರು ಸಾಯುವ ತೀರ್ಮಾನಕ್ಕೂ ಬರಬಹುದು. ಪ್ರತಿಯೊಬ್ಬರು ಸಮಸ್ಯೆಗಳಿಗೆ ಎದುರುಗೊಳ್ಳುತ್ತಲೇ ಇರುತ್ತಾರೆ. ಕೆಲವರು ಸಮಸ್ಯೆಗಳನ್ನು ಎದುರಿಸಲು ಪ್ರಯತ್ನಿಸಿ ಸೋಲುತ್ತಾರೆ. […]

ಕುಟುಂಬಕ್ಕೊಂದು ಇತಿಮಿತಿಯ ಬಜೆಟ್‌ ಇರಲಿ

ಅನಿಲ್ ಕುಮಾರ್ ಎಸ್. ಎಸ್. ಕಳೆದ ಎರಡು-ಮೂರು ದಶಕಗಳಿಂದ ದುಡಿದು ಸಂಪಾದಿಸುತ್ತಿರುವ ಮಧ್ಯಮ ವಯಸ್ಸಿನ ಉದ್ಯೋಗಿಗಳು ಸಹಜವಾಗಿಯೆ ಕೆಲವೊಮ್ಮೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ‘ಹಿಂದೆ ತಿಂಗಳಿಗೆ ರೂ. 2 ಸಾವಿರ ಸಂಬಳ ಪಡೆಯುತ್ತಿದ್ದೆವು. ಆದರೆ ಇದೀಗ ತಿಂಗಳಿಗೆ ರೂ. 2 ಲಕ್ಷ ಸಂಬಳ ಕೈ ಸೇರುತ್ತಿದೆ. ಆದರೆ ರೂ. 2 ಸಾವಿರ ಸಂಬಳ ಪಡೆಯುತ್ತಿದ್ದಾಗ ದೊರೆಯುತ್ತಿದ್ದ ನೆಮ್ಮದಿ ಇಂದು ಇಲ್ಲವಾಗಿದೆ. ಇಂದು ತಿಂಗಳಿಗೆ ರೂ. 2 ಲಕ್ಷ ದುಡಿದರೂ ಆ ಹಣ ಕೈಯಲ್ಲಿ ಉಳಿಯುತ್ತಿಲ್ಲ.’ […]