ಉಡುಗೊರೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಗುಟ್ಟು ಯಾಕೆ?

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಗಂಡ-ಹೆಂಡತಿ, ಅಪ್ಪ-ಮಗ, ತಾಯಿ-ಮಗಳು ಹೀಗೆ ಅತ್ಯಂತ ನಿಕಟ ಸಂಬಂಧಗಳ ಮಧ್ಯೆಯೂ ಹಲವಾರು ಹೇಳಲಾಗದ, ಹೇಳಬಾರದ ಗುಟ್ಟುಗಳು ಅಡಗಿರುತ್ತವೆ. ಗುಟ್ಟುಗಳನ್ನು ಬಚ್ಚಿಟ್ಟುಕೊಳ್ಳುವವ ಬುದ್ಧಿವಂತ. ಗುಟ್ಟುಗಳನ್ನು ನಾವೇ ಗುಟ್ಟಾಗಿರಿಸಿಕೊಳ್ಳುವುದು ಬುದ್ಧಿವಂತಿಕೆ. ಆದರೆ ಇನ್ನೊಬ್ಬರು ತಮ್ಮ ಗುಟ್ಟುಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಭಾವಿಸುವುದು ಮೂರ್ಖತನ. ತನ್ನ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸಬಹುದೆಂಬ ಸಂದೇಹದಲ್ಲಿ ‘ಯಾರಲ್ಲಿ ಹೇಳಬಾರದೆಂದು’ ಭಾಷೆ ತೆಗೆದುಕೊಂಡು ಇತರರಲ್ಲಿ ಗುಟ್ಟಾಗಿ ಹೇಳಿದ ಗುಟ್ಟುಗಳು ಎಂದೂ ಗುಟ್ಟಾಗಿ ಉಳಿಯುವುದಿಲ್ಲ. ಇನ್ನೊಬ್ಬನ ಕಿವಿಯಲ್ಲಿ ಗುಟ್ಟಾಗಿ ಹೇಳಿದ ವಿಷಯ ಕ್ಷಣಾರ್ಧದಲ್ಲಿ ಹತ್ತಿಪ್ಪತ್ತು […]

ಶ್ರದ್ಧಾಕೇಂದ್ರಗಳ ಸ್ವಚ್ಛತೆಯೆಂಬ ವಿನೂತನ ಕಲ್ಪನೆ

ಅನಿಲ್ ಕುಮಾರ್ ಎಸ್‍.ಎಸ್.,ಕಾರ್ಯನಿರ್ವಾಹಕ ನಿರ್ದೇಶಕರು ಧಾರ್ಮಿಕ ಶ್ರದ್ಧಾಕೇಂದ್ರಗಳು ಮನುಕುಲದ ಬದುಕಿನಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ಒಂದು ಶ್ರೇಷ್ಠ ಜೀವನ ಶೈಲಿಗೆ ಪ್ರೇರಣೆ ನೀಡುವುದಲ್ಲದೆ ಆಧ್ಯಾತ್ಮಿಕತೆಯ ಮೂಲಕ ಆತ್ಮವಿಶ್ವಾಸ, ಸ್ಥೈರ್ಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಇಂತಹ ಧಾರ್ಮಿಕ ಶ್ರದ್ಧಾಕೇಂದ್ರಗಳು ಸ್ವಚ್ಛ, ಸುಂದರವಾಗಿರಬೇಕೆಂಬುವುದನ್ನು ಅನೇಕ ದಶಕಗಳಿಂದ ಆಶಿಸಿಕೊಂಡು ಕಾರ್ಯರೂಪಕ್ಕಿಳಿಸಿದವರು ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು. ಆದುದರಿಂದಲೇ ‘ಇಂಡಿಯಾ ಟುಡೇ’ ನಿಯತಕಾಲಿಕ ಪತ್ರಿಕೆ ಧರ್ಮಸ್ಥಳವನ್ನು ದೇಶದಲ್ಲೇ ಅತ್ಯಂತ ಸ್ವಚ್ಛ ಧಾರ್ಮಿಕ ನಗರಿ ಎಂದು ಗುರುತಿಸಿ 2013ರಲ್ಲಿ ‘ರಾಷ್ಟ್ರೀಯ ಸಫಾಯಿಗಿರಿ’ […]

ಶಿಕ್ಷಣಕ್ಕೆ ಡಿಜಿಟಲ್‌ ಸ್ಪರ್ಶ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಹುಟ್ಟಿದ ಕ್ಷಣದಿಂದ ಆರಂಭವಾಗುವ ‘ಕಲಿಕೆ’ ಜೀವನದ ಕೊನೆ ಕ್ಷಣದವರೆಗೂ ನಿಲ್ಲುವುದಿಲ್ಲ. ಕಲಿಕೆಯಿಂದ ಹೊಸ ಅನುಭವಗಳು ದೊರೆಯುತ್ತಿರುತ್ತದೆ. ‘ಅಮ್ಮ’ ಎಂಬ ತೊದಲು ನುಡಿಯಿಂದ ಪ್ರಾರಂಭವಾಗಿ ಮಗು ತನ್ನ ತಾಯಿ-ತಂದೆ, ಅಜ್ಜ ಅಜ್ಜಿಯಿಂದ ಮಾತಿನ ಜೊತೆಗೆ ಸಂಸ್ಕಾರ, ಗುಣ-ನಡತೆಯನ್ನು ಕಲಿಯುತ್ತದೆ.ಮಗು ಕುತೂಹಲದಿಂದ ಪ್ರಪಂಚವನ್ನು ನೋಡುತ್ತ, ಕೇಳುತ್ತ, ಸ್ಪರ್ಶಿಸುತ್ತ ಹಾಗೂ ಅನುಭವಿಸುತ್ತ ಕಲಿಯಲು ಆರಂಭಿಸುತ್ತದೆ. ಉದಾಹರಣೆಗೆ ಮಕ್ಕಳಿಗೆ ಸುತ್ತಮುತ್ತಲಿನ ಪರಿಸರದಲ್ಲಿರುವ ಬಣ್ಣ, ಆಕಾರ, ಚಲನೆ, ಮರದ ಮೇಲಿರುವ ಹಕ್ಕಿ ಅಥವಾ ಟಿ.ವಿ.ಯಲ್ಲಿ ಬರುವ ಕಾರ್ಟೂನ್ ಕೂಡ […]

ಹೊಸ ವರ್ಷಾಚರಣೆ ಪಾರ್ಟಿ‍ಯ ಬದಲು ಪರಿರ್ತನೆಯ ದಿನವಾಗಲಿ

ಶ್ರೀ ಅನಿಲ್‍ ಕುಮಾರ್ ಎಸ್‍.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಾಲಮಾನ ಪರಿಗಣನೆ ವಿಶ್ವದಾದ್ಯಂತ ವಿಭಿನ್ನವಾಗಿದೆ. ಹೊಸ ಸಂವತ್ಸರದ ಪ್ರಾರಂಭದ ದಿನದಿಂದ ಹಿಡಿದು ಅವುಗಳನ್ನು ಸ್ವಾಗತಿಸುವ, ಆಚರಿಸುವ ವಿಧಿವಿಧಾನದಲ್ಲೂ ಪ್ರಪಂಚದಾದ್ಯಂತ ಬಹಳಷ್ಟು ವೈವಿಧ್ಯಗಳಿವೆ. ಹಾಗೆಯೇ ವೈವಿಧ್ಯತೆಯ ಪರಮೋಚ್ಛ ರಾಷ್ಟçವಾದ ಭಾರತದಲ್ಲಿ ಹೊಸ ವರ್ಷಾಚರಣೆ ರಾಜ್ಯದಿಂದ ರಾಜ್ಯಗಳಲ್ಲಿ ವಿಭಿನ್ನವಾಗಿ ನಡೆಯುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೂತನ ಸಂವತ್ಸರದ ಆರಂಭ ಪ್ರಕೃತಿಯ ನಿಯಮಗಳಿಗೆ ಬಹಳಷ್ಟು ಸನಿಹವಾಗಿದೆ. ಪ್ರಕೃತಿಯು ಎಲ್ಲ ಆಯಾಮಗಳಲ್ಲಿ ನವನವೀನತೆಯನ್ನು ಹೊಂದುವುದು ಚೈತ್ರ ಮಾಸದಲ್ಲಿಯೇ.ಪ್ರಪಂಚದ ಹೆಚ್ಚು ರಾಷ್ಟçಗಳು ಜನವರಿ 1 ಅನ್ನು […]