ಹಳೆಯ ಬಟ್ಟೆಗೆ ‘ಪ್ರಿಯ’ ಮೆರುಗು

ಸೀರೆ, ಚೂಡಿದಾರ್, ಹೊದಿಕೆ, ಪ್ಯಾಂಟ್, ಅಂಗಿ, ಲುಂಗಿ ಮೊದಲಾದ ಬಟ್ಟೆಬರೆಗಳು ಒಂದಷ್ಟು ಸಮಯ ಉಪಯೋಗವಾದ ಬಳಿಕ ಅಥವಾ ಅವುಗಳ ಬಣ್ಣ ಕೊಂಚ ಮಾಸಿದ ನಂತರ ಕಸದ ಬುಟ್ಟಿಯನ್ನು ಸೇರುವುದೇ ಹೆಚ್ಚು. ಒಂದಷ್ಟು ಮನೆಗಳಲ್ಲಿ ಅವುಗಳನ್ನು ಎಸೆಯಲೂ ಆಗದೆ, ಇಟ್ಟುಕೊಳ್ಳಲೂ ಆಗದೆ ಮನೆಮಂದಿ ಪರಿತಪಿಸುತ್ತಾರೆ. ಹಳೆಯ ಬಟ್ಟೆಗಳಿಗೆ ಹೊಸ ಮೆರುಗನ್ನು ತುಂಬಿ ನವನವೀನ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸುವ, ಫ್ಯಾಷನ್‌ಪ್ರಿಯರಿಗೆ ಇಷ್ಟವೆನಿಸುವಂತೆ ಬಗೆಬಗೆಯ ವಸ್ತುಗಳನ್ನು ತಯಾರಿಸುವ ಕಲೆಯೂ ಜನಪ್ರಿಯವಾಗುತ್ತಿದೆ.ಧಾರವಾಡದ ಕಮಲಾಪುರದ ಪತ್ರೇಶ್ವರ ನಗರದ ಪ್ರಿಯಾ ಖೋದಾನ್‌ಪುರವರು ಕಳೆದ ಹತ್ತು ವರ್ಷಗಳಿಂದ […]

ಅಕ್ಕಿ ರೊಟ್ಟಿ ಮಾರಿ ಮನೆ ಕಟ್ಟಿದರು

ರಾಮಚಂದ್ರರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಅಡಕೆ ಮರವೇರಿದರೆ ಸಿಗುತ್ತಿದ್ದುದು 300 ರೂಪಾಯಿ ಸಂಬಳ. ತನ್ನ ಕೆಲಸಗಳು ಹೆಚ್ಚಿನ ದೈಹಿಕ ಸಾಮರ್ಥ್ಯವನ್ನು ಬಯಸುವ ಕಾರಣ 30 ದಿನಗಳಲ್ಲೂ ಕೆಲಸ ಮಾಡುವುದು ಅಸಾಧ್ಯವಾದ ಮಾತೇ ಸರಿ. ಹಾಗೆಂದು ಮೂರನೇ ತರಗತಿ ಮುಗಿಸಿ ಹೋಟೆಲ್‌ನತ್ತ ಮುಖ ಮಾಡಿದ ರಾಮಚಂದ್ರರವರಿಗೆ ಹೋಟೆಲ್ ಕೆಲಸವು ನೆಮ್ಮದಿಯನ್ನು ನೀಡಿರಲಿಲ್ಲ. ತನ್ನ ಅತ್ತೆ ಮಂಗಳೂರಿನ ರೊಟ್ಟಿ ಫ್ಯಾಕ್ಟರಿವೊಂದರಲ್ಲಿ ಕೆಲಸ ಮಾಡುತ್ತಿದ್ದರು. ರೊಟ್ಟಿ ತಯಾರಿ ಘಟಕವನ್ನು ಆರಂಭಿಸುವ ಬಗ್ಗೆ ರಾಮಚಂದ್ರರವರಿಗೆ ಧೈರ್ಯ ತುಂಬಿದರು. ಆಗ ರಾಮಚಂದ್ರರವರು ಸ್ವ ಉದ್ಯೋಗದ ಕುರಿತ […]

ನನ್ನ ಬರಹಗಳ ಮೊದಲ ಓದುಗರು ಶ್ರೀ ಹೆಗ್ಗಡೆಯವರು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಗೆಳತಿ’ ಅಂಕಣದಲ್ಲಿ ಪ್ರಕಟಗೊಂಡ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಲೇಖನಗಳನ್ನು ಒಟ್ಟುಗೂಡಿಸಿ ಮೂರು ಭಾಗಗಳಾಗಿ ವಿಂಗಡಿಸಿ ‘ಗೆಳತಿ’ ಎಂಬ ಪುಸ್ತಕಗಳನ್ನು ಹೊರತರಲಾಗಿದೆ. ಮಾರ್ಚ್ ೮ರಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ|| ಸಂಧ್ಯಾ ಎಸ್. ಪೈಯವರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತೃಶ್ರೀಯವರು ತಮ್ಮ ಬರಹ ಆರಂಭಕ್ಕೆ ಪ್ರೇರಣೆ, ಬರಹದಲ್ಲಿ ಒತ್ತು ನೀಡುವ ವಿಷಯಗಳು, ತಾವು ಬರವಣಿಗೆ ಆರಂಭಿಸಿದ ಬಗೆ ಹೀಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿಮಾನಿಗಳೊಂದಿಗೆ ಹಂಚಿಕೊ0ಡರು. ಅವರ ಮಾತಿನ […]

ಆತ್ಮನಿರ್ಭರ ಭಾರತ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಮಧ್ಯಪ್ರದೇಶದಲ್ಲಿ ಪಾಠಲ್‌ಕೊಟ್ ಎಂಬ ಪ್ರದೇಶ ಇದೆ. 79 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸುಮಾರು 12 ಗ್ರಾಮಗಳು ಇದ್ದು, ಸಹಾಸ್ರಾರು ಸಂಖ್ಯೆಯ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಇಲ್ಲಿಯ ಜನರು ಪಟ್ಟಣ ಅಥವಾ ಅರೆ ಪಟ್ಟಣದ ಸಂಪರ್ಕದಿ0ದ ಹೆಚ್ಚು ಕಡಿಮೆ ಹೊರಗಿದ್ದು, ಸ್ವಾವಲಂಬನೆಯಿ0ದ ಜೀವನ ನಡೆಸುತ್ತಿದ್ದಾರೆ. ಒಂದು ರೀತಿಯಲ್ಲಿ ಹೇಳುದಾದರೆ ಇದೊಂದು ಆತ್ಮನಿರ್ಭರ ಗ್ರಾಮ. ಇವರು ಕೇವಲ ಉಪ್ಪು ಮತ್ತು ಬೆಂಕಿ ಪೊಟ್ಟಣವನ್ನು […]

ಪರಿವರ್ತನೆಯ ಪ್ರವರ್ತಕರು

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರಿಗೆ, ದಿನಾಂಕ 08-03-2022 ರಂದು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳೂ, ನೌಕರವೃಂದದವರು ಮತ್ತು ಪಾಲುದಾರ ಸದಸ್ಯರ ಪರವಾಗಿ ಅರ್ಪಿಸಿದ ಸನ್ಮಾನ ಪತ್ರ.ಸರ್ವಾದರಣೀಯರೇ, : ಬೆಳ್ತಂಗಡಿ ತಾಲೂಕಿನ ಸುಸಂಸ್ಕೃತ ಮನೆತನ ಪೆರಾಡಿ ಬೀಡಿನ ಸಜ್ಜನ ಶ್ರೀ ರಘುಚಂದ್ರ ಶೆಟ್ಟಿ ಮತ್ತು ಶ್ರೀಮತಿ ಪುಷ್ಪಾವತಿ ಅಮ್ಮನವರ ತೃತೀಯ ಕುಸುಮವಾಗಿ […]