ತಮಗೆಲ್ಲರಿಗೂ ಅನುಕೂಲವಾಗುವಂತೆ ಅನಾರೋಗ್ಯ ವುಂಟಾದಾಗ ಆಸ್ಪತ್ರೆಯ ಚಿಕಿತ್ಸೆ ಪಡೆದುಕೊಳ್ಳಲು ಆರೋಗ್ಯ ರಕ್ಷಾ ಎಂಬ ವಿಮಾ ಯೋಜನೆಯನ್ನು ಕಳೆದ ವರ್ಷ ಜಾರಿಗೆ ತರಲಾಗಿತ್ತು. ಈ ವಿಮಾ ಯೋಜನೆಯಡಿ 33 ಲಕ್ಷ ಸದಸ್ಯರು ನೋಂದಾಯಿಸಿಕೊAಡಿದ್ದರು. ಈ ವಿಮಾ ಯೋಜನೆಯಲ್ಲಿ ರೂ. 10,000 ದವರೆಗೆ ವಿಮಾ ಸೌಲಭ್ಯವು ಲಭ್ಯವಿದ್ದು, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಮಾಡಿಕೊಂಡವರಿಗೆ ಈ ಮೊತ್ತವು ಲಭಿಸುತ್ತಿತ್ತು. ಇದಕ್ಕೆ ವಿಧಿಸಲಾದ ಪ್ರೀಮಿಯಂ ರೂ. 245 ಆಗಿದ್ದು, ಸದಸ್ಯರಿಂದ ರೂ. 125 ನ್ನು ಮಾತ್ರ ಸಂಗ್ರಹಿಸಲಾಗಿತ್ತು. ಉಳಿದ ಮೊತ್ತವನ್ನು ಸಂಘ ಮತ್ತು ಯೋಜನೆಯಿಂದ ಪಾವತಿಸಲಾಗಿತ್ತು.
ಮುಂದಿನ ವರ್ಷ ಅಂದರೆ 2022-23 ಕ್ಕೆ ಈ ವಿಮಾ ಯೋಜನೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ್ದು, ಸದಸ್ಯರಿಗೆ ಅತ್ಯಾಕರ್ಷಕವಾಗುವಂತೆ ರೂಪಿಸಲಾಗಿದೆ.
1. ಈ ವಿಮಾ ಯೋಜನೆಯು 1-4-2022 ರಿಂದ 31-3-2023 ರವರೆಗೆ ಅನಾರೋಗ್ಯದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುವ ಸದಸ್ಯರಿಗೆ ಸೌಲಭ್ಯವನ್ನು ಒದಗಿಸುತ್ತದೆ.
2 ಈ ಯೋಜನೆಯಲ್ಲಿ ಯೋಜನೆಯ ಸದಸ್ಯರಿಗೆ ರೂ. 10,000 ಮತ್ತು ಅವರ ಗಂಡ ಅಥವಾ ಹೆಂಡತಿಗೆ ರೂ. 10,000. ಹೀಗೆ ಕುಟುಂಬ ಮಿತಿ ರೂ. 20,000 ದ ಸೌಲಭ್ಯವನ್ನು ಒದಗಿಸುತ್ತದೆ. ರೂ. 20,000 ದ ಮೊತ್ತವನ್ನು ಕುಟುಂಬದ ಗಂಡ ಅಥವಾ ಹೆಂಡತಿ ಯಾರೇ ಒಬ್ಬರಾದರೂ ಅಥವಾ ಇಬ್ಬರೂ ಸೇರಿಕೊಂಡು ಗರಿಷ್ಠ ಮಿತಿ ರೂ. 20,000 ದಾಟದಂತೆ ಆಸ್ಪತ್ರೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
3. ಒಂದು ವೇಳೆ ಸದಸ್ಯರಿಗೆ ಗಂಡ ಅಥವಾ ಹೆಂಡತಿ ಇಲ್ಲದಿದ್ದರೆ ಆ ಸದಸ್ಯ ಒಬ್ಬರಿಗೇ ರೂ. 20,000 ಸೌಲಭ್ಯವನ್ನು ಅಗತ್ಯ ಬಿದ್ದಲ್ಲಿ ಪಡೆದುಕೊಳ್ಳಬಹುದಾಗಿದೆ.
4. ಕೋಪೇಮೆಂಟ್ : ರೂ.20,000 ದವರೆಗೆ ವಿಮಾ ಸೌಲಭ್ಯವಿದ್ದರೂ ಆಸ್ಪತ್ರೆಯ ಖರ್ಚಿನಲ್ಲಿ ಶೇ.20ರಷ್ಟನ್ನು ಫಲಾನುಭವಿಯೇ ಪಾವತಿಸಬೇಕು. ಉಳಿದ ಶೇಕಡಾ 80 ರಷ್ಟನ್ನು ವಿಮಾ ಕಂಪನಿಯು ಪಾವತಿಸುತ್ತದೆ. ಒಂದು ವೇಳೆ ಆಸ್ಪತ್ರೆಯ ಖರ್ಚು ರೂ. 24,000ವಾದಲ್ಲಿ ಆಗ ರೂ. 20,000 ವಿಮಾ ಕಂಪನಿಯು ಪಾವತಿಸುತ್ತದೆ ಮತ್ತು ಫಲಾನುಭವಿ ರೂ. 4,000 ಪಾವತಿಸಬೇಕಾಗುತ್ತದೆ.
5 ಹಾಸ್ಪಿ ಕ್ಯಾಶ್ ಸೌಲಭ್ಯ : ಈ ಯೋಜನೆಯಲ್ಲಿ ನೋಂದಾಯಿಸಿಕೊAಡವರು ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದಲ್ಲಿ ಅವರಿಗೆ ದಿನವೊಂದಕ್ಕೆ ರೂ. 200/- ರಂತೆ ಗರಿಷ್ಠ ೫ ದಿನಗಳವರೆಗೆ ಸಾಂತ್ವನಧನವನ್ನು ನೀಡಲಾಗುವುದು.
6. ಓಪನ್ ಬಿಲ್ಲಿಂಗ್ ಸಿಸ್ಟಂ : ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ಯಾವುದೇ ಪ್ರದೇಶದ ನೋಂದಾಯಿತ ಆಸ್ಪತ್ರೆಗೆ ಫಲಾನುಭವಿಯು ಒಳರೋಗಿಯಾಗಿ ದಾಖಲಾಗಬಹುದು. ಇಂತಹ ಸಂದರ್ಭದಲ್ಲಿ ಫಲಾನುಭವಿಯು ಆಸ್ಪತ್ರೆಯ ಬಿಲ್ಲನ್ನು ಕಟ್ಟಿ ಡಿಸ್ಚಾರ್ಜ್ ಸಮ್ಮರಿ ಮತ್ತು ಬಿಲ್ಲನ್ನು ಕಳುಹಿಸಿಕೊಟ್ಟಲ್ಲಿ ಅವರಿಗೆ ಶೀಘ್ರದಲ್ಲಿಯೇ ಮೊತ್ತದಲ್ಲಿ ಪಾವತಿಸಲಾಗುವುದು.
7. ನಗದು ರಹಿತ ಚಿಕಿತ್ಸೆ : ಯೋಜನೆಯಿಂದ ನೋಂದಾಯಿತವಾದ 250 ಕ್ಕೂ ಹೆಚ್ಚಿನ ಆಸ್ಪತ್ರೆಗಳಲ್ಲಿ ಆರೋಗ್ಯರಕ್ಷಾ ವಿಮಾದಾರರು ರೂ. 20,000 ದವರೆಗೆ ನಗದುರಹಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
8. ಹೆರಿಗೆ ಚಿಕಿತ್ಸೆ : ಆರೋಗ್ಯ ರಕ್ಷಾ ವಿಮಾದಾರರಿಗೆ ನಿಯಮಿತರೂಪದಲ್ಲಿ ಹೆರಿಗೆ ಖರ್ಚಿನ ಮೊತ್ತವನ್ನು ಪಾವತಿಸುವ ವ್ಯವಸ್ಥೆಯಿರುತ್ತದೆ.
9. ಕ್ರಿಟಿಕಲ್ ಇಲ್ನೆಸ್ ಫಂಡ್ : ಆರೋಗ್ಯರಕ್ಷಾ ವಿಮಾದಾರರಿಗೆ ಮಾರಣಾಂತಿಕ ಅಪಘಾತ ಯಾ ಕಾಯಿಲೆಯುಂಟಾದಲ್ಲಿ ಕ್ರಿಟಿಕಲ್ ಇಲ್ನೆಸ್ ಫಂಡ್ನಿAದ ರೂ. 50,000 ದವರೆಗೆ ಹೆಚ್ಚುವರಿ ಸೌಲಭ್ಯವನ್ನು ‘ಆರೋಗ್ಯ ರಕ್ಷಾ’ ಯೋಜನೆಯಲ್ಲಿ ಒದಗಿಸಲಾಗುವುದು. ಉದಾಹರಣೆಗೆ ಕ್ಯಾನ್ಸರ್, ಹಾರ್ಟ್ಅಟ್ಯಾಕ್ ಮುಂತಾದ ತೀವ್ರ ಕಾಯಿಲೆಗಳಿಗೆ ರೂ. 50,000 ಮೊತ್ತವು ಲಭ್ಯವಿರುವುದು.
10. ಉಚಿತ ಓಪಿಡಿ ಸೌಲಭ್ಯ : ಪೂಜ್ಯರು ನಡೆಸುತ್ತಿರುವ ಎಸ್.ಡಿ.ಎಂ. ಆಸ್ಪತ್ರೆ ಉಜಿರೆ ಮತ್ತು ಎಸ್.ಡಿ.ಎಂ. ಮೆಡಿಕಲ್ ಆಸ್ಪತ್ರೆ ಧಾರವಾಡ ಇಲ್ಲಿ ಆರೋಗ್ಯ ರಕ್ಷಾ ನೋಂದಾಯಿತ ಸದಸ್ಯರಿಗೆ ಉಚಿತ ಓಪಿಡಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಸೌಲಭ್ಯದನ್ವಯ ಡಾಕ್ಟರ್ ಕನ್ಸಲ್ಟೇಶನ್ ಖರ್ಚು, ಓಪಿಡಿಯಲ್ಲಿ ಟೆಸ್ಟಿಂಗ್ ಖರ್ಚುಗಳಿಗೆ ವಿನಾಯಿತಿ ನೀಡಲಾಗಿದೆ. ಎಕ್ಸ್ರೇ, ಸಿಟಿ ಸ್ಕಾö್ಯನ್, ಎಮ್ಆರ್ಐ ಮುಂತಾದ ಪರೀಕ್ಷೆಗಳಿಗೆ ಈ ಸೌಲಭ್ಯದನ್ವಯ ವಿನಾಯಿತಿ ನೀಡಲಾಗುವುದು.
11. ವಯೋಮಿತಿ : 18 ವರ್ಷದಿಂದ 79 ವರ್ಷ ವಯಸ್ಸಿನವರಿಗೆ ಈ ಸೌಲಭ್ಯವನ್ನು ಒದಗಿಸಲಾಗುವುದು.
12. ಪ್ರೀಮಿಯಂ ಮೊತ್ತ : ರೂ. 245/- (ಇಬ್ಬರಿಗೂ ಸೇರಿ)
13. ನೋಂದಾವಣೆ ಅವಧಿ : ಆರೋಗ್ಯ ರಕ್ಷಾ ವಿಮಾ ಕಾರ್ಯಕ್ರಮದ ನೋಂದಾವಣೆಯನ್ನು ಇದೀಗ ಪ್ರಾರಂಭಿಸಲಾಗಿದ್ದು, ಫೆಬ್ರವರಿ 15 ರೊಳಗಾಗಿ ತಮ್ಮ ಮತ್ತು ತಮ್ಮ ಗಂಡ/ಹೆAಡತಿಯನ್ನು ನೋಂದಾಯಿಸಬಹುದಾಗಿದೆ.
ಹೀಗೆ ಈ ಬಾರಿಯ ಆರೋಗ್ಯ ರಕ್ಷಾ ವಿಮಾ ಯೋಜನೆಯು ಅತ್ಯಾಕರ್ಷಕವಾಗಿದ್ದು, ಇದು ಯೋಜನೆಯ ಸದಸ್ಯರಿಗೆ ಮತ್ತು ಅವರ ಗಂಡ/ಹೆಂಡತಿಗೆ ವರದಾನವಾಗಲಿದೆ.
ನನಗೆ ಸುಮಾರು 57 ವರ್ಷ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಪಡೆಯುತ್ತಿದ್ದೇನೆ. ಪಾರ್ಶ್ವವಾಯುವಿನಿಂದ ಬಳಲಿ ಇತ್ತೀಚೆಗೆ ಚೇತರಿಸಿಕೊಂಡಿರುತ್ತೇನೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ನನ್ನ ಮೇಲೆ ಹೆಜ್ಜೇನು ದಾಳಿ ಮಾಡಿತು. ತಕ್ಷಣ ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ಒಂಭತ್ತು ಸಾವಿರ ರೂಪಾಯಿ ಬಿಲ್ ಆಯಿತು. ಆ ಸಂದರ್ಭದಲ್ಲಿ ನನ್ನ ಬಳಿ ಹಣವಿರಲಿಲ್ಲ. ಆಗ ನನ್ನ ನೆರವಿಗೆ ಬಂದಿದ್ದು ‘ಆರೋಗ್ಯ ರಕ್ಷಾ’.
ಟಿ ಸಂಜೀವ ಗೌಡ, ಬೆಳಾಲು, ಬೆಳ್ತಂಗಡಿ