ಸುವಾಸನೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಯಾವುದೇ ಒಂದು ವಸ್ತುವಿನ ಸುವಾಸನೆಯನ್ನು ಗ್ರಹಿಸುವ ಕೆಲಸವನ್ನು ನಮ್ಮ ಪಂಚೇAದ್ರಿಯಗಳಲ್ಲಿ ಒಂದಾದ ಮೂಗು ಮಾಡುತ್ತದೆ. ಹಣ್ಣು, ತಿಂಡಿ, ಹೂವು, ಸುಗಂಧ ದ್ರವ್ಯ ಹೀಗೆ ಪ್ರತಿಯೊಂದು ಕೂಡಾ ತನ್ನದೇ ಆದ ವಿಶೇಷ ಪರಿಮಳವನ್ನು ಹೊಂದಿರುತ್ತದೆ. ಈ ‘ಪರಿಮಳ’ಗಳು ನಮ್ಮ ಬದುಕನ್ನು ಸದಾ ಉತ್ಸಾಹದಲ್ಲಿ ಇರುವಂತೆ ನೋಡಿಕೊಳ್ಳುತ್ತವೆ.‘ಹಸಿವೇ ಆಗುತ್ತಿಲ್ಲ’ ಎನ್ನುವವರು ಊಟದ ಟೇಬಲ್ ಬಳಿ ಬಂದಾಗ ಬಗೆ-ಬಗೆಯ ಭಕ್ಷ್ಯಗಳ ಸುವಾಸನೆಗೆ ಮರುಳಾಗಿ ತಕ್ಷಣ ಊಟಕ್ಕೆ ತಯಾರಾಗುವುದಿದೆ. ಅಡುಗೆ ಮನೆ ಒಳಗಿನಿಂದ ಚಾವಡಿಗೆ ಬರುವ ಹಪ್ಪಳ, […]

ಗ್ರಾಮೀಣ ಶಾಲೆಗಳನ್ನು ಉಳಿಸಿ ಬೆಳೆಸಲು ಜ್ಞಾನದೀಪ ಶಿಕ್ಷಕರು

ಅನಿಲ್ ಕುಮಾರ್ ಎಸ್‍.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ಸುಜ್ಞಾನನಿಧಿ ಶಿಷ್ಯವೇತನ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಪೂಜ್ಯ ಶ್ರೀ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಶಿಕ್ಷಣಕ್ಕೆ ನೀಡಿರುವ, ನೀಡುತ್ತಿರುವ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳೋಣ.ಕೆಲವು ದಶಕಗಳ ಹಿಂದೆ ಸರಕಾರವು ಗ್ರಾಮೀಣ ಮಟ್ಟದಲ್ಲಿ ಸರಕಾರಿ ಶಾಲೆಗಳನ್ನು ತೆರೆಯುವ ಮೂಲಕ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯೆಯನ್ನೆ ಬರೆದಿದೆ. ಇದರಿಂದ ರಾಜ್ಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ಶಿಕ್ಷಣ ಕ್ರಾಂತಿಯೇ ಆಗಿದೆ ಎಂದರೆ ತಪ್ಪಾಗಲಾರದು. ಲಕ್ಷಾಂತರ […]

ಸಮುದ್ರದಲ್ಲಿ ಇಳಿಯುವ ವಿಮಾನಗಳು

ಸಮುದ್ರ ದಡದಲ್ಲಿ ವಿಮಾನದಿಂದ ಇಳಿದು ಮನೆ ತಲುಪುವ ದಿನಗಳು ಹತ್ತಿರವಾಗುತ್ತಿವೆ. ಈ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಸೇವೆಗೆ ಕರ್ನಾಟಕ ರಾಜ್ಯದ ಕರಾವಳಿ ತೆರೆದುಕೊಂಡು ರಾಜ್ಯದ ಪ್ರವಾಸೋದ್ಯಮವು ಚಿಗುರಲಿದೆ. ಈ ಯೋಜನೆಗೆ ‘ಸೀಪ್ಲೇನ್’ ಎಂದು ಹೆಸರು. ನೀರಿನ ಮೇಲಿಂದಲೇ ವಿಮಾನ ಟೇಕ್‌ಆಫ್ ಆಗುವ ಮತ್ತು ನೀರ ಮೇಲೆಯೇ ಲ್ಯಾಂಡಿoಗ್ ಆಗುವ ಪ್ರಮುಖ ಯೋಜನೆಯಿದು.ನೀರಿನಲ್ಲಿ ವಿಮಾನ : ನೀರಿನಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿoಗ್ ಆಗುವ ವಿಮಾನದ ಚಕ್ರಗಳ ಬದಲಾಗಿ ಉದ್ದನೆಯ ದೋಣಿಯಂತಹ ರಚನೆಗಳು […]

ಭತ್ತಕ್ಕೊಂದು ಮ್ಯೂಸಿಯಂ – 210 ದೇಸಿ ಭತ್ತದ ತಳಿ ಸಂರಕ್ಷಕ ಬೋರೇಗೌಡ

ಬೋರೇಗೌಡರು ಮರದಿಂದ ಬಿದ್ದು ನಿತ್ರಾಣರಾದರು. ವೈದ್ಯರ ಸಲಹೆಯಂತೆ ಯೋಗಾಭ್ಯಾಸಕ್ಕೆಂದು ಹೋದವರು ಆಹಾರ ಮತ್ತು ಆರೋಗ್ಯದ ನಡುವೆ ಇರುವ ಸಂಬಂಧವನ್ನು ತಿಳಿದುಕೊಂಡರು. ರಾಸಾಯನಿಕದಿಂದ ಆರೋಗ್ಯದ ಮೇಲಾಗುತ್ತಿರುವ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ತಾನು ಕೊಟ್ಟಿಗೆ ಗೊಬ್ಬರದಲ್ಲಿ ಭತ್ತ ಬೆಳೆಯುವ ಪ್ರಯತ್ನಕ್ಕಿಳಿದರು. ಇದೀಗ ಇವರ ಜಮೀನಿನಲ್ಲಿ 210 ತಳಿಯ ಭತ್ತಗಳು ಸಿದ್ಧಗೊಂಡಿವೆ. ಭತ್ತದ ರಕ್ಷಣೆ ಮತ್ತು ತಳಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರತ್ಯೇಕ ‘ಭತ್ತದ ಮ್ಯೂಸಿಯಂ’ ಅನ್ನು ತೆರೆಯುವ ಮೂಲಕ ಗೌಡರು ಭತ್ತದ ಬೋರೇಗೌಡರೆಂದೆನಿಸಿಕೊoಡಿದ್ದಾರೆ.ಮoಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದ ಎಸ್. […]

ಜಾಗತಿಕ ಮಾರುಕಟ್ಟೆಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಇರಾನ್‌ ಸಮರ!

ರಾಜೀವ ಹೆಗಡೆ ಸುಮ್ನೇ ಇರೋಣ ಅಂದ್ರೆ ಅಮೆರಿಕ, ಇಸ್ರೇಲ್‌ನವರು ಇರಾಕ್ ಬಿಡ್ತಿಲ್ಲ. ಅವರಿಬ್ಬರು ಸೇರಿ ಇರಾನ್ ಮೇಲೆ ಹಾಕಿದ ಬೆಂಕಿಯ ಬಿಸಿಯು ಜಗತ್ತಿನ ಮೂಲೆ ಮೂಲೆಗೂ ತಲುಪುತ್ತಿದೆ. ಇಂದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾವು, ವಿಶ್ವದ ಪ್ರತಿಯೊಂದು ನಗರ, ಹಳ್ಳಿ, ಮನೆ-ಮನೆಗೆ ದಾಳಿಯಿಟ್ಟಿದೆ. ಯುದ್ಧವು ನಮ್ಮದಲ್ಲದಿದ್ದರೂ ಪ್ರತಿಯೊಬ್ಬರೂ ಬೆಲೆ ತೆರಬೇಕಿದೆ. ಇದುವೇ ಯುದ್ಧದ ಕರಾಳ ಮುಖ.ಜಾಗತಿಕ ಮಾರುಕಟ್ಟೆಗೆ ಸಂಬಂಧಿಸಿ ಅತ್ಯಂತ ನಿರ್ಣಾಯಕ ಜಾಗದಲ್ಲಿ ಇರಾನ್ ಇದೆ. ಜಗತ್ತಿನ ಶೇ. 70ರಷ್ಟು ಪೆಟ್ರೋಲಿಯಂ ಉತ್ಪನ್ನಗಳು ಸಾಗಾಟವಾಗುವ ಹಾರ್ಮುಜ್ ಜಲಸಂಧಿಯು […]

ಅಜ್ಜಿ ಮನೆ ಮತ್ತು ಆಕೆಯ ಕಥೆಗಳು

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಎಪ್ರಿಲ್ ತಿಂಗಳು ಬಂತೆoದರೆ ಶಾಲಾ ಮಕ್ಕಳಿಗೆಲ್ಲ ರಜೆಯ ಖುಷಿ. ಅಜ್ಜಿ ಮನೆ, ಮಾವನ ಮನೆಗೆ ತೆರಳುವ ಸಡಗರ, ಸಂಭ್ರಮ. ಮಕ್ಕಳು ರಜೆಗಾಗಿ ಜಾತಕಪಕ್ಷಿಯಂತೆ ಕಾಯುವ, ಅಜ್ಜ-ಅಜ್ಜಿಯಂದಿರೂ ಕಾತರದಿಂದ ಮೊಮ್ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದ ಕಾಲವೊಂದಿತ್ತು. ಈಗ ಎಲ್ಲವೂ ಬದಲಾಗಿದೆ. ಸಂಬoಧಗಳ ಬಾಂಧವ್ಯ, ಅಜ್ಜಿ ಮನೆಗಳ ಪರಿಸರ, ಅಲ್ಲಿನ ಆಟ ಪಾಠ ಮುಂತಾದ ಸುಮಧುರ ಕ್ಷಣಗಳಿಂದ ಇಂದಿನ ಪೀಳಿಗೆ ದೂರ ಸರಿಯುತ್ತಿದೆ.ಬಾಲ್ಯದಲ್ಲಿ ಅಜ್ಜ-ಅಜ್ಜಿ ಹೇಳುವ ಕಥೆಯನ್ನು ಕೇಳುವುದೇ ಒಂದು ಕೌತುಕದ ಸಂಗತಿಯಾಗಿತ್ತು. ಅಜ್ಜಿ ಕಥೆಗಳೆಂದರೆ […]

ವಿಶ್ವ ಆರೋಗ್ಯ ದಿನಾಚರಣೆ – ವೃತ್ತಿಯಲ್ಲಿ ಆರೋಗ್ಯ

ಶ್ರೀ ಅನಿಲ್ ಕುಮಾರ್ ಎಸ್‍.ಎಸ್‍., ಕಾರ್ಯನಿರ್ವಾಹಕ ನಿರ್ದೇಶಕರು ವಿಶ್ವಾದ್ಯಂತ ಎಪ್ರಿಲ್ 07 ಅನ್ನು ‘ವಿಶ್ವ ಆರೋಗ್ಯ ದಿನ’ವನ್ನಾಗಿ ಆಚರಿಸಲಾಗುತ್ತದೆ. ಕೆಲವು ದಶಕಗಳ ಹಿಂದೆ ಯುವಜನತೆಯಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಬಹಳ ಅಪರೂಪವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ಪಟ್ಟಣ ಪ್ರದೇಶಗಳಲ್ಲಿರುವ ಹೈಟೆಕ್ ಆಸ್ಪತ್ರೆಗಳಿಗೊಮ್ಮೆ ಭೇಟಿ ನೀಡಿದರೆ ಅಲ್ಲಿ ಮದ್ಯವಯಸ್ಕರೇ ಹೆಚ್ಚಾಗಿ ಕಾಣಿಸುತ್ತಾರೆ. ಇನ್ನು ವೆಲ್‌ನೆಸ್, ಫಿಟ್‌ನೆಸ್ ಇತ್ಯಾದಿ ಆಧುನಿಕ ಹೆಸರಿನೊಂದಿಗೆ ನೀಡುವ ವೈದ್ಯಕೀಯ ಚಿಕಿತ್ಸೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆಯೇ ಪಡೆಯುತ್ತಿದ್ದಾರೆ. […]

ಬೇಂದ್ರೆಯವರ ನಾಕುತಂತಿಗೆ 60ರ ಸಂಭ್ರಮ

ಡಾ. ಪ್ರಶಾಂತ್ ಎ. ಎಸ್. ಕಾವ್ಯ, ಕವನಗಳೆಂದರೇನೆ ಹಾಗೇ, ಸುಲಭವಾಗಿ ಅರ್ಥವಾಗುವುದಿಲ್ಲ. ಅವುಗಳನ್ನು ಅರ್ಥೈಸಿಕೊಳ್ಳುವ ಓದುಗನಿಗೆ ಮಾತ್ರ ಆನಂದ ದೊರೆಯುವುದು. ಅನೇಕ ವೇಳೆ ಅರ್ಥ ತಿಳಿಯದೆಯೇ ಹಾಡಿನ ಲಯಕ್ಕೆ, ನಾದಕ್ಕೆ, ಪ್ರಾಸಕ್ಕೆ ಮನಸೋತಿರುತ್ತೇವೆ. ಅವುಗಳ ಸಾಲಿನಲ್ಲಿ ಬೇಂದ್ರೆಯವರ ನಾಕುತಂತಿಯು ಒಂದು. ಬೇಂದ್ರೆಯವರ ನಾಕುತಂತಿಗೆ ಇದೀಗ ಅರುವತ್ತು ತುಂಬಿದೆ. ಆಧ್ಯಾತ್ಮಿಕ ನೆಲೆಯ ಈ ಕಾವ್ಯದ ಒಡಲು ಬ್ರಹ್ಮಾಂಡ ಸ್ವರೂಪಿಯಾದದ್ದು. ಪ್ರಾಸ ಪದಗಳಿಂದ ತುಂಬಿದ ಈ ಕವಿತೆಯನ್ನು ಒಂದೇಟಿಗೆ ಅರ್ಥೈಸಿಕೊಳ್ಳುವುದು ಕಷ್ಟ. ಕಠಿಣವಾದ ಕಾವ್ಯ ಆಗಿರುವ ಕಾರಣಕ್ಕೆ ಅದರ ಕುರಿತಾಗಿ […]

ವಾತ್ಸಲ್ಯದ ಕಥೆಗಳು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಜೀವನದಲ್ಲಿ ಕಷ್ಟ-ಸುಖ, ಸೋಲು-ಗೆಲುವು, ಹುಟ್ಟು ಸಾವು, ಬಡತನ-ಸಿರಿತನ ಇಂತಹ ವೈವಿಧ್ಯಗಳೆಲ್ಲ ಇದ್ದದ್ದೇ. ಕಷ್ಟಕ್ಕೆ ಅಂಜಬೇಕಾಗಿಲ್ಲ. ಕತ್ತಲೆ ಕಳೆದು ಬೆಳಕಾದಂತೆ ಕಷ್ಟದ ಹಿಂದೆ ಸುಖವೂ ಇದೆ ಎಂಬ ಸಮಾಧಾನದ, ಸಾಂತ್ವಾನದ ಮಾತು ಬದುಕನ್ನು ಮುನ್ನಡೆಸುವುದಕ್ಕೆ ಆಸರೆಯಾಗುತ್ತದೆ. ಆದರೆ ಕೆಲವೊಮ್ಮೆ ಕೆಲವೊಂದು ಮನೆಗಳಲ್ಲಿ ಕಷ್ಟ, ಬಡತನ, ನೋವು, ಸೋಲು, ಸಾವು ಇವೆಲ್ಲವನ್ನು ಒಂದೇ ಕಡೆ ಕಂಡಾಗ ‘ಬದುಕು ಯಾಕೆ ಹೀಗೆ? ಮನುಷ್ಯ ಜೀವಿ ಎಷ್ಟೆಲ್ಲಾ ಕಷ್ಟಗಳ ಮಧ್ಯೆ ಇನ್ನು ಬದುಕುತ್ತಿದ್ದಾನೆ’ ಎಂಬ ಉತ್ತರವಿಲ್ಲದ ಪ್ರಶ್ನೆ […]

ಶಿಕ್ಷಣಕ್ಕೆ ನೆರವಾಗುವ ಸುಜ್ಞಾನನಿಧಿ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ಜ್ಞಾನದೀಪ ಶಿಕ್ಷಣ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಶ್ರೀ ಹೆಗ್ಗಡೆಯವರು ಆರ್ಥಿಕವಾಗಿ ಹಿಂದುಳಿದ ಯೋಜನೆಯ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಪಡೆಯಲು ಅನುಕೂಲವಾಗುವಂತೆ ಆರಂಭಿಸಲಾದ ‘ಸುಜ್ಞಾನನಿಧಿ ಶಿಷ್ಯವೇತನ’ ಎಂಬ ವಿದ್ಯಾರ್ಥಿವೇತನದ ಬಗ್ಗೆ ತಿಳಿದುಕೊಳ್ಳೋಣ.ಒಂದೆರಡು ದಶಕಗಳ ಹಿಂದೆ ಗ್ರಾಮೀಣ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಮಹತ್ತರ ಕ್ರಾಂತಿಯೇ ಉಂಟಾಯಿತು. ಸರಕಾರಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣವನ್ನು ನೀಡುವುದರ ಜೊತೆಗೆ ಸ್ಥಳೀಯವಾಗಿ ಕೆಲವು […]

ಮಕ್ಕಳು ನಿದ್ರೆಯಲ್ಲಿ ನಡೆದಾಡುವುದೇಕೇ?

ಈ ಜಗತ್ತು ಮುನ್ನಡೆಯುತ್ತಿರುವುದು ನಂಬಿಕೆಯ ತಳಹದಿಯ ಮೇಲೆ. ನಾವು ಬೆಳೆದು ಬರುವ ಕುಟುಂಬ, ಮನೆ, ಸಮಾಜ, ಪರಿಸರ, ಲೋಕಜ್ಞಾನ ಇತ್ಯಾದಿಗಳೆಲ್ಲವೂ ವ್ಯಕ್ತಿಯ ನಂಬಿಕೆಯನ್ನು ರೂಪುಗೊಳಿಸುವ ವಿಷಯಗಳಾಗಿವೆ. ನಂಬಿಕೆಯು ನಾನಾ ರೀತಿಯಲ್ಲಿ ಅಭಿವ್ಯಕ್ತವಾಗುತ್ತವೆ. ನಂಬಿಕೆಯಷ್ಟೇ ಅರೆ ನಂಬಿಕೆ ಮತ್ತು ಅಪನಂಬಿಕೆಗಳೂ ಇವೆ. ಉದಾಹರಣೆಗೆ ‘ದೇವರು ಇದ್ದಾನೆ’ ಎಂದು ನಂಬುವ ಒಂದು ವರ್ಗ, ‘ದೇವರು ಇಲ್ಲ’ ಎಂದು ಹೇಳುವ ಇನ್ನೊಂದು ವರ್ಗ. ಇನ್ನು ಕೆಲವರು ‘ದೇವರು ಇರಲೂಬಹುದು, ಇಲ್ಲದಿರಲೂಬಹುದು’ ಎಂದು ಅರೆ ನಂಬಿಕೆಯನ್ನು ಹೊಂದಿದವರು ಇದ್ದಾರೆ. ಹೀಗೆ ಅವರವರ ಆಲೋಚನೆ, […]

ಶಿವನೊಲುಮೆಯೇ ಜಗದೊಲುಮೆ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಈ ಜಗತ್ತು ಮುನ್ನಡೆಯುತ್ತಿರುವುದು ನಂಬಿಕೆಯ ತಳಹದಿಯ ಮೇಲೆ. ನಾವು ಬೆಳೆದು ಬರುವ ಕುಟುಂಬ, ಮನೆ, ಸಮಾಜ, ಪರಿಸರ, ಲೋಕಜ್ಞಾನ ಇತ್ಯಾದಿಗಳೆಲ್ಲವೂ ವ್ಯಕ್ತಿಯ ನಂಬಿಕೆಯನ್ನು ರೂಪುಗೊಳಿಸುವ ವಿಷಯಗಳಾಗಿವೆ. ನಂಬಿಕೆಯು ನಾನಾ ರೀತಿಯಲ್ಲಿ ಅಭಿವ್ಯಕ್ತವಾಗುತ್ತವೆ. ನಂಬಿಕೆಯಷ್ಟೇ ಅರೆ ನಂಬಿಕೆ ಮತ್ತು ಅಪನಂಬಿಕೆಗಳೂ ಇವೆ. ಉದಾಹರಣೆಗೆ ‘ದೇವರು ಇದ್ದಾನೆ’ ಎಂದು ನಂಬುವ ಒಂದು ವರ್ಗ, ‘ದೇವರು ಇಲ್ಲ’ ಎಂದು ಹೇಳುವ ಇನ್ನೊಂದು ವರ್ಗ. ಇನ್ನು ಕೆಲವರು ‘ದೇವರು ಇರಲೂಬಹುದು, ಇಲ್ಲದಿರಲೂಬಹುದು’ ಎಂದು ಅರೆ ನಂಬಿಕೆಯನ್ನು ಹೊಂದಿದವರು […]