ಮಹಿಳಾ ಸಬಲೀಕರಣ – ಯಾರ ಹೊಣೆ?

ಡಾ| ಎಲ್.ಎಚ್. ಮಂಜುನಾಥ್ ಪುರುಷ ಪ್ರಧಾನ ಸಂಸ್ಕøತಿಗಳೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ದೊರಕಿಸಿಕೊಡಬೇಕೆಂಬ ಪ್ರಯತ್ನ ಮಾಡಿದವರೆಷ್ಟೋ ಮಹಾಮಹಿಮರು ಆಗಿ ಹೋಗಿದ್ದಾರೆ. ಸತಿಸಹಗಮನ ಪದ್ಧತಿಯನ್ನು ರದ್ದುಗೊಳಿಸುವಲ್ಲಿ ಶ್ರಮಿಸಿದ ರಾಜಾರಾಮ್ ಮೋಹನ್‍ರಾಯ್‍ರಿಂದ ಪ್ರಾರಂಭಿಸಿ ಬಾಲಕಿಯರಿಗೆ ಶಿಕ್ಷಣ ಒದಗಿಸುವ ಕುರಿತು ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆವರೆಗೆ ನಮ್ಮ ದೇಶ ಅನೇಕ ಮಹಿಳಾ ಸಬಲೀಕರಣದ ಅಧ್ವರ್ಯಗಳನ್ನು ಕಂಡಿದೆ. ಅವರುಗಳು ಅನುಸರಿಸಿದ ದಾರಿಗಳೂ ಅಷ್ಟೇ ವೈಶಿಷ್ಟ್ಯಪೂರ್ಣವಾಗಿವೆ.ಮಹಿಳಾ ಸಬಲೀಕರಣ ಎನ್ನುವ ಪದಪುಂಜವನ್ನು ಇತ್ತೀಚಿನ ದಿನಗಳಲ್ಲಿ ನಾವು ಬಹಳಷ್ಟು ಕೇಳುತ್ತಿದ್ದೇವೆ. ಸಬಲೀಕರಣವೆಂದರೆ ಕುಟುಂಬದಲ್ಲಿ […]

ಸಕಲ ಗುಣಗಳ ಆದರ್ಶ ಪುರುಷ ಶ್ರೀರಾಮ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ರಾಮ’ನನ್ನು ದೇವರಾಗಿ ಭಕ್ತಿಯಿಂದ ಪೂಜಿಸುವ ಒಂದು ವರ್ಗವಾದರೆ ಆತನ ಆದರ್ಶಗಳಿಗಾಗಿ, ಆತನ ಗುಣಗಳಿಗೆ ಆತನನ್ನು ಮೆಚ್ಚುವ ಇನ್ನೊಂದು ವರ್ಗವೇ ಇದೆ. ಕಷ್ಟಗಳಿಗೆ ಯಾವತ್ತೂ ಅಂಜದವ, ಪಿತೃವಾಕ್ಯ ಪರಿಪಾಲಕ, ಕುಟುಂಬ ವತ್ಸಲಿ ಮತ್ತು ಏಕಪತ್ನಿವೃತಸ್ತ ಹೀಗೆ ರಾಮ ಗುಣಗಳ ಗಣಿ. ರಾಮ ಹುಟ್ಟಿ7000 ವರ್ಷಗಳಾದರೂ ಇನ್ನು ಜನಮಾನಸದಲ್ಲಿ ನೆಲೆನಿಂತಿರುವುದಕ್ಕೆ ಕಾರಣ ಆತ ಯಾವುದೇ ಸಂದರ್ಭದಲ್ಲಿ ತನ್ನ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳದಿರುವುದೇ ಆಗಿದೆ. ದಶರಥ ಶ್ರೀರಾಮನಿಗೆ ಪಟ್ಟಾಭೀಷೇಕನಾಗುವಂತೆ ಹೇಳಿದಾಗ ಮತ್ತು ವನವಾಸಕ್ಕೆ ತೆರಳಲು ಹೇಳಿದಾಗ […]

ಧರ್ಮಸ್ಥಳದ ಮೇಲಿನ ನಂಬಿಕೆ ಬಡವರ ಬಾಳಿಗೆ ಬೆಳಕಾಯಿತು

ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ ಹಿಂದಿನ ಸಂಚಿಕೆಯಲ್ಲಿ ಸಿರಿವಂತರ ಬಳಿ ಸಾಲ ಪಡೆಯಲು ಬ್ಯಾಂಕಿಗೆ ನೀಡಬೇಕಾದ ದಾಖಲೆ, ಸ್ಥಿರಾಸ್ತಿ, ಜಾಮೀನು ಎಲ್ಲಾ ಇದೆ. ಆದರೆ ಅವರಿಗೆ ಸಾಮಾನ್ಯವಾಗಿ ಸಾಲ ಬೇಡ. ಆದರೆ ಬಡವರಿಗೆ ಸಾಲ ಬೇಕು, ಆದರೇನು ಮಾಡುವುದು ಸಾಲಕ್ಕಾಗಿ ಬ್ಯಾಂಕಿಗೆ ಕೊಡಲು ದಾಖಲೆ, ಸ್ಥಿರಾಸ್ತಿ, ಜಾಮೀನುಗಳು ಮಾತ್ರ ಇಲ್ಲ. ಹೀಗಿರುವಾಗ ಯಾವ ಮಹಾನ್ ಶಕ್ತಿ ಈ ಬಡವರ ಬೆನ್ನಿಗೆ ನಿಲ್ಲಲು ಸಾಧ್ಯ ಎಂದು ವಿವರಿಸಿದ್ದೆ. ಬ್ಯಾಂಕ್‌ಗಳು ಸಾಲಕ್ಕಾಗಿ ಪಡೆಯುವ ಈ ದಾಖಲೆಗಳು, ಸ್ಥಿರಾಸ್ತಿ, ಜಾಮೀನುಗಳೆಲ್ಲವೂ […]

ಸಣ್ಣ ಪುಟ್ಟ ಬದಲಾವಣೆಯಲ್ಲಿ ಖುಷಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಅನೇಕರಿಗೆ ಜೀವನದಲ್ಲಿ ಅಲ್ಪ – ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಲು ಮನಸ್ಸಿರುವುದಿಲ್ಲ. ನಾವಿರುವುದೇ ಹೀಗೆ ಎಂದು ಅಂದುಕೊoಡಿರುತ್ತಾರೆ. ಆದರೆ ಈ ಅಲ್ಪಸ್ವಲ್ಪ ಬದಲಾವಣೆಗಳಿಂದಲೇ ನಮ್ಮ ವ್ಯಕ್ತಿತ್ವದಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ ಎಂಬುದನ್ನು ಗಮನಿಸಬೇಕು. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಹೊದಿಕೆ ಮಡಚಿಡುವುದು, ಸ್ನಾನದ ಬಳಿಕ ಒರೆಸಿದ ಒದ್ದೆ ಬಟ್ಟೆಯನ್ನು ಒಣಗಲು ಹಾಕುವುದು, ಕಾಫಿ – ನೀರು ಕುಡಿದ ಲೋಟವನ್ನು ತಕ್ಷಣ ತೊಳೆದಿಡುವುದು. ಒಗೆದ ಬಟ್ಟೆಯನ್ನು ಸರಿಯಾಗಿ ಇಡುವುದು, ಇಸ್ತಿç ಮಾಡಿಟ್ಟ ಬಟ್ಟೆಯನ್ನು ಜೋಡಿಸಿಡುವುದು, ಓದಿದ […]

ಏಳು ಅಡಿ ರೂಮಿನಲ್ಲಿ ಯಲ್ಲವ್ವಳ ಬದುಕು

ಚಂದ್ರಹಾಸ್ ಚಾರ್ಮಾಡಿ ಊರಿನಲ್ಲಿ ದೊರೆಯುವ ಕಲ್ಲುಗಳಿಂದ ಗೋಡೆಕಟ್ಟಿ ಏಳು ಅಡಿ ಉದ್ದ, ಮೂರು ಅಡಿ ಅಗಲದ ಮನೆ ನಿರ್ಮಿಸಲು ಸಾಧ್ಯನಾ? ಗೂಡಿನ ಗಾತ್ರದ ಈ ಮನೆಯಲ್ಲಿ ವಾಸಿಸುವುದಾದರೂ ಹೇಗೆ? ಕಲ್ಲುಗಳು ಜರಿದು ಬೀಳಲ್ವಾ! ಗಾಳಿಗೆ ತಗಟುಶೀಟು ಹಾರಿ ಹೋಗಲ್ವಾ? ಮಳೆ ನೀರು ಒಳಗೆ ಬರಲ್ವಾ? ಅಡುಗೆ, ಮಲಗುವ, ದಿನಸಿಗಳ ಸಂಗ್ರಹಣೆ ಎಲ್ಲಿ ಮಾಡುತ್ತಾರೆ? ಹೀಗೆ ಹತ್ತಾರು ಪ್ರಶ್ನೆಗಳು ನಿಮ್ಮಲ್ಲಿರಬಹುದಲ್ಲವೇ? ಈ ಎಲ್ಲ ಸಮಸ್ಯೆಗಳ ಮಧ್ಯೆ ಕಳೆದ ಹದಿನಾರು ವರ್ಷಗಳಿಂದ ಗೂಡಿನ ಗಾತ್ರದ ಮನೆಯಲ್ಲಿ ಬದುಕು ಸಾಗಿಸಿದ ಯಲ್ಲವ್ವರವರನ್ನು […]

ಬಾಳಿಗೆ ಪ್ರೇರಣೆಯಾಗುವ ಹಿರಿಯರ ಸ್ಮರಣೆ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಮ್ಮ ಬದುಕಿನಲ್ಲಿ ಸಾಕಷ್ಟು ರೀತಿಯ ಸಂಪ್ರದಾಯ, ಪರಂಪರೆ, ಪದ್ಧತಿ, ರೀತಿ – ನೀತಿಗಳನ್ನು ಆಚರಿಸುತ್ತೇವೆ. ನಮ್ಮ ಪೂರ್ವಜರನ್ನು, ಹಿರಿಯರನ್ನು ವರ್ಷಕ್ಕೊಮ್ಮೆಯಾದರೂ ಸ್ಮರಿಸುವಂಥ, ನಮ್ಮನ್ನು ಅಗಲಿದ ಅವರಿಗೆ ಗೌರವ ಸಲ್ಲಿಸುವಂಥ ಆಚರಣೆಗಳು ನಮ್ಮಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ಕಡೆಗಳಲ್ಲಿ ಇರುವುದು ನಮಗೆಲ್ಲ ತಿಳಿದಿರುವಂಥದ್ದು. ನಾವೂ ಕೂಡ ಮಹಾಲಯ ಆಚರಣೆ ಸಮಯದಲ್ಲಿ, ಇನ್ನು ಕೆಲವರು ದೀಪಾವಳಿಯ ಪಾಡ್ಯ ದಿನ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಅವರನ್ನು ಸ್ಮರಿಸಿಕೊಳ್ಳುವ ಪದ್ಧತಿಯಿದೆ. ಈ ಸಂದರ್ಭದಲ್ಲಿ ನಮ್ಮನ್ನಗಲಿದ ಹಿರಿಯರಿಂದ ನಾವು […]