ಸ್ವಸಹಾಯ ಸಂಘಗಳಿಂದ ರೂ. 620 ಕೋಟಿ ಲಾಭಾಂಶ ವಿತರಣೆ

ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ರೂ. 620 ಕೋಟಿ ಲಾಭಾಂಶವನ್ನು ಹಂಚಿಕೊಳ್ಳುತ್ತಿವೆ. ಕೆಲವು ಸದಸ್ಯರಿಗೆ ತಮ್ಮ ಉಳಿತಾಯಕ್ಕಿಂತ ದ್ವಿಗುಣ ಲಾಭಾಂಶವು ದೊರೆತಿದೆ. ಹಾಗಾದರೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಘದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನವಾಗಿದೆ, ಪಡೆದ ಲಾಭಾಂಶವನ್ನು ಏನು ಮಾಡುತ್ತಾರೆ ಎಂಬ ಕುತೂಹಲ ನಮ್ಮಲ್ಲೂ ಇತ್ತು. ಅವರುಗಳಿಗೆ ಕರೆ ಮಾಡಿ ಮಾತನಾಡಿ ಅವರ ಮಾತುಗಳಿಗೆ ಅಕ್ಷರದ ರೂಪ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಉಳಿತಾಯಕ್ಕಿಂತ ಹೆಚ್ಚು ಲಾಭಾಂಶ ಕೈಸೇರಿತುಕಳೆದ 9 ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ‘ಗೌರಿ ಗಣೇಶ’ ಸ್ವಸಹಾಯ […]

ರಾಜ್ಯದ 10 ಸಾವಿರಕ್ಕೂ ಅಧಿಕ ವಿಶೇಷಚೇತನರಿಗೆ ಆಸರೆಯಾದ ‘ಜನಮಂಗಲ’ ಉಚಿತ ಸಲಕರಣೆ

>ಡಾ| ಎಲ್.ಎಚ್.ಮಂಜುನಾಥ್,ಕಾರ್ಯನಿರ್ವಾಹಕ ನಿರ್ದೇಶಕರು ಅಂಗವೈಕಲ್ಯತೆ ಶಾಪವಲ್ಲ, ಅಂಗವಿಕಲರಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸಿ ಎಲ್ಲರಂತೆ ಸಂತೋಷದ ಬದುಕನ್ನು ಬಾಳಲು ಅವಕಾಶ ಕಲ್ಪಿಸುವುದು ಸರಕಾರ ಹಾಗೂ ಸಮಾಜದ ಜವಾಬ್ದಾರಿ. ಒಂದು ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ 10.41 ಲಕ್ಷ ಅಂಗವಿಕಲರಿದ್ದಾರೆ ಎಂಬ ಮಾಹಿತಿಯಿದೆ. ಕುಟುಂಬವೊಂದರಲ್ಲಿ ಒಬ್ಬ ಅಂಗವಿಕಲನಿದ್ದರೆ ಆ ಕುಟುಂಬ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿರುತ್ತದೆ. ಅಂಗವಿಕಲರನ್ನು ಪ್ರತಿನಿತ್ಯ ಮಕ್ಕಳಂತೆ ಪಾಲನೆ, ಪೋಷಣೆ ಮಾಡಬೇಕಿದೆ. ನಿತ್ಯ ದುಡಿದು ತಿನ್ನುವ ಕುಟುಂಬವಾದರೂ ಇವರ  ಯೋಗಕ್ಷೇಮ ನೋಡಿಕೊಳ್ಳಲು ಓರ್ವರು ಮನೆಯಲ್ಲಿಯೇ ಇರಬೇಕಾಗುತ್ತದೆ. ಬೆನ್ನುಹುರಿ ಅಪಘಾತಕ್ಕೊಳಗಾದವರ ಬದುಕಂತೂ ದುರಂತಮಯವಾದುದು. […]

‘ಕೆರೆಯಂಗಳದಲ್ಲಿ ಗಿಡ ನಾಟಿ’ ವಿನೂತನ ಕಾರ್ಯಕ್ರಮ

ರಾಜ್ಯದ 140 ಕೆರೆಗಳ ಸುತ್ತ ಅರಣ್ಯೀಕರಣ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯಾದ್ಯಂತ ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗುತ್ತಿದೆ. ಶ್ರೀ ಹೆಗ್ಗಡೆ ದಂಪತಿಗಳ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಮೂಲಕ ಸುಮಾರು 293 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದರೊಂದಿಗೆ ಸರಕಾರದ ‘ಕೆರೆ ಸಂಜೀವಿನಿ’ ಕಾರ್ಯಕ್ರಮದ ಮೂಲಕ 63 ಕೆರೆಗಳನ್ನು ಹೂಳೆತ್ತಲಾಗಿದೆ. ಹೀಗೆ ಒಟ್ಟು ರಾಜ್ಯದ ಸುಮಾರು 356 ಕೆರೆಗಳಿಗೆ ಕಾಯಕಲ್ಪ ಕೊಡಲಾಗಿದೆ. ಹೊಸದಾಗಿ ಹೂಳೆತ್ತಲಾದ 140 ಕೆರೆಗಳ ಸುತ್ತ್ತ ಅರಣ್ಯೀಕರಣ, ಹೊಸದಾಗಿ ರಚನೆಗೊಂಡ ಏರಿಗಳು ಜರಿಯದಂತೆ ಹಸಿರು […]

ಮಕ್ಕಳ ಮಧುಮೇಹ – ಆತ್ಮಸ್ಥೈರ್ಯದೆದುರೇನು ಮಹಾ!

ಡಾ| ಸಂದೀಪ ಹೆಚ್.ಎಸ್.ಮಕ್ಕಳ ತಜ್ಞರು ಅದೊಂದು ದಿನ ಎಸ್.ಡಿ.ಎಂ. ಆಸ್ಪತ್ರೆಯ ವಿಭಾಗದಲ್ಲಿ ಮಧ್ಯಾಹ್ನದ ಹೊತ್ತು. ಇನ್ನು ಊಟಕ್ಕೆ ತೆರಳುವ ಎಂದು ಕೈ ತೊಳೆದುಕೊಳ್ಳುತ್ತಿದೆ. ತುರ್ತು ಚಿಕಿತ್ಸಾ ವಿಭಾಗದಿಂದ ಒಂದು ಕರೆ ಬಂತು. 13 ವರ್ಷದ ಮಗುವೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದೆ ಎಂದು! ಕೂಡಲೇ ತುರ್ತುಚಿಕಿತ್ಸಾ ವಿಭಾಗದೆಡೆ ಧಾವಿಸಿದೆ. ಮಗುವಿನ ತುಟಿಗಳು ಒಣಗಿದ್ದವು. ಕರೆದರೂ ಮಾತನಾಡಲಿಲ್ಲ. ಆದರೆ ಹೃದಯ ಬಡಿತ, ಉಸಿರಾಟ ಇನ್ನೂ ಇತ್ತು. ಆ ಮಗುವಿನ ರಕ್ತದಲ್ಲಿ ಸಕ್ಕರೆಯ ಅಂಶ ಎಷ್ಟಿದೆ ಎಂದು ಪರೀಕ್ಷಿಸಿದೆ. ಮಗುವಿಗೆ […]

ಕೃಷಿಕರ ಮನೆಬಾಗಿಲಿಗೆ ಬರಲಿದೆ ‘ಕೃಷಿ ಸಂಜೀವಿನಿ’ ವಾಹನ

ಧಕ್ಷಿಣಿ ಮಾಸ್ತಿಕಟ್ಟೆ ‘ಎರಡು ಎಕರೆ ತುಂಬಾ ಸೊಯಾಬೀನ್ ಬಿತ್ತಿದೆ. ಆದರೆ ಇಳುವರಿ ಚೆನ್ನಾಗಿ ಬರಲಿಲ್ಲ. ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ನಿಮ್ಮಲ್ಲಿನ ವಾತಾವರಣ, ಮಣ್ಣು ಸೊಯಾಬೀನ್ ಬೆಳೆಗೆ ಸೂಕ್ತವಾಗಿಲ್ಲ, ಅಂಜನಪ್ಪನವರೇ ನೀವೊಮ್ಮೆ ಮಣ್ಣು ಪರೀಕ್ಷೆ ಮಾಡಿ ನೋಡಿ, ಬೆಳಗಾಂನ ಈ ಮಣ್ಣಿನಲ್ಲಿ ಫಸಲು ಚೆನ್ನಾಗಿ ಬರಲ್ಲ ಅಂದ್ರು. ಕೃಷಿ ಇಲಾಖೆ ತುಂಬಾ ದೂರದಲ್ಲಿದೆ. ಆದ್ದರಿಂದ ಮಣ್ಣು ಪರೀಕ್ಷೆ ಮಾಡಿಸಿಲ್ಲ’.‘ಕೃಷಿಯ ಬಗ್ಗೆ ಸರಿಯಾದ ಮಾಹಿತಿಯೇ ಸಿಗುತ್ತಿಲ್ಲ. ತೋಟದಲ್ಲಿ ಬೆಳೆದ ಬೆಳೆಯ ರೋಗಲಕ್ಷಣ, ಇಳುವರಿಯ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಬೇಕಾಗಿದೆ. ಏಳೆಂಟು ಕಿ.ಮೀ. […]

ಜಾನುವಾರುಗಳಿಗೂ ಲಸಿಕೆ ಹಾಕಿಸಿ

ಡಾ| ಸಿದ್ಧಲಿಂಗಸ್ವಾಮಿ ಹಿರೇಮಠಪಶು ವೈದ್ಯಕೀಯ ಮಹಾವಿದ್ಯಾಲಯ ಗದಗ ಈಗ ಎಲ್ಲೆಲ್ಲೂ ಲಸಿಕೆಯದ್ದೇ ಸುದ್ದಿ. ಲಸಿಕೆಯೆಂದರೆ ರೋಗವೊಂದರ ವಿರುದ್ಧ ಪ್ರಾಣಿಯ (ಮಾನವನ) ದೇಹದಲ್ಲಿ ನಿರೋಧಕ ಶಕ್ತಿ ಬೆಳೆಸುವ ಜೈವಿಕ ಪದಾರ್ಥ. ಸಾಮಾನ್ಯವಾಗಿ ಲಸಿಕೆಗಳನ್ನು ಪ್ರಾಣಿಗಳಿಗೆ ಇಂಜೆಕ್ಷನ್ ರೂಪದಲ್ಲಿ ನೀಡಲಾಗುತ್ತದೆ. ಹೇಗೆ ಚಿಕ್ಕಮಕ್ಕಳಿಗೆ ಕಡ್ಡಾಯವಾಗಿ ಲಸಿಕೆಗಳನ್ನು ಹಾಕಿಸಲಾಗುತ್ತದೆಯೋ, ಅದೇ ರೀತಿ ಜಾನುವಾರುಗಳಿಗೆ ಪ್ರತಿ ವರ್ಷ ಕೆಲವು ಲಸಿಕೆಗಳನ್ನು ಒಂದು ಅಥವಾ ಎರಡು ಬಾರಿ ಹಾಕಿಸಲೇಬೇಕು.ಜಾನುವಾರುಗಳಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳಿಂದ ಉಂಟಾಗುವ ಹಲವಾರು ರೋಗಗಳಿವೆ. ಕೆಲವು ರೋಗಗಳು ಸಾಂಕ್ರಾಮಿಕವಾಗಿವೆ. ಮಾಸ್ಕ್, ಸಾಮಾಜಿಕ ಅಂತರ, […]