ಗುರುಪ್ರಸಾದ್ ಟಿ. ಎನ್.
ಭಾರತದಲ್ಲಿ ವೈದ್ಯರಾಗಲು ವಿದ್ಯಾರ್ಥಿಯೊಬ್ಬ ಪದವಿಪೂರ್ವ ಶಿಕ್ಷಣ (ಪಿಯುಸಿ ಅಥವಾ 10+9 ವನ್ನು ಭೌತಶಾಸ್ತç, ರಸಾಯನಶಾಸ್ತç ಮತ್ತು ಜೀವಶಾಸ್ತç ವಿಷಯಗಳೊಂದಿಗೆ ಪೂರ್ಣಗೊಳಿಸಿರಬೇಕು. ಜೊತೆಗೆ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಟ ಶೇ.೫೦ ಅಂಕಗಳನ್ನು ಗಳಿಸುವುದು ಮೊದಲ ಅರ್ಹತೆ. ಬಳಿಕ ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್) ಪದವಿಯನ್ನು ಪೂರ್ಣಗೊಳಿಸಬೇಕು.
ಭಾರತದಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪರವಾಗಿ ರಾಷ್ಟಿçÃಯ ಪರೀಕ್ಷಾ ಸಂಸ್ಥೆ (ಓಖಿಂ) ನಡೆಸುವ ರಾಷ್ಟಿçÃಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಓಇಇಖಿ ಅತ್ಯಂತ ಜನಪ್ರಿಯ ಪ್ರವೇಶ ಪರೀಕ್ಷೆಯಾಗಿದೆ. ಎಂ.ಬಿ.ಬಿ.ಎಸ್., ಬಿ.ಡಿ.ಎಸ್. (ಡೆಂಟಲ್ ಸೈನ್ಸ್) ಮತ್ತು ಪರ್ಯಾಯ ಮೆಡಿಕಲ್ ಪದವಿ ಮಟ್ಟದ ಕೋರ್ಸ್ಗಳಿಗೆ ‘ನೀಟ್’ ಒಂದೇ ಕೇಂದ್ರೀಕೃತ ರಾಷ್ಟಿçÃಯ ಮಟ್ಟದ ಪರೀಕ್ಷೆಯಾಗಿದೆ. ೨೦೨೦ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ, ಂIIಒS ನವದೆಹಲಿ, ಂಈಒಅ ಪುಣೆ, ಎIPಒಇಖ ಪಾಂಡಿಚೆರಿಗಳಲ್ಲೂ ಒಃBS ಶಿಕ್ಷಣ ಮತ್ತು ಇತರ ಎಲ್ಲಾ ವೈದ್ಯಕೀಯ IಓI (ರಾಷ್ಟಿçÃಯ ಪ್ರಾಮುಖ್ಯತೆಯ ಸಂಸ್ಥೆಗಳು) ಗಳಿಗೂ ನೀಟ್ ಮೂಲಕವೇ ಪ್ರವೇಶ ನೀಡಲಾಗುತ್ತದೆ.
ಮಹಾರಾಷ್ಟç ಮತ್ತು ಕರ್ನಾಟಕದಂತಹ ಕೆಲವು ರಾಜ್ಯಗಳು ರಾಷ್ಟಿçÃಯ ಓಇಇಖಿ ಪರೀಕ್ಷೆಯ ಜೊತೆಗೆ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವೆ. ಆಯಾ ರಾಜ್ಯಗಳ ವೈದ್ಯಕೀಯ ಮಂಡಳಿಗಳಲ್ಲಿ ನೋಂದಣಿಗೆ ಅರ್ಹತೆ ಪಡೆಯಲು ನಿರ್ದಿಷ್ಟ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.
ಭಾರತದಲ್ಲಿ ೫೦೦ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳೆರಡರಲ್ಲೂ ಎಂಬಿಬಿಎಸ್ ಕೋರ್ಸ್ಗಳನ್ನು ಓದುವ ಅವಕಾಶವಿದೆ. ಭಾರತದಲ್ಲಿನ ಕೆಲವು ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಎಸ್ಡಿಎಂ ದಂತ ಮತ್ತು ವೈದ್ಯಕೀಯ ಕಾಲೇಜು ಧಾರವಾಡ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಂIIಒS), ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (ಅಒಅ), ಮತ್ತು
ಸಶಸ್ತç ಪಡೆಗಳ ವೈದ್ಯಕೀಯ ಕಾಲೇಜು (ಂಈಒಅ) ಸೇರಿವೆ.
ಎಷ್ಟು ವರ್ಷದ ಶಿಕ್ಷಣ?
ಎಂಬಿಬಿಎಸ್ ಐದೂವರೆ ವರ್ಷಗಳ ಕೋರ್ಸ್ ಆಗಿದೆ. ಮೊದಲ ನಾಲ್ಕುವರೆ ವರ್ಷಗಳು ತರಗತಿ ಮತ್ತು ಕ್ಲಿನಿಕಲ್ ತರಬೇತಿಗೆ ಮೀಸಲಾಗಿದ್ದರೆ, ಕೊನೆಯ ವರ್ಷ ಕಡ್ಡಾಯ ಇಂಟರ್ನ್ಶಿಪ್ ಇರುತ್ತದೆ. ಎಂಬಿಬಿಎಸ್ನ ಪದವಿ ಕಾರ್ಯಕ್ರಮದ ಭಾಗವಾಗಿ, ಒಂದು ವರ್ಷದ ಇಂಟರ್ನ್ಶಿಪ್ ಅನ್ನು ಪೂರ್ಣಗೊಳಿಸುವುದು ಕಡ್ಡಾಯ. ಇಂಟರ್ನ್ಶಿಪ್ ಸಮಯದಲ್ಲಿ ಅನುಭವಿ ವೈದ್ಯರ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆ ಅಥವಾ ಕ್ಲಿನಿಕ್ನಲ್ಲಿ ಕೆಲಸ ಮಾಡಬೇಕಾಗುತ್ತದೆ.
ವೈದ್ಯರಾಗುವ ಮೊದಲು
ಎಂಬಿಬಿಎಸ್ ಬಳಿಕ ವೃತ್ತಿ/ಅಭ್ಯಾಸ ಆರಂಭಿಸಲು ಬಯಸುವವರು ಭಾರತೀಯ ವೈದ್ಯಕೀಯ ಮಂಡಳಿ (ಒಅI) ಅಥವಾ ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಭಾರತದಲ್ಲಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಲು ಇದು ಕಡ್ಡಾಯವಾಗಿದೆ. ರಾಜ್ಯ ವೈದ್ಯಕೀಯ ಮಂಡಳಿ ಕಚೇರಿ ಅಥವಾ ವೆಬ್ಸೈಟ್ನಿಂದ ನೋಂದಣಿ ಫಾರ್ಮ್ ಅನ್ನು ಪಡೆಯಬಹುದು. ಫಾರ್ಮ್ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆಗಳು, ಇಂಟರ್ನ್ಶಿಪ್ ವಿವರಗಳು ಮತ್ತು ಇತರ ಸಂಬAಧಿತ ಮಾಹಿತಿಯನ್ನು ಒದಗಿಸುವ ಅಗತ್ಯವಿದೆ. ದಾಖಲೆಗಳನ್ನು ಪರಿಶೀಲಿಸಿದ ನಂತರ, ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಮಹಾರಾಷ್ಟç ಮತ್ತು ಗುಜರಾತ್ನಂತಹ ಕೆಲವು ರಾಜ್ಯಗಳಲ್ಲಿ, ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸಲು ಸ್ಥಳೀಯ ಭಾಷೆಯಲ್ಲಿ (ಮರಾಠಿ ಅಥವಾ ಗುಜರಾತಿ) ಪ್ರಾವೀಣ್ಯತೆ ಹೊಂದಿರಬೇಕಾಗುತ್ತದೆ. ಕರ್ನಾಟಕ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ಕಡ್ಡಾಯವಾಗಿ ಒಂದು ವರ್ಷದ ಇಂಟರ್ನ್ಶಿಪ್ ಆಗಿರಬೇಕು.
ಸ್ನಾತಕೋತ್ತರ ಪದವಿ
ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದ ನಂತರ, ಸ್ನಾತಕೋತ್ತರ ಪದವಿಯನ್ನು ಅನುಸರಿಸುವ ಮೂಲಕ ವೈದ್ಯಕೀಯ ಕ್ಷೇತ್ರದ ಕೆಲವು ನಿರ್ದಿಷ್ಟ ವಿಭಾಗಗಳಲ್ಲಿ ಪರಿಣತಿಯನ್ನು ಪಡೆಯಬಹುದು. ಭಾರತದಲ್ಲಿನ ಕೆಲವು ಜನಪ್ರಿಯ ವಿಭಾಗಗಳೆಂದರೆ ಶಸ್ತçಚಿಕಿತ್ಸೆ, ಔಷಧ, ಮಕ್ಕಳ ರೋಗಶಾಸ್ತç, ಸ್ತಿçÃರೋಗ ಶಾಸ್ತç, ನೇತ್ರಶಾಸ್ತç, ದಂತವೈದ್ಯಕೀಯಶಾಸ್ತç ಮೊದಲಾದವುಗಳು.
ಜೂನಿಯರ್ ರೆಸಿಡೆನ್ಸಿ (ಒS/ಒಆ/ಆಓಃ)
ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ಭಾಗವಾದ ಇದನ್ನು ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ರೂಪದಲ್ಲಿ ಮಾಡಬಹುದು. ಎಂಬಿಬಿಎಸ್ ನಂತರ ೨ ವರ್ಷಗಳ ಡಿಪ್ಲೊಮಾ ಇದಾಗಿರುತ್ತದೆ. ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವು ಎಂಬಿಬಿಎಸ್ ನಂತರ ಒS (ಮಾಸ್ಟರ್ ಆಫ್ ಸರ್ಜರಿ) / ಒಆ (ಡಾಕ್ಟರ್ ಆಫ್ ಮೆಡಿಸಿನ್) ೩ ವರ್ಷಗಳ ಅವಧಿಯ ಪದವಿ ಕೋರ್ಸ್ಗಳಾಗಿರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಸರಿಸುವ ಒS/ಒಆ ಬದಲಿಗೆ, ಖಾಸಗಿ ಆಸ್ಪತ್ರೆಗಳಲ್ಲಿ ಅನುಸರಿಸುವ ಆಓS ಶಿಕ್ಷಣವನ್ನು (ರಾಷ್ಟಿçÃಯ ಮಂಡಳಿಯ ಡಿಪ್ಲೊಮೇಟ್) ಆಯ್ಕೆ ಮಾಡಬಹುದು.
ಸ್ನಾತಕೋತ್ತರದ ನಂತರ
ಒಆ ಮತ್ತು ಒS ಬಳಿಕ ಆಒ (ಡಾಕ್ಟರ್ ಆಫ್ ಮೆಡಿಸಿನ್) ಮತ್ತು ಒಅಊ (ಮಾಸ್ಟರ್ ಆಫ್ ಸರ್ಜರಿ) ಪದವಿಗಳನ್ನು ಕಲಿಯಬಹುದು. ವೈದ್ಯರು ಆಒ ಅನ್ನು ಹೊಂದಿದ್ದರೆ, ಶಸ್ತçಚಿಕಿತ್ಸಕರು ಒಅಊ ಪದವೀಧರರಾಗಿರುತ್ತಾರೆ. ‘ಸೂಪರ್-ಸ್ಪೆಷಾಲಿಟಿ’ ಎಂಬ ಹಂತ ತಲುಪಲು ಇದನ್ನು ಓದಲೇಬೇಕು. ಎಂಬಿಬಿಎಸ್ ಬಳಿಕ ಆಓಃ ಮಾಡಿದ್ದರೆ, ಈಓಃ (ಈeಟಟoತಿ oಜಿ ಓಚಿಣioಟಿಚಿಟ ಃoಚಿಡಿಜ) ಮೂಲಕ ಸೂಪರ್ – ಸ್ಪೆಷಾಲಿಟಿ ತರಬೇತಿ ಪಡೆಯಬಹುದು. ಆಒ, ಒಅಊ ಅಥವಾ ಈಓಃ ಯನ್ನು ಮುಗಿಸುವ ಹೊತ್ತಿಗೆ, ಕನಿಷ್ಟ ೮ ವರ್ಷಗಳ ಅಭ್ಯಾಸ ಮುಗಿದಿರುತ್ತದೆ.
ಎಫ್ಎಂಜಿಇ ಪರೀಕ್ಷೆ
ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ (ಎಫ್ಎಂಜಿಇ) ಯನ್ನು ಅಂತಾರಾಷ್ಟಿçÃಯ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪಡೆದ ಭಾರತೀಯರಿಗೆ ರಾಷ್ಟಿçÃಯ ಪರೀಕ್ಷಾ ಮಂಡಳಿಯು ನಡೆಸುವ ಸ್ಕಿçÃನಿಂಗ್ ಪರೀಕ್ಷೆಯಾಗಿದೆ. ಭಾರತದಾದ್ಯಂತ ಕಾನೂನುಬದ್ಧವಾಗಿ ಎಲ್ಲಿಯಾದರೂ ವೈದ್ಯಕೀಯ ವೃತ್ತಿಯನ್ನು ಅಭ್ಯಾಸ ಮಾಡಲು ಸಿದ್ಧರಿರುವ ವೈದ್ಯಕೀಯ ಪದವೀಧರರಿಗೆ ಅರ್ಹತೆಗೆ ಅನುಗುಣವಾಗಿ ಪರವಾನಿಗೆ ನೀಡಲು ಎಫ್ಎಂಜಿಇ ಪರೀಕ್ಷೆಯನ್ನು ನಡೆಸಲಾಗುತ್ತದೆ. ಎಲ್ಲಾ ವಿದೇಶಿ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಫ್ಎಂಜಿಇ ಪರೀಕ್ಷೆಯು ಕಡ್ಡಾಯವಾಗಿದೆ.
ಒಃBS/ಓಇಇಖಿ ಇಲ್ಲದೆ ವೈದ್ಯನಾಗುವುದು ಹೇಗೆ?
ಓಇಇಖಿ ಅಥವಾ ಒಃBS ಕೋರ್ಸ್ಗಳನ್ನು ಮಾಡದೆಯೂ ವೈದ್ಯರಾಗಬಹುದು. ವಿದ್ಯಾರ್ಥಿಗಳು ಬಿ.ಫಾರ್ಮಸಿ, ಬಿ.ಎಸ್ಸಿ. ನರ್ಸಿಂಗ್, ಬಿಪಿಟಿ, ಇತರ ಕೋರ್ಸ್ಗಳನ್ನು ಕಲಿಯುವ ಮೂಲಕ ವೈದ್ಯರಾಗಬಹುದು. ವಿದ್ಯಾರ್ಥಿ ಒಃBS ಅಥವಾ ಓಇಇಖಿ ಅನ್ನು ಹೊಂದಿಲ್ಲದಿದ್ದರೂ ಅವರಿಗೆ ಫಿಸಿಯೋಥೆರಪಿ, ಫಾರ್ಮಸಿ, ನರ್ಸಿಂಗ್, ಬಯೋಟೆಕ್ನಾಲಜಿ, ಸೈಬರ್ ಫೋರೆನ್ಸಿಕ್ಸ್, ಬಯೋಮೆಡಿಕಲ್ ಇಂಜಿನಿಯರಿAಗ್, ಕಾರ್ಡಿಯಾಕ್ ಟೆಕ್ನಾಲಜಿ ಮೊದಲಾದ ಕೋರ್ಸ್ಗಳ ಆಯ್ಕೆ ಅವಕಾಶವಿದೆ.
ಟಿ ಃಆS (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ಟಿ ಃSಒS (ಸ್ನಾತಕೋತ್ತರ ಸಿದ್ಧ ಔಷಧ ಮತ್ತು ಶಸ್ತçಚಿಕಿತ್ಸೆ) ಟಿ ಃUಒS (ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಮತ್ತು ಸರ್ಜರಿ) ಟಿ ಃಂಒS (ಬ್ಯಾಚುಲರ್ ಆಫ್ ಆಯುರ್ವೇದ, ಮೆಡಿಸಿನ್ ಮತ್ತು ಸರ್ಜರಿ) ಟಿ ಃಊಒS (ಬ್ಯಾಚುಲರ್ ಆಫ್ ಹೋಮಿಯೋಪತಿಕ್ ಮೆಡಿಸಿನ್ ಮತ್ತು ಸರ್ಜರಿ) ಮುಂತಾದ ಶಿಕ್ಷಣವನ್ನು ಪಡೆದು ಕೂಡಾ ವೈದ್ಯರಾಗಬಹುದಾಗಿದೆ.
ಭಾರತದಲ್ಲಿ ವೈದ್ಯಕೀಯ ವೆಚ್ಚ
* ಸರ್ಕಾರವು ಸುಮಾರು 25,000 ಸೀಟುಗಳನ್ನು ಮಾತ್ರ ಒದಗಿಸುತ್ತದೆ. ಸರ್ಕಾರದ ಅನುದಾನಿತ ಒಃBS ಕೋರ್ಸ್ಗಳಾದರೆ ಪ್ರತಿ ವರ್ಷಕ್ಕೆ ಸುಮಾರು ರೂ.25000 ದಿಂದ ರೂ.75000.
* ಖಾಸಗಿ ಕಾಲೇಜಿನಲ್ಲಿ ಒಃBS ಕೋರ್ಸ್ಗೆ ರೂ. 15ಲಕ್ಷದಿಂದ 40 ಲಕ್ಷ.
* ಮ್ಯಾನೇಜ್ಮೆಂಟ್ ಕೋಟಾದ ಸೀಟುಗಳ ಬೆಲೆ ರೂ. ೫೫ ಲಕ್ಷದಿಂದರೂ. ೮೦ ಲಕ್ಷ.
ವೈದ್ಯರ ವೇತನ
ವೈದ್ಯರ ಆರಂಭಿಕ ವೇತನವು ಸಾಮಾನ್ಯವಾಗಿ ವಾರ್ಷಿಕ ಸುಮಾರು ರೂ. 5.40 ಲಕ್ಷ ಆಗಿರುತ್ತದೆ. ಅನುಭವ ಮತ್ತು ತಿಳುವಳಿಕೆಯೊಂದಿಗೆ ವೈದ್ಯರ ಆದಾಯವು ವರ್ಷಕ್ಕೆ ರೂ. 1.17 ಕೋಟಿಯವರೆಗೂ ಏರಬಹುದು. ಪದವಿ, ತಜ್ಞ ಕ್ಷೇತ್ರ ಮೊದಲಾದ ಅಂಶಗಳನ್ನು ವೇತನ ಅವಲಂಬಿಸಿರುತ್ತದೆ. ಹೆಸರಾಂತ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರ ಮಾಸಿಕ ವೇತನವು ಅಂದಾಜು ರೂ. 5 ಲಕ್ಷ.
ಸ್ಟೇಟ್ ಮೆಡಿಕಲ್ ಕೌನ್ಸಿಲ್ ವೆಬ್ಸೈಟ್ಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್ಸೈಟ್, ವೈದ್ಯಕೀಯ ಕಾಲೇಜು ವೆಬ್ಸೈಟ್ಗಳು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (Iಒಂ) ಮತ್ತು ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ (ಂಒಅ) ನಂತಹ ವೃತ್ತಿಪರ ಸಂಘಗಳು ಮತ್ತು ಇನ್ನೂ ಕೆಲವು ಆನ್ಲೈನ್ ವೇದಿಕೆಗಳು ವೈದ್ಯಕೀಯ ಶಿಕ್ಷಣದ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ.