ಶ್ರೀ ಕ್ಷೇತ್ರ ಧರ್ಮಸ್ಥಳವು ಪೌರಾಣಿಕ ಮತ್ತು ಧಾರ್ಮಿಕ ಮಹತ್ವವನ್ನು ಒಳಗೊಂಡಿದ್ದು, ಶಿವನಿಗೆ ಅರ್ಪಣೆಯಾಗಿರುವ ದೇವಾಲಯ ಬಂಗಾರ ಲಿಂಗದಿಂದ ಕ್ಷೇತ್ರ ಮಹಿಮೆ ಹೆಸರುವಾಸಿಯಾಗಿದೆ.
ಈ ದೇವಾಲಯವನ್ನು 500 ವರ್ಷಗಳ ಹಿಂದೆ ಜೈನ ಮುಖ್ಯಸ್ಥ ಬಿರ್ಮಣ್ಣ ಪೆರ್ಗಡೆ ಮೂಲಕ ನಿರ್ಮಿಸಲಾಯಿತು. ಕ್ಷೇತ್ರದಲ್ಲಿರುವ ಲಿಂಗವನ್ನು ಮಂಗಳೂರು ಹತ್ತಿರದ ಕದ್ರಿ ಎಂಬ ಸ್ಥಳದಿಂದ ತರಲಾಗಿದೆ. ಈ ಸ್ಥಳವನ್ನು ತಲುಪಿದ ಮೇಲೆ, ಪ್ರವಾಸಿಗರಿಗೆ ಲಿಂಗದ ಸಮೀಪದಲ್ಲಿಯೇ ನರಸಿಂಹ ಸಾಲಿಗ್ರಾಮ ( ಭಗವಾನ್ ಶ್ರೀ ವಿಷ್ಣುವಿನ ಅವತಾರ)ವನ್ನು ನೋಡಬಹುದಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ಮಹಾಗಣಪತಿ ಮತ್ತು ದೇವಿ ಅಮ್ಮನವರ ಗುಡಿಯಿದೆ. ಇದರ ಜೊತೆಗೆ, ಈ ದೇವಾಲಯವು ನಾಲ್ಕು ಧರ್ಮದೈವಗಳಾದ ಕನ್ಯಾಕುಮಾರಿ, ಕಲರ್ಕಾಯಿ , ಕಾಲರಾಹು ಮತ್ತು ಕುಮಾರಸ್ವಾಮಿ ಒಳಗೊಂಡಿದೆ.
ಧರ್ಮಸ್ಥಳ ದೇವಾಲಯದ ಒಳವೃತ್ತ, ಮರದ ಕಟ್ಟಿಗೆಯನ್ನು ಬಳಸಿ ಕಟ್ಟಾಲಾಗಿದೆ, ಜೈನಧರ್ಮದವರು ಈ ದೇವಾಲಯದ ಆಡಳಿತ ನಿರ್ಮಹಿಸುತ್ತಿದ್ದಾರೆ. ಪೂಜೆಯನ್ನು ಮಾಧ್ವ ಕ್ರಮದಲ್ಲಿ ಹಿಂದೂ ಪುರೋಹಿತರು ಆಯೋಜಿಸುತ್ತಾರೆ. ದೇವಾಲಯದ ಆಸಕ್ತಿದಾಯಕ ವಿಷಯವೆಂದರೆ, ಧಾರ್ಮಿಕವಾಗಿ ನ್ಯಾಯಾಲಯದ ಮಹತ್ವವುಳ್ಳ ದೇವಸ್ಥಾನವಾಗಿದ್ದು, ಜನರು ಆಣೆ- ಪ್ರಮಾಣಗಳನ್ನು ಮಾಡಲು ಇಲ್ಲಿಗೆ ಬರುತ್ತಾರೆ. ಪ್ರಮಾಣ ಮಾಡಿ ಸತ್ಯ ನುಡಿಯುತ್ತಾರೆ ಎಂಬ ಗಾಢವಾದ ನಂಬಿಕೆಯಿದೆ.