ಪಿಎಂ ದಿಶಾ ಯೋಜನೆಯ ಪ್ರಯೋಜನ ಪಡೆಯಿರಿ
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಸಂವಹನ ತಂತ್ರಜ್ಞಾನ (ಕಮ್ಯುನಿಕೇಶನ್ ಟೆಕ್ನಾಲಜಿ) ಮೊಬೈಲ್ ಆವಿಷ್ಕಾರದೊಂದಿಗೆ ನಾವು ಊಹಿಸುವುದಕ್ಕಿಂತ ವೇಗವಾಗಿ ಬೆಳೆದಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಮನೆಯಲ್ಲಿ ಟೆಲಿಫೋನ್ ಹಾಕಿಸಿಕೊಳ್ಳುವುದು ಕನಸಿನ ಮಾತಾಗಿತ್ತು. ಮತ್ತು ಟೆಲಿಫೋನ್ ಇದ್ದರೂ ದೂರದ ಊರುಗಳಿಗೆ ಕರೆ ಮಾಡಬೇಕೆಂದರೆ ಗಂಟೆಗಟ್ಟಲೆ ಕಾಯಬೇಕಾಗುತ್ತಿತ್ತು. ನಂತರ ಎಸ್.ಟಿ.ಡಿ. ಸೌಲಭ್ಯ ಬಂದರೂ ಎಲ್ಲ ಟೆಲಿಫೋನ್‌ಗಳಿಗೂ ಆ ಭಾಗ್ಯ ಇರಲಿಲ್ಲ. ತೊಂಭತ್ತರ ದಶಕದಲ್ಲಿ ಪ್ರಾರಂಭವಾದ ಇ-ಮೇಲ್, ಇಂಟರ್‌ನೆಟ್ ತಂತ್ರಜ್ಞಾನ ಜಗತ್ತಿನಲ್ಲಿ ಸಂವಹನ ಕ್ರಾಂತಿಯನ್ನು ಮಾಡಿಸಿತು. ಇದರಿಂದ ಒಬ್ಬರಿಗೊಬ್ಬರು […]
ವಿದ್ಯಾರ್ಥಿಗಳ ಭವಿಷ್ಯದ ‘ಯಶೋ’ಗಾಥೆಗೆ ಭದ್ರ ಬುನಾದಿ ಹಾಕಿದವರು
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ಒಂದು ದೇಶದ ಸಮಗ್ರ ಅಭಿವೃದ್ಧಿಗೂ ಅಲ್ಲಿಯ ಶಿಕ್ಷಣ ವ್ಯವಸ್ಥೆಗೂ ಒಂದು ರೀತಿಯ ನೇರ ಸಂಬAಧವಿದೆ. ನಮ್ಮ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ಗುಣಮಟ್ಟದಲ್ಲಿ ವಿಶ್ವದರ್ಜೆಗೇರಿಸುವ ಪ್ರಯತ್ನಗಳಾಗುತ್ತಿವೆ. ಡಿಜಿಟಲ್ ಇಂಡಿಯಾದ ಈ ಕಾಲಘಟ್ಟದಲ್ಲಿ ಡಿಜಿಟಲ್ ಶಿಕ್ಷಣ ಅನಿವಾರ್ಯ ಮತ್ತು ಅವಕಾಶವು ಆಗಿದೆ. ಕೋವಿಡ್ ಸಂದರ್ಭದಲ್ಲಿ ಪರ್ಯಾಯ ಶಿಕ್ಷಣ ವ್ಯವಸ್ಥೆಯಾದ ಡಿಜಿಟಲ್ ಶಿಕ್ಷಣ ಇಂದು ಪರಿಹಾರ ಮತ್ತು ಫಲಪ್ರದ […]
ಹೆಣ್ಣಿನ ಬದುಕಿನ ಬೆಳಕು – ಸೋದರ ಪ್ರೇಮ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಂದು ಕಾಲ ಇತ್ತು, ಸಾಧಾರಣ ನನ್ನ ಅಮ್ಮನ ಕಾಲ ಅಂದರೆ ಸುಮಾರು 60-70 ವರ್ಷಗಳ ಹಿಂದೆ. ಆಗ ನಾವಿಬ್ಬರು ನಮಗಿಬ್ಬರು ಎಂಬ ಘೋಷಣೆ ಇರಲಿಲ್ಲ. ಮಾತ್ರವಲ್ಲ, ಅದಕ್ಕೆ ಬೇಕಾದ ವ್ಯವಸ್ಥೆಗಳೂ ಇರಲಿಲ್ಲ. ಹಾಗಾಗಿ ಹೆಂಗಸರು ಎರಡು ವರ್ಷಕ್ಕೊಮ್ಮೆ ಬಸರಿ-ಬಾಣಂತನದ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತಿತ್ತು. ಆಗ ಅವಿಭಕ್ತ ಕುಟುಂಬಗಳೂ ಇದ್ದುದರಿಂದ ಅಕ್ಕ-ತಂಗಿಯರು ಹೆರಿಗೆಗೆ ಬಂದರೆ ಅಪ್ಪನ ಜತೆ ಅಣ್ಣ-ತಮ್ಮಂದಿರು ಪೂರ್ಣ ಹೊಣೆಗಾರಿಕೆ ವಹಿಸಿಕೊಳ್ಳುತ್ತಿದ್ದರು. ಹೆಚ್ಚಿನ ಪ್ರಪಂಚ ಜ್ಞಾನವಿಲ್ಲದೆ ಅಮ್ಮ ಬಾಣಂತಿಯ ಎಣ್ಣೆ ನೀರು, ಪಥ್ಯದ […]
ತಾಂತ್ರಿಕತೆಯೆಂಬ ಮಂತ್ರ ದಂಡ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಹಿಂದೆ ನಾವೆಲ್ಲ ಮಕ್ಕಳಾಗಿದ್ದಾಗ ಬಂಧು-ಮಿತ್ರರ ಸಂದೇಶ ಹೊತ್ತ ಪತ್ರಕ್ಕಾಗಿ ವಾರಗಟ್ಟಲೆ ಕಾಯುತ್ತಿದ್ದೆವು. ಪತ್ರ ಬರೆದು ಮರುತ್ತರಕ್ಕೆ ಕಾಯುತ್ತಿದ್ದ ಕ್ಷಣಗಳು ಮರೆಯಲಾರದಂಥವು. ಯಾರ ಜೊತೆಗಾದರೂ ತುರ್ತಾಗಿ ಮಾತನಾಡಬೇಕಿದ್ದರೆ, ಸಂದೇಶ ನೀಡಬೇಕಿದ್ದರೆ ಟ್ರಂಕ್ ಕಾಲ್ ಬುಕ್ ಮಾಡಿ ದಿನಗಟ್ಟಲೆ ಕಾಯಬೇಕಾದ ಸಂದರ್ಭಗಳಿದ್ದವು. ಆ ದಿನಗಳಲ್ಲಿ ಇಂದಿನಷ್ಟು ಸರಕಾರಿ ಸೇವೆಗಳು ಇರಲಿಲ್ಲ. ಇದ್ದರೂ ಸೇವೆಗಳನ್ನು ಪಡೆಯಲು ಪಟ್ಟಣಕ್ಕೆ ಹೋಗಬೇಕು, ಒಂದು ಸಾರಿ ಹೋದರೆ ಸಾಲದು, ನಾಲ್ಕೈದು ಬಾರಿ ಹೋಗಬೇಕು, ಒಮ್ಮೆ ಹೋಗಿ ಬರಲು ಸಾಕಷ್ಟು ದುಡ್ಡು […]
ಪೂಜ್ಯ ಹೆಗ್ಗಡೆಯವರಿಂದ ಯೋಜನಾಧಿಕಾರಿಗಳಾಗಿ ಪದೊನ್ನತಿ ಹೊಂದಿದ ಕಾರ್ಯಕರ್ತರಿಗೆ ಮಾರ್ಗದರ್ಶನ
ಅರಣ್ಯದಲ್ಲಿ ಕಾಡು ಹಣ್ಣಿನ ಗಿಡ ಬೆಳೆಸುವ ‘ಬಿತ್ತೋತ್ಸವ’ ಯೋಜನೆಗೆ ಶ್ರೀ ಹೆಗ್ಗಡೆಯವರಿಂದ ಚಾಲನೆ
ಪೂಜ್ಯ ಹೆಗ್ಗಡೆಯವರಿಂದ ಹೊಸನಗರದ ಯೋಜನೆಯ ಕಾರ್ಯಕರ್ತರಿಗೆ ಮಾರ್ಗದರ್ಶನ
ಸಾಮೂಹಿಕ ವಿವಾಹಗಳ ರೂವಾರಿ
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಮುಂದಾಳತ್ವದಲ್ಲಿ ಪ್ರಾರಂಭಗೊAಡ ‘ಸಾಮೂಹಿಕ ವಿವಾಹ’ ಕಾರ್ಯಕ್ರಮಕ್ಕೆ ಇದೀಗ ಸುವರ್ಣ ಮಹೋತ್ಸವದ ಸಂಭ್ರಮ. ದಾನ ಪರಂಪರೆಯ ಧರ್ಮಸ್ಥಳ ಕ್ಷೇತ್ರದ ‘ಹೆಗ್ಗಡೆ’ ಜವಾಬ್ದಾರಿಯನ್ನು ೧೯೬೮ರಲ್ಲಿ ವಹಿಸಿಕೊಂಡ ಪೂಜ್ಯ ವೀರೇಂದ್ರ ಹೆಗ್ಗಡೆಯವರದ್ದು ದೂರದೃಷ್ಟಿಯ ಮನೋಭಾವ. ಅಗತ್ಯವಿದ್ದವರಿಗೆ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ಅವರು ದಾರ್ಶನಿಕರೇ ಸರಿ. ಎರಡು ಹೊತ್ತಿನ ಊಟ ಮಾಡುವುದೇ ಕಷ್ಟವಾಗಿದ್ದ ಆ ದಿನಗಳಲ್ಲಿ ಬಡ ಕುಟುಂಬಗಳು ತಮ್ಮ ಮಕ್ಕಳಿಗೆ ವಿವಾಹ […]
ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ‘ಜ್ಞಾನವಿಕಾಸ’
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ಹೆಣ್ಣು ಸಮಾಜದ ಕಣ್ಣು ಎನ್ನುವುದು ಅತ್ಯಂತ ಅರ್ಥಗರ್ಭಿತವಾದ ಮಾತು. ಆದರೆ ಎಷ್ಟೋ ಸಂದರ್ಭದಲ್ಲಿ ಅವಕಾಶವಂಚಿತರಾದ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಅಜ್ಞಾನದ ಅಂಧಕಾರದಿAದಾಗಿ ಕಣ್ಣನ್ನೇ ತೆರೆಯಲಾಗದಂತಹ ಸ್ಥಿತಿಯಲ್ಲಿರುವಾಗ ಸಮಾಜದ ಕಣ್ಣಾಗುವುದು ಎನಿತು? ಗ್ರ‍್ರಾಮೀಣ ಪ್ರದೇಶದಲ್ಲಿ ಇದು ಸಾಮಾನ್ಯ. ಅದರಲ್ಲೂ ಸಂಸಾರಸ್ಥ ಮಹಿಳೆಯರ ಸಂಖ್ಯೆ ಬಹಳಷ್ಟು. ಹಳ್ಳಿಗಳಲ್ಲಿ ಮಕ್ಕಳ ಶಿಕ್ಷಣವೇ ಕಷ್ಟ, ಇನ್ನು ಸಂಸಾರಸ್ಥ ಮಹಿಳೆಯರಿಗೆ ಇನ್ನೆಲ್ಲಿ ಶಿಕ್ಷಣ? ಶತಮಾನಗಳಿಂದಲೂ ಇದ್ದ ಈ […]
ಗೌರವ ಡಾಕ್ಟರೇಟ್ ಪುರಷ್ಕೃತ ಮಾತೃಶ್ರೀ ಡಾ||. ಹೇಮಾವತಿ ಅಮ್ಮನವರಿಗೆ ಯೋಜನೆಯ ಕಾರ್ಯಕರ್ತರಿಂದ ಅಭಿನಂದನಾ ಸಮಾರಂಭ
ಗ್ರಾಮಾಭಿವ್ರದ್ಧಿ ಯೋಜನೆಯ ಎಲ್ಲಾ ಪ್ರಾದೇಶಿಕ ನಿರ್ದೇಶಕರುˌ ನಿರ್ದೇಶಕರು ಹಾಗೂ ಯೋಜನಾಧಿಕಾರಿಯವರ ಪುನಶ್ಚೇತನಾ ಕಾರ್ಯಾಗಾರ
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಯೋಜನೆಯ ಕಾರ್ಯಕರ್ತರಿಗೆ ಪೂಜ್ಯ ಖಾವಂದರಿಂದ ಮಾರ್ಗದರ್ಶನ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ
ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರಿಗೆ ಗೌರವ ಡಾಕ್ಟರೇಟ್ ಪ್ರಧಾನ
ಆನ್‌ಲೈನ್‌ನಲ್ಲೂ ಹುಬ್ಬಳ್ಳಿ ಮಸಾಲ ಘಮ
ಹುಬ್ಬಳ್ಳಿ, ವ್ಯಾಪಾರ – ವಹಿವಾಟಿಗೆ ಹೆಸರುವಾಸಿ. ‘ಹುಬ್ಬಳ್ಳಿ ಮಸಾಲ’ ತಯಾರಿಸುವ ಮೂಲಕ ‘ಹುಬ್ಬಳ್ಳಿ ಮಸಾಲ ಅಂದ್ರೆ ಅಜ್ಜಿ ಕೈರುಚಿ ಇದ್ದಂಗ್’ ಎಂದು ಬ್ರ್ಯಾಂಡ್ ನೇಮ್ ಸೃಷ್ಟಿಸಿ ಆನ್‌ಲೈನ್‌ನಲ್ಲಿಯೂ ಮಾರುಕಟ್ಟೆ ಕಂಡುಕೊ0ಡವರು ಜ್ಯೋತಿ ಇಚ್ಚಂಗಿ. ಇವರು ತಯಾರಿಸುವ ಖಾರದಹುಡಿ ಮತ್ತು ಮಸಾಲಹುಡಿಯ ಘಮ ನಮ್ಮ ರಾಜ್ಯವನ್ನು ದಾಟಿ ಎಲ್ಲೆಡೆ ಹರಡಿಕೊಂಡಿದೆ. ಮೂರು ವರ್ಷಗಳ ಹಿಂದೆ ಮಿಕ್ಸರ್‌ನಲ್ಲಿ ದಿನಕ್ಕೆ ಎರಡು, ಮೂರು ಕೆ.ಜಿ.ಯಷ್ಟು ಮಸಾಲೆಹುಡಿ ತಯಾರಿಸಿ ಮಾರಾಟ ಮಾಡುತ್ತಿದ್ದವರು ಇದೀಗ ತಮ್ಮ ಮನೆಯಲ್ಲೆ ‘ಸತ್ಯಜ್ಯೋತಿ ಹೋಮ್ ಪ್ರಾಡಕ್ಟ್ಸ್’ ಎಂಬ ಮಸಾಲೆಹುಡಿ […]
ಮನೆ ಕಟ್ಟಿ ನೋಡು
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಮಾನವರ ಪ್ರಾಥಮಿಕ ಅಗತ್ಯತೆಗಳಲ್ಲಿ ಆಹಾರ, ಉಡುಪು ಮತ್ತು ವಸತಿ (ರೋಟಿ, ಕಪಡಾ ಔರ್ ಮಕಾನ್) ಇವು ಮೂರು ಪ್ರಮುಖವಾದದ್ದು. ಕಡು ಬಡತನದಲ್ಲಿರುವವರಿಗೆ ದಿನನಿತ್ಯದ ಆಹಾರದ ಚಿಂತೆಯಾದರೆ, ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೊಡನೆಯೇ ಹೊರ ಪ್ರಪಂಚಕ್ಕೆ ಉತ್ತಮರಂತೆ ಕಾಣುವ ಅಭಿಲಾಷೆ ಮೂಡುತ್ತದೆ. ಇದಕ್ಕಾಗಿ ಸುಂದರವಾದ ಉಡುಪು, ಆಭರಣಗಳನ್ನು ಅಪೇಕ್ಷಿಸುತ್ತೇವೆ. ಇದಾದ ನಂತರ ಸ್ವಂತಕ್ಕೊ0ದು ಸೂರಿನ ಆಸೆ ಮೂಡುತ್ತದೆ. ಮನೆ ಕಟ್ಟಿಕೊಳ್ಳುವುದೆಂದರೆ ಕ್ಷಣ ಮಾತ್ರದ ನಿರ್ಧಾರವಲ್ಲ. ಜೀವಮಾನ ಕಾಲ ದೊರೆತ ಹಣ […]
ನೀರು ಆರೋಗ್ಯದ ಬೇರು
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ನಾವು ಜೀವಂತವಾಗಿರಲು ಪ್ರಥಮ ಅತೀ ಅಗತ್ಯ ವಸ್ತು ಪ್ರಾಣವಾಯು ಆಮ್ಲಜನಕವಾದರೆ, ಜೀವ ಜಲ ನೀರು ದ್ವಿತೀಯ ಸ್ಥಾನದಲ್ಲಿದೆ. ನೀರು ಹಾಗೂ ಆರೋಗ್ಯಕ್ಕೆ ನೇರವಾಗಿ ಸಂಬAಧವಿದೆ. ಯಾರು ಸಾಕಷ್ಟು ನೀರನ್ನು ಕುಡಿಯುತ್ತಾರೋ, ಸರ್ವೇಸಾಮಾನ್ಯರಾಗಿ ಅವರು ಸದೃಢ ಆರೋಗ್ಯವಂತರಾಗಿರುತ್ತಾರೆ. ನಮ್ಮ ದೇಹದ ಪ್ರತಿ ಜೀವಕೋಶದ ಚೈತನ್ಯಕ್ಕೆ ನೀರು ಬಹಳ ಮುಖ್ಯವಾಗಿದೆ. ಹೃದಯದ ನಿರಂತರ ಬಡಿತಕ್ಕೆ ಈ ನೀರೇ ಆಧಾರ. ಹೀಗೆ ನಮ್ಮ ದೇಹದ ಪ್ರತಿ […]
ಮದ್ಯಮುಕ್ತಿಯೆಂಬ ಸಂಕಲ್ಪ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಸಂಸಾರದಲ್ಲಿ ಒಂದು ಸೊನ್ನೆ ಹೋದರೆ ‘ಸಸಾರ’ ಆಗುತ್ತದೆ. ‘ಸಸಾರ’ ಎಂದರೆ ಯಾವುದಕ್ಕೂ ಬೇಡದವರು ಎಂದು. ಆದರೆ ಆ ಸೊನ್ನೆಯನ್ನು ಉಳಿಸಿಕೊಳ್ಳುವ ಹಾಗೆ ನಮ್ಮ ಸಂಸಾರವನ್ನು ನಿಭಾಯಿಸಿಕೊಂಡು ಹೋಗುವುದು ನಮ್ಮ ನವಜೀವನ ಸಮಿತಿಯ ಆದ್ಯತೆ ಎಂಬುದು ನನ್ನ ಭಾವನೆ. ಇಂದು ಒಂದು ಲಕ್ಷಕ್ಕೂ ಅಧಿಕ ಮಂದಿ ಕುಡಿತ ಬಿಟ್ಟಿದ್ದಾರೆ. ಇದರಿಂದಾಗಿ ಅವನ ಹೆಂಡತಿ, ಮಕ್ಕಳು, ಅಣ್ಣ, ತಮ್ಮ ಹೀಗೆ ಐದು ಲಕ್ಷಕ್ಕೂ ಅಧಿಕ ಮಂದಿಗೆ, ಸಮಾಜಕ್ಕೂ ಅದರಿಂದ ಪ್ರಯೋಜನವಾಗುತ್ತದೆ.ಯಾವುದೇ ಒಂದು ಅಭ್ಯಾಸ ಆರಂಭಿಸಲು […]
‘ನಿರಂತರ’ ಪತ್ರಿಕೆಯ ಸಂಪಾದಕರಾದ ಚಂದ್ರಹಾಸ ಚಾರ್ಮಾಡಿಯವರು ಮಂಡಿಸಿದ ‘ಕರಾವಳಿ ಕರ್ನಾಟಕದ ಕಥನ ಸಾಹಿತ್ಯದಲ್ಲಿ ಸಂಘರ್ಷ ಮತ್ತು ಸಾಮರಸ್ಯದ ಸ್ವರೂಪಗಳು’ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರಧಾನ
ಶ್ರೀ ಹೆಗ್ಗಡೆಯವರಿಂದ ಸಾಮಾನ್ಯ ಸೇವಾಕೇಂದ್ರ (ಸಿ.ಎಸ್.ಸಿ.) ಕಾರ್ಯಾಗಾರ ಉದ್ಘಾಟನೆ
